Beauty

ನೈಲ್ ಆರ್ಟ್ – ಸರಳ, ಸುಂದರ ನೈಲ್ ಆರ್ಟ್ ಗೈಡ್

ನೆಲ್ ಆರ್ಟ್ – ನಿಮ್ಮ ಉಗುರುಗಳಿಗೆ ಅಲಂಕಾರ : ಮದುವೆ ಸಂದರ್ಭದಲ್ಲಿ ನಿಮ್ಮ ಕೈಗಳ ಅಂದ ಹೆಚ್ಚಿಸಲು ನೈಲ್ ಆರ್ಟ್ ಮಾಡಿಸಿಕೊಂಡರೆ ಹಾಗೆಯೇ ಆಫೀಸ್ ಹೋಗುವವರು ಹಾಕಿಕೊಂಡರೆ ನಿಮ್ಮ ಕೈ ಅಂದ ಹೆಚ್ಚುತ್ತದೆ. ನೈಲ್ ಆರ್ಟ್ ಎಂದರೆ ಕೇವಲ ಬಣ್ಣ ಹಚ್ಚುವುದು ಅಲ್ಲ. ಇದು ನಿಮ್ಮ ವೈಯಕ್ತಿಕ ಶೈಲಿಯ ಪ್ರತಿಬಿಂಬ. ಇತ್ತೀಚಿನ ದಿನಗಳಲ್ಲಿ ನೈಲ್ ಆರ್ಟ್ ಮನ್ನಣೆಯಲ್ಲಿದೆ. ಇಂದು ನೆಲ್ ಆರ್ಟ್ ಎಲ್ಲೆಂದರಲ್ಲಿ ಪ್ರಚಲಿತವಾಗಿದೆ. ಜನಪ್ರಿಯ ನೈಲ್ ಆರ್ಟ್ ವಿನ್ಯಾಸಗಳು: ಜೆಲ್ ಪಾಲಿಶ್ (Gel Polish) – ನಿಮ್ಮ ಕೈಯಲ್ಲಿ ಮತ್ತು ಕಾಲಿನಲ್ಲಿ ಸುಂದರ ಉಗುರುಗಳಿದ್ದರೆ ಅಥವಾ ನೈಲ್ಲಿ extension ಗೆ ವಿವಿಧ ರೀತಿಯ ನೈಲ್ ಪಾಲಿಶ್ ಹಾಕಬಹುದು ಈ ಜೆಲ್ ಪಾಲಿಶ್ ನಿಮ್ಮ ಕೈಗಳಲ್ಲಿ 20 ದಿನಗಳವರೆಗೆ ಇರುತ್ತದೆ. ವಿವಿಧ ಕಲರ್ ಗಳಲ್ಲಿ ಸಿಗುತ್ತದೆ. ಜೆಲ್ ಪಾಲಿಶ್ ಹಾಕಿದ ಮೇಲೆ ನಿಮಗೆ ಬೇಕಾದ ರೀತಿಯ ವಿನ್ಯಾಸ (design) ಮಾಡಿಸಿಕೊಳ್ಳಬಹುದು.ಇದರ ದರಗಳು 900 ರಿಂದ ಪ್ರಾರಂಭವಾಗುತ್ತದೆ. 2. ತಾತ್ಕಾಲಿಕ ವಿಸ್ತರಣೆ (Temporary Extension) : ನಿಮಗೆ ಉಗುರುಗಳು ಇಲ್ಲದಿದ್ದರೆ ಉಗುರುಗಳಿಗೆ ಕೃತಕ (artificial) ಉಗುರುಗಳನ್ನು ಹಾಕಿ ಬೇಕಾದ ಆಕಾರವನ್ನು ಮಾಡಿಸಿಕೊಳ್ಳಬಹುದು. ನಂತರ ಬೇಕಾದ ಕಲರ್ ಅನ್ನು ಹಾಕಿಸಿಕೊಳ್ಳಬಹುದು ಈ ಉಗುರುಗಳು 30 ದಿನಗಳ ವರೆಗೆ ಇರುತ್ತದೆ.