Author name: Manvi

Hello! I’m Manvi, a content creator passionate about travel, recipes, beauty, Jobs and news. Welcome to LifeLayers!

Health

ಬ್ರೌನ್ ಬ್ರೆಡ್ ನಿಜವಾಗಿಯೂ ಆರೋಗ್ಯಕರವೇ? ನಿಜವಾದ ಸತ್ಯ ಇಲ್ಲಿದೆ!

ಬ್ರೌನ್ ಬ್ರೆಡ್ ಆರೋಗ್ಯಕರವೇ ಇಂದಿನ ವೇಗದ ಜೀವನದಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗುತ್ತಿದ್ದಾರೆ. ಬೆಳಗಿನ ಉಪಾಹಾರದಿಂದಲೇ ಆರೋಗ್ಯಕರ ಆಯ್ಕೆಯನ್ನು ಮಾಡಲು ಎಲ್ಲರೂ ಪ್ರಯತ್ನಿಸುತ್ತಾರೆ. ಈ ಸಂದರ್ಭದಲ್ಲಿ ಬಹುತೇಕ ಜನರು “ಬ್ರೌನ್ ಬ್ರೆಡ್” ಅನ್ನು ವೈಟ್ ಬ್ರೆಡ್‌ಗೆ ಬದಲಾಗಿ ಬಳಸಲು ಪ್ರಾರಂಭಿಸಿದ್ದಾರೆ. ಆದರೆ ಒಂದು ಮುಖ್ಯ ಪ್ರಶ್ನೆ – ಬ್ರೌನ್ ಬ್ರೆಡ್ ನಿಜವಾಗಿಯೂ ಆರೋಗ್ಯಕರವೇ? ಅಥವಾ ಇದು ಕೇವಲ ಮಾರ್ಕೆಟಿಂಗ್ ತಂತ್ರವೇ? ಈ ಲೇಖನದಲ್ಲಿ ನಾವು ಬ್ರೌನ್ ಬ್ರೆಡ್‌ನ ನಿಜವಾದ ಸತ್ಯವನ್ನು ಇಲ್ಲಿ ತಿಳಿದುಕೊಳ್ಳೋಣ. ಬ್ರೌನ್ ಬ್ರೆಡ್ ಎಂದರೇನು? ಬ್ರೌನ್ ಬ್ರೆಡ್ ಆರೋಗ್ಯಕರವೇ ಬ್ರೌನ್ ಬ್ರೆಡ್ ಸಾಮಾನ್ಯವಾಗಿ ಗೋಧಿ ಹಿಟ್ಟಿನಿಂದ (whole wheat flour) ತಯಾರಿಸಲಾಗುತ್ತದೆ. ಇದು ವೈಟ್ ಬ್ರೆಡ್‌ನಂತೆ ಸಂಪೂರ್ಣವಾಗಿ ರಿಫೈನ್ ಮಾಡಲಾಗಿಲ್ಲ. ಆದ್ದರಿಂದ ಇದರಲ್ಲಿ ಫೈಬರ್, ವಿಟಮಿನ್ಸ್ ಮತ್ತು ಮಿನರಲ್ಸ್ ಹೆಚ್ಚು ಇರುತ್ತವೆ. ಆದರೆ ಎಲ್ಲ ಬ್ರೌನ್ ಬ್ರೆಡ್ ಒಂದೇ ತರದದ್ದಾಗಿರುವುದಿಲ್ಲ. ಕೆಲವು ಬ್ರ್ಯಾಂಡ್‌ಗಳು ಬ್ರೌನ್ ಬಣ್ಣ ಕೊಡಲು ಕ್ಯಾರಮೆಲ್ ಅಥವಾ ಕಲರ್ ಸೇರಿಸುತ್ತವೆ. ಬ್ರೌನ್ ಬ್ರೆಡ್ ಆರೋಗ್ಯಕರವೇ ಎಂದು ಹೇಳುವ ಕಾರಣಗಳು 1. ಹೆಚ್ಚು ಫೈಬರ್ : ಬ್ರೌನ್ ಬ್ರೆಡ್ ಆರೋಗ್ಯಕರವೇ ಎಂದರೆ ಬ್ರೌನ್ ಬ್ರೆಡ್ ನಲ್ಲಿ ಫೈಬರ್ ಹೆಚ್ಚು ಇರುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆ ತುಂಬಿದ ಅನುಭವ ಕೊಡುತ್ತದೆ. ಆದ್ದರಿಂದ ಬೆಳಗ್ಗೆ ಇದನ್ನು ತಿನ್ನಬಹುದು. 