ವೆನಿಲ್ಲಾ ಬೆಳೆ : ಸುಲಭ ಬೆಳೆಯುವ ವಿಧಾನ ಮತ್ತು 5 ಅದ್ಭುತ ಆರೋಗ್ಯ ಲಾಭಗಳು

ಪರಿಚಯ :

ವೆನಿಲ್ಲಾ (Vanilla) ವಿಶ್ವದ ಅತ್ಯಂತ ಮೌಲ್ಯಯುತ ಮತ್ತು ದುಬಾರಿ ಮಸಾಲೆಗಳಲ್ಲಿ ಒಂದಾಗಿದೆ. ಇದರ ಸುವಾಸನೆ, ರುಚಿ ಮತ್ತು ವ್ಯಾಪಕ ಬಳಕೆ ಇದನ್ನು ವಿಶೇಷವಾಗಿಸುತ್ತದೆ. ಐಸ್ ಕ್ರೀಮ್, ಕೇಕ್, ಚಾಕಲೇಟ್, ಪಾನೀಯಗಳು ಹಾಗೂ ಸುಗಂಧ ದ್ರವ್ಯಗಳಲ್ಲಿ ವೆನಿಲ್ಲಾ ಪ್ರಮುಖವಾಗಿ ಬಳಸಲಾಗುತ್ತದೆ. ವಿಶ್ವದ ಅನೇಕ ದೇಶಗಳಲ್ಲಿ ಇದು ಬೆಳೆದರೂ, ಭಾರತದಲ್ಲಿ ವಿಶೇಷವಾಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ವೆನಿಲ್ಲಾ ಕೃಷಿ ನಿಧಾನವಾಗಿ ಹೆಚ್ಚುತ್ತಿದೆ.

ವೆನಿಲ್ಲಾ ಬೆಳೆ ಒಂದು ಲಾಭದಾಯಕ ಕೃಷಿ ಪದ್ಧತಿ. ಆದರೆ ಇದು ಸ್ವಲ್ಪ ಜಾಗ್ರತೆಯಿಂದ ಮತ್ತು ಕಾಳಜಿಯಿಂದ ಬೆಳೆಸಬೇಕಾಗುತ್ತದೆ. ಸರಿಯಾದ ವಿಧಾನಗಳನ್ನು ಅನುಸರಿಸಿದರೆ ರೈತರು ಉತ್ತಮ ಆದಾಯ ಪಡೆಯಬಹುದು. ಈ ಲೇಖನದಲ್ಲಿ ವೆನಿಲ್ಲಾ ಬೆಳೆ ಬಗ್ಗೆ ಸಂಪೂರ್ಣ ಮಾಹಿತಿ — ಅದರ ಬೆಳೆಯುವ ವಿಧಾನ, ನಿರ್ವಹಣೆ, ಕಟಾವು, ಉಪಯೋಗಗಳು ಮತ್ತು ಆರೋಗ್ಯ ಲಾಭಗಳನ್ನು ವಿವರವಾಗಿ ತಿಳಿದುಕೊಳ್ಳೋಣ.

ವೆನಿಲ್ಲಾ ಎಂದರೆ ಏನು?

ವೆನಿಲ್ಲಾ ಒಂದು ಹಬ್ಬುವ ಸಸ್ಯವಾಗಿದ್ದು, ಇದು ಆರ್ಕಿಡ್ ಕುಟುಂಬಕ್ಕೆ ಸೇರಿದೆ. ಇದರ ವೈಜ್ಞಾನಿಕ ಹೆಸರು Vanilla planifolia. ಇದು ಉಷ್ಣವಲಯ ಪ್ರದೇಶಗಳಲ್ಲಿ ಬೆಳೆಯುವ ಸಸ್ಯವಾಗಿದೆ. ವೆನಿಲ್ಲಾ ಹೂವುಗಳು ಬಹಳ ಸುಂದರವಾಗಿದ್ದು, ಅವುಗಳಿಂದ ಬರುವ ಕಾಯಿ (pods)ಗಳಲ್ಲಿ ಇರುವ ಬೀಜಗಳನ್ನು ವಿವಿಧ ಆಹಾರಗಳಲ್ಲಿ ಬಳಸಲಾಗುತ್ತದೆ.

