ಕಾಫಿ ನರ್ಸರಿ, ಕಾಫಿ ತೋಟ ಮತ್ತು ಕಾಫಿಯ 10 ಆರೋಗ್ಯಕರ ಉಪಯೋಗಗಳು

ಕಾಫಿ ಆರೋಗ್ಯ ಲಾಭಗಳು ಕಾಫಿ ನಮ್ಮ ದೈನಂದಿನ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುವ ಒಂದು ಪಾನೀಯವಾಗಿದೆ. ಬೆಳಿಗ್ಗೆ ಎದ್ದು ಒಂದು ಕಪ್ ಕಾಫಿ ಕುಡಿಯುವುದರಿಂದ ಮನಸ್ಸು ತಾಜಾ ಆಗುತ್ತದೆ ಮತ್ತು ದೇಹಕ್ಕೆ ಚೈತನ್ಯ ಬರುತ್ತದೆ. ಕರ್ನಾಟಕ ರಾಜ್ಯವು ಭಾರತದಲ್ಲಿ ಪ್ರಮುಖ ಕಾಫಿ ಉತ್ಪಾದನಾ ಪ್ರದೇಶವಾಗಿದ್ದು, ಚಿಕ್ಕಮಗಳೂರು ಮತ್ತು ಕೂರ್ಗ್ ಭಾಗಗಳು ವಿಶೇಷವಾಗಿ ಪ್ರಸಿದ್ಧವಾಗಿವೆ. ಇಲ್ಲಿ ಬೆಳೆದ ಕಾಫಿ ಗುಣಮಟ್ಟದಲ್ಲಿ ಅತ್ಯುತ್ತಮವಾಗಿದೆ. ಕಾಫಿ ಕೇವಲ ಪಾನೀಯವಲ್ಲ, ಅದು ಕೃಷಿಕರಿಗೆ ಆದಾಯದ ಮೂಲವಾಗಿದ್ದು, ಆರೋಗ್ಯಕ್ಕೂ ಅನೇಕ ಲಾಭಗಳನ್ನು ನೀಡುತ್ತದೆ. ಈ ಲೇಖನದಲ್ಲಿ ನಾವು ಕಾಫಿ ನರ್ಸರಿ ತಯಾರಿಸುವ ವಿಧಾನ, ಕಾಫಿ ತೋಟ ಬೆಳೆಸುವ ವಿಧಾನ ಮತ್ತು ಕಾಫಿ ಆರೋಗ್ಯ ಲಾಭಗಳು ವಿವರವಾಗಿ ತಿಳಿದುಕೊಳ್ಳೋಣ. ಕಾಫಿ ಬೆಳೆಯುವ ವಿಧಾನ: ನರ್ಸರಿ ಉತ್ತಮ ಬೆಳೆಯ ಸಂಕೇತ, ಕಾಫಿ ನರ್ಸರಿ ಎಂದರೆ ಗಿಡವನ್ನು ಚಿಕ್ಕ ಚಿಕ್ಕ ಪ್ಲಾಸ್ಟಿಕ್ ನಲ್ಲಿ ಗಿಡಗಳನ್ನು ಬೆಳೆಸಿ, ನಂತರ ತೋಟದಲ್ಲಿ ನೆಡುವುದು. ಉತ್ತಮ ಗುಣಮಟ್ಟದ ಬೆಳೆಗೆ ಉತ್ತಮ ನರ್ಸರಿ ಪ್ರಾರಂಭಿಸುವುದು ಅವಶ್ಯಕ. ಕಾಫಿ ನರ್ಸರಿ ಎಂದರೆ ಏನು? ಕಾಫಿ ನರ್ಸರಿ ಎಂದರೆ ಕಾಫಿ ಸಸಿಗಳನ್ನು ಬೆಳೆಯುವ ಪ್ರಾರಂಭಿಕ ಹಂತ. ಇಲ್ಲಿ ಕಾಫಿ ಬೀಜಗಳನ್ನು ನೆಟ್ಟು, ಸಸಿಗಳಾಗಿ ಬೆಳೆಸಲಾಗುತ್ತದೆ. ಉತ್ತಮ ನರ್ಸರಿ ಇದ್ದರೆ ಮಾತ್ರ ತೋಟದಲ್ಲಿ ಉತ್ತಮ ಉತ್ಪಾದನೆ ಪಡೆಯಬಹುದು. ಕಾಫಿ ನರ್ಸರಿ ಮಾಡುವ ವಿಧಾನ: ಕಾಫಿಯನ್ನು ಶ್ರಾವಣ ಮಾಸದಲ್ಲಿ ನೆಡಲಾಗುತ್ತದೆ. ನೆಟ್ಟ ಬಳಿಕ ಸುಮಾರು 5-6 ವರ್ಷಗಳಲ್ಲಿ ಫಲ ನೀಡುತ್ತದೆ. ಕಾಫಿಯ ಹೂವು ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಸ್ವಲ್ಪ ಮಳೆಯು ಬಿದ್ದ ನಂತರ ಹೂವು ಬಿಡುತ್ತವೆ. ಜಾಸ್ತಿ ಮಳೆ ಬಿದ್ದರೆ ಹೂವು ಉದುರಿ ಹೋಗುತ್ತವೆ. ಅನಂತರ ಡಿಸೆಂಬರ್ ನಲ್ಲಿ ಕಾಫಿ ಹಣ್ಣನ್ನು ಕುಯ್ಯಬಹುದು. ಕುಯ್ದ ನಂತರ ಸಿಪ್ಪೆ ತೆಗೆದು, ಒಣಗಿಸಿ, ನಂತರ ಹುರಿದು ಕಾಫಿ ಪುಡಿಯನ್ನು ತಯಾರಿಸಲಾಗುತ್ತದೆ. ತೋಟ ಸ್ಥಾಪನೆ ಹಂತಗಳು : 1. ಭೂಮಿ ಸಿದ್ಧತೆ : ಮಣ್ಣನ್ನು ಚನ್ನಾಗಿ ಹದ ಮಾಡಿ, ಕಳೆಗಳನ್ನು ತೆಗೆದುಹಾಕಬೇಕು. 2. ಗುಂಡಿ ತೋಡುವುದು : ಸಸಿಗಳನ್ನು ನೆಡುವುದಕ್ಕಾಗಿ ಗುಂಡಿಗಳನ್ನು ತೋಡಬೇಕು. ಗುಂಡಿಯಿಂದ ಗುಂಡಿಗೆ ಸ್ವಲ್ಪ ಅಂತರವಿರಬೇಕು. 3. ಸಸಿ ನೆಡುವುದು : ನರ್ಸರಿಯಲ್ಲಿ ಬೆಳೆದ ಸಸಿಗಳನ್ನು ಗುಂಡಿಗಳಲ್ಲಿ ನೆಡಬೇಕು. ಸ್ವಲ್ಪ ಸ್ವಲ್ಪ ನೀರು ಹಾಕಬೇಕು. 4. ನೆರಳು ಮರಗಳ ನೆಡುವಿಕೆ : ಕಾಫಿ ಸಸಿಗಳಿಗೆ ಅತಿಯಾದ ಬಿಸಿಲು ಆಗುವುದಿಲ್ಲ ಹಾಗಾಗಿ ನೆರಳು ಅಗತ್ಯವಾಗಿರುವುದರಿಂದ ದೊಡ್ಡ ಮರಗಳು ಇರುವ ತೋಟದಲ್ಲಿ ನೆಡಬೇಕು. 5. ಗೊಬ್ಬರ ಮತ್ತು ಪೋಷಕಾಂಶ : ಜೈವಿಕ ಗೊಬ್ಬರ ಬಳಸಿ ಸಸಿಗಳಿಗೆ ಪೋಷಕಾಂಶ ಒದಗಿಸಬೇಕು. 6. ನೀರಾವರಿ : ಬೇಸಿಗೆಯಲ್ಲಿ ನಿಯಮಿತವಾಗಿ ನೀರು ಹಾಕಬೇಕು. 7. ಕೀಟ ಮತ್ತು ರೋಗ ನಿಯಂತ್ರಣ : ಜೈವಿಕ ವಿಧಾನಗಳಿಂದ ಕೀಟಗಳನ್ನು ನಿಯಂತ್ರಿಸುವುದು ಉತ್ತಮ. ಅತಿಯಾಗಿ ಕೀಟನಾಶಕ ಸಿಂಪಡಿಸಬೇಡಿ. ಪ್ರಮುಖ ಕಾಫಿ ಬಗೆಗಳು: 1. ಅರಬಿಕಾ (Arabica): ಉತ್ತಮ ಗುಣಮಟ್ಟ, ಹೆಚ್ಚು ಸುಗಂಧದ ಗುಣ, ಕಡಿಮೆ ಕ್ಯಾಫಿನ್ ಅಂಶ ಇರುತ್ತದೆ. 2. ರೊಬಸ್ಟಾ (Robusta): ಹೆಚ್ಚು ಶಕ್ತಿವಂತ, ಕಡಿಮೆ ಬೆಲೆಯುಳ್ಳದು, ಹೆಚ್ಚು ಕ್ಯಾಫಿನ್ ಅಂಶ ಇರುತ್ತದೆ. ಕಾಫಿ ತೋಟಗಳ ಪ್ರವಾಸೋದ್ಯಮ (Coffee Tourism) : ಇತ್ತೀಚಿನ ದಿನಗಳಲ್ಲಿ ಕಾಫಿ ತೋಟಗಳಲ್ಲಿ ಹೋಮ್‌ಸ್ಟೇಗಳು, ಎಡ್ವೆಂಚರ್ ಪ್ರವಾಸ ಹಾಗೂ ಹೆರಿಟೇಜ್ ಟೂರಿಸಂ ಕೂಡ ಜಾಸ್ತಿಯಾಗುತ್ತಿದೆ. ಪ್ರವಾಸಿಗರು ಇಲ್ಲಿ ಕಾಫಿ ತಯಾರಿಕೆ ಪ್ರಕ್ರಿಯೆ ನೋಡಬಹುದು, ಪ್ರಕೃತಿಯ ಸೌಂದರ್ಯ ಅನುಭವಿಸಬಹುದು. ಹೋಂಸ್ಟೇ ಗಳು ತಂಪಾದ ವಾತಾವರಣಕ್ಕಾಗಿ ಇತ್ತೀಚಿಗೆ ಕಾಫಿ ತೋಟಗಳನ್ನು ಅವಲಂಬಿಸಿವೆ. ಆರ್ಥಿಕ ಮಹತ್ವ: ಕಾಫಿ ಆರೋಗ್ಯ ಲಾಭಗಳು ನೀಡುವುದಲ್ಲದೆ ಸಾವಿರಾರು ಜನರಿಗೆ ಉದ್ಯೋಗವನ್ನು ನೀಡುತ್ತವೆ. ಇದರ ಮೂಲಕ ದೇಶದ ಆರ್ಥಿಕತೆಯಲ್ಲೂ ಮಹತ್ವಪೂರ್ಣ ಪಾತ್ರವಿದೆ. ಭಾರತೀಯ ಕಾಫಿಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಕಾಫಿ ಬೆಳೆ ಲಕ್ಷಾಂತರ ಜನರಿಗೆ ಉದ್ಯೋಗ ಮತ್ತು ಆದಾಯವನ್ನು ಒದಗಿಸುತ್ತಿದೆ. ಒಂದು ಚೀಲ ಅರೇಬಿಕಾ ಕಾಫಿಗೆ 25 ಸಾವಿರದಿಂದ 30 ಸಾವಿರ ತನಕ ಇದೆ. ರೊಬಸ್ಟಾ ಕಾಫಿಗೆ 8 ಸಾವಿರ ದಿಂದ 13 ಸಾವಿರ ತನಕ ಇದೆ. ಕಾಫಿ ಆರೋಗ್ಯ ಲಾಭಗಳು (Benefits of Coffee) ಕಾಫಿ ಆರೋಗ್ಯಕ್ಕೆ ಒಳ್ಳೆಯದೆಯೇ? ಹೌದು, ಮಿತ ಪ್ರಮಾಣದಲ್ಲಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು. ದಿನಕ್ಕೆ ಎಷ್ಟು ಕುಡಿಯಬೇಕು? ದಿನಕ್ಕೆ 2–3 ಕಪ್ ಸಾಕು. ಅತಿಯಾಗಿ ಕುಡಿಯಬೇಡಿ. https://agritech.tnau.ac.in/horticulture/horti_plantation%20crops_coffee.html

