Beauty

Beauty

Beauty, Health

ಕುತ್ತಿಗೆಯ ಕಪ್ಪು ಬಣ್ಣ ಕಡಿಮೆ ಮಾಡಲು ಮನೆಯಲ್ಲೇ ಮಾಡಬಹುದಾದ ವಿಧಾನಗಳು

ಕುತ್ತಿಗೆಯ ಕಪ್ಪು ಬಣ್ಣ ಕಡಿಮೆ ಮಾಡುವ ವಿಧಾನಗಳು ಬಳಸುವುದು ಹೇಗೆ ಅಂದರೆ ಕುತ್ತಿಗೆಯ ಭಾಗದಲ್ಲಿ ಕಪ್ಪು ಬಣ್ಣ ಕಾಣಿಸಿಕೊಳ್ಳುವುದು ಅನೇಕ ಜನರಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಮುಖವನ್ನು ಎಷ್ಟೇ ಚೆನ್ನಾಗಿ ನೋಡಿಕೊಂಡರೂ, ಕುತ್ತಿಗೆ ಕಪ್ಪಾಗಿದ್ದರೆ ಸಂಪೂರ್ಣ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಧೂಳು, ಬೆವರು, ಸೂರ್ಯನ ಕಿರಣಗಳು, ಸತ್ತ ಚರ್ಮದ ಕೋಶಗಳ ಸಂಗ್ರಹ, ಅತಿಯಾದ ತೂಕ, ಹಾರ್ಮೋನ್ ಬದಲಾವಣೆಗಳು ಹಾಗೂ ಸರಿಯಾದ ಚರ್ಮದ ಆರೈಕೆಯ ಕೊರತೆಯಿಂದ ಕುತ್ತಿಗೆಯ ಚರ್ಮ ಕಪ್ಪಾಗಬಹುದು. ಒಳ್ಳೆಯ ವಿಷಯವೆಂದರೆ, ಕೆಲವು ಸರಳ ಮನೆಮದ್ದುಗಳು ಮತ್ತು ಸರಿಯಾದ ಚರ್ಮದ ಆರೈಕೆಯ ಮೂಲಕ ಈ ಸಮಸ್ಯೆಯನ್ನು ನಿಧಾನವಾಗಿ ಕಡಿಮೆ ಮಾಡಬಹುದು. ಈ ಲೇಖನದಲ್ಲಿ ಕುತ್ತಿಗೆಯ ಕಪ್ಪು ಬಣ್ಣದ ಕಾರಣಗಳು, ಮನೆಯಲ್ಲೇ ಮಾಡಬಹುದಾದ ನೈಸರ್ಗಿಕ ವಿಧಾನಗಳು, ಮುನ್ನೆಚ್ಚರಿಕೆಗಳು ಹಾಗೂ ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು ಎಂಬುದನ್ನು ವಿವರವಾಗಿ ತಿಳಿಯೋಣ. ಕುತ್ತಿಗೆ ಕಪ್ಪಾಗಲು ಪ್ರಮುಖ ಕಾರಣಗಳು : 1. ಸೂರ್ಯನ ಕಿರಣಗಳು (Sun Exposure) : ಹೆಚ್ಚು ಸಮಯ ಬಿಸಿಲಿನಲ್ಲಿ ಇರುವುದರಿಂದ ಮೆಲನಿನ್ ಉತ್ಪಾದನೆ ಹೆಚ್ಚಾಗಿ ಕುತ್ತಿಗೆ ಕಪ್ಪಾಗಬಹುದು. 2. ಧೂಳು ಮತ್ತು ಬೆವರು : ಪ್ರತಿದಿನ ಸ್ವಚ್ಛಗೊಳಿಸದಿದ್ದರೆ ಧೂಳು, ಎಣ್ಣೆ ಮತ್ತು ಬೆವರು ಸೇರಿ ಚರ್ಮದ ಬಣ್ಣ ಬದಲಾಗಬಹುದು. 3. ಸತ್ತ ಚರ್ಮದ ಕೋಶಗಳು : ಎಕ್ಸ್‌ಫೋಲಿಯೇಷನ್ ಮಾಡದಿದ್ದರೆ ಸತ್ತ ಚರ್ಮದ ಪದರಗಳು ಕಪ್ಪು ಬಣ್ಣದಂತೆ ಕಾಣುತ್ತವೆ. 4. ಹಾರ್ಮೋನ್ ಬದಲಾವಣೆ : ಮಧುಮೇಹ, ಇನ್ಸುಲಿನ್ ಪ್ರತಿರೋಧ ಅಥವಾ ಕೆಲವು ಹಾರ್ಮೋನ್ ಸಮಸ್ಯೆಗಳು ಕುತ್ತಿಗೆ ಕಪ್ಪಾಗಲು ಕಾರಣವಾಗಬಹುದು. 5. ಅತಿಯಾದ ತೂಕ : ದೇಹದ ತೂಕ ಹೆಚ್ಚಿದಾಗ ಕುತ್ತಿಗೆಯ ಮಡಚುಗಳಲ್ಲಿ ಘರ್ಷಣೆ ಉಂಟಾಗಿ ಚರ್ಮ ಕಪ್ಪಾಗಬಹುದು. 6. ಅಲರ್ಜಿ ಅಥವಾ ಕಾಸ್ಮೆಟಿಕ್ ಉತ್ಪನ್ನಗಳು : ಕೆಲವು ಕ್ರೀಮ್, ಪರ್ಫ್ಯೂಮ್ ಅಥವಾ ಆಭರಣಗಳಿಂದ ಅಲರ್ಜಿ ಉಂಟಾಗಿ ಚರ್ಮದ ಬಣ್ಣ ಬದಲಾಗಬಹುದು. ಕುತ್ತಿಗೆಯ ಕಪ್ಪು ಬಣ್ಣ ಕಡಿಮೆ ಮಾಡುವ ವಿಧಾನಗಳು : 1. ಅಲೋವೆರಾ ಜೆಲ್ : ಅಲೋವೆರಾದಲ್ಲಿ ಚರ್ಮವನ್ನು ಶಾಂತಗೊಳಿಸುವ ಹಾಗೂ ಹೊಳಪು ನೀಡುವ ಗುಣಗಳಿವೆ. ಇದು ಕುತ್ತಿಗೆಯ ಕಪ್ಪು ಬಣ್ಣ ಕಡಿಮೆ ಮಾಡುವ ವಿಧಾನಗಳು ಒಂದಾಗಿದೆ. ಬಳಸುವ ವಿಧಾನ : 2. ಮೊಸರು ಮತ್ತು ಅರಿಶಿನ : ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ಚರ್ಮವನ್ನು ಮೃದುವಾಗಿಸುತ್ತದೆ. ಬೇಕಾಗುವ ಪದಾರ್ಥಗಳು: ವಿಧಾನ : 3. ಕಡಲೆಹಿಟ್ಟು ಪ್ಯಾಕ್ : ಇದು ಹಳೆಯ ಕಾಲದಿಂದಲೂ ಬಳಸುವ ಮನೆಮದ್ದು. ಇದು ಸಹ ಕುತ್ತಿಗೆಯ ಕಪ್ಪು ಬಣ್ಣ ಕಡಿಮೆ ಮಾಡುವ ವಿಧಾನಗಳು ಇದನ್ನು