ಬ್ರೌನ್ ಬ್ರೆಡ್ ನಿಜವಾಗಿಯೂ ಆರೋಗ್ಯಕರವೇ? ನಿಜವಾದ ಸತ್ಯ ಇಲ್ಲಿದೆ!
ಬ್ರೌನ್ ಬ್ರೆಡ್ ಆರೋಗ್ಯಕರವೇ ಇಂದಿನ ವೇಗದ ಜೀವನದಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗುತ್ತಿದ್ದಾರೆ. ಬೆಳಗಿನ ಉಪಾಹಾರದಿಂದಲೇ ಆರೋಗ್ಯಕರ ಆಯ್ಕೆಯನ್ನು ಮಾಡಲು ಎಲ್ಲರೂ ಪ್ರಯತ್ನಿಸುತ್ತಾರೆ. ಈ ಸಂದರ್ಭದಲ್ಲಿ ಬಹುತೇಕ ಜನರು “ಬ್ರೌನ್ ಬ್ರೆಡ್” ಅನ್ನು ವೈಟ್ ಬ್ರೆಡ್‌ಗೆ ಬದಲಾಗಿ ಬಳಸಲು ಪ್ರಾರಂಭಿಸಿದ್ದಾರೆ. ಆದರೆ ಒಂದು ಮುಖ್ಯ ಪ್ರಶ್ನೆ – ಬ್ರೌನ್ ಬ್ರೆಡ್ ನಿಜವಾಗಿಯೂ ಆರೋಗ್ಯಕರವೇ? ಅಥವಾ ಇದು ಕೇವಲ ಮಾರ್ಕೆಟಿಂಗ್ ತಂತ್ರವೇ? ಈ ಲೇಖನದಲ್ಲಿ ನಾವು ಬ್ರೌನ್ ಬ್ರೆಡ್‌ನ ನಿಜವಾದ ಸತ್ಯವನ್ನು ಇಲ್ಲಿ ತಿಳಿದುಕೊಳ್ಳೋಣ. ಬ್ರೌನ್ ಬ್ರೆಡ್ ಎಂದರೇನು? ಬ್ರೌನ್ ಬ್ರೆಡ್ ಆರೋಗ್ಯಕರವೇ ಬ್ರೌನ್ ಬ್ರೆಡ್ ಸಾಮಾನ್ಯವಾಗಿ ಗೋಧಿ ಹಿಟ್ಟಿನಿಂದ (whole wheat flour) ತಯಾರಿಸಲಾಗುತ್ತದೆ. ಇದು ವೈಟ್ ಬ್ರೆಡ್‌ನಂತೆ ಸಂಪೂರ್ಣವಾಗಿ ರಿಫೈನ್ ಮಾಡಲಾಗಿಲ್ಲ. ಆದ್ದರಿಂದ ಇದರಲ್ಲಿ ಫೈಬರ್, ವಿಟಮಿನ್ಸ್ ಮತ್ತು ಮಿನರಲ್ಸ್ ಹೆಚ್ಚು ಇರುತ್ತವೆ. ಆದರೆ ಎಲ್ಲ ಬ್ರೌನ್ ಬ್ರೆಡ್ ಒಂದೇ ತರದದ್ದಾಗಿರುವುದಿಲ್ಲ. ಕೆಲವು ಬ್ರ್ಯಾಂಡ್‌ಗಳು ಬ್ರೌನ್ ಬಣ್ಣ ಕೊಡಲು ಕ್ಯಾರಮೆಲ್ ಅಥವಾ ಕಲರ್ ಸೇರಿಸುತ್ತವೆ. ಬ್ರೌನ್ ಬ್ರೆಡ್ ಆರೋಗ್ಯಕರವೇ ಎಂದು ಹೇಳುವ ಕಾರಣಗಳು 1. ಹೆಚ್ಚು ಫೈಬರ್ : ಬ್ರೌನ್ ಬ್ರೆಡ್ ಆರೋಗ್ಯಕರವೇ ಎಂದರೆ ಬ್ರೌನ್ ಬ್ರೆಡ್ ನಲ್ಲಿ ಫೈಬರ್ ಹೆಚ್ಚು ಇರುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆ ತುಂಬಿದ ಅನುಭವ ಕೊಡುತ್ತದೆ. ಆದ್ದರಿಂದ ಬೆಳಗ್ಗೆ ಇದನ್ನು ತಿನ್ನಬಹುದು. 