ಕೂದಲು ಉದುರುವುದನ್ನು ಕಡಿಮೆ ಮಾಡುವ ಮನೆಮದ್ದುಗಳು ಮೂಲಕ ಇಂದಿನ ಜೀವನಶೈಲಿ, ಒತ್ತಡ, ಪೌಷ್ಟಿಕಾಂಶಗಳ ಕೊರತೆ, ಹಾರ್ಮೋನ್ ಸಮಸ್ಯೆಗಳನ್ನು ನಿಯಂತ್ರಿಸಬಹುದು ಹಾಗೂ ರಾಸಾಯನಿಕ ಉತ್ಪನ್ನಗಳ ಬಳಕೆಯಿಂದ ಕೂದಲು ಉದುರುವುದು ಸಾಮಾನ್ಯ ಸಮಸ್ಯೆಯಾಗಿದೆ. ಕೆಲವರಿಗೆ ದಿನಕ್ಕೆ 20–30 ಕೂದಲು ಉದುರಿದರೆ, ಕೆಲವರಿಗೆ ಮುಟ್ಟಲು ಕೂಡ ಭಯವಾಗುವಷ್ಟು ಕೂದಲು ಬೀಳುತ್ತದೆ. ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಕೂದಲು ತೆಳುವಾಗುವುದು, ಬೋಳ ಕಾಣಿಸಿಕೊಳ್ಳುವುದು ಕೂಡ ಸಾಧ್ಯ.
ಆದರೆ ಒಳ್ಳೆಯ ಸುದ್ದಿ ಎಂದರೆ – ಕೂದಲು ಉದುರುವುದನ್ನು ಶಾಶ್ವತವಾಗಿ ಕಡಿಮೆ ಮಾಡಲು ಮನೆಯಲ್ಲೇ ಇರುವ ನೈಸರ್ಗಿಕ ಮನೆಮದ್ದುಗಳು ಸಾಕು. ಈ ಲೇಖನದಲ್ಲಿ ನಾವು ಅಂತಹ 7 ಪರಿಣಾಮಕಾರಿ ಮನೆಮದ್ದುಗಳನ್ನು ತಿಳಿದುಕೊಳ್ಳೋಣ.
ಕೂದಲು ಉದುರುವುದನ್ನು ಕಡಿಮೆ ಮಾಡುವ ಮನೆಮದ್ದುಗಳು ಕೆಳಗಿನಂತಿವೆ :
1.ತಲೆ ತ್ವಚೆಗೆ ನಿಯಮಿತ ಎಣ್ಣೆ ಮಸಾಜ್ :
ಕೂದಲು ಉದುರುವುದನ್ನು ಕಡಿಮೆ ಮಾಡುವ ಮನೆಮದ್ದುಗಳು ಮುಖ್ಯವಾಗಿ ಕೂದಲು ಆರೋಗ್ಯಕ್ಕೆ ತಲೆ ತ್ವಚೆ (scalp) ಮುಖ್ಯ ಪಾತ್ರ ವಹಿಸುತ್ತದೆ. ವಾರಕ್ಕೆ ಕನಿಷ್ಠ 2–3 ಬಾರಿ ತಲೆಗೆ ಎಣ್ಣೆ ಮಸಾಜ್ ಮಾಡುವುದು ಬಹಳ ಉಪಯುಕ್ತ.
- ತೆಂಗಿನ ಎಣ್ಣೆ, ಕ್ಯಾಸ್ಟರ್ ಎಣ್ಣೆ, ಬಾದಾಮಿ ಎಣ್ಣೆ ಮಿಶ್ರಣ ಮಾಡಿ ಬಳಸಿ
- ಎಣ್ಣೆ ಮಸಾಜ್ ರಕ್ತಸಂಚಾರ ಹೆಚ್ಚಿಸುತ್ತದೆ
- ಕೂದಲು ಬೇರುಗಳು ಬಲವಾಗುತ್ತವೆ
- ನಿಯಮಿತ ಎಣ್ಣೆ ಮಸಾಜ್ ಕೂದಲು ಉದುರುವಿಕೆಯನ್ನು ನಿಧಾನವಾಗಿ ಕಡಿಮೆ ಮಾಡುತ್ತದೆ.
ಲಾಭಗಳು:
- ರಕ್ತ ಸಂಚಲನ (blood circulation) ಹೆಚ್ಚುತ್ತದೆ
- ಕೂದಲು ಬೇರುಗಳು ಬಲವಾಗುತ್ತವೆ
- ಕೂದಲು ಉದುರುವುದು ಕಡಿಮೆ ಆಗುತ್ತದೆ