ಮನೆಯಲ್ಲಿ ಸುಲಭವಾಗಿ ಬಳಸಬಹುದು ಬೇಕಾಗುವ ಪದಾರ್ಥಗಳು : 4. ಓಟ್ಸ್ ಸ್ಕ್ರಬ್ : ಓಟ್ಸ್ ಸತ್ತ ಚರ್ಮವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಬೇಕಾಗುವ ಪದಾರ್ಥಗಳು : 5. ಅಕ್ಕಿಹಿಟ್ಟು ಮತ್ತು ಹಾಲು : ಅಕ್ಕಿಹಿಟ್ಟಿನಲ್ಲಿರುವ ನೈಸರ್ಗಿಕ ಎಕ್ಸ್‌ಫೋಲಿಯೇಟಿಂಗ್ ಗುಣಗಳು ಚರ್ಮವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತವೆ. 15 ನಿಮಿಷಗಳ ನಂತರ ತೊಳೆಯಿರಿ. 6. ಜೇನುತುಪ್ಪ : 7. ಸೌತೆಕಾಯಿ ರಸ : 8. ಆಲೂಗಡ್ಡೆ ರಸ : ಆಲೂಗಡ್ಡೆಯಲ್ಲಿ ನೈಸರ್ಗಿಕ ಎನ್ಜೈಮ್‌ಗಳಿದ್ದು ಚರ್ಮದ ಹೊಳಪಿಗೆ ಸಹಾಯಕವಾಗಬಹುದು. ವಾರದ ಚರ್ಮದ ಆರೈಕೆ ಕ್ರಮ : ಸೋಮವಾರ: ಅಲೋವೆರಾ ಜೆಲ್ ಮಂಗಳವಾರ : ಕಡಲೆಹಿಟ್ಟು ಪ್ಯಾಕ್ ಬುಧವಾರ: ಮೊಸರು + ಅರಿಶಿನ ಗುರುವಾರ: ವಿಶ್ರಾಂತಿ ಶುಕ್ರವಾರ: ಓಟ್ಸ್ ಸ್ಕ್ರಬ್ ಶನಿವಾರ: ಅಕ್ಕಿಹಿಟ್ಟು ಪ್ಯಾಕ್ ಭಾನುವಾರ: ಅಲೋವೆರಾ ಯಾವ ಅಭ್ಯಾಸಗಳನ್ನು ತಪ್ಪಿಸಬೇಕು? ಕುತ್ತಿಗೆಯನ್ನು ಸ್ವಚ್ಛವಾಗಿಡುವ ಸಲಹೆಗಳು ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು? ಈ ಲಕ್ಷಣಗಳಿದ್ದರೆ ಚರ್ಮರೋಗ ತಜ್ಞರನ್ನು ಸಂಪರ್ಕಿಸುವುದು ಉತ್ತಮ. ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು : (FAQ) 1. ಕುತ್ತಿಗೆಯ ಕಪ್ಪು ಬಣ್ಣ ಸಂಪೂರ್ಣ ಹೋಗುತ್ತದೆಯೇ? ಕಾರಣವನ್ನು ಅವಲಂಬಿಸಿರುತ್ತದೆ. ಸರಿಯಾದ ಆರೈಕೆ, ಸೂರ್ಯನಿಂದ ರಕ್ಷಣೆ ಮತ್ತು ಅಗತ್ಯವಿದ್ದರೆ ವೈದ್ಯಕೀಯ ಚಿಕಿತ್ಸೆಯಿಂದ ಉತ್ತಮ ಸುಧಾರಣೆ ಕಾಣಬಹುದು. 2. ಮನೆಮದ್ದುಗಳಿಂದ ಎಷ್ಟು ದಿನಗಳಲ್ಲಿ ಫಲಿತಾಂಶ ಸಿಗುತ್ತದೆ? ಸಾಮಾನ್ಯವಾಗಿ 6–8 ವಾರಗಳ ನಿಯಮಿತ ಆರೈಕೆಯ ನಂತರ ವ್ಯತ್ಯಾಸ ಕಾಣಬಹುದು. 3. ಪ್ರತಿದಿನ ಸ್ಕ್ರಬ್ ಮಾಡಬಹುದೇ? ಇಲ್ಲ. ವಾರಕ್ಕೆ 1–2 ಬಾರಿ ಮಾತ್ರ ಸೌಮ್ಯವಾಗಿ ಮಾಡಬೇಕು. 4. ನಿಂಬೆ ರಸ ಬಳಸಬಹುದೇ? ನಿಂಬೆ ರಸ ಕೆಲವರಲ್ಲಿ ಚರ್ಮದ ಕಿರಿಕಿರಿ ಮತ್ತು ಸೂರ್ಯನ ಬೆಳಕಿಗೆ ಹೆಚ್ಚಿನ ಸಂವೇದನೆ ಉಂಟುಮಾಡಬಹುದು. ಆದ್ದರಿಂದ ನೇರವಾಗಿ ಬಳಸುವುದಕ್ಕಿಂತ ಮೊದಲು ಪ್ಯಾಚ್ ಟೆಸ್ಟ್ ಮಾಡುವುದು ಉತ್ತಮ. 5. ಸನ್‌ಸ್ಕ್ರೀನ್ ಕುತ್ತಿಗೆಗೂ ಬೇಕೇ? ಹೌದು. ಮುಖದ ಜೊತೆಗೆ ಕುತ್ತಿಗೆಗೂ ಪ್ರತಿದಿನ ಸನ್‌ಸ್ಕ್ರೀನ್ ಹಚ್ಚುವುದು ಅಗತ್ಯ. ಕುತ್ತಿಗೆಯ ಕಪ್ಪು ಬಣ್ಣವು ಸಾಮಾನ್ಯ ಸಮಸ್ಯೆಯಾಗಿದ್ದರೂ, ನಿಯಮಿತ ಸ್ವಚ್ಛತೆ, ಸೌಮ್ಯ ಎಕ್ಸ್‌ಫೋಲಿಯೇಷನ್, ಸನ್‌ಸ್ಕ್ರೀನ್ ಬಳಕೆ ಮತ್ತು ಅಲೋವೆರಾ, ಕಡಲೆಹಿಟ್ಟು, ಮೊಸರು, ಓಟ್ಸ್ ಮುಂತಾದ ನೈಸರ್ಗಿಕ ಮನೆಮದ್ದುಗಳನ್ನು ಸರಿಯಾಗಿ ಬಳಸುವುದರಿಂದ ಚರ್ಮದ ಆರೋಗ್ಯವನ್ನು ಉತ್ತಮವಾಗಿರಿಸಬಹುದು. ಆದರೆ ಕಪ್ಪು ಬಣ್ಣವು ದಪ್ಪವಾಗಿ, ಹಠಾತ್ ಹೆಚ್ಚಾಗಿ ಅಥವಾ ಇತರ ಆರೋಗ್ಯ ಸಮಸ್ಯೆಗಳೊಂದಿಗೆ ಕಾಣಿಸಿಕೊಂಡರೆ ಸ್ವಯಂ ಚಿಕಿತ್ಸೆ ಮಾಡುವ ಬದಲು ಚರ್ಮರೋಗ ತಜ್ಞರನ್ನು ಸಂಪರ್ಕಿಸುವುದು ಸುರಕ್ಷಿತ. ಹೆಚ್ಚಿನ ಮಾಹಿತಿಗಾಗಿ ನೋಡಬಹುದು : https://www.aad.org/

Beauty, Garden

ಗುಲಾಬಿ ಹೂವು – 5 ಅದ್ಭುತ ಸೌಂದರ್ಯ ಮತ್ತು ಆರೋಗ್ಯ ಉಪಯೋಗಗಳು

ಗುಲಾಬಿ ಹೂವು ಎಂದರೆ ಎಲ್ಲರಿಗೂ ಇಷ್ಟವಾಗುವ ಸುಂದರ ಹೂವು. ಇದರ ಸುಗಂಧ ಮಾತ್ರವಲ್ಲದೆ, ಇದರಲ್ಲಿ ಇರುವ ಆರೋಗ್ಯಕರ ಗುಣಗಳು ನಮ್ಮ ದೇಹ ಮತ್ತು ಚರ್ಮಕ್ಕೆ ಬಹಳ ಉಪಯುಕ್ತವಾಗಿವೆ. ಪುರಾತನ ಕಾಲದಿಂದಲೇ ಗುಲಾಬಿಯನ್ನು ಸೌಂದರ್ಯ ಮತ್ತು ಆರೋಗ್ಯದ ಚಿಕಿತ್ಸೆಗೆ ಬಳಸಲಾಗುತ್ತಿದೆ. ಇಂದಿನ ದಿನಗಳಲ್ಲಿ ಕೂಡ ಗುಲಾಬಿ ಹೂವನ್ನು ನೈಸರ್ಗಿಕ skincare ಮತ್ತು health remedies ನಲ್ಲಿ ಹೆಚ್ಚು ಬಳಸಲಾಗುತ್ತಿದೆ. ಈ ಲೇಖನದಲ್ಲಿ ನಾವು ಗುಲಾಬಿ ಹೂವಿನ ಪ್ರಮುಖ ಉಪಯೋಗಗಳನ್ನು ವಿವರವಾಗಿ ತಿಳಿಯೋಣ. ಗುಲಾಬಿಯ ಇತಿಹಾಸ ಮತ್ತು ಮಹತ್ವ : ಗುಲಾಬಿಯ ಇತಿಹಾಸ ಸಾವಿರಾರು ವರ್ಷ ಹಳೆಯದು. ಪ್ರಾಚೀನ ಗ್ರೀಕ್ ಮತ್ತು ರೋಮನ್ ಸಂಸ್ಕೃತಿಗಳಲ್ಲಿ ಗುಲಾಬಿಯನ್ನು ದೇವತೆಗಳಿಗೆ ಸಮರ್ಪಣೆ ಮಾಡುವ ಪದ್ಧತಿ ಇತ್ತು. ಭಾರತದಲ್ಲಿಯೂ ರಾಜಮನೆತನಗಳು ಹಾಗೂ ಅರಮನೆಗಳಲ್ಲಿ ಗುಲಾಬಿ ಹೂವು ವಿಶೇಷ ಸ್ಥಾನ ಪಡೆದಿತ್ತು. ಮುಘಲ್ ಕಾಲದಲ್ಲಿ ಗುಲಾಬಿ ನೀರು, ಗುಲಾಬಿ ಎಣ್ಣೆ ಹಾಗೂ ಗುಲ್ಕಂಡ್ ಬಹಳ ಪ್ರಸಿದ್ಧಿ ಪಡೆದವು. ಇಂದಿಗೂ ಮದುವೆ, ಹಬ್ಬಗಳು, ಧಾರ್ಮಿಕ ಪೂಜೆಗಳಲ್ಲಿ ಗುಲಾಬಿಯ ಬಳಕೆ ಮುಂದುವರೆದಿದೆ. ಗುಲಾಬಿಯ ಬಣ್ಣಗಳು ಮತ್ತು ಅವುಗಳ ಅರ್ಥ : ಗುಲಾಬಿ ಹೂವು ಹಲವು ಬಣ್ಣಗಳಲ್ಲಿ ಲಭ್ಯವಿದೆ. ಪ್ರತಿ ಬಣ್ಣಕ್ಕೂ ವಿಶೇಷ ಅರ್ಥವಿದೆ: ಕೆಂಪು ಗುಲಾಬಿ : ಕೆಂಪು ಗುಲಾಬಿಯು ಯಾವಾಗಲೂ ಪ್ರೀತಿ, ಪ್ರಣಯ ಮತ್ತು ಭಾವನೆಗಳ ಸಂಕೇತ. ಬಿಳಿ ಗುಲಾಬಿ : ಬಿಳಿ ಗುಲಾಬಿಯು ಶುದ್ಧತೆ, ಶಾಂತಿ ಮತ್ತು ನಿಷ್ಠೆ ಸಂಕೇತವಾಗಿದೆ. ಹಳದಿ ಗುಲಾಬಿ : ಹಳದಿ ಗುಲಾಬಿಯು ಸ್ನೇಹ, ಹರ್ಷ ಮತ್ತು ಶುಭಾಶಯ ಇದರ ಸಂಕೇತವಾಗಿದೆ. ಗುಲಾಬಿ ಬಣ್ಣದ ಗುಲಾಬಿ : ಗುಲಾಬಿ ಬಣ್ಣದ ಗುಲಾಬಿ ಕೃತಜ್ಞತೆ, ಮೆಚ್ಚುಗೆ ಮತ್ತು ಗೌರವ ಇದರ ಸಂಕೇತವಾಗಿದೆ. ಕೇಸರಿ ಬಣ್ಣ : ಕೇಸರಿ ಬಣ್ಣದ ಗುಲಾಬಿ ತ್ಯಾಗದ ಸಂಕೇತವಾಗಿದೆ. ಕಪ್ಪು ಅಥವಾ ನೀಲಿ ಗುಲಾಬಿ : ಕಪ್ಪು ಮತ್ತು ಗುಲಾಬಿ ಬಣ್ಣದ ಗುಲಾಬಿ ಅಪರೂಪ, ರಹಸ್ಯಮಯತೆ ಮತ್ತು ವಿಶೇಷ ಸಂದೇಶದ ಸಂಕೇತವಾಗಿದೆ. ಈ ಬಣ್ಣಗಳ ಅರ್ಥಗಳಿಂದಾಗಿ ಜನರು ತಮ್ಮ ಭಾವನೆಗಳನ್ನು ಹೂವಿನ ಮೂಲಕ ವ್ಯಕ್ತಪಡಿಸುತ್ತಾರೆ. ಆರೋಗ್ಯ ಮತ್ತು ಸೌಂದರ್ಯದಲ್ಲಿ ಗುಲಾಬಿಯ ಬಳಕೆ : ಗುಲಾಬಿ ಕೇವಲ ಕಣ್ಣಿಗೆ ಆನಂದ ಕೊಡುವುದಷ್ಟೇ ಅಲ್ಲದೆ, ಆರೋಗ್ಯಕ್ಕೂ ಉಪಯುಕ್ತ. ಗುಲಾಬಿ ತೋಟಗಾರಿಕೆ : ಗುಲಾಬಿ ಹೂವಿನ ಸೌಂದರ್ಯವನ್ನು ಮನೆಯಲ್ಲಿ ಅನುಭವಿಸಲು ತೋಟದಲ್ಲಿ ಬೆಳೆಸಬಹುದು. ಸರಿಯಾದ ಆರೈಕೆಯಿಂದ ಒಂದು ಗುಲಾಬಿ ಗಿಡ ವರ್ಷಪೂರ್ತಿ ಹೂ ಬೀರುತ್ತದೆ. ತೋಟದಲ್ಲಿರುವ ಗುಲಾಬಿ ಕೇವಲ ಸೌಂದರ್ಯವನ್ನೇ ಹೆಚ್ಚಿಸುವುದಲ್ಲದೆ ಮನಸ್ಸಿಗೂ ಶಾಂತಿ ನೀಡುತ್ತದೆ. ಸಾಂಸ್ಕೃತಿಕ ಮತ್ತು ಸಾಮಾಜಿಕ ಮಹತ್ವ ಗುಲಾಬಿ ಹೂವು ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಪಡೆದಿದೆ. ಮದುವೆ ಮಂಟಪದಲ್ಲಿ, ಹಬ್ಬಗಳಲ್ಲಿ, ಪೂಜಾ ಕಾರ್ಯಕ್ರಮಗಳಲ್ಲಿ ಹಾಗೂ ಸ್ವಾಗತ ಸಮಾರಂಭಗಳಲ್ಲಿ ಗುಲಾಬಿಯನ್ನು ಬಳಸಲಾಗುತ್ತದೆ. ಸ್ನೇಹಿತರಿಗೂ, ಪ್ರಿಯಕರರಿಗೂ ಗುಲಾಬಿ ಕೊಡುವ ಪದ್ಧತಿ ಪ್ರೀತಿಯ ಸಂಕೇತವಾಗಿದೆ. ಪ್ರತಿ ಫೆಬ್ರವರಿ 14ರಂದು ಆಚರಿಸುವ “ವೆಲೆಂಟೈನ್ಸ್ ಡೇ”ಯಲ್ಲಿ ಕೆಂಪು ಗುಲಾಬಿಗೆ ವಿಶೇಷ ಬೇಡಿಕೆ ಇರುತ್ತದೆ. 1.ಚರ್ಮದ ಆರೈಕೆ (Skin Care Benefits) ಗುಲಾಬಿ ಹೂವು ಅಲಂಕಾರಕ್ಕೆ ಅಲ್ಲದೆ ಚರ್ಮದ ಆರೈಕೆಯಲ್ಲಿ ಅತ್ಯಂತ ಮುಖ್ಯವಾದ ಪಾತ್ರ ವಹಿಸುತ್ತದೆ. ಲಾಭಗಳು: ಬಳಸುವ ವಿಧಾನ: ಗುಲಾಬಿ ಹೂವಿನ ರೇಂಬೆಗಳನ್ನು ನೀರಿನಲ್ಲಿ ನೆನೆಸಿ, ಅದನ್ನು ಮುಖಕ್ಕೆ apply ಮಾಡಬಹುದು ಅಥವಾ rose water ಬಳಸಿ. ಹೆಚ್ಚಿನ ಮಾಹಿತಿಗೆ:Rose Water Benefits for Skin 2. ಕೂದಲಿನ ಆರೈಕೆ (Hair Care Benefits) ಗುಲಾಬಿ ಹೂವು ಕೂದಲಿನ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಲಾಭಗಳು: ಬಳಸುವ ವಿಧಾನ: ಗುಲಾಬಿ ನೀರನ್ನು ತಲೆ ತ್ವಚೆಗೆ ಮಸಾಜ್ ಮಾಡಬಹುದು ಅಥವಾ oil ಜೊತೆ mix ಮಾಡಿ ಬಳಸಿ. 3.ಮನಸ್ಸಿಗೆ ಶಾಂತಿ (Mental Relaxation) ಗುಲಾಬಿ ಹೂವಿನ ಸುಗಂಧ ಮನಸ್ಸಿಗೆ ಶಾಂತಿ ನೀಡುತ್ತದೆ. ಲಾಭಗಳು: ಉಪಯೋಗ: ಗುಲಾಬಿ ಎಣ್ಣೆ (rose oil) aromatherapy ನಲ್ಲಿ ಬಳಸಲಾಗುತ್ತದೆ. 👉 ಹೆಚ್ಚಿನ ಮಾಹಿತಿಗೆ:Rose Essential Oil Benefits 4.ಆರೋಗ್ಯ ಲಾಭಗಳು (Health Benefits) ಗುಲಾಬಿ ಹೂವು ದೇಹದ ಆರೋಗ್ಯಕ್ಕೂ ಸಹ ಉಪಯುಕ್ತವಾಗಿದೆ. ಲಾಭಗಳು: 👉 ಹೆಚ್ಚಿನ ಮಾಹಿತಿಗೆ:Health Benefits of Roses 5.ನೈಸರ್ಗಿಕ ಟೋನರ್ (Natural Toner) ಗುಲಾಬಿ ನೀರು ಒಂದು natural toner ಆಗಿ ಕೆಲಸ ಮಾಡುತ್ತದೆ. ಲಾಭಗಳು: ಬಳಸುವ ವಿಧಾನ: ಮುಖ ತೊಳೆಯುವ ನಂತರ rose water apply ಮಾಡಬಹುದು. ಬಳಸುವಾಗ ಜಾಗ್ರತೆ (Precautions) ಗುಲಾಬಿ ಹೂವು ಸೌಂದರ್ಯ, ಪ್ರೀತಿ, ಶಾಂತಿ ಮತ್ತು ಆರೋಗ್ಯದ ಸಂಕೇತ. ಇದು ಕೇವಲ ತೋಟವನ್ನು ಅಲಂಕರಿಸುವ ಹೂವಲ್ಲ; ಅದು ಜೀವನದ ಪ್ರತಿ ಹಂತದಲ್ಲೂ ಮಹತ್ವ ಪಡೆದಿದೆ. ತನ್ನ ಸುಂದರ ಬಣ್ಣ, ಮೃದುವಾದ ವಾಸನೆ ಮತ್ತು ಉಪಯೋಗಗಳಿಂದಾಗಿ ಗುಲಾಬಿ ನಿಜಕ್ಕೂ “ಹೂಗಳ ರಾಜ”. ಪ್ರತಿಯೊಬ್ಬರ ತೋಟದಲ್ಲಿ ಕನಿಷ್ಠ ಒಂದು ಗುಲಾಬಿ ಗಿಡ ಇರಬೇಕು, ಏಕೆಂದರೆ ಅದು ಮನಸ್ಸಿಗೆ ಆನಂದ, ಮನಮೋಹಕ ಸೌಂದರ್ಯ ಮತ್ತು ಆರೋಗ್ಯವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನೋಡಬಹುದು : https://www.britannica.com/plant/rose-plant?utm_source

