ರುಚಿಕರ ಪ್ರಾನ್ಸ್ ಫ್ರೈ ರೆಸಿಪಿ ಕನ್ನಡದಲ್ಲಿ – ಹೊರಗೆ ಕ್ರಿಸ್ಪಿ, ಒಳಗೆ ಜ್ಯೂಸಿ!

ಪ್ರಾನ್ಸ್ (Prawns) ಒಂದು ರುಚಿಕರವಾದ ಸಮುದ್ರ ಆಹಾರ (Seafood) ಆಗಿದ್ದು, ಕರ್ನಾಟಕದಲ್ಲಿ ವಿಶೇಷವಾಗಿ ಕರಾವಳಿ ಭಾಗಗಳಲ್ಲಿ ಬಹಳ ಜನಪ್ರಿಯವಾಗಿದೆ. ಪ್ರಾನ್ಸ್ ಫ್ರೈ ಒಂದು ಸುಲಭ ಮತ್ತು ಬೇಗ ತಯಾರಿಸಬಹುದಾದ ಡಿಶ್ ಆಗಿದ್ದು, ಹೊರಗೆ ಕ್ರಿಸ್ಪಿ ಮತ್ತು ಒಳಗೆ ಜ್ಯೂಸಿ ಆಗಿರುವುದೇ ಇದರ ವಿಶೇಷತೆ.

ಈ ಲೇಖನದಲ್ಲಿ ನಾವು ಹೋಟೆಲ್ ಸ್ಟೈಲ್ ಪ್ರಾನ್ಸ್ ಫ್ರೈ ರೆಸಿಪಿ, ತಯಾರಿಸುವ ವಿಧಾನ, ಟಿಪ್ಸ್ ಮತ್ತು ಆರೋಗ್ಯ ಲಾಭಗಳು ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಪ್ರಾನ್ಸ್ ಫ್ರೈ ರೆಸಿಪಿ ಮಾಡಲು ಬೇಕಾಗುವ ಸಾಮಗ್ರಿಗಳು :

ಪ್ರಾನ್ಸ್ – 500 ಗ್ರಾಂ

ಲಿಂಬೆ ರಸ – 1 ಟೇಬಲ್ ಸ್ಪೂನ್

ಅರಿಶಿನ – ¼ ಟೀ ಸ್ಪೂನ್

ಉಪ್ಪು – ರುಚಿಗೆ ತಕ್ಕಷ್ಟು

ಮೆಣಸಿನ ಪುಡಿ – 1½ ಟೇಬಲ್ ಸ್ಪೂನ್

ಧನಿಯಾ ಪುಡಿ – 1 ಟೇಬಲ್ ಸ್ಪೂನ್

ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಸ್ಪೂನ್

ಶುಂಠಿ ಪೇಸ್ಟ್ – 1 ಟೇಬಲ್ ಸ್ಪೂನ್

ಕರಿ ಬೇವು – ಕೆಲವು

ತೆಂಗಿನ ಎಣ್ಣೆ ಅಥವಾ ಸಾಮಾನ್ಯ ಎಣ್ಣೆ – ಫ್ರೈ ಮಾಡಲು

ಉಪ್ಪು – ಅಗತ್ಯವಿದ್ದಷ್ಟು

ಪ್ರಾನ್ಸ್ ತೊಳೆಯುವ ವಿಧಾನ :

ಪ್ರಾನ್ಸ್ ಫ್ರೈ ರೆಸಿಪಿ ಮಾಡಲು ಪ್ರಾನ್ಸ್ ಅನ್ನು ಚೆನ್ನಾಗಿ ತೊಳೆದು ಅದರ ನರ (vein) ತೆಗೆದುಹಾಕುವುದು ಬಹಳ ಮುಖ್ಯ. ಸ್ವಲ್ಪ ಉಪ್ಪು ಮತ್ತು ಲಿಂಬೆ ರಸದಲ್ಲಿ ತೊಳೆದರೆ ವಾಸನೆ ಹೋಗುತ್ತದೆ. ನಂತರ ಮೇರಿನೇಟ್ ಮಾಡಲು ಸಿದ್ಧಪಡಿಸಬಹುದು.