ವೆನಿಲ್ಲಾ ಕಾಯಿ ಹಸಿರು ಬಣ್ಣದಲ್ಲಿರುತ್ತದೆ. ಕಟಾವಿನ ನಂತರ ಅದನ್ನು ವಿಶೇಷವಾಗಿ ಒಣಗಿಸುವ (curing) ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಇದರಿಂದ ಅದರ ವಿಶಿಷ್ಟ ಸುವಾಸನೆ ಬರುತ್ತದೆ.

ವೆನಿಲ್ಲಾ ಬೆಲೆ ಬೆಳೆಸಲು ಸೂಕ್ತ ಹವಾಮಾನ :

ವೆನಿಲ್ಲಾ ಬೆಳೆ ಉತ್ತಮವಾಗಿ ಬೆಳೆಯಲು ಕೆಳಗಿನ ಹವಾಮಾನ ಅಗತ್ಯ:

1.ಹವಾಮಾನ

ವೆನಿಲ್ಲಾ ತೇವಾಂಶಯುಕ್ತ ಮತ್ತು ಮಿತವಾದ ತಾಪಮಾನ ಹೊಂದಿರುವ ಪ್ರದೇಶಗಳಲ್ಲಿ ಉತ್ತಮವಾಗಿ ಬೆಳೆಯುತ್ತದೆ. 20°C ರಿಂದ 30°C ತಾಪಮಾನ ಸೂಕ್ತವಾಗಿದೆ. ತುಂಬಾ ಬಿಸಿ ಅಥವಾ ತುಂಬಾ ಚಳಿ ಹವಾಮಾನ ಸಸಿಗಳಿಗೆ ಹಾನಿ ಮಾಡಬಹುದು.

2.ಮಳೆ

ವೆನಿಲ್ಲಾ ಬೆಳೆಗಾಗಿ ವರ್ಷಕ್ಕೆ 1500 ರಿಂದ 3000 ಮಿಮೀ ಮಳೆ ಅಗತ್ಯ. ಮಳೆ ಸರಿಯಾಗಿ ಬಿದ್ದರೆ ಬೆಳೆಯ ಉತ್ತಮ ಬೆಳವಣಿಗೆ ಕಾಣಬಹುದು.

3.ಮಣ್ಣು

  • ನೀರು ಹರಿಯುವ ಮಣ್ಣು ಅಗತ್ಯ
  • ಜೈವಿಕ ಪದಾರ್ಥಗಳಿಂದ ಸಮೃದ್ಧ ಮಣ್ಣು ಉತ್ತಮ
  • ಕೆಂಪು ಮಣ್ಣು ಅಥವಾ ಲೋಮಿ ಮಣ್ಣು ಉತ್ತಮ
  • ವೆನಿಲ್ಲಾ ಬಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ನೆಡಬೇಕು.
  • ಬಳ್ಳಿಗಳನ್ನು ಮರಗಳಿಗೆ ಹಬ್ಬಿಸಬೇಕು.

ವೆನಿಲ್ಲಾ ಬೆಳೆಸುವ ವಿಧಾನ :

ವೆನಿಲ್ಲಾ ಬೆಳೆಸುವುದು ಗಮನ ಮತ್ತು ಸಹನೆ ಅಗತ್ಯವಿರುವ ಕೃಷಿ ವಿಧಾನವಾಗಿದೆ.

1. ಭೂಮಿ ಸಿದ್ಧತೆ

ಭೂಮಿಯನ್ನು ಚೆನ್ನಾಗಿ ಅಗೆದು, ಕಳೆಗಳನ್ನು ತೆಗೆದುಹಾಕಬೇಕು. ಜೈವಿಕ ಗೊಬ್ಬರ ಸೇರಿಸುವುದು ಬಹಳ ಮುಖ್ಯ.