Beauty, Garden

ದಾಸವಾಳ ಹೂವು – ಬೆಳೆಯುವ ವಿಧಾನ ಮತ್ತು 10 ಅದ್ಭುತ ಉಪಯೋಗಗಳು ಹಾಗೂ ಮಹತ್ವ

ದಾಸವಾಳ ಹೂವು ನಮ್ಮ ಮನೆ ತೋಟಗಳಲ್ಲಿ ಸಾಮಾನ್ಯವಾಗಿ ಕಾಣುವ ಅತ್ಯಂತ ಸುಂದರ ಮತ್ತು ಉಪಯುಕ್ತ ಸಸ್ಯವಾಗಿದೆ. ಕನ್ನಡದಲ್ಲಿ ಇದನ್ನು “ದಾಸವಾಳ” ಎಂದು ಕರೆಯಲಾಗುತ್ತದೆ, ಇಂಗ್ಲಿಷ್‌ನಲ್ಲಿ Hibiscus ಎಂದು ಹೆಸರಾಗಿದೆ. ಇದರ ದೊಡ್ಡ ಮತ್ತು ಆಕರ್ಷಕ ಹೂಗಳು ಮನೆ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಆರೋಗ್ಯ ಮತ್ತು ಸೌಂದರ್ಯಕ್ಕಾಗಿ ಕೂಡ ಬಹಳ ಉಪಯುಕ್ತವಾಗಿವೆ. ಭಾರತದಲ್ಲಿ ದಾಸವಾಳ ಹೂವು ಧಾರ್ಮಿಕ ಮಹತ್ವವನ್ನು ಹೊಂದಿದ್ದು, ವಿಶೇಷವಾಗಿ ದೇವರ ಪೂಜೆಯಲ್ಲಿ ಬಳಸಲಾಗುತ್ತದೆ. ಗಣೇಶ, ದುರ್ಗಾ ದೇವಿ ಪೂಜೆಯಲ್ಲಿ ದಾಸವಾಳ ಹೂವಿಗೆ ವಿಶೇಷ ಸ್ಥಾನವಿದೆ. ಈ ಸಸ್ಯವು ಸುಲಭವಾಗಿ ಬೆಳೆಯುವುದರಿಂದ ಮನೆ ತೋಟಗಾರಿಕೆ ಪ್ರಿಯರಿಗೆ ಇದು ಉತ್ತಮ ಆಯ್ಕೆಯಾಗಿದೆ. ದಾಸವಾಳ ಹೂವು ಬೆಳೆಯುವ ವಿಧಾನ 1. ಹವಾಮಾನ ದಾಸವಾಳ ಗಿಡವು ಉಷ್ಣ ಮತ್ತು ತೇವಾಂಶಯುತ ಹವಾಮಾನದಲ್ಲಿ ಚೆನ್ನಾಗಿ ಬೆಳೆಯುತ್ತದೆ. 15°C ರಿಂದ 35°C ತಾಪಮಾನ ಸೂಕ್ತವಾಗಿದೆ. ತುಂಬಾ ಚಳಿ ಅಥವಾ ತೀವ್ರ ಬಿಸಿಲು ಗಿಡದ ಬೆಳವಣಿಗೆಗೆ ಹಾನಿ ಮಾಡಬಹುದು. 2. ಮಣ್ಣು 3. ನೆಡುವ ವಿಧಾನ ದಾಸವಾಳವನ್ನು ಕಡ್ಡಿ (stem cutting) ಮೂಲಕ ಸುಲಭವಾಗಿ ಬೆಳೆಯಬಹುದು. 4. ನೀರಾವರಿ 5. ಗೊಬ್ಬರ ದಾಸವಾಳ ಗಿಡದ ನಿರ್ವಹಣೆ ಕತ್ತರಿಸುವುದು (Pruning) ಹಳೆಯ ಮತ್ತು ಒಣ ಕೊಂಬೆಗಳನ್ನು ತೆಗೆದುಹಾಕುವುದರಿಂದ ಹೊಸ ಕೊಂಬೆಗಳು ಬೆಳೆಯುತ್ತವೆ. ಕೀಟ ಮತ್ತು ರೋಗ ನಿಯಂತ್ರಣ ಸೂರ್ಯಪ್ರಕಾಶ ದಾಸವಾಳ ಗಿಡಕ್ಕೆ ದಿನಕ್ಕೆ ಕನಿಷ್ಠ 5–6 ಗಂಟೆಗಳ ಸೂರ್ಯಪ್ರಕಾಶ ಅಗತ್ಯ. ದಾಸವಾಳ ಹೂವಿನ ಆಧ್ಯಾತ್ಮಿಕ ಮಹತ್ವ ಭಾರತೀಯ ಆಧ್ಯಾತ್ಮಿಕ ಜೀವನದಲ್ಲಿ ದಾಸವಾಳ ಹೂವಿಗೆ ವಿಶೇಷ ಸ್ಥಾನವಿದೆ. ದುರ್ಗಾ ದೇವಿ ಹಾಗೂ ಪಾರ್ವತಿ ದೇವಿ ಪೂಜೆ: ಕೆಂಪು ದಾಸವಾಳ ಹೂವನ್ನು ದುರ್ಗಾ ದೇವಿಗೆ ಅರ್ಪಿಸುವುದು ಶಕ್ತಿ, ಧೈರ್ಯ ಮತ್ತು ಯಶಸ್ಸಿನ ಸಂಕೇತವೆಂದು ನಂಬಲಾಗಿದೆ. ಗಣೇಶನ ಪೂಜೆ: ಹಳದಿ ಅಥವಾ ಕೆಂಪು ದಾಸವಾಳ ಹೂವನ್ನು ಗಣಪತಿಗೆ ಅರ್ಪಿಸುವ ಪದ್ಧತಿಯೂ ಹಲವೆಡೆ ಇದೆ. ಯಜ್ಞ-ಹೋಮಗಳಲ್ಲಿ ಬಳಕೆ: ಕೆಲವು ಶಾಸ್ತ್ರಗಳಲ್ಲಿ ದಾಸವಾಳ ಹೂವನ್ನು ವಿಶೇಷ ಪೂಜಾ ಕ್ರಮಗಳಲ್ಲಿ ಉಪಯೋಗಿಸುವ ಬಗ್ಗೆ ಉಲ್ಲೇಖಗಳಿವೆ. ಗಿಡದ ಲಕ್ಷಣಗಳು : ಆಯುರ್ವೇದ ಮತ್ತು ಔಷಧೀಯ ಉಪಯೋಗಗಳು : ದಾಸವಾಳ ಹೂ ಮತ್ತು ಎಲೆಗಳನ್ನು ಆಯುರ್ವೇದ ಮತ್ತು ಜನಪದ ವೈದ್ಯಕೀಯದಲ್ಲಿ ಶತಮಾನಗಳಿಂದ ಬಳಸಲಾಗುತ್ತಿದೆ. 1.ಹಿಬಿಸ್ಕಸ್ ಟೀ (Hibiscus Tea): ರಕ್ತದ ಒತ್ತಡ ನಿಯಂತ್ರಣ, ದೇಹ ಶೀತೀಕರಣ ಮತ್ತು ಹೃದಯದ ಆರೋಗ್ಯಕ್ಕೆ ಸಹಾಯಕ. 2.ಕೂದಲ ಆರೋಗ್ಯ: ಹೂವಿನ ಪೇಸ್ಟ್ ಮತ್ತು ಎಲೆಗಳಿಂದ ಮಾಡಿದ ಎಣ್ಣೆ ಕೂದಲು ಉದುರುವಿಕೆ ಕಡಿಮೆ ಮಾಡುತ್ತದೆ, ಹೊಳಪು ಹೆಚ್ಚಿಸುತ್ತದೆ. 3. ತಲೆಹೊಟ್ಟು ನಿವಾರಣೆ ದಾಸವಾಳ ಹೂವು ಮತ್ತು ಎಲೆಗಳನ್ನು ಪೇಸ್ಟ್ ಮಾಡಿ ತಲೆಗೆ ಹಚ್ಚಿದರೆ ತಲೆಹೊಟ್ಟು ಕಡಿಮೆಯಾಗುತ್ತದೆ. 