2. ತೂಕ ಇಳಿಕೆಗೆ ಸಹಾಯ : ಬ್ರೌನ್ ಬ್ರೆಡ್ ಆರೋಗ್ಯಕರವೇ – ಫೈಬರ್ ಹೆಚ್ಚು ಇರುವುದರಿಂದ ನಿಮಗೆ ಹೆಚ್ಚು ಹೊತ್ತು ಹಸಿವಾಗುವುದಿಲ್ಲ. ಇದರಿಂದ ಅತಿಯಾಗಿ ತಿನ್ನುವ ಪ್ರವೃತ್ತಿ ಕಡಿಮೆಯಾಗುತ್ತದೆ. ನಿಮ್ಮ ಡಯಟ್ ಪ್ಲಾನ್ ನಲ್ಲಿ ಇದನ್ನು ಸೇರಿಸಬಹುದು. 3. ರಕ್ತದ ಸಕ್ಕರೆ ನಿಯಂತ್ರಣ : ಬ್ರೌನ್ ಬ್ರೆಡ್ ಆರೋಗ್ಯಕರವೇ? – ವೈಟ್ ಬ್ರೆಡ್‌ಗಿಂತ ಬ್ರೌನ್ ಬ್ರೆಡ್ ನಿಧಾನವಾಗಿ ಜೀರ್ಣವಾಗುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ತಕ್ಷಣ ಏರಿಕೆಯಾಗುವುದಿಲ್ಲ. ಕೆಲವೊಂದು ಬ್ರೌನ್ ಬ್ರೆಡ್ ನಲ್ಲಿ ಸಕ್ಕರೆ ಪ್ರಮಾಣ ತುಂಬ ಕಡಿಮೆ ಇರುತ್ತದೆ ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಆಗುತ್ತದೆ. ಡಯಾಬಿಟಿಸ್ ಇರುವವರು ಒಮ್ಮೆಮ್ಮೆ ತಿನ್ನಬಹುದು. 4. ಹೃದಯ ಆರೋಗ್ಯ : ಹೆಚ್ಚಿನ ಫೈಬರ್ ಇರುವ ಆಹಾರ ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಬ್ರೌನ್ ಬ್ರೆಡ್ ನಲ್ಲಿ ಅಧಿಕ ಫೈಬರ್ ಇರುತ್ತದೆ ಕೊಲೆಸ್ಟ್ರಾಲ್ ಅಂಶ ಕಡಿಮೆ ಇರುವುದರಿಂದ ಹೃದಯ ಸಂಬಂಧಿ ರೋಗಗಳು ಕಡಿಮೆ ಇರುತ್ತದೆ. ಆದರೆ ಎಲ್ಲಾ ಬ್ರೌನ್ ಬ್ರೆಡ್ ಆರೋಗ್ಯಕರವಲ್ಲ! ಇದು ಬಹಳ ಮುಖ್ಯವಾದ ವಿಷಯ. ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲಾ ಬ್ರೌನ್ ಬ್ರೆಡ್ ಆರೋಗ್ಯಕರವೆಂದು ಹೇಳಲು ಸಾಧ್ಯವಿಲ್ಲ. ನಿಜವಾದ ಬ್ರೌನ್ ಬೇಡ ಹೇಗೆ ಎಂದು ಈ ಕೆಳಗಿನಂತೆ ತಿಳಿದುಕೊಳ್ಳೋಣ. 1. ಕೇವಲ ಬಣ್ಣದ ಮೋಸ : ಕೆಲವು ಕಂಪನಿಗಳು ವೈಟ್ ಬ್ರೆಡ್‌ಗೆ ಕೇವಲ ಬ್ರೌನ್ ಬಣ್ಣ ನೀಡುತ್ತವೆ. ಇದರಿಂದ ಅದು ಆರೋಗ್ಯಕರವಾಗಿ ಕಾಣುತ್ತದೆ, ಆದರೆ ನಿಜವಾಗಿಯೂ ಅಲ್ಲ. ಮೈದಾ ಹಿಟ್ಟಿಗೆ ಬಣ್ಣ ಕೊಟ್ಟು ಬ್ರೆಡ್ ಮಾಡಿರುತ್ತಾರೆ ಇದು ಆರೋಗ್ಯಕ್ಕೆ ಹಾನಿಯಾಗುತ್ತದೆ. ಇದು ನಿಜವಾಗಿಯೂ ಬ್ರೌನ್ ಬ್ರೆಡ್ ಆಗಿರುವುದಿಲ್ಲ. 2. ಮೈದಾ ಬಳಕೆ : ಕೆಲ ಬ್ರೌನ್ ಬ್ರೆಡ್‌ಗಳಲ್ಲಿ ಇನ್ನೂ ಮೈದಾ (refined flour) ಹೆಚ್ಚು ಇರುತ್ತದೆ. ಇವು ಕೂಡ ನಿಜಾವಾಡಾ ಬ್ರೌನ್ ಬ್ರಎಡ್ ಆಗಿರುವುದಿಲ್ಲ. 3. ಪ್ರಿಸರ್ವೇಟಿವ್ : ಬ್ರೆಬ್ರೆಡ್ ಹೆಚ್ಚು ದಿನ ಉಳಿಯಲು ಪ್ರಿಸರ್ವೇಟಿವ್ಸ್ ಸೇರಿಸಲಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕರವಾಗಬಹುದು. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬ್ರೌನ್ ಬ್ರೆಡ್ ಬಗ್ಗೆ ಇರುವ ತಪ್ಪು ಕಲ್ಪನೆಗಳು 1. ಎಲ್ಲಾ ಬ್ರೌನ್ ಬ್ರೆಡ್ ಆರೋಗ್ಯಕರವಲ್ಲ ಹೆಚ್ಚಿನ ಜನರು ಬ್ರೌನ್ ಬ್ರೆಡ್ ಎಂದರೆ ಅದು 100% ಗೋಧಿ ಹಿಟ್ಟಿನಿಂದ ಮಾಡಲಾಗಿದೆ ಎಂದು ಭಾವಿಸುತ್ತಾರೆ. ಆದರೆ ಹಲವಾರು ಬ್ರ್ಯಾಂಡ್‌ಗಳು ಮೈದಾ ಸೇರಿಸಿ ಬಣ್ಣ ಮಾತ್ರ ಕೊಡುತ್ತವೆ. 2. ತೂಕ ಇಳಿಕೆಗೆ ಸಹಾಯಕ ಎಂದು ಭ್ರಮೆ ಬ್ರೌನ್ ಬ್ರೆಡ್ ತಿನ್ನುವುದರಿಂದ ಮಾತ್ರ ತೂಕ ಇಳಿಯುವುದಿಲ್ಲ. ಅದು ನಿಮ್ಮ ಸಂಪೂರ್ಣ ಡಯಟ್ ಮತ್ತು ವ್ಯಾಯಾಮದ ಮೇಲೆ ಅವಲಂಬಿತವಾಗಿದೆ. ಕೆಲವರು ಬ್ರೌನ್ ಬ್ರೆಡ್ ಮಾತ್ರ ತಿಂದರೆ ತೂಕ ಕಡಿಮೆ ಆಗುತ್ತದೆ ಎಂದು ತಪ್ಪು ಕಲ್ಪನೆ ಹೊಂದಿರುತ್ತಾರೆ. ಇದರಿಂದ ನಿಜವಾಗಿಯೂ ತೂಕ ಕಡಿಮೆ ಆಗುವುದಿಲ್ಲ. 3. ಫೈಬರ್ ಹೆಚ್ಚು ಇದೆ ಎಂದು ಊಹೆ ಕೆಲವು ಬ್ರೆಡ್‌ಗಳಲ್ಲಿ ಫೈಬರ್ ಪ್ರಮಾಣ ಕಡಿಮೆ ಇರುತ್ತದೆ. ಲೇಬಲ್ ನೋಡದೇ ಖರೀದಿಸುವುದು ತಪ್ಪು. ನಿಜವಾದ ಬ್ರೌನ್ ಬ್ರೆಡ್ ಗುರುತಿಸುವುದು ಹೇಗೆ? ನೀವು ಖರೀದಿಸುವ ಮೊದಲು ಈ ವಿಷಯಗಳನ್ನು ಗಮನಿಸಿ: ಬ್ರೌನ್ ಬ್ರೆಡ್ vs ವೈಟ್ ಬ್ರೆಡ್ಅಂಶ : ಫೈಬರ್ :ಬ್ರೌನ್ ಬ್ರೆಡ್ ನಲ್ಲಿ ಫೈಬರ್ ಹೆಚ್ಚುವೈಟ್ ಬ್ರೆಡ್ ನಲ್ಲಿ ಫೈಬರ್ ಕಡಿಮೆ ಜೀರ್ಣಕ್ರಿಯೆ :ಬ್ರೌನ್ ಬ್ರೆಡ್ ನಲ್ಲಿ ಜೀರ್ಣಕ್ರಿಯೆ ನಿಧಾನವೈಟ್ ಬ್ರೆಡ್ ನಲ್ಲಿ ಜೀರ್ಣಕ್ರಿಯೆ ವೇಗ ಪೋಷಕಾಂಶ :ಬ್ರೌನ್ ಬ್ರೆಡ್ ನಲ್ಲಿ ಪೋಷಕಾಂಶ ಹೆಚ್ಚುವೈಟ್ ಬ್ರೆಡ್ ನಲ್ಲಿ ಪೋಷಕಾಂಶ ಕಡಿಮೆ ರಕ್ತ ಸಕ್ಕರೆ :ಬ್ರೌನ್ ಬ್ರೆಡ್ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿತವೈಟ್ ಬ್ರೆಡ್ ರಕ್ತದಲ್ಲಿನ ಸಕ್ಕರೆ ಮಟ್ಟ ಬೇಗ ಏರಿಕೆ ಬ್ರೌನ್ ಬ್ರೆಡ್ ಯಾರಿಗೆ ಸೂಕ್ತ? ಯಾವಾಗ ತಪ್ಪಿಸಿಕೊಳ್ಳಬೇಕು? ಬ್ರೌನ್ ಬ್ರೆಡ್ ತಿನ್ನುವ ಸರಿಯಾದ ವಿಧಾನ : ಮನೆಯಲ್ಲೇ ಆರೋಗ್ಯಕರ ಬ್ರೆಡ್ ಆಯ್ಕೆ: ನೀವು ಸಾಧ್ಯವಾದರೆ ಮನೆಯಲ್ಲೇ ಬ್ರೆಡ್ ತಯಾರಿಸಬಹುದು ಅಥವಾ ವಿಶ್ವಾಸಾರ್ಹ ಬ್ರ್ಯಾಂಡ್ ಆಯ್ಕೆ ಮಾಡಬಹುದು. ಬ್ರೌನ್ ಬ್ರೆಡ್ ನಿಜವಾಗಿಯೂ ಆರೋಗ್ಯಕರವಾಗಿರಬಹುದು, ಆದರೆ ಅದು ನೀವು ಆಯ್ಕೆ ಮಾಡುವ ಬ್ರೆಡ್ ಮೇಲೆ ಅವಲಂಬಿತವಾಗಿದೆ. ಎಲ್ಲ ಬ್ರೌನ್ ಬ್ರೆಡ್ ಆರೋಗ್ಯಕರವಲ್ಲ ಎಂಬುದನ್ನು ಮರೆಯಬೇಡಿ. ಸರಿಯಾದ ಪದಾರ್ಥಗಳಿಂದ ತಯಾರಿಸಲಾದ ಬ್ರೌನ್ ಬ್ರೆಡ್ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೇವಲ ಬಣ್ಣ ನೋಡಿ ಖರೀದಿಸುವುದರಿಂದ ತಪ್ಪು ಆಯ್ಕೆ ಮಾಡಬಹುದು. ಕೊನೆಯ ಸಲಹೆ : ಬ್ರೌನ್ ಬ್ರೆಡ್ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಈ ವೆಬ್ಸೈಟ್ ನೋಡಿ https://www.healthline.com/nutrition/is-bread-bad-for-you

ಬ್ರೌನ್ ಬ್ರೆಡ್ ನಿಜವಾಗಿಯೂ ಆರೋಗ್ಯಕರವೇ? ನಿಜವಾದ ಸತ್ಯ ಇಲ್ಲಿದೆ! Read Post »

Health

ಜ್ಯೂಸ್ ಕುಡಿಯೋದು ತಪ್ಪಾ? ಫ್ರೂಟ್ ಜ್ಯೂಸ್ vs ಹಣ್ಣು- ನಿಜ ಗೊತ್ತಾ?

ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಪಾಲಿಸುವುದು ತುಂಬಾ ಮುಖ್ಯವಾಗಿದೆ. ವಿಶೇಷವಾಗಿ ಹಣ್ಣುಗಳು ನಮ್ಮ ದೈನಂದಿನ ಆಹಾರದಲ್ಲಿ ಅತ್ಯಂತ ಪ್ರಮುಖ ಸ್ಥಾನ ಹೊಂದಿವೆ. ಹಣ್ಣುಗಳನ್ನು ತಿನ್ನುವುದು ಒಳ್ಳೆಯ ಅಭ್ಯಾಸ. ಆದರೆ ಹಲವರಿಗೆ ಒಂದು ಸಂಶಯ ಇರುತ್ತದೆ – “ಫ್ರೂಟ್ ಜ್ಯೂಸ್ vs ಸಂಪೂರ್ಣ ಹಣ್ಣು: ಕುಡಿಯೋದು ಉತ್ತಮವೇ? ಅಥವಾ ತಿನ್ನೋದು ಉತ್ತಮವೇ?” ಈ ಲೇಖನದಲ್ಲಿ ನಾವು ಫ್ರೂಟ್ ಜ್ಯೂಸ್ ಮತ್ತು ಸಂಪೂರ್ಣ ಹಣ್ಣಿನ ನಡುವಿನ ವ್ಯತ್ಯಾಸ, ಆರೋಗ್ಯದ ಮೇಲೆ ಅವುಗಳ ಪರಿಣಾಮ, ಮತ್ತು ಯಾವುದು ಉತ್ತಮ ಎಂಬುದನ್ನು ವಿವರವಾಗಿ ನೋಡೋಣ. ಸಂಪೂರ್ಣ ಹಣ್ಣು ಎಂದರೆ ಏನು? ಸಂಪೂರ್ಣ ಹಣ್ಣು ಎಂದರೆ ಯಾವುದೇ ರೀತಿಯ ಪ್ರಕ್ರಿಯೆ ಇಲ್ಲದೆ, ಚನ್ನಾಗಿ ಹಣ್ಣುಗಳನ್ನು ತೊಳೆದು ನೈಸರ್ಗಿಕವಾಗಿ ಹಣ್ಣನ್ನು ತಿನ್ನುವುದು. ಉದಾಹರಣೆಗೆ – ಸೇಬು, ಬಾಳೆಹಣ್ಣು, ಪಪ್ಪಾಯಿ, ಕಿತ್ತಳೆ, ದ್ರಾಕ್ಷಿ ಇತ್ಯಾದಿ. ಇವುಗಳನ್ನು ಚನ್ನಾಗಿ ತೊಳೆದು ಹಾಗೆಯೇ ತಿನ್ನುವುದು. ಸಂಪೂರ್ಣ ಹಣ್ಣುಗಳಲ್ಲಿ ಇವುಗಳಿವೆ: ಫ್ರೂಟ್ ಜ್ಯೂಸ್ ಎಂದರೆ ಏನು? ಫ್ರೂಟ್ ಜ್ಯೂಸ್ ಎಂದರೆ ಹಣ್ಣನ್ನು ಮಿಕ್ಸರ್ ಅಥವಾ ಜ್ಯೂಸರ್‌ನಲ್ಲಿ ನುಣ್ಣಗೆ ಮಾಡಿ ದ್ರವ ರೂಪದಲ್ಲಿ ಸೇವಿಸುವುದು. ಕೆಲವರು ಮನೆಯಲ್ಲಿ ಮಾಡಿ ಜ್ಯೂಸ್ ಕುಡಿಯುತ್ತಾರೆ, ಕೆಲವರು ಹೊರಗಡೆ ಫ್ರೆಶ್ ಜ್ಯೂಸ್ ಅಂಗಡಿಗಳಲ್ಲಿ ಕುಡಿಯುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕೆಟ್ ಜ್ಯೂಸ್‌ಗಳಲ್ಲಿ ಹೆಚ್ಚುವರಿ ಸಕ್ಕರೆ, ಪ್ರಿಸರ್ವೇಟಿವ್ಸ್ ಕೂಡ ಇರಬಹುದು. ಇದನ್ನು ಕುಡಿಯುವುದು ಕಡಿಮೆ ಮಾಡಬೇಕು. ಫ್ರೂಟ್ ಜ್ಯೂಸ್ vs ಸಂಪೂರ್ಣ ಹಣ್ಣು ಇವುಗಳ ಮುಖ್ಯ ವ್ಯತ್ಯಾಸಗಳು : 1.ಫೈಬರ್ (Fiber) : ಸಂಪೂರ್ಣ ಹಣ್ಣು: ಫ್ರೂಟ್ ಜ್ಯೂಸ್: ಉತ್ತಮ : ಫೈಬರ್‌ಗಾಗಿ ಸಂಪೂರ್ಣ ಹಣ್ಣು ಉತ್ತಮ 2. ಸಕ್ಕರೆ (Sugar Content): ಸಂಪೂರ್ಣ ಹಣ್ಣು : ಫ್ರೂಟ್ ಜ್ಯೂಸ್ vs ಸಂಪೂರ್ಣ ಹಣ್ಣು ಇದರಲ್ಲಿ ಸಂಪೂರ್ಣ ಹಣ್ಣು ತಿನ್ನುವುದರಿಂದ ನೈಸರ್ಗಿಕ ಸಕ್ಕರೆ ನಿಧಾನವಾಗಿ ರಕ್ತದಲ್ಲಿ ಸೇರಿಸುತ್ತದೆ ಜ್ಯೂಸ್ : ಫ್ರೂಟ್ ಜ್ಯೂಸ್ vs ಸಂಪೂರ್ಣ ಹಣ್ಣುಇವುಗಳಲ್ಲಿ ಸಕ್ಕರೆ ವೇಗವಾಗಿ ರಕ್ತದಲ್ಲಿ ಸೇರಿ ಸಡನ್ ಶುಗರ್ ಸ್ಪೈಕ್ ಉಂಟುಮಾಡುತ್ತದೆ ಉತ್ತಮ : ಫ್ರೂಟ್ ಜ್ಯೂಸ್ ಡಯಾಬಿಟಿಸ್ ಇರುವವರಿಗೆ ಜ್ಯೂಸ್ ಅಪಾಯಕಾರಿ ಆಗಬಹುದು ನಿರ್ಣಯ: ಶುಗರ್ ನಿಯಂತ್ರಣಕ್ಕೆ ಹಣ್ಣು ಉತ್ತಮ 3. ಕ್ಯಾಲೊರೀಸ್ (Calories) : ಸಂಪೂರ್ಣ ಹಣ್ಣು: ಜ್ಯೂಸ್: ನಿರ್ಣಯ: ತೂಕ ಕಡಿಮೆ ಮಾಡಲು ಹಣ್ಣು ಉತ್ತಮ 4. ಜೀರ್ಣಕ್ರಿಯೆ (Digestion) : ಸಂಪೂರ್ಣ ಹಣ್ಣು: ಜ್ಯೂಸ್: 5. ಪೋಷಕಾಂಶಗಳು (Nutrients) : ಸಂಪೂರ್ಣ ಹಣ್ಣು: ಜ್ಯೂಸ್: ಪ್ಯಾಕೆಟ್ ಜ್ಯೂಸ್ – ಸತ್ಯವೇನು? ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕೆಟ್ ಜ್ಯೂಸ್‌ಗಳನ್ನು ಬಹಳ ಜನ ಆರೋಗ್ಯಕರವೆಂದು ಭಾವಿಸುತ್ತಾರೆ. ಆದರೆ: ಆದ್ದರಿಂದ ಪ್ಯಾಕೆಟ್ ಜ್ಯೂಸು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಯಾವಾಗ ಜ್ಯೂಸ್ ಕುಡಿಯಬಹುದು? ಕೆಲವೊಂದು ಸಂದರ್ಭಗಳಲ್ಲಿ ಜ್ಯೂಸ್ ಉಪಯುಕ್ತವಾಗಬಹುದು: ಆದರೆ ಯಾವಾಗಲೂ ಜ್ಯೂಸ್ ಮೇಲೆ ಅವಲಂಬಿಸಬಾರದು. ಅಗತ್ಯ ಇದ್ದಾಗ ಜ್ಯೂಸು ಕುಡಿಯಬಹುದು ಆರೋಗ್ಯ ತಜ್ಞರ ಸಲಹೆ : ಆರೋಗ್ಯ ತಜ್ಞರು ಹೇಳುವಂತೆ : ತೂಕ ಇಳಿಸಲು ಯಾವುದು ಉತ್ತಮ? ತೂಕ ಇಳಿಸಲು ಬಯಸುವವರಿಗೆ: ಜ್ಯೂಸ್ ತೂಕ ಹೆಚ್ಚಿಸುವ ಸಾಧ್ಯತೆ ಇದೆ ಮಕ್ಕಳಿಗೆ ಯಾವುದು ಉತ್ತಮ? ಮಕ್ಕಳಿಗೆ: ಸಂಪೂರ್ಣ ಹಣ್ಣು: ಮುಖ್ಯ ಸಲಹೆಗಳು ಅಂತಿಮ ನಿರ್ಣಯ : “ಫ್ರೂಟ್ ಜ್ಯೂಸ್ vs ಸಂಪೂರ್ಣ ಹಣ್ಣು” ಎಂಬ ಪ್ರಶ್ನೆಗೆ ಸರಳ ಉತ್ತರ: ಸಂಪೂರ್ಣ ಹಣ್ಣು = ಹೆಚ್ಚು ಆರೋಗ್ಯಕರ ಜ್ಯೂಸ್ = ಕಡಿಮೆ ಲಾಭ, ಹೆಚ್ಚು ಸಕ್ಕರೆ ಫ್ರೂಟ್ ಜ್ಯೂಸ್ vs ಸಂಪೂರ್ಣ ಹಣ್ಣು ಇದರಲ್ಲಿ ನಮ್ಮ ದೇಹಕ್ಕೆ ಬೇಕಾದ ನೈಸರ್ಗಿಕ ಪೋಷಕಾಂಶಗಳನ್ನು ಪಡೆಯಲು ಹಣ್ಣುಗಳು ಅತ್ಯುತ್ತಮ ಆಯ್ಕೆ. ಜ್ಯೂಸ್ ಕೆಲವೊಮ್ಮೆ ಉಪಯುಕ್ತವಾದರೂ, ಅದು ಸಂಪೂರ್ಣ ಹಣ್ಣಿಗೆ ಪರ್ಯಾಯವಾಗಲು ಸಾಧ್ಯವಿಲ್ಲ. ಆದ್ದರಿಂದ ದಿನನಿತ್ಯದ ಆಹಾರದಲ್ಲಿ ಸಂಪೂರ್ಣ ಹಣ್ಣುಗಳನ್ನು ಸೇರಿಸುವುದು ಆರೋಗ್ಯಕರ ಜೀವನದ ಮುಖ್ಯ ಭಾಗವಾಗಿದೆ. ಸಂಪೂರ್ಣ ಹಣ್ಣು ಸೇರಿಸುವುದರಿಂದ ಆರೋಗ್ಯವು ಚನ್ನಾಗಿರುತ್ತದೆ. ಹಣ್ಣುಗಳನ್ನು ಅಗಿದು ತಿನ್ನುವುದರಿಂದ ನಿಮ್ಮ ಚಯಾಪಚಯ ಕ್ರಿಯೆ ಚನ್ನಾಗಿರುತ್ತದೆ. ಮೊದಲ ಆದ್ಯತೆ ಸಂಪೂರ್ಣ ಹಣ್ಣಿಗೆ ಕೊಡಿ ಕೆಲವೊಂದು ಸಂದರ್ಭದಲ್ಲಿ ಮಾತ್ರ ಅಗತ್ಯ ಇದ್ದಾರೆ ಜ್ಯೂಸು ಕುಡಿಯಿರಿ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಆರೋಗ್ಯಕರ ಆಹಾರದಲ್ಲಿ ಹಣ್ಣುಗಳ ಸೇವನೆ ಬಹಳ ಮುಖ್ಯವಾಗಿದೆ. https://www.who.int/news-room/fact-sheets/detail/healthy-diet

ಜ್ಯೂಸ್ ಕುಡಿಯೋದು ತಪ್ಪಾ? ಫ್ರೂಟ್ ಜ್ಯೂಸ್ vs ಹಣ್ಣು- ನಿಜ ಗೊತ್ತಾ? Read Post »

Health