ಕಾಫಿ ನರ್ಸರಿ, ಕಾಫಿ ತೋಟ ಮತ್ತು ಕಾಫಿಯ 10 ಆರೋಗ್ಯಕರ ಉಪಯೋಗಗಳು Read More »

ನೈಲ್ ಆರ್ಟ್ – ಸರಳ, ಸುಂದರ ನೈಲ್ ಆರ್ಟ್ ಗೈಡ್

ನೆಲ್ ಆರ್ಟ್ – ನಿಮ್ಮ ಉಗುರುಗಳಿಗೆ ಅಲಂಕಾರ : ಮದುವೆ ಸಂದರ್ಭದಲ್ಲಿ ನಿಮ್ಮ ಕೈಗಳ ಅಂದ ಹೆಚ್ಚಿಸಲು ನೈಲ್ ಆರ್ಟ್ ಮಾಡಿಸಿಕೊಂಡರೆ ಹಾಗೆಯೇ ಆಫೀಸ್ ಹೋಗುವವರು ಹಾಕಿಕೊಂಡರೆ ನಿಮ್ಮ ಕೈ ಅಂದ ಹೆಚ್ಚುತ್ತದೆ. ನೈಲ್ ಆರ್ಟ್ ಎಂದರೆ ಕೇವಲ ಬಣ್ಣ ಹಚ್ಚುವುದು ಅಲ್ಲ. ಇದು ನಿಮ್ಮ ವೈಯಕ್ತಿಕ ಶೈಲಿಯ ಪ್ರತಿಬಿಂಬ. ಇತ್ತೀಚಿನ ದಿನಗಳಲ್ಲಿ ನೈಲ್ ಆರ್ಟ್ ಮನ್ನಣೆಯಲ್ಲಿದೆ. ಇಂದು ನೆಲ್ ಆರ್ಟ್ ಎಲ್ಲೆಂದರಲ್ಲಿ ಪ್ರಚಲಿತವಾಗಿದೆ. ಜನಪ್ರಿಯ ನೈಲ್ ಆರ್ಟ್ ವಿನ್ಯಾಸಗಳು: ಜೆಲ್ ಪಾಲಿಶ್ (Gel Polish) – ನಿಮ್ಮ ಕೈಯಲ್ಲಿ ಮತ್ತು ಕಾಲಿನಲ್ಲಿ ಸುಂದರ ಉಗುರುಗಳಿದ್ದರೆ ಅಥವಾ ನೈಲ್ಲಿ extension ಗೆ ವಿವಿಧ ರೀತಿಯ ನೈಲ್ ಪಾಲಿಶ್ ಹಾಕಬಹುದು ಈ ಜೆಲ್ ಪಾಲಿಶ್ ನಿಮ್ಮ ಕೈಗಳಲ್ಲಿ 20 ದಿನಗಳವರೆಗೆ ಇರುತ್ತದೆ. ವಿವಿಧ ಕಲರ್ ಗಳಲ್ಲಿ ಸಿಗುತ್ತದೆ. ಜೆಲ್ ಪಾಲಿಶ್ ಹಾಕಿದ ಮೇಲೆ ನಿಮಗೆ ಬೇಕಾದ ರೀತಿಯ ವಿನ್ಯಾಸ (design) ಮಾಡಿಸಿಕೊಳ್ಳಬಹುದು.ಇದರ ದರಗಳು 900 ರಿಂದ ಪ್ರಾರಂಭವಾಗುತ್ತದೆ. 2. ತಾತ್ಕಾಲಿಕ ವಿಸ್ತರಣೆ (Temporary Extension) : ನಿಮಗೆ ಉಗುರುಗಳು ಇಲ್ಲದಿದ್ದರೆ ಉಗುರುಗಳಿಗೆ ಕೃತಕ (artificial) ಉಗುರುಗಳನ್ನು ಹಾಕಿ ಬೇಕಾದ ಆಕಾರವನ್ನು ಮಾಡಿಸಿಕೊಳ್ಳಬಹುದು. ನಂತರ ಬೇಕಾದ ಕಲರ್ ಅನ್ನು ಹಾಕಿಸಿಕೊಳ್ಳಬಹುದು ಈ ಉಗುರುಗಳು 30 ದಿನಗಳ ವರೆಗೆ ಇರುತ್ತದೆ.ವಿವಿಧ ಶೈಲಿಯ ವಿನ್ಯಾಸಗಳನ್ನು ಮಾಡಿಸಬಹುದು.ಇದರ ದರಗಳು 1300 ರಿಂದ ಪ್ರಾರಂಭವಾಗುತ್ತದೆ. 3.ಅಕ್ರೈಲಿಸಿ ವಿಸ್ತರಣೆ (Acrylic Extension) : ಅಕ್ರೈಲಿಸಿ extension ಅಂದರೆ ನೈಲ್ extension ಮಾಡುವ ವಿಧಾನವಾಗಿದೆ. ಲಿಕ್ವಿಡ್ ಮೋನೋಮೆರ್ ಮತ್ತು ಪೌಡರ್ ಪಾಲಿಮಾರ್ ಅನ್ನು ಮಿಶ್ರಣ ಮಾಡಿ ಉಗುರಿನ ಮೇಲೆ ಹಾಕಲಾಗುತ್ತದೆ.ನೈಲ್ ಬೆಳೆದ ಹಾಗೆ ಅದಕ್ಕೆ ಫಿಲ್ಲಿಂಗ್ ಮಾಡಬಹುದು. ಇದು ತುಂಬಾ ದಿನಗಳವರೆಗೆ ಬರುತ್ತದೆ.ಇದಕ್ಕೆ ವಿವಿಧ ರೀತಿಯ ವಿನ್ಯಾಸಗಳನ್ನು ಮಾಡಬಹುದು. ಇದರ ದರಗಳು 1800 ರಿಂದ ಪ್ರಾರಂಭವಾಗುತ್ತದೆ. 4.ಕ್ಯಾಟ್ ಐ (cat eye) : ನಿಮ್ಮ ಉಗುರುಗಳಿಗೆ ಕ್ಯಾಟ್ ಐ ವಿನ್ಯಾಸ (design) ಮಾಡಿಸಿಕೊಳ್ಳಬಹುದು. ಇದರ ದರಗಳು 1800 ರಿಂದ ಆರಂಭವಾಗುತ್ತವೆ. ಸೂಚನೆ : ಇದರ ಮೇಲೆ 3D ಅಥವಾ 5D ಡಿಸೈನ್ ಮಾಡಿಸಿಕೊಳ್ಳಬಹುದು. ನಿಮ್ಮ ಉಗುರುಗಳಿಗೆ ವಿವಿಧ ಬಗೆಯ ಆಕಾರಗಳನ್ನು ಕೊಡಬಹುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಇನ್ಸ್ಟಾಗ್ರಾಮ್ ಸಂಪರ್ಕಿಸಬಹುದು : Nailed it by Divya Jayappa -Chandra Layout, Vijayanagar, Nagarabhavi https://youtube.com/shorts/HfysJ_JYk84?si=63phDw6GZtd0mEcE