4. ಚರ್ಮದ ಆರೈಕೆ ಚರ್ಮದ ಮೇಲೆ ಹಚ್ಚಿದರೆ ಮೃದುವಾಗಿಸಿ ಹೊಳಪು ನೀಡುತ್ತದೆ. 5. ರಕ್ತದ ಒತ್ತಡ ನಿಯಂತ್ರಣ ದಾಸವಾಳ ಚಹಾ (hibiscus tea) ರಕ್ತದ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. 6.ಜೀರ್ಣಕ್ರಿಯೆ: ಎಲೆಗಳನ್ನು ಕಷಾಯವಾಗಿ ಸೇವಿಸಿದರೆ ಹೊಟ್ಟೆಯ ತೊಂದರೆ, ಗ್ಯಾಸ್ಟ್ರಿಕ್ ಸಮಸ್ಯೆಗಳು ಕಡಿಮೆಯಾಗುತ್ತವೆ. ಮಹಿಳೆಯರ ಆರೋಗ್ಯ: ದಾಸವಾಳ ಹೂವು ಮಾಸಿಕ ಚಕ್ರ ನಿಯಮಿತಗೊಳಿಸಲು ಸಹಕಾರಿ ಎಂದು ಹಲವಾರು ಔಷಧಿ ಗ್ರಂಥಗಳಲ್ಲಿ ಉಲ್ಲೇಖವಿದೆ. 8. ತೂಕ ಇಳಿಕೆ ದಾಸವಾಳ ಚಹಾ ತೂಕ ಇಳಿಸಲು ಸಹಕಾರಿ. 9. ರೋಗನಿರೋಧಕ ಶಕ್ತಿ ಹೆಚ್ಚಳ ಇದರಲ್ಲಿ antioxidants ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. 10. ಗಾಯಗಳ ಗುಣಮುಖ ಎಲೆ ಮತ್ತು ಹೂವುಗಳನ್ನು ಗಾಯಗಳ ಮೇಲೆ ಬಳಸಬಹುದು. ಸೌಂದರ್ಯದಲ್ಲಿ ಉಪಯೋಗ : ಮುಖದ ತಾಜಾತನ: ದಾಸವಾಳ ಹೂವಿನ ಪೇಸ್ಟ್ ಮೊಡವೆ, ಕಪ್ಪು ಮಚ್ಚೆ, ಚರ್ಮದ ಕಟುತನ ಕಡಿಮೆ ಮಾಡಲು ಸಹಾಯಕ. ಕೂದಲಿಗೆ ಮಾಸ್ಕ್: ಹೂ ಮತ್ತು ಎಲೆಗಳಿಂದ ಮಾಡಿದ ಪೇಸ್ಟ್‌ನ್ನು ತಲೆಗೆ ಹಚ್ಚುವುದರಿಂದ ಕೂದಲು ದಪ್ಪ, ಹೊಳೆಯುವಂತೆ ಬೆಳೆಯುತ್ತದೆ. ನೈಸರ್ಗಿಕ ಶಾಂಪೂ: ಕೆಲವು ಹಳ್ಳಿಗಳಲ್ಲಿ ಇಂದಿಗೂ ದಾಸವಾಳ ಎಲೆಗಳನ್ನು ನೀರಿನಲ್ಲಿ ಒದ್ದೆ ಮಾಡಿ ಶಾಂಪೂ ಆಗಿ ಬಳಸುತ್ತಾರೆ. ದಾಸವಾಳ ಹೂವಿನ ಅಡುಗೆ ಉಪಯೋಗಗಳು ಹೂವುಗಳಿಂದ ತಯಾರಿಸಿದ ಪಾನೀಯಗಳು ಆರೋಗ್ಯಕರವಾಗಿವೆ. ದಾಸವಾಳದ ಔಷಧೀಯ ಗುಣಗಳು ಈ ಗುಣಗಳು ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. ಪಾರಂಪರಿಕ ಬಳಕೆ ಮತ್ತು ಜನಪದ ಸಂಸ್ಕೃತಿ ಹಳ್ಳಿಗಳಲ್ಲಿ ದಾಸವಾಳ ಗಿಡವನ್ನು ಮನೆ ಮುಂಭಾಗದಲ್ಲಿ ನೆಡುವ ಪದ್ಧತಿ ಇದೆ. ಹಬ್ಬ-ಹರಿದಿನಗಳಲ್ಲಿ ತೋರಣ ಕಟ್ಟಲು, ತಲೆಯ ಅಲಂಕಾರಕ್ಕೆ ಮಹಿಳೆಯರು ದಾಸವಾಳ ಹೂವನ್ನು ಬಳಸುತ್ತಾರೆ. ಮದುವೆ, ಮಂಗಳಕಾರ್ಯಗಳಲ್ಲಿ ಈ ಹೂವು ಅಲಂಕಾರಿಕವಾಗಿ ಬಳಕೆಯಲ್ಲಿದೆ. ಪರಿಸರದಲ್ಲಿ ಮಹತ್ವ ದಾಸವಾಳ ಹೂವು ಜೇನು ಹುಳು, ಚಿಟ್ಟೆ ಮತ್ತು ಹಕ್ಕಿಗಳನ್ನು ಆಕರ್ಷಿಸುವ ಹೂ. ಇದರಿಂದ ಪರಿಸರದಲ್ಲಿ ಜೈವಿಕ ಸಮತೋಲನ ಕಾಪಾಡಲು ಸಹಾಯವಾಗುತ್ತದೆ. ತೋಟದಲ್ಲಿ ದಾಸವಾಳ ಗಿಡ ಬೆಳೆಸುವುದರಿಂದ ಮನೆ ಸುತ್ತಮುತ್ತಲಿನ ವಾತಾವರಣ ತಾಜಾ ಮತ್ತು ಹಸಿರಾಗಿರುತ್ತದೆ. ದಾಸವಾಳ ಹೂವಿನ ಪೌಷ್ಠಿಕ ಮೌಲ್ಯ : ಹಿಬಿಸ್ಕಸ್ ಹೂವಿನ ಚಹಾ ವಿಟಮಿನ್ C, ಕಬ್ಬಿಣ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ದಣಿವನ್ನು ಕಡಿಮೆ ಮಾಡುತ್ತದೆ. ದಾಸವಾಳ ಹೂವು ಕೇವಲ ಅಲಂಕಾರಿಕ ಹೂವಲ್ಲ; ಇದು ಆಧ್ಯಾತ್ಮ, ಆಯುರ್ವೇದ, ಸೌಂದರ್ಯ, ಮತ್ತು ಪರಿಸರಕ್ಕೆ ಅತ್ಯಂತ ಉಪಯುಕ್ತವಾದ ಹೂ. ಪ್ರತಿಯೊಬ್ಬರೂ ತಮ್ಮ ಮನೆ ತೋಟದಲ್ಲಿ ದಾಸವಾಳ ಗಿಡ ಬೆಳೆಸಿದರೆ, ದೇವರ ಪೂಜೆಗೆ ಹೂ, ಆರೋಗ್ಯಕ್ಕೆ ಔಷಧಿ, ಅಲಂಕಾರಕ್ಕೆ ಸೌಂದರ್ಯ ಮತ್ತು ಪರಿಸರಕ್ಕೆ ಹಸಿರು—all in one ರೀತಿಯಲ್ಲಿ ಲಭ್ಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ https://www.healthline.com/nutrition/hibiscus-tea-benefits