ಮೆರಿನೇಟ್ ಮಾಡುವ ವಿಧಾನ

1. ಒಂದು ಬಟ್ಟಲಿನಲ್ಲಿ ತೊಳೆದ ಪ್ರಾನ್ಸ್ ಹಾಕಿ.

2. ಲಿಂಬೆ ರಸ, ಅರಿಶಿನ ಮತ್ತು ಉಪ್ಪು ಸೇರಿಸಿ 15 ನಿಮಿಷ ಮೆರಿನೇಟ್ ಮಾಡಿ.

3. ಇದು ಪ್ರಾನ್ಸ್‌ಗೆ ಮೃದುವಾಗುವ ಗುಣ ಕೊಡುತ್ತದೆ ಹಾಗೂ ಫ್ರೈ ಮಾಡಿದಾಗ ಮಸಾಲೆ ಚೆನ್ನಾಗಿ ಒಳಗೆ ಸೇರುತ್ತದೆ.

ಫ್ರೈ ಮಸಾಲೆ ತಯಾರಿಸುವುದು

ಪ್ರಾನ್ಸ್ ಫ್ರೈ ರೆಸಿಪಿ ಮಾಡಲು ಕೆಂಪು ಮೆಣಸಿನ ಪುಡಿ, ಧನಿಯಾ ಪುಡಿ, ಬೆಳ್ಳುಳ್ಳಿ–ಶುಂಠಿ ಪೇಸ್ಟ್ ಸೇರಿಸಿ ಪೇಸ್ಟ್ ತಯಾರಿಸಿ.ಬೇಕಾದಷ್ಟು ಉಪ್ಪು ಸೇರಿಸಿ, ಗಟ್ಟಿ ಪೇಸ್ಟ್ ಮಾಡಿ.

ಪ್ರಾನ್ಸ್‌ಗೆ ಮಸಾಲೆ ಹಚ್ಚುವುದು :

  • ಮೆರಿನೇಟ್ ಮಾಡಿರುವ ಪ್ರಾನ್ಸ್‌ಗೆ ಈ ಮಸಾಲೆ ಪೇಸ್ಟ್ ಚೆನ್ನಾಗಿ ಹಚ್ಚಿ.
  • ಪ್ರತಿ ಪ್ರಾನ್ಸ್‌ಗೆ ಮಸಾಲೆ ಸಮವಾಗಿ ಹಚ್ಚಿಕೊಂಡಂತಾಗಬೇಕು.
  • 30 ನಿಮಿಷ ಬಿಟ್ಟರೆ ಮಸಾಲೆ ರುಚಿ ಸಂಪೂರ್ಣ ಸೇರಿಕೊಳ್ಳುತ್ತದೆ.

ಫ್ರೈ ಮಾಡುವ ವಿಧಾನ

1. ಒಂದು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ. ತೆಂಗಿನ ಎಣ್ಣೆಯಲ್ಲಿ ಫ್ರೈ ಮಾಡಿದರೆ ಮಂಗಳೂರು ಸ್ಟೈಲ್ ರುಚಿ ಬರುತ್ತದೆ.

2. ಎಣ್ಣೆ ಬಿಸಿಯಾದ ನಂತರ ಬೆಂಕಿಯನ್ನು ಮಧ್ಯಮಕ್ಕೆ ಕಡಿಮೆ ಮಾಡಿ.

3. ಪ್ರಾನ್ಸ್‌ಗಳನ್ನು ಒಂದೊಂದು ಹಾಕಿ ಫ್ರೈ ಮಾಡಬೇಕು; ತುಂಬ ಫ್ರೈ ಮಾಡಬಾರದು.

4. ಪ್ರತಿ ಬದಿಯನ್ನೂ 4-5 ನಿಮಿಷ ಮಾತ್ರ ಫ್ರೈ ಮಾಡಿ.