ವಿವಿಧ ಶೈಲಿಯ ವಿನ್ಯಾಸಗಳನ್ನು ಮಾಡಿಸಬಹುದು.ಇದರ ದರಗಳು 1300 ರಿಂದ ಪ್ರಾರಂಭವಾಗುತ್ತದೆ. 3.ಅಕ್ರೈಲಿಸಿ ವಿಸ್ತರಣೆ (Acrylic Extension) : ಅಕ್ರೈಲಿಸಿ extension ಅಂದರೆ ನೈಲ್ extension ಮಾಡುವ ವಿಧಾನವಾಗಿದೆ. ಲಿಕ್ವಿಡ್ ಮೋನೋಮೆರ್ ಮತ್ತು ಪೌಡರ್ ಪಾಲಿಮಾರ್ ಅನ್ನು ಮಿಶ್ರಣ ಮಾಡಿ ಉಗುರಿನ ಮೇಲೆ ಹಾಕಲಾಗುತ್ತದೆ.ನೈಲ್ ಬೆಳೆದ ಹಾಗೆ ಅದಕ್ಕೆ ಫಿಲ್ಲಿಂಗ್ ಮಾಡಬಹುದು. ಇದು ತುಂಬಾ ದಿನಗಳವರೆಗೆ ಬರುತ್ತದೆ.ಇದಕ್ಕೆ ವಿವಿಧ ರೀತಿಯ ವಿನ್ಯಾಸಗಳನ್ನು ಮಾಡಬಹುದು. ಇದರ ದರಗಳು 1800 ರಿಂದ ಪ್ರಾರಂಭವಾಗುತ್ತದೆ. 4.ಕ್ಯಾಟ್ ಐ (cat eye) : ನಿಮ್ಮ ಉಗುರುಗಳಿಗೆ ಕ್ಯಾಟ್ ಐ ವಿನ್ಯಾಸ (design) ಮಾಡಿಸಿಕೊಳ್ಳಬಹುದು. ಇದರ ದರಗಳು 1800 ರಿಂದ ಆರಂಭವಾಗುತ್ತವೆ. ಸೂಚನೆ : ಇದರ ಮೇಲೆ 3D ಅಥವಾ 5D ಡಿಸೈನ್ ಮಾಡಿಸಿಕೊಳ್ಳಬಹುದು. ನಿಮ್ಮ ಉಗುರುಗಳಿಗೆ ವಿವಿಧ ಬಗೆಯ ಆಕಾರಗಳನ್ನು ಕೊಡಬಹುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಇನ್ಸ್ಟಾಗ್ರಾಮ್ ಸಂಪರ್ಕಿಸಬಹುದು : Nailed it by Divya Jayappa -Chandra Layout, Vijayanagar, Nagarabhavi https://youtube.com/shorts/HfysJ_JYk84?si=63phDw6GZtd0mEcE