ನೈಲ್ ಆರ್ಟ್ – ಸರಳ, ಸುಂದರ ನೈಲ್ ಆರ್ಟ್ ಗೈಡ್ Read More »

ಜಮೀನಿನ ಸುತ್ತ, ಮನೆಯ ಸುತ್ತಲೂ ಭದ್ರತೆಗಾಗಿ 4 ಉತ್ತಮ ಬಗೆಯ ಫೆನ್ಸಿಂಗ್ – ಎಲ್ಲಿ ಬೇಕು? ಯಾಕೆ ಮುಖ್ಯ?

ಫೆನ್ಸಿಂಗ್ ಅಂದರೆನು? ಜಮೀನಿನ ಫೆನ್ಸಿಂಗ್ ವಿಧಾನಗಳು ಫಾರ್ಮ್ ಹೌಸ್ ಅಥವಾ ಕಟ್ಟಡದ ಸುತ್ತಲೂ ಗೇಟ್ ಅಥವಾ ಕಂಬಿಗಳನ್ನು ಹಾಕಿ ಭದ್ರತೆ ನೀಡುವ ಪ್ರಕ್ರಿಯೆ. ಇದು ಅನಧಿಕೃತ ಪ್ರವೇಶವನ್ನು ತಡೆಯಲು, ಸಾಕುಪ್ರಾಣಿಗಳನ್ನು ಒಳಗಿಡಲು, ಹಾಗೂ ಗೃಹ ಭದ್ರತೆಗಾಗಿ ಬಳಸಲಾಗುತ್ತದೆ. ಜಮೀನಿನ ಫೆನ್ಸಿಂಗ್ ವಿಧಾನಗಳು : 1.ಚೈನ್ ಲಿಂಕ್ ಫೆನ್ಸಿಂಗ್ (Chain Link Fencing) 2. ಕಂಪೌಂಡ್ ವಾಲ್ ಫೆನ್ಸಿಂಗ್ / ಪ್ರೀಕಾಸ್ಟ್ ಕಾಂಪೌಂಡ್ : 3.ಬಾರ್ಬ್ಡ್ ವೈರ್ ಫೆನ್ಸಿಂಗ್ (Barbed Wire) : 4.ಸೋಲಾರ್ ಫೆನ್ಸಿಂಗ್ / ಎಲೆಕ್ಟ್ರಿಕ್ ಫೆನ್ಸಿಂಗ್ : ಫೆನ್ಸಿಂಗ್ ಕೆಲಸದ ಪ್ರಯೋಜನಗಳು: ಫೆನ್ಸಿಂಗ್ ಕೆಲಸದ ದರಗಳು : ಸೂಚನೆ : ಜಾಗದ ಗಾತ್ರ, ಸ್ಥಳ ಮತ್ತು ವಸ್ತುಗಳ ಪ್ರಕಾರ ದರ ಬದಲಾಗಬಹುದು. 📍 ಎಲ್ಲಿ ಫೆನ್ಸಿಂಗ್ ಕೆಲಸ ಪಡೆಯಬಹುದು? ನಿಮ್ಮ ಜಿಲ್ಲೆಯಲ್ಲಿಯೇ ಹಲವಾರು ಫೆನ್ಸಿಂಗ್ ಕೆಲಸದ ಗುತ್ತಿಗೆದಾರರು ಮತ್ತು ಕೆಲಸಗಾರರು ಲಭ್ಯರಿದ್ದಾರೆ. ಅವರ ಫೋನ್ ನಂಬರು ಅಥವಾ ವಿಳಾಸಗಳನ್ನು ಜನಪ್ರಿಯ ಜಾಲತಾಣಗಳಲ್ಲಿ ಹುಡುಕಬಹುದು. ಸಂಪರ್ಕಕ್ಕಾಗಿ: ನೀವು ಫೆನ್ಸಿಂಗ್ ಕೆಲಸದ ಗುತ್ತಿಗೆದಾರರು ಅಥವಾ ಕೆಲಸಗಾರರಾಗಿದ್ದರೆ, ಈ ಪುಟದಲ್ಲಿ ನಿಮ್ಮ ವಿಜಿಟಿಂಗ್ ಕಾರ್ಡ್, ಫೋನ್ ನಂಬರ್ ಅಥವಾ ಸೇವೆಗಳ ವಿವರಗಳನ್ನು ಹಾಕಬಹುದು. https://youtube.com/shorts/3jyNwoUGHt0?si=Y_R-oSy4DmXl4QN-

ಜಮೀನಿನ ಸುತ್ತ, ಮನೆಯ ಸುತ್ತಲೂ ಭದ್ರತೆಗಾಗಿ 4 ಉತ್ತಮ ಬಗೆಯ ಫೆನ್ಸಿಂಗ್ – ಎಲ್ಲಿ ಬೇಕು? ಯಾಕೆ ಮುಖ್ಯ? Read More »

ಕೊಬ್ಬರಿ ಬಿಸ್ಕೆಟ್ | ಕುಕ್ಕಿಸ್ ರೆಸಿಪಿ ಸುಲಭವಾಗಿ ತಯಾರಿಸುವುದು ಹೇಗೆ?

ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ರುಚಿಕರವಾದ ಸಿಹಿ ತಿಂಡಿಗಳಲ್ಲಿ ಕೊಬ್ಬರಿ ಬಿಸ್ಕೆಟ್ ಕೂಡ ಒಂದು. ಗೋಧಿಹಿಟ್ಟು, ಹುರಿದ ಕೊಬ್ಬರಿ, ಸಕ್ಕರೆ ಮತ್ತು ಬೆಣ್ಣೆ ಅಥವಾ ತುಪ್ಪವನ್ನು ಬಳಸಿ ಈ ಬಿಸ್ಕೆಟ್‌ಗಳನ್ನು ತಯಾರಿಸಬಹುದು. ಕೊಬ್ಬರಿಯನ್ನು ಸ್ವಲ್ಪ ಹುರಿದು ಬಳಸುವುದರಿಂದ ಬಿಸ್ಕೆಟ್‌ಗೆ ಉತ್ತಮವಾದ ಪರಿಮಳ ಬರುತ್ತದೆ. ಏಲಕ್ಕಿ ಪುಡಿ ಸೇರಿಸಿದರೆ ಸಿಹಿಯಾದ ಸುವಾಸನೆಯೂ ಹೆಚ್ಚುತ್ತದೆ. ಮನೆಯಲ್ಲಿ ತಯಾರಿಸುವುದರಿಂದ ಬೇಕಾದಷ್ಟು ಸಿಹಿಯನ್ನು ಹೊಂದಿಸಿಕೊಳ್ಳಬಹುದು. ಚಹಾ ಅಥವಾ ಕಾಫಿಯೊಂದಿಗೆ ಸಂಜೆ ತಿಂಡಿಯಾಗಿ, ಮಕ್ಕಳ ಟಿಫಿನ್‌ಗೆ ಅಥವಾ ಅತಿಥಿಗಳು ಬಂದಾಗ ನೀಡಲು ಈ ಕೊಬ್ಬರಿ ಕುಕ್ಕೀಸ್ ಉತ್ತಮ ಆಯ್ಕೆಯಾಗಬಹುದು. ಕೊಬ್ಬರಿ ಬಿಸ್ಕೆಟ್ ಮಾಡಲು ಬೇಕಾಗುವ ಪದಾರ್ಥಗಳು (Ingredients): • ಗೋಧಿಹಿಟ್ಟು – 1 ಕಪ್ • ಹುರಿದ ಕೊಬ್ಬರಿ – 1/2 ಕಪ್ • ಪುಡಿ ಸಕ್ಕರೆ – 1/2 ಕಪ್ • ಬೆಣ್ಣೆ ಅಥವಾ ತುಪ್ಪ – 1/4 ಕಪ್ • ಹಾಲು – 2 ಟೇಬಲ್ ಸ್ಪೂನ್ (ಅಥವಾ ಅಗತ್ಯಕ್ಕೆ ತಕ್ಕಷ್ಟು) • ಏಲಕ್ಕಿ ಪುಡಿ – 1 ಚಿಟಿಕೆ • ಬೇಕಿಂಗ್ ಪೌಡರ್ – 1/4 ಟೀ ಸ್ಪೂನ್ • ಉಪ್ಪು – 1 ಚಿಟಿಕೆ ಕೊಬ್ಬರಿಯನ್ನು ಹುರಿಯುವ ವಿಧಾನ ಮೊದಲು ಒಂದು ಬಾಣಲೆಯನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ತುರಿದ ಕೊಬ್ಬರಿಯನ್ನು ಹಾಕಿ ನಿಧಾನವಾಗಿ ಹುರಿಯಿರಿ. ಕೊಬ್ಬರಿ ಸ್ವಲ್ಪ ಒಣಗಿಕೊಂಡು ಪರಿಮಳ ಬರುವಷ್ಟು ಹುರಿದರೆ ಸಾಕು. ತುಂಬಾ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಬೇಡಿ. ಹುರಿದ ಕೊಬ್ಬರಿಯನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ನಂತರ ಬಿಸ್ಕೆಟ್ ಹಿಟ್ಟಿಗೆ ಸೇರಿಸಿ. ಬಿಸ್ಕೆಟ್ ಹಿಟ್ಟು ತಯಾರಿಸುವ ವಿಧಾನ ಒಂದು ದೊಡ್ಡ ಬಟ್ಟಲಿನಲ್ಲಿ ಗೋಧಿಹಿಟ್ಟು, ಬೇಕಿಂಗ್ ಪೌಡರ್, ಪುಡಿ ಸಕ್ಕರೆ, ಏಲಕ್ಕಿ ಪುಡಿ ಮತ್ತು ಒಂದು ಚಿಟಿಕೆ ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಹುರಿದ ಕೊಬ್ಬರಿಯನ್ನು ಸೇರಿಸಿ ಮತ್ತೆ ಮಿಶ್ರಣ ಮಾಡಿ. ಈಗ ಬೆಣ್ಣೆ ಅಥವಾ ತುಪ್ಪವನ್ನು ಸೇರಿಸಿ ಕೈಯಿಂದ ನಿಧಾನವಾಗಿ ಮಿಕ್ಸ್ ಮಾಡಿ. ಹಿಟ್ಟು ಸ್ವಲ್ಪ ಪುಡಿಯಂತಾಗುವವರೆಗೆ ಬೆಣ್ಣೆ ಅಥವಾ ತುಪ್ಪವನ್ನು ಹಿಟ್ಟಿನೊಂದಿಗೆ ಚೆನ್ನಾಗಿ ಬೆರೆಸಿಕೊಳ್ಳಿ. ನಂತರ ಹಾಲನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ ಹಿಟ್ಟನ್ನು ತಯಾರಿಸಿ. ಕೊಬ್ಬರಿ ಬಿಸ್ಕೆಟ್‌ಗೆ ಆಕಾರ ನೀಡುವುದು ಓವನ್‌ನಲ್ಲಿ ಕೊಬ್ಬರಿ ಬಿಸ್ಕೆಟ್ ಬೇಯಿಸುವ ವಿಧಾನ ಓವನ್ ಇಲ್ಲದಿದ್ದರೆ ಗ್ಯಾಸ್ ಮೇಲೆ ಹೇಗೆ ಬೇಯಿಸುವುದು? ಕೊಬ್ಬರಿ ಬಿಸ್ಕೆಟ್ ಗರಿಗರಿಯಾಗಲು ಸಲಹೆಗಳು 1. ಹಿಟ್ಟಿಗೆ ಹೆಚ್ಚು ಹಾಲು ಹಾಕಬೇಡಿ ಹಾಲು ಹೆಚ್ಚಾದರೆ ಹಿಟ್ಟು ಸಡಿಲವಾಗಬಹುದು ಮತ್ತು ಬಿಸ್ಕೆಟ್‌ನ texture ಬದಲಾಗಬಹುದು. 2. ಕೊಬ್ಬರಿಯನ್ನು ಹೆಚ್ಚು ಹುರಿಯಬೇಡಿ ಕೊಬ್ಬರಿ ಸುಟ್ಟುಹೋದರೆ ಬಿಸ್ಕೆಟ್‌ಗೆ ಕಹಿ ರುಚಿ ಮತ್ತು ಹೆಚ್ಚು ಕಂದು ಬಣ್ಣ ಬರಬಹುದು. 3. ಬಿಸ್ಕೆಟ್‌ಗಳನ್ನು ಒಂದೇ ದಪ್ಪದಲ್ಲಿ ಮಾಡಿ ಕೆಲವು ದಪ್ಪವಾಗಿದ್ದು ಕೆಲವು ತೆಳುವಾಗಿದ್ದರೆ ಅವು ಒಂದೇ ಸಮಯದಲ್ಲಿ ಬೇಯುವುದಿಲ್ಲ. 4. ಬೇಕಿಂಗ್ ನಂತರ ತಣ್ಣಗಾಗಲು ಬಿಡಿ ಓವನ್‌ನಿಂದ ತೆಗೆದ ತಕ್ಷಣ ಬಿಸ್ಕೆಟ್‌ಗಳನ್ನು ಮುಟ್ಟುವುದಕ್ಕಿಂತ ಕೆಲವು ನಿಮಿಷ ತಣ್ಣಗಾಗಲು ಬಿಡಿ. 5. ಬೆಣ್ಣೆ ಅಥವಾ ತುಪ್ಪದ ಪ್ರಮಾಣವನ್ನು ಅತಿಯಾಗಿ ಹೆಚ್ಚಿಸಬೇಡಿ ಹೆಚ್ಚು ಕೊಬ್ಬು ಹಾಕಿದರೆ ಬಿಸ್ಕೆಟ್‌ನ ಆಕಾರ ಮತ್ತು texture ಬದಲಾಗಬಹುದು. ಕೊಬ್ಬರಿ ಬಿಸ್ಕೆಟ್ ಮಾಡುವಾಗ ಆಗುವ ಸಾಮಾನ್ಯ ತಪ್ಪುಗಳು ಹಿಟ್ಟು ತುಂಬಾ ಸಡಿಲವಾಗುವುದು: ಹಾಲು ಹೆಚ್ಚು ಸೇರಿಸಿದರೆ ಹಿಟ್ಟು ಸಡಿಲವಾಗಬಹುದು. ಇದನ್ನು ತಪ್ಪಿಸಲು ಹಾಲನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ. ಬಿಸ್ಕೆಟ್ ತುಂಬಾ ಗಟ್ಟಿಯಾಗುವುದು: ಹಿಟ್ಟನ್ನು ತುಂಬಾ ಗಟ್ಟಿಯಾಗಿ ಕಲಸುವುದು ಅಥವಾ ಹೆಚ್ಚು ಸಮಯ ಬೇಯಿಸುವುದರಿಂದ ಬಿಸ್ಕೆಟ್ ಗಟ್ಟಿಯಾಗಬಹುದು. ಕೊಬ್ಬರಿ ಸುಡುವುದು: ಹೆಚ್ಚಿನ ಉರಿಯಲ್ಲಿ ಕೊಬ್ಬರಿ ಹುರಿಯುವುದನ್ನು ತಪ್ಪಿಸಿ. ಕಡಿಮೆ ಉರಿಯಲ್ಲಿ ನಿಧಾನವಾಗಿ ಹುರಿಯುವುದು ಉತ್ತಮ. ಬಿಸ್ಕೆಟ್ ಸಮವಾಗಿ ಬೇಯದಿರುವುದು: ಬಿಸ್ಕೆಟ್‌ಗಳ ಗಾತ್ರ ಮತ್ತು ದಪ್ಪದಲ್ಲಿ ಹೆಚ್ಚಿನ ವ್ಯತ್ಯಾಸ ಇರದಂತೆ ನೋಡಿಕೊಳ್ಳಿ. ಕೊಬ್ಬರಿ ಬಿಸ್ಕೆಟ್ ಅನ್ನು ಹೇಗೆ ಸರ್ವ್ ಮಾಡಬಹುದು? ಕೊಬ್ಬರಿ ಬಿಸ್ಕೆಟ್ ಸಂಗ್ರಹಿಸುವ ವಿಧಾನ ಪೌಷ್ಟಿಕ ಮಾಹಿತಿ (Nutrition Info – Approx per biscuit) ಕೊಬ್ಬರಿ ಬಿಸ್ಕೆಟ್ ಮನೆಯಲ್ಲಿ ಹೆಚ್ಚು ಸಂಕೀರ್ಣವಾದ ಪದಾರ್ಥಗಳ ಅಗತ್ಯವಿಲ್ಲದೆ ತಯಾರಿಸಬಹುದಾದ ಸರಳ ತಿಂಡಿಯಾಗಿದೆ. ಹುರಿದ ಕೊಬ್ಬರಿಯ ಪರಿಮಳ, ಏಲಕ್ಕಿಯ ಸುವಾಸನೆ ಮತ್ತು ಬೆಣ್ಣೆ ಅಥವಾ ತುಪ್ಪದ ರುಚಿ ಈ ಬಿಸ್ಕೆಟ್‌ಗೆ ವಿಶೇಷತೆಯನ್ನು ನೀಡುತ್ತದೆ. ಮೊದಲ ಬಾರಿ ಮಾಡುವಾಗ ಹಿಟ್ಟಿನ ಹದ, ಬಿಸ್ಕೆಟ್‌ನ ದಪ್ಪ ಮತ್ತು baking time ಅನ್ನು ಗಮನಿಸುವುದು ಮುಖ್ಯ. ಒಮ್ಮೆ ಸರಿಯಾದ ಹದ ಸಿಕ್ಕ ನಂತರ ನಿಮ್ಮ ಮನೆಯ ರುಚಿಗೆ ಅನುಗುಣವಾಗಿ ಸಕ್ಕರೆ, ಕೊಬ್ಬರಿ ಮತ್ತು ತುಪ್ಪ ಅಥವಾ ಬೆಣ್ಣೆಯ ಪ್ರಮಾಣವನ್ನು ಹೊಂದಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ https://youtu.be/EzGKtgcpcjo?si=9rLvj_D5vRioKC-a

ಕೊಬ್ಬರಿ ಬಿಸ್ಕೆಟ್ | ಕುಕ್ಕಿಸ್ ರೆಸಿಪಿ ಸುಲಭವಾಗಿ ತಯಾರಿಸುವುದು ಹೇಗೆ? Read More »

ಬೇಳೆ ಒಬ್ಬಟ್ಟು ರೆಸಿಪಿ | ಯುಗಾದಿ ಹಬ್ಬದ ಕರ್ನಾಟಕ ಸ್ಟೈಲ್ ಒಬ್ಬಟ್ಟು ಮಾಡುವ ವಿಧಾನ

ಬೇಳೆ ಒಬ್ಬಟ್ಟು ಯುಗಾದಿ ವಿಶೇಷ ಕರ್ನಾಟಕದ ಪ್ರಸಿದ್ದ ಸಿಹಿ ತಿನಿಸು (Bele obbattu) ಹಬ್ಬಕ್ಕೆ ತಯಾರಿಸಬಹುದಾದ ಬೆಲ್ಲ – ಬೇಳೆಯ ಸಿಹಿಯಾದ ತಿನಿಸು.ಯುಗಾದಿ ಹಬ್ಬದ ಜೊತೆಗೆ ನವರಾತ್ರಿ, ಮದುವೆ ಮೊದಲಾದ ಶುಭ ಕಾರ್ಯಗಳಿಗೆ ತಯಾರಿಸಲಾಗುತ್ತದೆ. ತಯಾರಿಸುವ ವಿಧಾನ, ಸಲಹೆಗಳು ಸೇವನೆಯ ವಿವರಗಳು ಇಲ್ಲಿವೆ. ಯುಗಾದಿ ಹಬ್ಬ ವರ್ಷದ ಮೊದಲ ದಿನ. ಹೊಸ ಆರಂಭವನ್ನು ಸಿಹಿಯೊಂದಿಗೆ ಮಾಡುವುದು ಹಳೆ ಪದ್ದತಿ. ಹಾಗಾಗಿ ಸಿಹಿ ತಿನಿಸುಗಳಲ್ಲಿ ಒಬ್ಬಟ್ಟು ಪ್ರಮುಖವಾದದು. ಬೆಲ್ಲವು ಸಿಹಿಯನ್ನು ಸೂಚಿಸುತ್ತದೆ. ಕಡಲೆಬೇಳೆ ಪ್ರೊಟೀನ್ ನಿಂದ ಕೂಡಿದೆ. ಬೇಳೆ ಒಬ್ಬಟ್ಟು ಮಾಡಲು ಬೇಕಾಗುವ ಸಾಮಾಗ್ರಿಗಳು : ಮೈದಾ – 1 ಕಪ್ (Maida) ಉಪ್ಪು – ಚಿಟಿಕೆ (Salt) ಹಾಲು ಅಥವಾ ನೀರು – ಅಗತ್ಯವಿದ್ದಷ್ಟು (Milk or Water) ಎಣ್ಣೆ ಅಥವಾ ತುಪ್ಪ – 2 ಟೇಬಲ್ ಸ್ಪೂನ್ (ಮೃದುವಾಗಿಸಲು) (Oil or Ghee) ಬೇಳೆ ಒಬ್ಬಟ್ಟು ಹೂರಣಕ್ಕೆ ಬೇಕಾಗುವ ಸಾಮಗ್ರಿಗಳು : ಕಡಲೆ ಬೇಳೆ (chana dal) – 1 ಕಪ್ ಬೆಲ್ಲ – ¾ ರಿಂದ 1 ಕಪ್ ( Jaggery) ಏಲಕ್ಕಿ ಪುಡಿ – ½ ಟೀ ಸ್ಪೂನ್( Cardamom powder)/ಕೇಸರಿ – (ಬೇಕಿದ್ದರೆ ಉಪಯೋಗಿಸಬಹುದು ) (Saffron) ತಯಾರಿಸುವ ವಿಧಾನ: 1. ಮೈದಾ, ಉಪ್ಪು, ಹಾಲು/ನೀರು ಹಾಕಿ ನಯವಾದ ಹಿಟ್ಟಾಗಿ ಕಲಸಿ ನಂತರ 2. ಮೃದುವಾಗಿಸಲು ತುಪ್ಪ ಅಥವಾ ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿ . 3. ಈ ಹಿಟ್ಟನ್ನು 2 ಗಂಟೆ ಪಾತ್ರೆಯ ಒಳಗೆ ಬಿಡಿ. ಹೂರಣ ತಯಾರಿಸುವ ವಿಧಾನ : 1. ಕಡಲೆಬೇಳೆಯನ್ನು 3–4 ನಿಮಿಷ ಹುರಿಯಿರಿ, ನಂತರ ತಣ್ಣಗಾದ ಮೇಲೆ 20 ನಿಮಿಷ ನೆನೆಸಿ 2. ನಂತರ ಬಾಣಲಿಯಲ್ಲಿ ಬಿಸಿ ಮಾಡಿ, ಬೇಳೆಯನ್ನು ಚೆನ್ನಾಗಿ ಬೇಯಿಸಿ (100% ಸಾಫ್ಟ್ ಆಗಬೇಕು). 3. ಬೆಲ್ಲ ಹಾಕಿ ಕರಗಿಸಿ, ಒಣಗಿದಂತೆ ಆಗುವವರೆಗೆ ಕುದಿಸಿ. 4. ನಂತರ ಏಲಕ್ಕಿ ಪುಡಿ, ಕೇಸರಿ ಹಾಕಿ, ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ರುಬ್ಬಿ ಉಂಡೆ ಮಾಡಿಕೊಳ್ಳಬೇಕು. (smooth filling). ಒಬ್ಬಟ್ಟು ತಯಾರಿ: 1. ಹಿಟ್ಟಿನಿಂದ ಚಿಕ್ಕ ಉಂಡೆ ಮಾಡಿ , ಅದರೊಳಗೆ ಹೂರಣ ಹಾಕಿ ಮುಚ್ಚಿ. 2. ತುಪ್ಪ ಹಚ್ಚಿ ರೊಟ್ಟಿಯ ಆಕಾರಕ್ಕೆ ತಟ್ಟಿ. 3. ತವದಲ್ಲಿ golden brown ಆಗುವವರೆಗೆ ಎರಡು ಕಡೆ ಸಹಾ ಬೇಯಿಸಿ. 4. ಇದಾದ ನಂತರ ತುಪ್ಪ ಒಬ್ಬಟ್ಟು serve ಮಾಡಿ! 😋ಸೇವಿಸುವ ಸಲಹೆಗಳು : 1. ಒಬ್ಬಟ್ಟನ್ನು ಪಾಯದೊಂದಿಗೆ ಸವಿಯಬಹುದು. 2. ಒಬ್ಬಟ್ಟನು ತುಪ್ಪದೊಂದಿಗೆ ಸವಿಯುತ್ತಾರೆ. 3. ಹೂರಣವನ್ನು 2 ರಿಂದ 3 ದಿನ ಫ್ರಿಡ್ಜ್ ನಲ್ಲಿ ಇಟ್ಟು ಬಳಸಬಹುದು. ಒಬ್ಬಟ್ಟನು ಮಾಡುವಾಗ ಕೆಲವು ಸಲಹೆಗಳು : 1. ಒಬ್ಬಟ್ಟನ್ನು ಒತ್ತುವಾಗ ಬಾಳೆ ಎಲೆಯಲ್ಲಿ ಒತ್ತಿದರೆ ಹಿಟ್ಟು ಅಂಟುವುದಿಲ್ಲ. 2. ಮೈದಾ ಹಿಟ್ಟು ಬದಲು ಗೋಧಿ ಹಿಟ್ಟು ಬಳಸಬಹುದು ಇದು ಆರೋಗ್ಯಕ್ಕೆ ಒಳ್ಳೆಯದಿರುತ್ತದೆ. 3. ತುಪ್ಪದಿಂದ ಬೇಯಿಸಿದರೆ ರುಚಿ ಹೆಚ್ಚಿರುತ್ತದೆ. 4. ಹೂರಣದ ಹದ ಸರಿಯಾಗಿದ್ದಾರೆ. ಒತ್ತುವಾಗ ಹರಿದು ಹೋಗುವುದಿಲ್ಲ. ಬೇಳೆ ಒಬ್ಬಟ್ಟು ನಮ್ಮ ಸಂಸ್ಕೃತಿ, ನೆನಪುಗಳು ಮತ್ತು ಹಬ್ಬಗಳ ಭಾಗವಾಗಿದೆ. ಯುಗಾದಿಯಂತಹ ಶುಭದಿನಗಳಲ್ಲಿ ಸಿಹಿಯಾಗಿ ಈ ತಿನಿಸು ಮನೆಯನ್ನು ಮುಟ್ಟಿಸುವ ಸಂತೋಷವನ್ನು ನೀಡುತ್ತದೆ. ಮನೆಮನೆಗೆ ಒಬ್ಬಟ್ಟಿಗೆ ಬೇರೆಯಾದ ರುಚಿಯ ನೆನಪು ಇರುತ್ತದೆ. ಈ ಸರಳ ಮತ್ತು ಸವಿಯಾದ ರೆಸಿಪಿ ಬಳಸಿ ನೀವು ಕೂಡ ಒಮ್ಮೆ ಪ್ರಯತ್ನಿಸಿ. ಪಾರಂಪರಿಕ ರುಚಿಯನ್ನು ಮರೆಮಾಡದಂತೆ ಮುಂದಿನ ಪೀಳಿಗೆಗೂ ಈ ರುಚಿಯನ್ನು ಹಂಚಿ. ಹೆಚ್ಚಿನ ಮಾಹಿತಿಗಾಗಿ https://en.wikipedia.org/wiki/Puran_poli