2.ಕಟಿಂಗ್ ಮೂಲಕ ನೆಡುವುದು

ವೆನಿಲ್ಲಾ ಸಾಮಾನ್ಯವಾಗಿ ಕಟಿಂಗ್ ಮೂಲಕ ಬೆಳೆಸಲಾಗುತ್ತದೆ. 1 ರಿಂದ 1.5 ಮೀ ಉದ್ದದ ಬೆಳ್ಳಿಯನ್ನು ಬಳಸಬೇಕು.

3.ಬೆಂಬಲ ವ್ಯವಸ್ಥೆ

ವೆನಿಲ್ಲಾ ಹತ್ತುವ ಸಸ್ಯವಾಗಿರುವುದರಿಂದ ಬೆಂಬಲ ಅಗತ್ಯ. ಮರಗಳು ಅಥವಾ ಕಂಬಗಳನ್ನು ಬಳಸಬಹುದು.

4.ನೆರಳು ವ್ಯವಸ್ಥೆ

ವೆನಿಲ್ಲಾ ಸಸಿಗಳಿಗೆ ನೇರ ಸೂರ್ಯಕಿರಣ ಬೇಡ. ಆದ್ದರಿಂದ ನೆರಳು ವ್ಯವಸ್ಥೆ ಮಾಡಬೇಕು.

5.ನೀರಾವರಿ

ನಿಯಮಿತವಾಗಿ ನೀರು ಹಾಕಬೇಕು. ಮಣ್ಣು ಒಣಗದಂತೆ ನೋಡಿಕೊಳ್ಳಬೇಕು.

6.ಹೂವು ಮತ್ತು ಪರಾಗಸ್ಪರ್ಶ

ವೆನಿಲ್ಲಾ ಹೂವುಗಳು ಸ್ವಾಭಾವಿಕವಾಗಿ ಪರಾಗಸ್ಪರ್ಶವಾಗುವುದಿಲ್ಲ. ಆದ್ದರಿಂದ ಕೈಯಿಂದ ಪರಾಗಸ್ಪರ್ಶ ಮಾಡಬೇಕು. ಇದು ಅತ್ಯಂತ ಮುಖ್ಯ ಹಂತವಾಗಿದೆ. ಸರಿಯಾದ ಪರಾಗಸ್ಪರ್ಶ ಮಾಡದೇ ಇದ್ದಾರೆ ಹೂವು ಬಿದ್ದು ಹೋಗುತ್ತವೆ. ಹೂವು ಬಿದ್ದರೆ ಕಾಯಿ ಆಗುವುದಿಲ್ಲ ಹಾಗೆಯೇ ಪರಾಗಸ್ಪರ್ಶ ಯಾವಾಗಲೂ ಬೆಳಗ್ಗೆ ಮಾಡಬೇಕು.

ಬೆಳೆ ನಿರ್ವಹಣೆ:

  • ನಿರಂತರ ನೀರಿನ ಪೂರೈಕೆ, ಆದರೆ ನೀರಿನ ನಿಲ್ಲುವಿಕೆ ಇರಬಾರದು. ಅತಿಯಾಗಿ ನೀರು ನಿಂತರೆ ಬಳ್ಳಿ ಕೊಳೆತು ಹೋಗುತ್ತವೆ.
  • ಬೆಳೆ ಬೆಳೆದಂತೆ ಅದರ ಹೂವನ್ನು ಕೈಯಿಂದ ಪರಗಸ್ಪರ್ಶ ಮಾಡಬೇಕು, ಏಕೆಂದರೆ ಇದು ಸ್ವಯಂ-ಪ್ರೇರಿತವಾಗಿ ಕಾಯಿ ಆಗುವುದಿಲ್ಲ.
  • ಹೂವನ್ನು ಬೆಳಗ್ಗೆ ಪರಗಸ್ಪರ್ಶ ಮಾಡಬೇಕು. ಹೂ ಬಿದ್ದ ಬಳಿಕ ಪ್ರಕ್ರಿಯೆಗೂ ಬರುವವರೆಗೆ ಸುಮಾರು 8-9 ತಿಂಗಳುಗಳ ಕಾಲ ಕಾಯಬೇಕು.
  • ಹೂವನ್ನು ಪರಗಸ್ಪರ್ಶ ಮಾಡುವುದು ಸರಿ ಆಗದೆ ಇದ್ದಲ್ಲಿ ಹೂವು ಬಿದ್ದು ಹೋಗುತ್ತದೆ.