ನೈಲ್ ಆರ್ಟ್ – ಸರಳ, ಸುಂದರ ನೈಲ್ ಆರ್ಟ್ ಗೈಡ್ Read Post »

Garden

ಜಮೀನಿನ ಸುತ್ತ, ಮನೆಯ ಸುತ್ತಲೂ ಭದ್ರತೆಗಾಗಿ 4 ಉತ್ತಮ ಬಗೆಯ ಫೆನ್ಸಿಂಗ್ – ಎಲ್ಲಿ ಬೇಕು? ಯಾಕೆ ಮುಖ್ಯ?

ಫೆನ್ಸಿಂಗ್ ಅಂದರೆನು? ಜಮೀನಿನ ಫೆನ್ಸಿಂಗ್ ವಿಧಾನಗಳು ಫಾರ್ಮ್ ಹೌಸ್ ಅಥವಾ ಕಟ್ಟಡದ ಸುತ್ತಲೂ ಗೇಟ್ ಅಥವಾ ಕಂಬಿಗಳನ್ನು ಹಾಕಿ ಭದ್ರತೆ ನೀಡುವ ಪ್ರಕ್ರಿಯೆ. ಇದು ಅನಧಿಕೃತ ಪ್ರವೇಶವನ್ನು ತಡೆಯಲು, ಸಾಕುಪ್ರಾಣಿಗಳನ್ನು ಒಳಗಿಡಲು, ಹಾಗೂ ಗೃಹ ಭದ್ರತೆಗಾಗಿ ಬಳಸಲಾಗುತ್ತದೆ. ಜಮೀನಿನ ಫೆನ್ಸಿಂಗ್ ವಿಧಾನಗಳು : 1.ಚೈನ್ ಲಿಂಕ್ ಫೆನ್ಸಿಂಗ್ (Chain Link Fencing) 2. ಕಂಪೌಂಡ್ ವಾಲ್ ಫೆನ್ಸಿಂಗ್ / ಪ್ರೀಕಾಸ್ಟ್ ಕಾಂಪೌಂಡ್ : 3.ಬಾರ್ಬ್ಡ್ ವೈರ್ ಫೆನ್ಸಿಂಗ್ (Barbed Wire) : 4.ಸೋಲಾರ್ ಫೆನ್ಸಿಂಗ್ / ಎಲೆಕ್ಟ್ರಿಕ್ ಫೆನ್ಸಿಂಗ್ : ಫೆನ್ಸಿಂಗ್ ಕೆಲಸದ ಪ್ರಯೋಜನಗಳು: ಫೆನ್ಸಿಂಗ್ ಕೆಲಸದ ದರಗಳು : ಸೂಚನೆ : ಜಾಗದ ಗಾತ್ರ, ಸ್ಥಳ ಮತ್ತು ವಸ್ತುಗಳ ಪ್ರಕಾರ ದರ ಬದಲಾಗಬಹುದು. 📍 ಎಲ್ಲಿ ಫೆನ್ಸಿಂಗ್ ಕೆಲಸ ಪಡೆಯಬಹುದು? ನಿಮ್ಮ ಜಿಲ್ಲೆಯಲ್ಲಿಯೇ ಹಲವಾರು ಫೆನ್ಸಿಂಗ್ ಕೆಲಸದ ಗುತ್ತಿಗೆದಾರರು ಮತ್ತು ಕೆಲಸಗಾರರು ಲಭ್ಯರಿದ್ದಾರೆ. ಅವರ ಫೋನ್ ನಂಬರು ಅಥವಾ ವಿಳಾಸಗಳನ್ನು ಜನಪ್ರಿಯ ಜಾಲತಾಣಗಳಲ್ಲಿ ಹುಡುಕಬಹುದು. ಸಂಪರ್ಕಕ್ಕಾಗಿ: ನೀವು ಫೆನ್ಸಿಂಗ್ ಕೆಲಸದ ಗುತ್ತಿಗೆದಾರರು ಅಥವಾ ಕೆಲಸಗಾರರಾಗಿದ್ದರೆ, ಈ ಪುಟದಲ್ಲಿ ನಿಮ್ಮ ವಿಜಿಟಿಂಗ್ ಕಾರ್ಡ್, ಫೋನ್ ನಂಬರ್ ಅಥವಾ ಸೇವೆಗಳ ವಿವರಗಳನ್ನು ಹಾಕಬಹುದು. https://youtube.com/shorts/3jyNwoUGHt0?si=Y_R-oSy4DmXl4QN-

ಜಮೀನಿನ ಸುತ್ತ, ಮನೆಯ ಸುತ್ತಲೂ ಭದ್ರತೆಗಾಗಿ 4 ಉತ್ತಮ ಬಗೆಯ ಫೆನ್ಸಿಂಗ್ – ಎಲ್ಲಿ ಬೇಕು? ಯಾಕೆ ಮುಖ್ಯ? Read Post »

Kitchen

ಕೊಬ್ಬರಿ ಬಿಸ್ಕೆಟ್ | ಕುಕ್ಕಿಸ್ ರೆಸಿಪಿ ಸುಲಭವಾಗಿ ತಯಾರಿಸುವುದು ಹೇಗೆ?