2. ತೂಕ ಇಳಿಕೆಗೆ ಸಹಾಯ : ಬ್ರೌನ್ ಬ್ರೆಡ್ ಆರೋಗ್ಯಕರವೇ – ಫೈಬರ್ ಹೆಚ್ಚು ಇರುವುದರಿಂದ ನಿಮಗೆ ಹೆಚ್ಚು ಹೊತ್ತು ಹಸಿವಾಗುವುದಿಲ್ಲ. ಇದರಿಂದ ಅತಿಯಾಗಿ ತಿನ್ನುವ ಪ್ರವೃತ್ತಿ ಕಡಿಮೆಯಾಗುತ್ತದೆ. ನಿಮ್ಮ ಡಯಟ್ ಪ್ಲಾನ್ ನಲ್ಲಿ ಇದನ್ನು ಸೇರಿಸಬಹುದು. 3. ರಕ್ತದ ಸಕ್ಕರೆ ನಿಯಂತ್ರಣ : ಬ್ರೌನ್ ಬ್ರೆಡ್ ಆರೋಗ್ಯಕರವೇ? – ವೈಟ್ ಬ್ರೆಡ್‌ಗಿಂತ ಬ್ರೌನ್ ಬ್ರೆಡ್ ನಿಧಾನವಾಗಿ ಜೀರ್ಣವಾಗುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ತಕ್ಷಣ ಏರಿಕೆಯಾಗುವುದಿಲ್ಲ. ಕೆಲವೊಂದು ಬ್ರೌನ್ ಬ್ರೆಡ್ ನಲ್ಲಿ ಸಕ್ಕರೆ ಪ್ರಮಾಣ ತುಂಬ ಕಡಿಮೆ ಇರುತ್ತದೆ ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಆಗುತ್ತದೆ. ಡಯಾಬಿಟಿಸ್ ಇರುವವರು ಒಮ್ಮೆಮ್ಮೆ ತಿನ್ನಬಹುದು. 4. ಹೃದಯ ಆರೋಗ್ಯ : ಹೆಚ್ಚಿನ ಫೈಬರ್ ಇರುವ ಆಹಾರ ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಬ್ರೌನ್ ಬ್ರೆಡ್ ನಲ್ಲಿ ಅಧಿಕ ಫೈಬರ್ ಇರುತ್ತದೆ ಕೊಲೆಸ್ಟ್ರಾಲ್ ಅಂಶ ಕಡಿಮೆ ಇರುವುದರಿಂದ ಹೃದಯ ಸಂಬಂಧಿ ರೋಗಗಳು ಕಡಿಮೆ ಇರುತ್ತದೆ. ಆದರೆ ಎಲ್ಲಾ ಬ್ರೌನ್ ಬ್ರೆಡ್ ಆರೋಗ್ಯಕರವಲ್ಲ! ಇದು ಬಹಳ ಮುಖ್ಯವಾದ ವಿಷಯ. ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲಾ ಬ್ರೌನ್ ಬ್ರೆಡ್ ಆರೋಗ್ಯಕರವೆಂದು ಹೇಳಲು ಸಾಧ್ಯವಿಲ್ಲ. ನಿಜವಾದ ಬ್ರೌನ್ ಬೇಡ ಹೇಗೆ ಎಂದು ಈ ಕೆಳಗಿನಂತೆ ತಿಳಿದುಕೊಳ್ಳೋಣ. 1. ಕೇವಲ ಬಣ್ಣದ ಮೋಸ : ಕೆಲವು ಕಂಪನಿಗಳು ವೈಟ್ ಬ್ರೆಡ್‌ಗೆ ಕೇವಲ ಬ್ರೌನ್ ಬಣ್ಣ ನೀಡುತ್ತವೆ. ಇದರಿಂದ ಅದು ಆರೋಗ್ಯಕರವಾಗಿ ಕಾಣುತ್ತದೆ, ಆದರೆ ನಿಜವಾಗಿಯೂ ಅಲ್ಲ. ಮೈದಾ ಹಿಟ್ಟಿಗೆ ಬಣ್ಣ ಕೊಟ್ಟು ಬ್ರೆಡ್ ಮಾಡಿರುತ್ತಾರೆ ಇದು ಆರೋಗ್ಯಕ್ಕೆ ಹಾನಿಯಾಗುತ್ತದೆ. ಇದು ನಿಜವಾಗಿಯೂ ಬ್ರೌನ್ ಬ್ರೆಡ್ ಆಗಿರುವುದಿಲ್ಲ. 2. ಮೈದಾ ಬಳಕೆ : ಕೆಲ ಬ್ರೌನ್ ಬ್ರೆಡ್‌ಗಳಲ್ಲಿ ಇನ್ನೂ ಮೈದಾ (refined flour) ಹೆಚ್ಚು ಇರುತ್ತದೆ. ಇವು ಕೂಡ ನಿಜಾವಾಡಾ ಬ್ರೌನ್ ಬ್ರಎಡ್ ಆಗಿರುವುದಿಲ್ಲ. 3. ಪ್ರಿಸರ್ವೇಟಿವ್ : ಬ್ರೆಬ್ರೆಡ್ ಹೆಚ್ಚು ದಿನ ಉಳಿಯಲು ಪ್ರಿಸರ್ವೇಟಿವ್ಸ್ ಸೇರಿಸಲಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕರವಾಗಬಹುದು. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬ್ರೌನ್ ಬ್ರೆಡ್ ಬಗ್ಗೆ ಇರುವ ತಪ್ಪು ಕಲ್ಪನೆಗಳು 1. ಎಲ್ಲಾ ಬ್ರೌನ್ ಬ್ರೆಡ್ ಆರೋಗ್ಯಕರವಲ್ಲ ಹೆಚ್ಚಿನ ಜನರು ಬ್ರೌನ್ ಬ್ರೆಡ್ ಎಂದರೆ ಅದು 100% ಗೋಧಿ ಹಿಟ್ಟಿನಿಂದ ಮಾಡಲಾಗಿದೆ ಎಂದು ಭಾವಿಸುತ್ತಾರೆ. ಆದರೆ ಹಲವಾರು ಬ್ರ್ಯಾಂಡ್‌ಗಳು ಮೈದಾ ಸೇರಿಸಿ ಬಣ್ಣ ಮಾತ್ರ ಕೊಡುತ್ತವೆ. 2. ತೂಕ ಇಳಿಕೆಗೆ ಸಹಾಯಕ ಎಂದು ಭ್ರಮೆ ಬ್ರೌನ್ ಬ್ರೆಡ್ ತಿನ್ನುವುದರಿಂದ ಮಾತ್ರ ತೂಕ ಇಳಿಯುವುದಿಲ್ಲ. ಅದು ನಿಮ್ಮ ಸಂಪೂರ್ಣ ಡಯಟ್ ಮತ್ತು ವ್ಯಾಯಾಮದ ಮೇಲೆ ಅವಲಂಬಿತವಾಗಿದೆ. ಕೆಲವರು ಬ್ರೌನ್ ಬ್ರೆಡ್ ಮಾತ್ರ ತಿಂದರೆ ತೂಕ ಕಡಿಮೆ ಆಗುತ್ತದೆ ಎಂದು ತಪ್ಪು ಕಲ್ಪನೆ ಹೊಂದಿರುತ್ತಾರೆ. ಇದರಿಂದ ನಿಜವಾಗಿಯೂ ತೂಕ ಕಡಿಮೆ ಆಗುವುದಿಲ್ಲ. 3. ಫೈಬರ್ ಹೆಚ್ಚು ಇದೆ ಎಂದು ಊಹೆ ಕೆಲವು ಬ್ರೆಡ್‌ಗಳಲ್ಲಿ ಫೈಬರ್ ಪ್ರಮಾಣ ಕಡಿಮೆ ಇರುತ್ತದೆ. ಲೇಬಲ್ ನೋಡದೇ ಖರೀದಿಸುವುದು ತಪ್ಪು. ನಿಜವಾದ ಬ್ರೌನ್ ಬ್ರೆಡ್ ಗುರುತಿಸುವುದು ಹೇಗೆ? ನೀವು ಖರೀದಿಸುವ ಮೊದಲು ಈ ವಿಷಯಗಳನ್ನು ಗಮನಿಸಿ: ಬ್ರೌನ್ ಬ್ರೆಡ್ vs ವೈಟ್ ಬ್ರೆಡ್ಅಂಶ : ಫೈಬರ್ :ಬ್ರೌನ್ ಬ್ರೆಡ್ ನಲ್ಲಿ ಫೈಬರ್ ಹೆಚ್ಚುವೈಟ್ ಬ್ರೆಡ್ ನಲ್ಲಿ ಫೈಬರ್ ಕಡಿಮೆ ಜೀರ್ಣಕ್ರಿಯೆ :ಬ್ರೌನ್ ಬ್ರೆಡ್ ನಲ್ಲಿ ಜೀರ್ಣಕ್ರಿಯೆ ನಿಧಾನವೈಟ್ ಬ್ರೆಡ್ ನಲ್ಲಿ ಜೀರ್ಣಕ್ರಿಯೆ ವೇಗ ಪೋಷಕಾಂಶ :ಬ್ರೌನ್ ಬ್ರೆಡ್ ನಲ್ಲಿ ಪೋಷಕಾಂಶ ಹೆಚ್ಚುವೈಟ್ ಬ್ರೆಡ್ ನಲ್ಲಿ ಪೋಷಕಾಂಶ ಕಡಿಮೆ ರಕ್ತ ಸಕ್ಕರೆ :ಬ್ರೌನ್ ಬ್ರೆಡ್ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿತವೈಟ್ ಬ್ರೆಡ್ ರಕ್ತದಲ್ಲಿನ ಸಕ್ಕರೆ ಮಟ್ಟ ಬೇಗ ಏರಿಕೆ ಬ್ರೌನ್ ಬ್ರೆಡ್ ಯಾರಿಗೆ ಸೂಕ್ತ? ಯಾವಾಗ ತಪ್ಪಿಸಿಕೊಳ್ಳಬೇಕು? ಬ್ರೌನ್ ಬ್ರೆಡ್ ತಿನ್ನುವ ಸರಿಯಾದ ವಿಧಾನ : ಮನೆಯಲ್ಲೇ ಆರೋಗ್ಯಕರ ಬ್ರೆಡ್ ಆಯ್ಕೆ: ನೀವು ಸಾಧ್ಯವಾದರೆ ಮನೆಯಲ್ಲೇ ಬ್ರೆಡ್ ತಯಾರಿಸಬಹುದು ಅಥವಾ ವಿಶ್ವಾಸಾರ್ಹ ಬ್ರ್ಯಾಂಡ್ ಆಯ್ಕೆ ಮಾಡಬಹುದು. ಬ್ರೌನ್ ಬ್ರೆಡ್ ನಿಜವಾಗಿಯೂ ಆರೋಗ್ಯಕರವಾಗಿರಬಹುದು, ಆದರೆ ಅದು ನೀವು ಆಯ್ಕೆ ಮಾಡುವ ಬ್ರೆಡ್ ಮೇಲೆ ಅವಲಂಬಿತವಾಗಿದೆ. ಎಲ್ಲ ಬ್ರೌನ್ ಬ್ರೆಡ್ ಆರೋಗ್ಯಕರವಲ್ಲ ಎಂಬುದನ್ನು ಮರೆಯಬೇಡಿ. ಸರಿಯಾದ ಪದಾರ್ಥಗಳಿಂದ ತಯಾರಿಸಲಾದ ಬ್ರೌನ್ ಬ್ರೆಡ್ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೇವಲ ಬಣ್ಣ ನೋಡಿ ಖರೀದಿಸುವುದರಿಂದ ತಪ್ಪು ಆಯ್ಕೆ ಮಾಡಬಹುದು. ಕೊನೆಯ ಸಲಹೆ : ಬ್ರೌನ್ ಬ್ರೆಡ್ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಈ ವೆಬ್ಸೈಟ್ ನೋಡಿ https://www.healthline.com/nutrition/is-bread-bad-for-you
ಬ್ರೌನ್ ಬ್ರೆಡ್ ನಿಜವಾಗಿಯೂ ಆರೋಗ್ಯಕರವೇ? ನಿಜವಾದ ಸತ್ಯ ಇಲ್ಲಿದೆ! Read Post »