2.ಕರಿಬೇವು ಸೊಪ್ಪು (curry leaves) ಎಣ್ಣೆ :
ಕೂದಲು ಉದುರುವುದನ್ನು ಕಡಿಮೆ ಮಾಡುವ ಮನೆಮದ್ದುಗಳು ಇದರಲ್ಲಿ ಮುಖ್ಯವಾಗಿ ಕರಿಬೇವು ಸೊಪ್ಪು ಕೂದಲು ಆರೋಗ್ಯಕ್ಕೆ ಅತ್ಯಂತ ಶಕ್ತಿಶಾಲಿ ಮನೆಮದ್ದು.
- ಕರಿಬೇವು ಸೊಪ್ಪನ್ನು ತೆಂಗಿನ ಎಣ್ಣೆಯಲ್ಲಿ ಕುದಿಸಿ
- ತಣ್ಣಗಾದ ನಂತರ ಎಣ್ಣೆಯನ್ನು ತಲೆಗೆ ಹಚ್ಚಿ
- ವಾರಕ್ಕೆ 2 ಬಾರಿ ಬಳಸಿ ಇದು ಕೂದಲು ಬೇರುಗಳನ್ನು ಬಲಪಡಿಸಿ, ಹೊಸ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ.

3.ಆಮ್ಲ (ನೆಲ್ಲಿಕಾಯಿ) ಬಳಕೆ :
ಆಮ್ಲದಲ್ಲಿ ವಿಟಮಿನ್ C, ಐರನ್ ಮತ್ತು ಆಂಟಿ ಆಕ್ಸಿಡೆಂಟ್‌ಗಳು ತುಂಬಿರುತ್ತವೆ.
- ಆಮ್ಲವನ್ನು ಆಹಾರದಲ್ಲಿ ಸೇರಿಸಿ ತಿನ್ನಬಹುದು (ಆಮ್ಲ ಕ್ಯಾಂಡಿ, ಆಮ್ಲ ಜ್ಯೂಸ್ )
- ಅಥವಾ ಆಮ್ಲ ಪುಡಿ + ನೀರು ಮಿಶ್ರಣ ಮಾಡಿ ತಲೆಗೆ ಹಚ್ಚಿ
- ಇದು ಕೂದಲು ಉದುರುವುದನ್ನು ಕಡಿಮೆ ಮಾಡಿ, ಕೂದಲಿಗೆ ಹೊಳಪು ನೀಡುತ್ತದೆ.
ಲಾಭಗಳು:
- ಕೂದಲು ಬೇರುಗಳು ಬಲವಾಗುತ್ತವೆ
- ಕೂದಲು ಬೆಳೆಯಲು ಸಹಾಯಕಾರಿ
- ಬಿಳಿಕೂದಲು ಆಗುವುದನ್ನು ತಡೆಯುತ್ತದೆ.

4.ಈರುಳ್ಳಿ ರಸ (Onion Juice) :
ಕೂದಲು ಉದುರುವುದನ್ನು ಕಡಿಮೆ ಮಾಡುವ ಮನೆಮದ್ದುಗಳು ಪ್ರಮುಖವಾಗಿ ಈರುಳ್ಳಿ ರಸದಲ್ಲಿ sulfur ಹೆಚ್ಚಾಗಿ ಇರುತ್ತದೆ. ಇದು collagen production ಹೆಚ್ಚಿಸಿ ಹೊಸ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.
- ಈರುಳ್ಳಿಯನ್ನು ಮಿಕ್ಸಿಯಲ್ಲಿ ರುಬ್ಬಿ ರಸ ತೆಗೆದುಕೊಳ್ಳಿ
- ತಲೆಗೆ ಹಚ್ಚಿ 20–30 ನಿಮಿಷ ಕಾಯಿರಿ
- ನಂತರ ಸೌಮ್ಯ ಶಾಂಪೂ ಬಳಸಿ ತೊಳೆಯಿರಿ
- ಈರುಳ್ಳಿ ರಸದಲ್ಲಿ ಇರುವ ಸಲ್ಫರ್ ಕೂದಲು ಬೇರುಗಳನ್ನು ಬಲಪಡಿಸುತ್ತದೆ.
ಲಾಭಗಳು:
- ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.
- ಕೂದಲು ಹೊಸದಾಗಿ ಬೆಳೆಯಲು ಸಹಾಯಕಾರಿ.
- ಕೂದಲು ದಪ್ಪ ಆಗುತ್ತದೆ.