ವೆನಿಲ್ಲಾ ಕಟಾವು ಮತ್ತು ಸಂಸ್ಕರಣೆ

ವೆನಿಲ್ಲಾ ಕಾಯಿ ಸಾಮಾನ್ಯವಾಗಿ 6 ರಿಂದ 9 ತಿಂಗಳಲ್ಲಿ ಸಿದ್ಧವಾಗುತ್ತದೆ. ಕಾಯಿ ಹಳದಿ ಬಣ್ಣಕ್ಕೆ ತಿರುಗಿದಾಗ ಕಟಾವು ಮಾಡಬೇಕು.

ಕಟಾವು ನಂತರ:

  • ಕಾಯಿ ಕತ್ತರಿಸಬೇಕು ಕತ್ತರಿಸಿದ ನಂತರ
  • ಸೂರ್ಯನ ಬೆಳಕಿನಲ್ಲಿ ಒಣಗಿಸಬೇಕು.
  • curing ಪ್ರಕ್ರಿಯೆ ಮಾಡಬೇಕು

ಈ ಪ್ರಕ್ರಿಯೆಯಿಂದ ವೆನಿಲ್ಲಾ ಸುವಾಸನೆ ಹೆಚ್ಚುತ್ತದೆ.

ವೆನಿಲ್ಲಾ ಉಪಯೋಗಗಳು

ವೆನಿಲ್ಲಾ ಅನೇಕ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ:

  • ವೆನಿಲ್ಲಾ ವನ್ನು ಐಸ್ ಕ್ರೀಮ್ ತಯಾರಿಕೆ ಮಾಡಲು ಬಳಸುತ್ತಾರೆ.
  • ಕೇಕ್ ಮತ್ತು ಬೇಕರಿ ಪದಾರ್ಥಗಳು
  • ಚಾಕಲೇಟ್ ಮಾಡಲು ವೆನಿಲ್ಲಾ ಬಳಸುತ್ತಾರೆ.
  • ಪಾನೀಯಗಳು
  • ಸುಗಂಧ ದ್ರವ್ಯಗಳು

ವೆನಿಲ್ಲಾ ಆರೋಗ್ಯ ಲಾಭಗಳು

ವೆನಿಲ್ಲಾ ಕೇವಲ ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ಸಹಾಯಕವಾಗಿದೆ.

1.ಮನಸ್ಸಿಗೆ ಶಾಂತಿ ನೀಡುತ್ತದೆ

ವೆನಿಲ್ಲಾ ಸುವಾಸನೆ ಒತ್ತಡ ಕಡಿಮೆ ಮಾಡುತ್ತದೆ ಮತ್ತು ಮನಸ್ಸಿಗೆ ಶಾಂತಿ ನೀಡುತ್ತದೆ.

2.ಜೀರ್ಣಕ್ರಿಯೆ ಸುಧಾರಣೆ

ವೆನಿಲ್ಲಾ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

3.ಆಂಟಿ-ಆಕ್ಸಿಡೆಂಟ್‌ಗಳು

ವೆನಿಲ್ಲಾ ಆಂಟಿ-ಆಕ್ಸಿಡೆಂಟ್‌ಗಳು ಗುಣವನ್ನು ಹೊಂದಿದ್ದು ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ.

4.ಚರ್ಮದ ಆರೋಗ್ಯ

ವೆನಿಲ್ಲಾ ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

5.ಉತ್ತಮ ನಿದ್ರೆ

ವೆನಿಲ್ಲಾ ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.