ಬೇಳೆ ಒಬ್ಬಟ್ಟು ರೆಸಿಪಿ | ಯುಗಾದಿ ಹಬ್ಬದ ಕರ್ನಾಟಕ ಸ್ಟೈಲ್ ಒಬ್ಬಟ್ಟು ಮಾಡುವ ವಿಧಾನ Read More »

ಕಾಯಿ ಹಿಟ್ಟು | ಅಕ್ಕಿ ಸಿಹಿ ಕಡುಬು | ಮಲೆನಾಡು / ಕೊಡಗು ಶೈಲಿಯಲ್ಲಿ ಮಾಡುವ ವಿಧಾನ

ಕಾಯಿ ಹಿಟ್ಟು ಮತ್ತು ಅಕ್ಕಿ ಸಿಹಿ ಕಡುಬು ಕೊಡಗು ಭಾಗದಲ್ಲಿ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ತಯಾರಿಸುವ ವಿಶೇಷ ಸಾಂಪ್ರದಾಯಿಕ ಅಡುಗೆಗಳಲ್ಲಿ ಒಂದಾಗಿದೆ. ಹಬ್ಬದ ದಿನ ದೇವರಿಗೆ ನೈವೇದ್ಯವಾಗಿ ಅರ್ಪಿಸಿ, ನಂತರ ಕುಟುಂಬದವರು ಪ್ರಸಾದವಾಗಿ ಸವಿಯುವುದು ಇಲ್ಲಿನ ಆಹಾರ ಸಂಪ್ರದಾಯದ ಒಂದು ಭಾಗವಾಗಿದೆ. ಗೌರಿ-ಗಣೇಶ ಹಬ್ಬ ಬಂತೆಂದರೆ ಮನೆ ಸ್ವಚ್ಛಗೊಳಿಸುವುದು, ಪೂಜೆಯ ಸಿದ್ಧತೆ ಮಾಡಿಕೊಳ್ಳುವುದು ಮತ್ತು ವಿಶೇಷ ಅಡುಗೆಗಳನ್ನು ತಯಾರಿಸುವ ಸಂಭ್ರಮ ಇರುತ್ತದೆ. ಅಂತಹ ಸಂದರ್ಭದಲ್ಲಿ ಅಕ್ಕಿ ಹಿಟ್ಟು, ತೆಂಗಿನಕಾಯಿ, ಎಳ್ಳು ಮತ್ತು ಬೆಲ್ಲ ಅಥವಾ ಸಕ್ಕರೆಯಿಂದ ತಯಾರಿಸುವ ಈ ಸಿಹಿ ಕಡುಬು ಸರಳವಾಗಿಯೂ ರುಚಿಕರವಾಗಿಯೂ ಮಾಡಬಹುದು. ಈ ಕಡುಬನ್ನು ಅರಿಶಿನ ಎಲೆಯಲ್ಲಿ ಅಥವಾ ಬಾಳೆ ಎಲೆಯಲ್ಲಿ ಹಬೆಯಲ್ಲಿ ಬೇಯಿಸುವುದರಿಂದ ವಿಶೇಷವಾದ ಪರಿಮಳ ಸಿಗುತ್ತದೆ. ಕಾಯಿ ಹಿಟ್ಟು ಸಿಹಿ ಕಡುಬಿಗೆ ಬೇಕಾಗುವ ಸಾಮಗ್ರಿಗಳು : ಹಿಟ್ಟನ್ನು ತಯಾರಿಸುವ ವಿಧಾನ : ಸಾಧ್ಯವಾದರೆ ಉತ್ತಮ ಗುಣಮಟ್ಟದ ಅಕ್ಕಿಯನ್ನು ಚೆನ್ನಾಗಿ ತೊಳೆದು, ಒಣಗಿಸಿ, ನಂತರ ನುಣ್ಣಗೆ ಪುಡಿ ಮಾಡಿಸಿ ಚನ್ನಾಗಿ ಹುರಿದು ಬಳಸಬೇಕು. ಮನೆಯಲ್ಲಿ ತಯಾರಿಸಿದ ಅಕ್ಕಿ ಹಿಟ್ಟಿನಿಂದ ಹಿಟ್ಟಿನ ಹದವನ್ನು ಸರಿಯಾಗಿ ಹೊಂದಿಸಿಕೊಳ್ಳುವುದು ಮುಖ್ಯ. ಕಡುಬಿನ ಹಿಟ್ಟು ತಯಾರಿಸುವ ವಿಧಾನ ಮೊದಲು ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಚಿಟಿಕೆ ಉಪ್ಪು ಸೇರಿಸಿ. ನಂತರ ನೀರನ್ನು ಚೆನ್ನಾಗಿ ಬಿಸಿ ಮಾಡಿ, ಸ್ವಲ್ಪ ಸ್ವಲ್ಪವಾಗಿ ಅಕ್ಕಿ ಹಿಟ್ಟಿಗೆ ಸೇರಿಸುತ್ತಾ ಕಲಸಿ. ನೀರನ್ನು ಒಂದೇ ಬಾರಿ ಹೆಚ್ಚು ಹಾಕಬೇಡಿ. ಹಿಟ್ಟು ತುಂಬಾ ಗಟ್ಟಿಯಾಗಿಯೂ ಅಥವಾ ತುಂಬಾ ಸಡಿಲವಾಗಿಯೂ ಇರಬಾರದು. ಬಿಸಿ ನೀರನ್ನು ಬಳಸುವಾಗ ಎಚ್ಚರಿಕೆಯಿಂದ ಕಲಸಿ. ಹಿಟ್ಟು ಕೈಯಿಂದ ತಟ್ಟಲು ಮತ್ತು ಒಳಗೆ ಹೂರಣ ತುಂಬಿ ಮುಚ್ಚಲು ಸಾಧ್ಯವಾಗುವಷ್ಟು ಮೃದುವಾದ ಹದಕ್ಕೆ ಬರಬೇಕು. ಸಿಹಿ ಹೂರಣ ತಯಾರಿಸುವ ವಿಧಾನ ಮೊದಲು ಬಾಣಲೆಯನ್ನು ಬಿಸಿ ಮಾಡಿ ಎಳ್ಳನ್ನು ಹಾಕಿ ಹುರಿದುಕೊಳ್ಳಿ. ಎಳ್ಳು ಸ್ವಲ್ಪ ಪರಿಮಳ ಬರುವವರೆಗೆ ಹುರಿದರೆ ಸಾಕು. ಹೆಚ್ಚು ಉರಿಯಲ್ಲಿ ಹುರಿಯಬೇಡಿ. ನಂತರ ಹುರಿದ ಎಳ್ಳಿಗೆ ತಾಜಾ ತೆಂಗಿನಕಾಯಿ ತುರಿ ಸೇರಿಸಿ.