ಕೊಬ್ಬರಿ ಬಿಸ್ಕೆಟ್ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ, ರುಚಿಕರವಾದ ತಿನಿಸು. ಈ ಬಿಸ್ಕಟ್‌ಗಳಲ್ಲಿ ನುರಿದ ಕೊಬ್ಬರಿ, ತುಪ್ಪ ಅಥವಾ ಬೆಣ್ಣೆ ಮತ್ತು ಹಾಲಿನ ರುಚಿ ತುಂಬಿರುತ್ತದೆ. ಚಹಾ ಅಥವಾ ಕಾಫಿಯ ಜೊತೆಗೆ ತಿಂಡಿಯಾಗಿ ಇದು ಅತೀ ಉತ್ತಮ ಆಯ್ಕೆ. ಕೊಬ್ಬರಿ ಬಿಸ್ಕೆಟ್ ಮಾಡಲು ಬೇಕಾಗುವ ಪದಾರ್ಥಗಳು (Ingredients): • ಗೋಧಿಹಿಟ್ಟು – 1 ಕಪ್ • ಹುರಿದ ಕೊಬ್ಬರಿ – 1/2 ಕಪ್ • ಪುಡಿ ಸಕ್ಕರೆ – 1/2 ಕಪ್ • ಬೆಣ್ಣೆ ಅಥವಾ ತುಪ್ಪ – 1/4 ಕಪ್ • ಹಾಲು – 2 ಟೇಬಲ್ ಸ್ಪೂನ್ (ಅಥವಾ ಅಗತ್ಯಕ್ಕೆ ತಕ್ಕಷ್ಟು) • ಏಲಕ್ಕಿ ಪುಡಿ – 1 ಚಿಟಿಕೆ • ಬೇಕಿಂಗ್ ಪೌಡರ್ – 1/4 ಟೀ ಸ್ಪೂನ್ • ಉಪ್ಪು – 1 ಚಿಟಿಕೆ ತಯಾರಿಸುವ ವಿಧಾನ (Preparation Method): 1. ಒಂದು ದೊಡ್ಡ ಬಟ್ಟಲಿನಲ್ಲಿ ಗೋಧಿಹಿಟ್ಟು, ಬೇಕಿಂಗ್ ಪೌಡರ್, ಪುಡಿ ಸಕ್ಕರೆ, ಏಲಕ್ಕಿ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 2. ಹುರಿದ ಕೊಬ್ಬರಿ ಸೇರಿಸಿ ಮಿಕ್ಸ್ ಮಾಡಿ. 3. ಅದಕ್ಕೆ ಬೆಣ್ಣೆ ಹಾಕಿ ಕೈಯಿಂದ ಮಿಕ್ಸ್ ಮಾಡಿ. 4. ಹಾಲು ಹಾಕಿ ಜಾಸ್ತಿಯಾಗದಂತೆ ನಯವಾದ ಹಿಟ್ಟನ್ನು ತಯಾರಿಸಿ. 5. ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ, ಒತ್ತಿ ಬಿಸ್ಕಟ್ ಆಕಾರಕ್ಕೆ ತಯಾರಿಸಿ. 6. ಓವನ್ ಅಥವಾ ಗ್ಯಾಸ್ನಲ್ಲಿನ ಬೇಕಿಂಗ್ ಟಿನ್‌ನಲ್ಲಿ 180°C ಇಟ್ಟು 15-20 ನಿಮಿಷ ಬೇಯಿಸಿಕೊಳ್ಳಿ (ಗೋಲ್ಡನ್ ಬ್ರೌನ್ ಆಗುವವರೆಗೆ). 7. ತಣ್ಣಗಾದ ನಂತರ ಡಬ್ಬಿಯಲ್ಲಿ ಇಡಬಹುದು. ಸಲಹೆಗಳು (Tips): • ಹಾಲು ಜಾಸ್ತಿ ಹಾಕದಂತೆ ಗಮನಿಸಿ. • ನೀವು ಬಯಸಿದರೆ ತುಪ್ಪದ ಬದಲು ಬೆಣ್ಣೆ ಬಳಸಬಹುದು. • ಓವನ್ ಇಲ್ಲದಿದ್ದರೆ ಗ್ಯಾಸ್ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದಕ್ಕೆ ಉಪ್ಪನ್ನು ಹಾಕಿ ಒಂದು ಸ್ಟಾಂಡ್ ಇಡಬೇಕು ನಂತರ ಅದರ ಮೇಲೆ ಒಂದು ತಟ್ಟೆಯಲ್ಲಿ ಬಿಸ್ಕತ್ ಅನ್ನು ಇತ್ತು ಪಾತ್ರೆಯಲ್ಲಿ ಮುಚ್ಚಿ 30 ನಿಮಿಷ ಬೇಯಿಸಬೇಕು. ಸರ್ವಿಂಗ್ ಸಲಹೆ (Serving Suggestions) ಪೌಷ್ಟಿಕ ಮಾಹಿತಿ (Nutrition Info – Approx per biscuit) ಹೆಚ್ಚಿನ ಮಾಹಿತಿಗಾಗಿ https://youtu.be/EzGKtgcpcjo?si=9rLvj_D5vRioKC-a

ಕೊಬ್ಬರಿ ಬಿಸ್ಕೆಟ್ | ಕುಕ್ಕಿಸ್ ರೆಸಿಪಿ ಸುಲಭವಾಗಿ ತಯಾರಿಸುವುದು ಹೇಗೆ? Read Post »

Kitchen

ಬೇಳೆ ಒಬ್ಬಟ್ಟು ರೆಸಿಪಿ | ಯುಗಾದಿ ಹಬ್ಬದ ಕರ್ನಾಟಕ ಸ್ಟೈಲ್ ಒಬ್ಬಟ್ಟು ಮಾಡುವ ವಿಧಾನ

ಬೇಳೆ ಒಬ್ಬಟ್ಟು ಯುಗಾದಿ ವಿಶೇಷ ಕರ್ನಾಟಕದ ಪ್ರಸಿದ್ದ ಸಿಹಿ ತಿನಿಸು (Bele obbattu) ಹಬ್ಬಕ್ಕೆ ತಯಾರಿಸಬಹುದಾದ ಬೆಲ್ಲ – ಬೇಳೆಯ ಸಿಹಿಯಾದ ತಿನಿಸು.ಯುಗಾದಿ ಹಬ್ಬದ ಜೊತೆಗೆ ನವರಾತ್ರಿ, ಮದುವೆ ಮೊದಲಾದ ಶುಭ ಕಾರ್ಯಗಳಿಗೆ ತಯಾರಿಸಲಾಗುತ್ತದೆ. ತಯಾರಿಸುವ ವಿಧಾನ, ಸಲಹೆಗಳು ಸೇವನೆಯ ವಿವರಗಳು ಇಲ್ಲಿವೆ. ಯುಗಾದಿ ಹಬ್ಬ ವರ್ಷದ ಮೊದಲ ದಿನ. ಹೊಸ ಆರಂಭವನ್ನು ಸಿಹಿಯೊಂದಿಗೆ ಮಾಡುವುದು ಹಳೆ ಪದ್ದತಿ. ಹಾಗಾಗಿ ಸಿಹಿ ತಿನಿಸುಗಳಲ್ಲಿ ಒಬ್ಬಟ್ಟು ಪ್ರಮುಖವಾದದು. ಬೆಲ್ಲವು ಸಿಹಿಯನ್ನು ಸೂಚಿಸುತ್ತದೆ. ಕಡಲೆಬೇಳೆ ಪ್ರೊಟೀನ್ ನಿಂದ ಕೂಡಿದೆ. ಬೇಳೆ ಒಬ್ಬಟ್ಟು ಮಾಡಲು ಬೇಕಾಗುವ ಸಾಮಾಗ್ರಿಗಳು : ಮೈದಾ – 1 ಕಪ್ (Maida) ಉಪ್ಪು – ಚಿಟಿಕೆ (Salt) ಹಾಲು ಅಥವಾ ನೀರು – ಅಗತ್ಯವಿದ್ದಷ್ಟು (Milk or Water) ಎಣ್ಣೆ ಅಥವಾ ತುಪ್ಪ – 2 ಟೇಬಲ್ ಸ್ಪೂನ್ (ಮೃದುವಾಗಿಸಲು) (Oil or Ghee) ಬೇಳೆ ಒಬ್ಬಟ್ಟು ಹೂರಣಕ್ಕೆ ಬೇಕಾಗುವ ಸಾಮಗ್ರಿಗಳು : ಕಡಲೆ ಬೇಳೆ (chana dal) – 1 ಕಪ್ ಬೆಲ್ಲ – ¾ ರಿಂದ 1 ಕಪ್ ( Jaggery) ಏಲಕ್ಕಿ ಪುಡಿ – ½ ಟೀ ಸ್ಪೂನ್( Cardamom powder)/ಕೇಸರಿ – (ಬೇಕಿದ್ದರೆ ಉಪಯೋಗಿಸಬಹುದು ) (Saffron) ತಯಾರಿಸುವ ವಿಧಾನ: 1. ಮೈದಾ, ಉಪ್ಪು, ಹಾಲು/ನೀರು ಹಾಕಿ ನಯವಾದ ಹಿಟ್ಟಾಗಿ ಕಲಸಿ ನಂತರ 2. ಮೃದುವಾಗಿಸಲು ತುಪ್ಪ ಅಥವಾ ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿ . 3. ಈ ಹಿಟ್ಟನ್ನು 2 ಗಂಟೆ ಪಾತ್ರೆಯ ಒಳಗೆ ಬಿಡಿ. ಹೂರಣ ತಯಾರಿಸುವ ವಿಧಾನ : 1. ಕಡಲೆಬೇಳೆಯನ್ನು 3–4 ನಿಮಿಷ ಹುರಿಯಿರಿ, ನಂತರ ತಣ್ಣಗಾದ ಮೇಲೆ 20 ನಿಮಿಷ ನೆನೆಸಿ 2. ನಂತರ ಬಾಣಲಿಯಲ್ಲಿ ಬಿಸಿ ಮಾಡಿ, ಬೇಳೆಯನ್ನು ಚೆನ್ನಾಗಿ ಬೇಯಿಸಿ (100% ಸಾಫ್ಟ್ ಆಗಬೇಕು). 