Beauty

ಅಂಟುವಳ ಕಾಯಿ – ಔಷದಿಯ ಗುಣಗಳು ಮತ್ತು 10 ಅಧ್ಭುತ ಉಪಯೋಗಗಳು

ಪರಿಚಯ : ಅಂಟುವಳ ಕಾಯಿ (Soapnut) ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಶತಮಾನಗಳಿಂದ ಬಳಸಲ್ಪಡುತ್ತಿರುವ ಒಂದು ನೈಸರ್ಗಿಕ ಉಡುಗೊರೆ. ಇದನ್ನು ಸಾಮಾನ್ಯವಾಗಿ ರೀಠಾ ಕಾಯಿ ಅಥವಾ ಸೋಪ್ ನಟ್ ಎಂದೂ ಕರೆಯುತ್ತಾರೆ. ಈ ಮರವು ಉಷ್ಣವಲಯ ಪ್ರದೇಶಗಳಲ್ಲಿ ಸುಲಭವಾಗಿ ಬೆಳೆಯುತ್ತದೆ. ಇದರ ಹಣ್ಣು ಒಣಗಿದಾಗ ಗಟ್ಟಿಯಾಗಿರುತ್ತದೆ ಮತ್ತು ಒಳಗೆ ಕಪ್ಪು ಬಣ್ಣದ ಬೀಜ ಇರುತ್ತದೆ. ಈ ಕಾಯಿಯಲ್ಲಿ ಇರುವ ಸಪೋನಿನ್ (Saponin) ಎಂಬ ನೈಸರ್ಗಿಕ ರಾಸಾಯನಿಕದ ಕಾರಣದಿಂದ ನೀರಿಗೆ ಹಾಕಿದರೆ ನೊರೆ ಬರುತ್ತದೆ. ಅದೇ ಕಾರಣಕ್ಕೆ ಇದನ್ನು ಪ್ರಕೃತಿಯ ಶಾಂಪು ಎಂದು ಕರೆಯಲಾಗುತ್ತದೆ. ಪೋಷಕಾಂಶಗಳು ಮತ್ತು ಔಷಧೀಯ ಗುಣಗಳು : ಅಂಟುವಳ ಕಾಯಿಯಲ್ಲಿ ಇರುವ ಪ್ರಮುಖ ಅಂಶಗಳು: ಸಪೋನಿನ್ : ಸ್ವಚ್ಛತೆಗೆ ಸಹಕಾರಿ. ಆಂಟಿ–ಆಕ್ಸಿಡೆಂಟ್ಸ್ : ಚರ್ಮ ಮತ್ತು ಕೂದಲು ಆರೋಗ್ಯಕ್ಕೆ ಒಳ್ಳೆಯದು. ಪ್ರಾಕೃತಿಕ ಅಮ್ಲಗಳು : ತಲೆಹೊಟ್ಟೆ ಸಮಸ್ಯೆ ಹಾಗೂ ಚರ್ಮದ ಕಲೆ ನಿವಾರಣೆ. ಅಂಟುವಳ ಕಾಯಿ ಉಪಯೋಗಗಳು : 1.ಕೂದಲು ಆರೋಗ್ಯಕ್ಕೆ : ಇದನ್ನು ಶಾಂಪು ರೂಪದಲ್ಲಿ ಬಳಸುವುದರಿಂದ: 2.ಚರ್ಮಕ್ಕೆ : ಚರ್ಮದ ಮೇಲೆ ಇರುವ ತೈಲ, ಧೂಳು ಇತ್ಯಾದಿಗಳನ್ನು ಸ್ವಚ್ಛಗೊಳಿಸುತ್ತದೆ. 3. ಬಟ್ಟೆ ತೊಳೆಯಲು : ಹಿಂದಿನ ಕಾಲದಲ್ಲಿ ಬಟ್ಟೆ ತೊಳೆಯಲು ಈ ಕಾಯಿಯನ್ನೇ ಹೆಚ್ಚು ಬಳಸುತ್ತಿದ್ದರು. 4. ಮನೆಯ ಸ್ವಚ್ಛತೆಗೆ : ಅಂಟುವಳ ಕಾಯಿ ಬಳಕೆಯ ವಿಧಾನಗಳು : 1. ಕೂದಲಿಗೆ ಶಾಂಪು ರೂಪದಲ್ಲಿ : 2. ಚರ್ಮದ ಕ್ಲೀನರ್ ಆಗಿ : 3. ಬಟ್ಟೆ ತೊಳೆಯಲು : 4.ಬಿಳಿ ಕೂದಲು ನಿಯಂತ್ರಣ : ಸೂಚನೆ : ಅತಿಯಾಗಿ ಬಳಸಿದರೆ ಕೂದಲು ಒಣಗುವ ಸಾಧ್ಯತೆ ಇದೆ. ಆದ್ದರಿಂದ ಬೇರೆ ನೈಸರ್ಗಿಕ ಎಣ್ಣೆ (ತೆಂಗಿನೆಣ್ಣೆ, ಬಾದಾಮಿ ಎಣ್ಣೆ) ಜೊತೆ ಸೇರಿಸಿ ಬಳಸುವುದು ಉತ್ತಮ.ಕಣ್ಣುಗಳಿಗೆ ತಾಗದಂತೆ ನೋಡಿಕೊಳ್ಳಬೇಕು. ಸಾರಾಂಶ : ನಮ್ಮ ಪೂರ್ವಿಕರು ನಮಗೆ ಬಿಟ್ಟುಹೋದ ಅಮೂಲ್ಯ ಪರಂಪರೆ. ಇಂದು ರಾಸಾಯನಿಕ ಶಾಂಪುಗಳು, ಸಾಬೂನುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಅಂಟುವಳ ಕಾಯಿಯ ನೈಸರ್ಗಿಕ ಶಕ್ತಿ ಅದರಂತಿಲ್ಲ. ಇದು ಕೇವಲ ಕೂದಲು ಮತ್ತು ಚರ್ಮದ ಆರೋಗ್ಯ ಮಾತ್ರವಲ್ಲದೆ, ಪರಿಸರ ಸ್ನೇಹಿ ಸ್ವಚ್ಛತೆಗೆ ಸಹ ಬಹಳ ಮುಖ್ಯವಾದುದು.ಅದರ ಕಾರಣದಿಂದಲೇ ನಾವು ದಿನನಿತ್ಯ ಜೀವನದಲ್ಲಿ ಅಂಟುವಳ ಕಾಯಿಯನ್ನು ಪುನಃ ಬಳಸಲು ಆರಂಭಿಸಬೇಕು. ಇದು ನಮ್ಮ ದೇಹಕ್ಕೆ, ಮನಸ್ಸಿಗೆ ಹಾಗೂ ಪ್ರಕೃತಿಗೆ ಒಳ್ಳೆಯದಾಗಿದೆ. ಹೆಚ್ಚಿನ ಮಾಹಿತಿಗಾಗಿ https://www.sciencedirect.com/science/article/abs/pii/S1382668918300152