ಆರ್ಥಿಕ ಲಾಭ:

  • ವೆನಿಲ್ಲಾ ಒಂದು ಮಹತ್ವದ ನಗದು ಬೆಳೆ ಆಗಿದ್ದು, ಅದರ ಬೇಡಿಕೆ ಎಲ್ಲಾ ಕಡೆ ಇದೆ.
  • ಒಂದು ಎಕರೆ ವೆನಿಲ್ಲಾ ಬೆಳೆ ನೆಟ್ಟರೆ ವರ್ಷಕ್ಕೆ ಲಕ್ಷಾಂತರ ರೂಪಾಯಿಗಳ ಆದಾಯ ಸಿಗಬಹುದು.
  • ಒಂದು ಕೆಜಿ ಹಸಿ ವೇನಿಲ್ಲಾ ಗೆ 700 ರಿಂದ 1500 ರೂಪಾಯಿ ತನಕ ಸಿಗುತ್ತದೆ

ಸೂಚನೆಗಳು:

  • ವೆನಿಲ್ಲಾ ಬೆಳೆ ಬೆಳೆಯಲು ಸಾಕಷ್ಟು ಶ್ರಮ ಮತ್ತು ನಿರ್ವಹಣೆಯ ಅಗತ್ಯವಿಲ್ಲ.
  • ಬೆಳೆಗೆ ರಾಸಾಯನಿಕಗಳನ್ನು ಅತಿ ಕಡಿಮೆ ಪ್ರಮಾಣದಲ್ಲಿ ಬಳಸುವುದು ಉತ್ತಮ.
  • ಅನುಭವ ಹೊಂದಿದ ಕೃಷಿಕರ ಮಾರ್ಗದರ್ಶನದಲ್ಲಿ ಬೆಳೆ ಶುರು ಮಾಡುವುದು ಉತ್ತಮ.

ವೆನಿಲ್ಲಾ ಬೆಳೆ ಲಾಭದಾಯಕವೇ?

ಹೌದು, ಸರಿಯಾದ ವಿಧಾನದಲ್ಲಿ ಬೆಳೆದರೆ ಉತ್ತಮ ಆದಾಯ ನೀಡುತ್ತದೆ. ಉತ್ತಮ ಮಾರ್ಗದರ್ಶನದಲ್ಲಿ ಬೆಳೆದರೆ ಲಾಭ ಗಳಿಸಬಹುದು.

ವೆನಿಲ್ಲಾ ಬೆಳೆಸುವುದು ಕಷ್ಟವೇ?

ವೆನಿಲ್ಲಾ ಬೆಳೆಸುವುದು ಕಷ್ಟವೇನಲ್ಲ ಸ್ವಲ್ಪ ಕಾಳಜಿ ಅಗತ್ಯವಿದ್ದರೂ ಸಾಧ್ಯ.

ನೀವು ವೆನಿಲ್ಲಾ ಕೃಷಿಯಲ್ಲಿ ಪ್ರಾರಂಭಿಕರಾಗಿದ್ದರೆ ಹತ್ತಿರದ ಕೃಷಿ ಇಲಾಖೆಯಿಂದ ಮಾಹಿತಿ ಪಡೆದುಕೊಳ್ಳಿ. ವಿವಿಧ ತರಬೇತಿ ಶಿಬಿರಗಳು ಮತ್ತು ಸರ್ಕಾರಿ ಸಬ್ಸಿಡಿ ಯೋಜನೆಗಳ ಬಗ್ಗೆ ವಿವರ ಪಡೆಯಿರಿ.ವೇನಿಲ್ಲಾ ಒಂದು ಲಾಭದಾಯಕ ಆದರೆ ನಿರಂತರ ಗಮನ ಮತ್ತು ಶ್ರಮಕ್ಕೆ ತಕ್ಕ ಬೆಳೆ. ಸರಿಯಾದ ಜಾಗದಲ್ಲಿ ಸರಿಯಾದ ರೀತಿಯಲ್ಲಿ ಬೆಳೆಸಿದರೆ, ಇದು ನಿಮ್ಮ ಕೃಷಿಕ ಜೀವನದಲ್ಲಿ ಹೊಸ ಅವಕಾಶಗಳನ್ನು ಒದಗಿಸಬಲ್ಲದು.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ [ಅಧಿಕೃತ ವೆಬ್‌ಸೈಟ್]

https://raitamitra.karnataka.gov.in

Leave a Comment

Your email address will not be published. Required fields are marked *

Scroll to Top