3. ಬೆಲ್ಲ ಹಾಕಿ ಕರಗಿಸಿ, ಒಣಗಿದಂತೆ ಆಗುವವರೆಗೆ ಕುದಿಸಿ. 4. ನಂತರ ಏಲಕ್ಕಿ ಪುಡಿ, ಕೇಸರಿ ಹಾಕಿ, ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ರುಬ್ಬಿ ಉಂಡೆ ಮಾಡಿಕೊಳ್ಳಬೇಕು. (smooth filling). ಒಬ್ಬಟ್ಟು ತಯಾರಿ: 1. ಹಿಟ್ಟಿನಿಂದ ಚಿಕ್ಕ ಉಂಡೆ ಮಾಡಿ , ಅದರೊಳಗೆ ಹೂರಣ ಹಾಕಿ ಮುಚ್ಚಿ. 2. ತುಪ್ಪ ಹಚ್ಚಿ ರೊಟ್ಟಿಯ ಆಕಾರಕ್ಕೆ ತಟ್ಟಿ. 3. ತವದಲ್ಲಿ golden brown ಆಗುವವರೆಗೆ ಎರಡು ಕಡೆ ಸಹಾ ಬೇಯಿಸಿ. 4. ಇದಾದ ನಂತರ ತುಪ್ಪ ಒಬ್ಬಟ್ಟು serve ಮಾಡಿ! 😋ಸೇವಿಸುವ ಸಲಹೆಗಳು : 1. ಒಬ್ಬಟ್ಟನ್ನು ಪಾಯದೊಂದಿಗೆ ಸವಿಯಬಹುದು. 2. ಒಬ್ಬಟ್ಟನು ತುಪ್ಪದೊಂದಿಗೆ ಸವಿಯುತ್ತಾರೆ. 3. ಹೂರಣವನ್ನು 2 ರಿಂದ 3 ದಿನ ಫ್ರಿಡ್ಜ್ ನಲ್ಲಿ ಇಟ್ಟು ಬಳಸಬಹುದು. ಒಬ್ಬಟ್ಟನು ಮಾಡುವಾಗ ಕೆಲವು ಸಲಹೆಗಳು : 1. ಒಬ್ಬಟ್ಟನ್ನು ಒತ್ತುವಾಗ ಬಾಳೆ ಎಲೆಯಲ್ಲಿ ಒತ್ತಿದರೆ ಹಿಟ್ಟು ಅಂಟುವುದಿಲ್ಲ. 2. ಮೈದಾ ಹಿಟ್ಟು ಬದಲು ಗೋಧಿ ಹಿಟ್ಟು ಬಳಸಬಹುದು ಇದು ಆರೋಗ್ಯಕ್ಕೆ ಒಳ್ಳೆಯದಿರುತ್ತದೆ. 3. ತುಪ್ಪದಿಂದ ಬೇಯಿಸಿದರೆ ರುಚಿ ಹೆಚ್ಚಿರುತ್ತದೆ. 4. ಹೂರಣದ ಹದ ಸರಿಯಾಗಿದ್ದಾರೆ. ಒತ್ತುವಾಗ ಹರಿದು ಹೋಗುವುದಿಲ್ಲ. ಬೇಳೆ ಒಬ್ಬಟ್ಟು ನಮ್ಮ ಸಂಸ್ಕೃತಿ, ನೆನಪುಗಳು ಮತ್ತು ಹಬ್ಬಗಳ ಭಾಗವಾಗಿದೆ. ಯುಗಾದಿಯಂತಹ ಶುಭದಿನಗಳಲ್ಲಿ ಸಿಹಿಯಾಗಿ ಈ ತಿನಿಸು ಮನೆಯನ್ನು ಮುಟ್ಟಿಸುವ ಸಂತೋಷವನ್ನು ನೀಡುತ್ತದೆ. ಮನೆಮನೆಗೆ ಒಬ್ಬಟ್ಟಿಗೆ ಬೇರೆಯಾದ ರುಚಿಯ ನೆನಪು ಇರುತ್ತದೆ. ಈ ಸರಳ ಮತ್ತು ಸವಿಯಾದ ರೆಸಿಪಿ ಬಳಸಿ ನೀವು ಕೂಡ ಒಮ್ಮೆ ಪ್ರಯತ್ನಿಸಿ. ಪಾರಂಪರಿಕ ರುಚಿಯನ್ನು ಮರೆಮಾಡದಂತೆ ಮುಂದಿನ ಪೀಳಿಗೆಗೂ ಈ ರುಚಿಯನ್ನು ಹಂಚಿ. ಹೆಚ್ಚಿನ ಮಾಹಿತಿಗಾಗಿ https://en.wikipedia.org/wiki/Puran_poli