Beauty

ನೈಲ್ ಆರ್ಟ್ – ಸರಳ, ಸುಂದರ ನೈಲ್ ಆರ್ಟ್ ಗೈಡ್

ಪರಿಚಯ : ನೆಲ್ ಆರ್ಟ್ – ನಿಮ್ಮ ಉಗುರುಗಳಿಗೆ ಅಲಂಕಾರ : ಮದುವೆ ಸಂದರ್ಭದಲ್ಲಿ ನಿಮ್ಮ ಕೈಗಳ ಅಂದ ಹೆಚ್ಚಿಸಲು ನೈಲ್ ಆರ್ಟ್ ಮಾಡಿಸಿಕೊಂಡರೆ ಹಾಗೆಯೇ ಆಫೀಸ್ ಹೋಗುವವರು ಹಾಕಿಕೊಂಡರೆ ನಿಮ್ಮ ಕೈ ಅಂದ ಹೆಚ್ಚುತ್ತದೆ. ನೈಲ್ ಆರ್ಟ್ ಎಂದರೆ ಕೇವಲ ಬಣ್ಣ ಹಚ್ಚುವುದು ಅಲ್ಲ. ಇದು ನಿಮ್ಮ ವೈಯಕ್ತಿಕ ಶೈಲಿಯ ಪ್ರತಿಬಿಂಬ. ಇತ್ತೀಚಿನ ದಿನಗಳಲ್ಲಿ ನೈಲ್ ಆರ್ಟ್ ಮನ್ನಣೆಯಲ್ಲಿದೆ. ಇಂದು ನೆಲ್ ಆರ್ಟ್ ಎಲ್ಲೆಂದರಲ್ಲಿ ಪ್ರಚಲಿತವಾಗಿದೆ. ಜನಪ್ರಿಯ ನೆಲ್ ಆರ್ಟ್ ವಿನ್ಯಾಸಗಳು: ಜೆಲ್ ಪಾಲಿಶ್ (Gel Polish) – ನಿಮ್ಮ ಕೈಯಲ್ಲಿ ಮತ್ತು ಕಾಲಿನಲ್ಲಿ ಸುಂದರ ಉಗುರುಗಳಿದ್ದರೆ ಅಥವಾ ನೈಲ್ಲಿ extension ಗೆ ವಿವಿಧ ರೀತಿಯ ನೈಲ್ ಪಾಲಿಶ್ ಹಾಕಬಹುದು ಈ ಜೆಲ್ ಪಾಲಿಶ್ ನಿಮ್ಮ ಕೈಗಳಲ್ಲಿ 20 ದಿನಗಳವರೆಗೆ ಇರುತ್ತದೆ. ವಿವಿಧ ಕಲರ್ ಗಳಲ್ಲಿ ಸಿಗುತ್ತದೆ. ಜೆಲ್ ಪಾಲಿಶ್ ಹಾಕಿದ ಮೇಲೆ ನಿಮಗೆ ಬೇಕಾದ ರೀತಿಯ ವಿನ್ಯಾಸ (design) ಮಾಡಿಸಿಕೊಳ್ಳಬಹುದು.ಇದರ ದರಗಳು 900 ರಿಂದ ಪ್ರಾರಂಭವಾಗುತ್ತದೆ. 2. ತಾತ್ಕಾಲಿಕ ವಿಸ್ತರಣೆ (Temporary Extension) : ನಿಮಗೆ ಉಗುರುಗಳು ಇಲ್ಲದಿದ್ದರೆ ಉಗುರುಗಳಿಗೆ ಕೃತಕ (artificial) ಉಗುರುಗಳನ್ನು ಹಾಕಿ ಬೇಕಾದ ಆಕಾರವನ್ನು ಮಾಡಿಸಿಕೊಳ್ಳಬಹುದು. ನಂತರ ಬೇಕಾದ ಕಲರ್ ಅನ್ನು ಹಾಕಿಸಿಕೊಳ್ಳಬಹುದು ಈ ಉಗುರುಗಳು 30 ದಿನಗಳ ವರೆಗೆ ಇರುತ್ತದೆ.ವಿವಿಧ ಶೈಲಿಯ ವಿನ್ಯಾಸಗಳನ್ನು ಮಾಡಿಸಬಹುದು.ಇದರ ದರಗಳು 1300 ರಿಂದ ಪ್ರಾರಂಭವಾಗುತ್ತದೆ. 3.ಅಕ್ರೈಲಿಸಿ ವಿಸ್ತರಣೆ (Acrylic Extension) : ಅಕ್ರೈಲಿಸಿ extension ಅಂದರೆ ನೈಲ್ extension ಮಾಡುವ ವಿಧಾನವಾಗಿದೆ. ಲಿಕ್ವಿಡ್ ಮೋನೋಮೆರ್ ಮತ್ತು ಪೌಡರ್ ಪಾಲಿಮಾರ್ ಅನ್ನು ಮಿಶ್ರಣ ಮಾಡಿ ಉಗುರಿನ ಮೇಲೆ ಹಾಕಲಾಗುತ್ತದೆ.ನೈಲ್ ಬೆಳೆದ ಹಾಗೆ ಅದಕ್ಕೆ ಫಿಲ್ಲಿಂಗ್ ಮಾಡಬಹುದು. ಇದು ತುಂಬಾ ದಿನಗಳವರೆಗೆ ಬರುತ್ತದೆ.ಇದಕ್ಕೆ ವಿವಿಧ ರೀತಿಯ ವಿನ್ಯಾಸಗಳನ್ನು ಮಾಡಬಹುದು. ಇದರ ದರಗಳು 1800 ರಿಂದ ಪ್ರಾರಂಭವಾಗುತ್ತದೆ. 4.ಕ್ಯಾಟ್ ಐ (cat eye) : ನಿಮ್ಮ ಉಗುರುಗಳಿಗೆ ಕ್ಯಾಟ್ ಐ ವಿನ್ಯಾಸ (design) ಮಾಡಿಸಿಕೊಳ್ಳಬಹುದು. ಇದರ ದರಗಳು 1800 ರಿಂದ ಆರಂಭವಾಗುತ್ತವೆ. ಸೂಚನೆ : ಇದರ ಮೇಲೆ 3D ಅಥವಾ 5D ಡಿಸೈನ್ ಮಾಡಿಸಿಕೊಳ್ಳಬಹುದು. ನಿಮ್ಮ ಉಗುರುಗಳಿಗೆ ವಿವಿಧ ಬಗೆಯ ಆಕಾರಗಳನ್ನು ಕೊಡಬಹುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಇನ್ಸ್ಟಾಗ್ರಾಮ್ ಸಂಪರ್ಕಿಸಬಹುದು : Nailed it by Divya Jayappa -Chandra Layout, Vijayanagar, Nagarabhavi https://youtube.com/shorts/HfysJ_JYk84?si=63phDw6GZtd0mEcE

Scroll to Top