5.ಸರಿಯಾದ ಆಹಾರ ಪದ್ಧತಿ :
ಕೂದಲು ಆರೋಗ್ಯವು ಒಳಗಿನಿಂದ ಆರಂಭವಾಗುತ್ತದೆ.
- ಪ್ರೋಟೀನ್ ಸಮೃದ್ಧ ಆಹಾರ (ಬೇಳೆ, ಮೊಟ್ಟೆ, ಹಾಲು) ಹಸಿರು ತರಕಾರಿಗಳನ್ನು ತಿನ್ನಬೇಕು
- ಒಣಹಣ್ಣುಗಳು ಮತ್ತು ಬೀಜಗಳು ಇವುಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು
- ಈ ಆಹಾರಗಳು ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತವೆ.

6.ಒತ್ತಡ ನಿಯಂತ್ರಣ ಮತ್ತು ಉತ್ತಮ ನಿದ್ರೆ :
ಒತ್ತಡ (Stress) ಕೂದಲು ಉದುರುವಿಕೆಯ ಪ್ರಮುಖ ಕಾರಣ.
- ದಿನಕ್ಕೆ ಕನಿಷ್ಠ 7–8 ಗಂಟೆ ನಿದ್ರೆ
- ಯೋಗ, ಧ್ಯಾನ ಅಥವಾ ವಾಕಿಂಗ್
- ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವುದು
ಒತ್ತಡ ಕಡಿಮೆಯಾದಂತೆ ಕೂದಲು ಉದುರುವಿಕೆಯೂ ಕಡಿಮೆಯಾಗುತ್ತದೆ.

7.ಮೃದುವಾದ ಶಾಂಪೂ ಮತ್ತು ರಾಸಾಯನಿಕ ತಪ್ಪಿಸುವುದು:
- ಹೆಚ್ಚು ರಾಸಾಯನಿಕ ಇರುವ ಶಾಂಪೂ ಬಳಸಬೇಡಿ
- ವಾರಕ್ಕೆ 2–3 ಬಾರಿ ಮಾತ್ರ ಕೂದಲು ತೊಳೆಯಿರಿ
- ಕೂದಲನ್ನು ಬಿಗಿಯಾಗಿ ಕಟ್ಟಿಕೊಳ್ಳಬೇಡಿ
- ಒದ್ದೆ ಕೂದಲನ್ನು ಬಾಚಬೇಡಿ.
ಇವು ಸಣ್ಣ ವಿಷಯಗಳಾದರೂ ಕೂದಲು ಉದುರುವಿಕೆಯಲ್ಲಿ ದೊಡ್ಡ ಬದಲಾವಣೆ ತರುತ್ತವೆ.

ಕೂದಲು ಉದುರುವಿಕೆ ಒಂದು ದಿನದಲ್ಲಿ ಬಂದ ಸಮಸ್ಯೆಯಲ್ಲ, ಅದೇ ರೀತಿ ಒಂದು ದಿನದಲ್ಲಿ ಹೋಗುವುದೂ ಇಲ್ಲ. ಆದರೆ ನಿಯಮಿತವಾಗಿ ಈ 7 ಮನೆಮದ್ದುಗಳನ್ನು ಪಾಲಿಸಿದರೆ ಕೂದಲು ಉದುರುವಿಕೆ ಶಾಶ್ವತವಾಗಿ ಕಡಿಮೆಯಾಗುತ್ತದೆ. ಸರಿಯಾದ ಆಹಾರ ಮತ್ತು ನಿದ್ರೆ ಇವೆಲ್ಲವನ್ನು ಅನುಸರಿಸಿದರೆ, ನಿಮ್ಮ ಕೂದಲು ಮತ್ತೆ ದಪ್ಪವಾಗುತ್ತದೆ, ಬಲವಾಗುತ್ತದೆ ಮತ್ತು ಆರೋಗ್ಯಕರವಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ : https://pubmed.ncbi.nlm.nih.gov/37151166/
Pingback: ಡ್ಯಾಂಡ್ರಫ್ ಹೋಗಲು 7 ಸುಲಭ ನೈಸರ್ಗಿಕ ವಿಧಾನಗಳು ಯಾವುವು?