5. ಪ್ರಾನ್ಸ್ ಹೆಚ್ಚು ಬೇಯಿಸಿದರೆ ಕಠಿಣವಾಗುತ್ತದೆ, ಆದ್ದರಿಂದ ಸ್ವಲ್ಪ ಹೊತ್ತು ಮಾತ್ರ ಫ್ರೈ ಮಾಡುವುದು ಸೂಕ್ತ.

6. ಫ್ರೈ ಆದ ನಂತರ ಹೆಚ್ಚುವರಿ ಎಣ್ಣೆ ತೆಗೆಸಲು ಪೇಪರ್ ಟವಲ್ ಮೇಲೆ ಇಡಿ.

7. ಕೊನೆಯಲ್ಲಿ ಕರಿ ಎಲೆಗಳನ್ನು ಎಣ್ಣೆಗೆ ಹಾಕಿ ಫ್ರೈ ಮಾಡಿ ಮೇಲೆ ಅಲಂಕರಿಸಿ.

ಸರ್ವಿಂಗ್ ಸಲಹೆಗಳು :

  • ಈ ಪ್ರಾನ್ಸ್ ಫ್ರೈನ್ನು ಹಸಿರು ನಿಂಬೆ ತುಂಡು, ಸಲಾಡ್, ಕೊತ್ತಂಬರಿ ಜೊತೆ ಸರ್ವ್ ಮಾಡಿದರೆ ರುಚಿ ಹೆಚ್ಚಾಗುತದೆ.
  • ರೊಟ್ಟಿ, ಚಪಾತಿ, ನೀರ್ ದೋಸೆ ಮಾಡಿದರೂ ಚೆನ್ನಾಗಿ ಹೊಂದುತ್ತದೆ.
  • ಪಾರ್ಟಿಗಳು ಅಥವಾ ಮನೆ ಅತಿಥಿಗಳಿಗೆ ಸ್ಟಾರ್ಟರ್‌ಗಾಗಿ ಸೂಪರ್ ಆಯ್ಕೆ.

ರುಚಿಯನ್ನು ಹೆಚ್ಚಿಸುವ 7 Powerful Tips

  • Fresh prawns ಬಳಸಿದರೆ ರುಚಿ ಹೆಚ್ಚುತ್ತದೆ
  • ಪ್ರಾನ್ಸ್ ಬೇಗ ಬೇಯುತ್ತದೆ; ಹೆಚ್ಚು ಬೇಯಿಸಬೇಡಿ.
  • Rice flour add ಮಾಡಿದರೆ crispiness ಹೆಚ್ಚುತ್ತದೆ
  • Lemon juice add ಮಾಡಿದರೆ taste balance
  • Oil temperature ಸರಿಯಾಗಿ ಇರಲಿ
  • Serve hot ಮಾಡಿದ್ರೆ best taste
  • ಮಸಾಲೆ ಹೆಚ್ಚು ಬೇಕಾದರೆ ಬ್ಯಾಡಗಿ ಮೆಣಸಿನಕಾಯಿ ಪೇಸ್ಟ್ ಸೇರಿಸಿ.

ಸೂಚನೆ :

  • ಓವೆನ್ ಇದ್ದರೆ ಫ್ರಾನ್ಸ್ ಅನ್ನು 15 ನಿಮಿಷ ಓವೆನ್ ನಲ್ಲಿ ಬೇಯಿಸಿ ನಂತರ ತವದಲ್ಲಿ ಫ್ರೈ ಮಾಡಬಹುದು. ಇದು ರುಚಿಯನ್ನು ಕೊಡುತ್ತದೆ ಹಾಗೆಯೇ ಮಸಾಲೆ ಬಿಟ್ಟು ಹೋಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ : https://youtu.be/QetBfg0ppyo?si=MMXyJXxhAKSa4HlE

Leave a Comment

Your email address will not be published. Required fields are marked *

Scroll to Top