ಬೇಳೆ ಒಬ್ಬಟ್ಟು ರೆಸಿಪಿ | ಯುಗಾದಿ ಹಬ್ಬದ ಕರ್ನಾಟಕ ಸ್ಟೈಲ್ ಒಬ್ಬಟ್ಟು ಮಾಡುವ ವಿಧಾನ Read Post »

Kitchen

ಕಾಯಿ ಹಿಟ್ಟು | ಅಕ್ಕಿ ಸಿಹಿ ಕಡುಬು | ಮಲೆನಾಡು / ಕೊಡಗು ಶೈಲಿಯಲ್ಲಿ ಮಾಡುವ ವಿಧಾನ

ಕಾಯಿ ಹಿಟ್ಟು ಮತ್ತು ಅಕ್ಕಿ ಸಿಹಿ ಕಡುಬು ಕೊಡಗಿನಲ್ಲಿ ಗೌರಿ ಗಣೇಶ ಹಬ್ಬಕ್ಕೆ ಮಾಡುವುದು ವಿಶೇಷ ಅಡುಗೆಯಾಗಿದೆ. ಇದನ್ನು ಹಬ್ಬದಲ್ಲಿ ದೇವರ ನೈವಿದ್ಯಕ್ಕೆ ಇಡುತ್ತಾರೆ. ಗೌರಿ ಗಣೇಶ ಹಬ್ಬ ಬಂತೇದರೆ ಹಬ್ಬದ ತಯಾರಿಯೊಂದಿಗೆ ವಿಶೇಷ ಅಡುಗೆ ಮಾಡುವುದು ಮನಸ್ಸಿಗೆ ಮುದ ನೀಡುತ್ತದೆ. ಬೇಕಾಗುವ ಸಾಮಗ್ರಿಗಳು : • ಅಕ್ಕಿ ಹಿಟ್ಟು 2 cup (ಅಕ್ಕಿಯನ್ನು ಚೆನ್ನಾಗಿ ತೊಳೆದು ಪುಡಿ ಮಾಡಿಸಬೇಕು) • ಕಾಯಿ ತುರಿದದ್ದು – 1 ಕಪ್ • ಬೆಲ್ಲ ಅಥವಾ ಸಕ್ಕರೆ – 1 ಕಪ್ • ಬಿಳಿ ಅಥವಾ ಕಪ್ಪು ಎಳ್ಳು – 1 ಕಪ್ • ಒಂದು ಚಿಟಿಕೆ ಉಪ್ಪು • ಬಿಸಿ ನೀರು ಹಿಟ್ಟನ್ನು ತಯಾರಿಸುವ ವಿಧಾನ : ಅಕ್ಕಿಯನ್ನು ಪುಡಿ ಮಾಡಿದ ಹಿಟ್ಟುನ್ನು ಚೆನ್ನಾಗಿ ಬಿಸಿ ನೀರಿನೊಂದಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಹದವಾಗಿ ಕಲಸಬೇಕು ಅದನ್ನು ಒಂದು ಪಾತ್ರೆಯಲ್ಲಿ ಇಡಿ ಹೂರಣ ತಯಾರಿಸುವ ವಿಧಾನ : ಎಳ್ಳನ್ನು ಹುರಿದುಕೊಂಡು