ಇದಕ್ಕೆ ನಿಮ್ಮ ರುಚಿಗೆ ತಕ್ಕಂತೆ ಬೆಲ್ಲ ಅಥವಾ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೆಲ್ಲ ಬಳಸಿದರೆ ಹೂರಣಕ್ಕೆ ಉತ್ತಮವಾದ ಸಿಹಿ ರುಚಿ ಸಿಗುತ್ತದೆ. ಸಕ್ಕರೆ ಬಳಸಿದರೂ ಕಡುಬು ರುಚಿಯಾಗಿರುತ್ತದೆ. ಹೂರಣವನ್ನು ತುಂಬಾ ನೀರಾಗದಂತೆ ನೋಡಿಕೊಳ್ಳುವುದು ಮುಖ್ಯ. ಹೂರಣದಲ್ಲಿ ಹೆಚ್ಚಿನ ತೇವಾಂಶ ಇದ್ದರೆ ಕಡುಬು ಮುಚ್ಚುವಾಗ ಹಿಟ್ಟು ಹರಿದು ಹೋಗುವ ಸಾಧ್ಯತೆ ಇರುತ್ತದೆ. ಕಾಯಿ ಹಿಟ್ಟು ಸಿಹಿ ಕಡುಬು ಮಾಡುವ ವಿಧಾನ ಅಕ್ಕಿ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ. ಒಂದು ಉಂಡೆಯನ್ನು ತೆಗೆದುಕೊಂಡು ಕೈಯಿಂದ ನಿಧಾನವಾಗಿ ತಟ್ಟಿ ಸಣ್ಣದಾಗಿ ಅಗಲಿಸಿ. ಅದರ ಮಧ್ಯಭಾಗದಲ್ಲಿ ಸಿದ್ಧಪಡಿಸಿದ ಎಳ್ಳು-ತೆಂಗಿನಕಾಯಿ ಹೂರಣವನ್ನು ಹಾಕಿ. ನಂತರ ಹಿಟ್ಟಿನ ಅಂಚುಗಳನ್ನು ನಿಧಾನವಾಗಿ ಸೇರಿಸಿ ಹೂರಣ ಹೊರಗೆ ಬರದಂತೆ ಚೆನ್ನಾಗಿ ಮುಚ್ಚಿ. ಹೀಗೆ ಉಳಿದ ಹಿಟ್ಟು ಮತ್ತು ಹೂರಣದಿಂದ ಕಡುಬುಗಳನ್ನು ತಯಾರಿಸಿಕೊಳ್ಳಿ. ಕಡುಬು ತುಂಬಾ ದಪ್ಪವಾಗದಂತೆ ನೋಡಿಕೊಳ್ಳಿ. ಸರಿಯಾದ ದಪ್ಪದಲ್ಲಿ ಮಾಡಿದರೆ ಹಬೆಯಲ್ಲಿ ಒಳಭಾಗವೂ ಚೆನ್ನಾಗಿ ಬೇಯುತ್ತದೆ. ಅರಿಶಿನ ಎಲೆಯಲ್ಲಿ ಕಡುಬು ಬೇಯಿಸುವ ವಿಧಾನ ಕಾಯಿ ಹಿಟ್ಟು ಸಿಹಿ ಕಡುಬಿಗೆ ವಿಶೇಷ ಪರಿಮಳ ನೀಡಲು ಅರಿಶಿನ ಎಲೆಯಲ್ಲಿ ಹಬೆಯಲ್ಲಿ ಬೇಯಿಸಬಹುದು. ಮೊದಲು ಕಡುಬಿನ ಪಾತ್ರೆಯಲ್ಲಿ ಅಗತ್ಯವಿರುವಷ್ಟು ನೀರು ಹಾಕಿ. ನೀರು ಕಡುಬು ಇಡುವ ಸ್ಟ್ಯಾಂಡ್‌ಗಿಂತ ಕೆಳಗಿರಬೇಕು. ನಂತರ ಇಡ್ಲಿ ಸ್ಟ್ಯಾಂಡ್ ಅಥವಾ ಹಬೆಯಲ್ಲಿ ಬೇಯಿಸಲು ಸೂಕ್ತವಾದ ಸ್ಟ್ಯಾಂಡ್ ಇಡಿ. ಅದರ ಮೇಲೆ ಸ್ವಚ್ಛವಾಗಿ ತೊಳೆದ ಅರಿಶಿನ ಎಲೆಗಳನ್ನು ಹಾಸಿ. ಅರಿಶಿನ ಎಲೆ ಲಭ್ಯವಿಲ್ಲದಿದ್ದರೆ ಬಾಳೆ ಎಲೆಯನ್ನು ಬಳಸಬಹುದು. ತಯಾರಿಸಿದ ಕಡುಬುಗಳನ್ನು ಎಲೆಯ ಮೇಲೆ ಒಂದಕ್ಕೊಂದು ಅಂಟಿಕೊಳ್ಳದಂತೆ ಜಾಗ ಬಿಡಿಸಿ ಇಡಿ. ಮುಚ್ಚಳವನ್ನು ಹಾಕಿ ಸುಮಾರು 20 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಹಬೆಯಲ್ಲಿ ಬೇಯಿಸಿ. ಬೇಯಿಸಿದ ನಂತರ ಸ್ವಲ್ಪ ಸಮಯ ತಣ್ಣಗಾಗಲು ಬಿಡಿ. ನಂತರ ಎಚ್ಚರಿಕೆಯಿಂದ ತೆಗೆದು ಸವಿಯಬಹುದು. ಕಾಯಿ ಹಿಟ್ಟು ಸಿಹಿ ಕಡುಬನ್ನು ಹೇಗೆ ತಿನ್ನಬಹುದು? ಹಬೆಯಲ್ಲಿ ಬೇಯಿಸಿದ ಕಡುಬನ್ನು ಬಿಸಿ ಬಿಸಿಯಾಗಿ ತುಪ್ಪದೊಂದಿಗೆ ತಿನ್ನಬಹುದು. ತುಪ್ಪ ಇಷ್ಟವಿಲ್ಲದವರು ಹಾಗೆಯೇ ಸವಿಯಬಹುದು. ಹಬ್ಬದ ದಿನ ನೈವೇದ್ಯವಾಗಿ ಅರ್ಪಿಸಿದ ನಂತರ ಕುಟುಂಬದವರೊಂದಿಗೆ ಪ್ರಸಾದವಾಗಿ ಹಂಚಿಕೊಂಡು ತಿನ್ನುವುದು ಈ ಸಾಂಪ್ರದಾಯಿಕ ಅಡುಗೆಯ ವಿಶೇಷತೆಯಾಗಿದೆ. ಕಡುಬು ಮಾಡುವಾಗ ಗಮನಿಸಬೇಕಾದ 7 ಮುಖ್ಯ ಸಲಹೆಗಳು 1. ಅಕ್ಕಿ ಹಿಟ್ಟಿನ ಹದ ಸರಿಯಾಗಿರಲಿ ಹಿಟ್ಟು ತುಂಬಾ ಗಟ್ಟಿಯಾಗಿದ್ದರೆ ಕಡುಬಿಗೆ ಆಕಾರ ನೀಡುವುದು ಕಷ್ಟವಾಗಬಹುದು. ತುಂಬಾ ಸಡಿಲವಾದರೆ ಹೂರಣ ತುಂಬಿ ಮುಚ್ಚುವುದು ಕಷ್ಟವಾಗುತ್ತದೆ. 2. ಬಿಸಿ ನೀರನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ ಒಂದೇ ಬಾರಿ ಹೆಚ್ಚು ನೀರು ಸೇರಿಸಿದರೆ ಹಿಟ್ಟಿನ ಹದ ತಪ್ಪಬಹುದು. 3. ಹೂರಣ ಹೆಚ್ಚು ತೇವವಾಗಿರಬಾರದು ತೆಂಗಿನಕಾಯಿ ಮತ್ತು ಬೆಲ್ಲದಿಂದ ಹೂರಣದಲ್ಲಿ ನೀರು ಹೆಚ್ಚಾದರೆ ಕಡುಬು ಮುಚ್ಚುವಾಗ ಸಮಸ್ಯೆಯಾಗಬಹುದು. 