ಅದಕ್ಕೆ ತೆಂಗಿನ ಕಾಯಿ ತುರಿದದ್ದು, ಸಕ್ಕರೆ ಅಥವಾ ಬೆಲ್ಲ ಹಾಕಿ ಮಿಶ್ರಣ ಮಾಡಿಕೊಳ್ಳಿ ಕಾಯಿ ಹಿಟ್ಟು ಮಾಡುವ ವಿಧಾನ : ಹಿಟ್ಟನ್ನು ಚಿಕ್ಕದಾಗಿ ತಟ್ಟಿ ಅದರ ಒಳಗೆ ಹೂರಣವನ್ನು ಹಾಕಿ ಚನ್ನಾಗಿ ಮುಚ್ಚಬೇಕು, ನಂತರ ತಯಾರಿಸಿಟ್ಟ ಕಾಯಿ ಹಿಟ್ಟನ್ನು ಕಡುಬಿನ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ, ಮೇಲೆ ಇಡ್ಲಿ ಸ್ಟಾಂಡ್ ಅನ್ನು ಇಟ್ಟು ಅದರ ಮೇಲೆ ಅರಿಶಿನ ಎಲೆ ಅಥವಾ ಬಾಳೆ ಎಲೆ ಹಾಕಿ 20 ನಿಮಿಷ ಸ್ಟೀಮ್ ನಲ್ಲಿ ಬೇಯಿಸಬೇಕು. ನಂತರ ಸವಿಯಲು ಸಿದ್ದ. ತಿನ್ನುವ ವಿಧಾನ : • ಕಾಯಿ ಹಿಟ್ಟನ್ನು ತುಪ್ಪದೊಂದಿಗೆ ಬಿಸಿ ಬಿಸಿಯಾಗಿ ತಿನ್ನಬೇಕು • ತುಪ್ಪ ಇಲ್ಲದಿದ್ದರೆ ಹಾಗೇಯೂ ತಿನ್ನಬಹುದು ಬೇಯಿಸುವಾಗ ಕೆಲವು ಸೂಚನೆಗಳು : • ಅರಿಶಿನ ಎಲೆಯಲ್ಲಿ ಬೇಯಿಸಿದರೆ ತುಂಬಾ ಚನ್ನಾಗಿ ಪರಿಮಳ ಬರುತ್ತದೆ. • ಅರಿಶಿನ ಎಲೆ ಇಲ್ಲ ಅಂದರೆ ಬಾಲೆ ಎಲೆ ಬಳಸಿ •ನೀರನ್ನು ಜಾಸ್ತಿ ಹಾಕಿ ಬೇಯಿಸಬಾರದು ಹೆಚ್ಚಿನ ಮಾಹಿತಿಗಾಗಿ https://swayampaaka.com/recipes/desserts/kayi-hurittu/

ಕಾಯಿ ಹಿಟ್ಟು | ಅಕ್ಕಿ ಸಿಹಿ ಕಡುಬು | ಮಲೆನಾಡು / ಕೊಡಗು ಶೈಲಿಯಲ್ಲಿ ಮಾಡುವ ವಿಧಾನ Read Post »

Scroll to Top