4. ಕಡುಬು ತುಂಬಾ ದಪ್ಪವಾಗಬಾರದು ಸಮವಾದ ದಪ್ಪದಲ್ಲಿ ಮಾಡಿದರೆ ಹಬೆಯಲ್ಲಿ ಬೇಯಲು ಅನುಕೂಲವಾಗುತ್ತದೆ. 5. ಸ್ಟೀಮರ್‌ನಲ್ಲಿ ನೀರು ಹೆಚ್ಚು ಹಾಕಬೇಡಿ ನೀರು ಕಡುಬಿನ ಮಟ್ಟಕ್ಕೆ ಬರಬಾರದು. ಕಡುಬು ಹಬೆಯಲ್ಲಿ ಬೇಯಬೇಕು, ನೀರಿನಲ್ಲಿ ಅಲ್ಲ. 6. ಎಲೆಯನ್ನು ಸ್ವಚ್ಛವಾಗಿ ತೊಳೆಯಿರಿ ಅರಿಶಿನ ಎಲೆ ಅಥವಾ ಬಾಳೆ ಎಲೆಯನ್ನು ಬಳಸುವ ಮೊದಲು ಚೆನ್ನಾಗಿ ತೊಳೆದು ಬಳಸಿ. 7. ಬೇಯಿಸಿದ ತಕ್ಷಣ ತುಂಬಾ ಬಿಸಿ ಇರುವಾಗ ತೆಗೆದುಕೊಳ್ಳಬೇಡಿ ಕೆಲವು ನಿಮಿಷ ಬಿಟ್ಟು ಸ್ವಲ್ಪ ತಣ್ಣಗಾದ ನಂತರ ತೆಗೆದರೆ ಕಡುಬು ಒಡೆಯುವ ಸಾಧ್ಯತೆ ಕಡಿಮೆಯಾಗುತ್ತದೆ. ಕಾಯಿ ಹಿಟ್ಟು ಸಿಹಿ ಕಡುಬು ಮಾಡುವಾಗ ಆಗಬಹುದಾದ ಸಾಮಾನ್ಯ ತಪ್ಪುಗಳು : ಕಡುಬಿನ ಹಿಟ್ಟು ತುಂಬಾ ಒಣಗಿದ್ದರೆ ಅಂಚುಗಳು ಸರಿಯಾಗಿ ಸೇರಿಕೊಳ್ಳುವುದಿಲ್ಲ. ಅದೇ ರೀತಿ ಹಿಟ್ಟಿಗೆ ಹೆಚ್ಚು ನೀರು ಸೇರಿಸಿದರೆ ಕಡುಬಿಗೆ ಸರಿಯಾದ ಆಕಾರ ನೀಡಲು ಕಷ್ಟವಾಗುತ್ತದೆ. ಹೂರಣವನ್ನು ತುಂಬಾ ಹೆಚ್ಚು ಹಾಕುವುದೂ ತಪ್ಪು. ಹೂರಣಕ್ಕೆ ಸರಿಯಾದ ಪ್ರಮಾಣದಲ್ಲಿ ಜಾಗ ಬಿಟ್ಟು ಹಿಟ್ಟನ್ನು ಮುಚ್ಚಬೇಕು. ಹಬೆಯಲ್ಲಿ ಬೇಯಿಸುವಾಗ ನೀರು ಸಂಪೂರ್ಣವಾಗಿ ಖಾಲಿಯಾಗದಂತೆ ಗಮನಿಸುವುದು ಕೂಡ ಮುಖ್ಯ. ಗೌರಿ-ಗಣೇಶ ಹಬ್ಬಕ್ಕೆ ಈ ಕಡುಬಿನ ವಿಶೇಷತೆ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ತಯಾರಿಸುವ ಸಾಂಪ್ರದಾಯಿಕ ಸಿಹಿ ತಿಂಡಿಗಳಲ್ಲಿ ಈ ಕಾಯಿ ಹಿಟ್ಟು ಸಿಹಿ ಕಡುಬು ಕೂಡ ಒಂದು. ಮನೆಯಲ್ಲೇ ಲಭ್ಯವಿರುವ ಅಕ್ಕಿ, ತೆಂಗಿನಕಾಯಿ, ಎಳ್ಳು ಮತ್ತು ಬೆಲ್ಲದಂತಹ ಪದಾರ್ಥಗಳಿಂದ ತಯಾರಿಸಬಹುದಾದ ಕಾರಣ ಇದು ಸರಳವಾದ ಹಬ್ಬದ ಅಡುಗೆಯಾಗಿದೆ. ಪ್ರದೇಶ ಮತ್ತು ಕುಟುಂಬದ ಸಂಪ್ರದಾಯಕ್ಕೆ ಅನುಗುಣವಾಗಿ ಪದಾರ್ಥಗಳ ಪ್ರಮಾಣ ಮತ್ತು ತಯಾರಿಸುವ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು. ಆದ್ದರಿಂದ ನಿಮ್ಮ ಮನೆಯ ಸಂಪ್ರದಾಯಕ್ಕೆ ಅನುಗುಣವಾಗಿ ಹೂರಣದ ಸಿಹಿ ಮತ್ತು ಪ್ರಮಾಣವನ್ನು ಬದಲಾಯಿಸಬಹುದು. ಮಲೆನಾಡು ಮತ್ತು ಕೊಡಗು ಭಾಗದ ಸಾಂಪ್ರದಾಯಿಕ ಅಡುಗೆಗಳಲ್ಲಿನ ವಿಶೇಷತೆಯೇ ಸರಳವಾದ ಪದಾರ್ಥಗಳಿಂದ ರುಚಿಕರವಾದ ಆಹಾರ ತಯಾರಿಸುವುದು. ಕಾಯಿ ಹಿಟ್ಟು ಅಕ್ಕಿ ಸಿಹಿ ಕಡುಬು ಕೂಡ ಅದಕ್ಕೆ ಉತ್ತಮ ಉದಾಹರಣೆಯಾಗಿದೆ. ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಕುಟುಂಬದವರೊಂದಿಗೆ ಸೇರಿ ಈ ಕಡುಬನ್ನು ತಯಾರಿಸಿ, ದೇವರಿಗೆ ನೈವೇದ್ಯ ಅರ್ಪಿಸಿ, ನಂತರ ಪ್ರಸಾದವಾಗಿ ಸವಿಯಬಹುದು. ಅರಿಶಿನ ಎಲೆಯಲ್ಲಿ ಹಬೆಯಲ್ಲಿ ಬೇಯಿಸಿದ ಕಡುಬಿನ ಪರಿಮಳ ಹಬ್ಬದ ವಾತಾವರಣಕ್ಕೆ ಇನ್ನಷ್ಟು ವಿಶೇಷತೆಯನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ https://swayampaaka.com/recipes/desserts/kayi-hurittu/

ಕಾಯಿ ಹಿಟ್ಟು | ಅಕ್ಕಿ ಸಿಹಿ ಕಡುಬು | ಮಲೆನಾಡು / ಕೊಡಗು ಶೈಲಿಯಲ್ಲಿ ಮಾಡುವ ವಿಧಾನ Read More »