ಬೇಸಿಗೆಯಲ್ಲಿ ದೇಹ ತಂಪಾಗಿಡುವ 10 ಆರೋಗ್ಯಕರ ಆಹಾರಗಳು

ಬೇಸಿಗೆಯಲ್ಲಿ ತಂಪು ಆಹಾರಗಳು ಬೇಸಿಗೆ ಕಾಲದಲ್ಲಿ ಉಷ್ಣತೆ ಹೆಚ್ಚಾಗುವುದರಿಂದ ದೇಹದಲ್ಲಿ ದಾಹ, ದೌರ್ಬಲ್ಯ ಮತ್ತು ಅಸಹನೆ ಉಂಟಾಗಬಹುದು. ಈ ಸಮಯದಲ್ಲಿ ಸರಿಯಾದ ಆಹಾರ ಸೇವನೆ ಬಹಳ ಮುಖ್ಯ. ದೇಹವನ್ನು ತಂಪಾಗಿಡುವ ಮತ್ತು ಪೋಷಕಾಂಶಗಳಿಂದ ಸಮೃದ್ಧವಾದ ಆಹಾರಗಳನ್ನು ತಿನ್ನುವುದರಿಂದ ದೇಹದಲ್ಲಿ ಶಕ್ತಿ ಉಳಿಯುತ್ತದೆ ಹಾಗೂ ಆರೋಗ್ಯ ಉತ್ತಮವಾಗಿರುತ್ತದೆ. ನಮ್ಮ ದಿನನಿತ್ಯದ ಆಹಾರದಲ್ಲಿ ಕೆಲವು ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡಬಹುದು. ಬೇಸಿಗೆಯಲ್ಲಿ ದೇಹ ತಂಪಾಗಿಡಲು 10 ಆರೋಗ್ಯಕರ ಆಹಾರಗಳು ಯಾವುವು? ಈ ಲೇಖನದಲ್ಲಿ ನಾವು ಬೇಸಿಗೆಯಲ್ಲಿ ತಂಪು ಆಹಾರಗಳು ಎಂಬ ವಿಷಯವನ್ನು ಚರ್ಚಿಸುತ್ತೇವೆ. ಈ ಲೇಖನವು ಆರೋಗ್ಯ ಹಾಗೂ ತಂಪಾಗಿಡುವ ಆಹಾರಗಳನ್ನು ಒಳಗೊಂಡಿದ್ದು, ಬೇಸಿಗೆಯಲ್ಲಿ ತಂಪು ಆಹಾರಗಳು ಎಂಬುದರ ಬಗ್ಗೆ ನಿಮ್ಮನ್ನು ತಿಳಿವಳಿಕೆ ನೀಡಲಿದೆ. ಅಲ್ಲದೆ, ಬೇಸಿಗೆಯಲ್ಲಿ ತಂಪು ಆಹಾರಗಳು ನಮ್ಮ ದೇಹಕ್ಕೆ ತಾಜಾತನ ನೀಡುವುದಲ್ಲದೆ, ಆರೋಗ್ಯವನ್ನು ಉಳಿಸಲು ಸಹ ಸಹಾಯ ಮಾಡುತ್ತವೆ. 1. ಕಲ್ಲಂಗಡಿ ಹಣ್ಣು : ಬೇಸಿಗೆಯಲ್ಲಿ ತಂಪು ಆಹಾರಗಳು ಒಂದಾದ ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ತಿನ್ನಲು ಅತ್ಯುತ್ತಮವಾದ ಹಣ್ಣುಗಳಲ್ಲಿ ಒಂದು. ಇದರಲ್ಲಿ ನೀರಿನ ಅಂಶ ತುಂಬಾ ಹೆಚ್ಚು ಇರುವುದರಿಂದ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಬೇಸಿಗೆಯ ದಿನಗಳಲ್ಲಿ ಕಲ್ಲಂಗಡಿ ಹಣ್ಣು ತಿನ್ನುವುದರಿಂದ ದೇಹದಲ್ಲಿ ತಾಜಾತನ ಉಂಟಾಗುತ್ತದೆ. ಪ್ರಯೋಜನಗಳು: 2. ಸೌತೆಕಾಯಿ : ಬೇಸಿಗೆಯಲ್ಲಿ ತಂಪು ಆಹಾರಗಳು ಇದರಲ್ಲಿ ಮುಖ್ಯವಾದದ್ದು ಸೌತೆಕಾಯಿ ಬೇಸಿಗೆಯಲ್ಲಿ ಹೆಚ್ಚು ಬಳಸುವ ತಂಪು ತರಕಾರಿಯಾಗಿದೆ. ಇದರಲ್ಲಿ ಸುಮಾರು 90% ನೀರಿನ ಅಂಶ ಇರುವುದರಿಂದ ದೇಹಕ್ಕೆ ತಂಪು ನೀಡುತ್ತದೆ. ಸೌತೆಕಾಯಿಯನ್ನು ಸಲಾಡ್ ರೂಪದಲ್ಲಿ ಅಥವಾ ನೇರವಾಗಿ ತಿನ್ನಬಹುದು. ಪ್ರಯೋಜನಗಳು: 3. ಪಪ್ಪಾಯಿ ಹಣ್ಣು : ಪಪ್ಪಾಯಿ ಹಣ್ಣು ಜೀರ್ಣಕ್ರಿಯೆಗೆ ಬಹಳ ಉತ್ತಮವಾದ ಹಣ್ಣು. ಇದರಲ್ಲಿ ಇರುವ ಪೋಷಕಾಂಶಗಳು ದೇಹಕ್ಕೆ ಶಕ್ತಿ ನೀಡುತ್ತವೆ. ಬೇಸಿಗೆಯಲ್ಲಿ ಪಪ್ಪಾಯಿ ತಿನ್ನುವುದರಿಂದ ಹೊಟ್ಟೆಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಪಪ್ಪಾಯಿ ಹಣ್ಣನು ಆದಷ್ಟು ಬೆಳಗ್ಗೆ ತಿನ್ನಬೇಕು ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸಿಗುತ್ತವೆ. ಪ್ರಯೋಜನಗಳು: 4. ಸೇಬು ಹಣ್ಣು : ಸೇಬು ಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣು. ಇದು ದೇಹಕ್ಕೆ ಶಕ್ತಿ ನೀಡುತ್ತದೆ ಮತ್ತು ಆರೋಗ್ಯವನ್ನು ಕಾಪಾಡುತ್ತದೆ. ಬೇಸಿಗೆಯಲ್ಲಿ ಸೇಬು ಹಣ್ಣು ತಿನ್ನುವುದರಿಂದ ದೇಹದಲ್ಲಿ ತಾಜಾತನ ಉಳಿಯುತ್ತದೆ. ಪ್ರಯೋಜನಗಳು: 5. ಕ್ಯಾರೆಟ್ : ಕ್ಯಾರೆಟ್ ಒಂದು ಆರೋಗ್ಯಕರ ತರಕಾರಿ. ಇದರಲ್ಲಿ ವಿಟಮಿನ್ A ಮತ್ತು ಇತರ ಪೋಷಕಾಂಶಗಳು ಹೆಚ್ಚಾಗಿ ದೊರೆಯುತ್ತವೆ. ಬೇಸಿಗೆಯಲ್ಲಿ ಕ್ಯಾರೆಟ್ ತಿನ್ನುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ಪ್ರಯೋಜನಗಳು: 6. ಪಾಲಕ್ ಸೊಪ್ಪು : ಪಾಲಕ್ ಸೊಪ್ಪು ಹಸಿರು ತರಕಾರಿಗಳಲ್ಲಿ ಅತ್ಯಂತ ಆರೋಗ್ಯಕರವಾಗಿದೆ. ಇದರಲ್ಲಿ ಹಲವಾರು ವಿಟಮಿನ್ ಮತ್ತು ಖನಿಜಗಳು ದೊರೆಯುತ್ತವೆ. ಬೇಸಿಗೆಯಲ್ಲಿ ಪಾಲಕ್ ಸೊಪ್ಪನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ಪ್ರಯೋಜನಗಳು: 7. ದ್ರಾಕ್ಷಿ ಹಣ್ಣು : ದ್ರಾಕ್ಷಿ ಹಣ್ಣು ಬೇಸಿಗೆಯಲ್ಲಿ ತಿನ್ನಲು ತುಂಬಾ ಉತ್ತಮವಾದ ಹಣ್ಣು. ಇದು ದೇಹಕ್ಕೆ ತಂಪು ನೀಡುತ್ತದೆ ಮತ್ತು ತಕ್ಷಣ ಶಕ್ತಿ ನೀಡುತ್ತದೆ. ಪ್ರಯೋಜನಗಳು: 8. ಟೊಮೇಟೊ : ನಾವು ದೈನಂದಿನ ಉಪಯೋಗಿಸುವ ಒಂದು ಬಗೆಯ ತರಕಾರಿ ಆದ ಟೊಮೇಟೊ. ಇದರಲ್ಲಿ ವಿಟಮಿನ್ C ಮತ್ತು ಆಂಟಿ ಆಕ್ಸಿಡೆಂಟ್‌ಗಳು ಹೆಚ್ಚಾಗಿ ದೊರೆಯುತ್ತವೆ. ಬೇಸಿಗೆಯಲ್ಲಿ ಟೊಮೇಟೊ ತಿನ್ನುವುದರಿಂದ ದೇಹಕ್ಕೆ ತಂಪು ಸಿಗುತ್ತದೆ. ಸುಲಭವಾಗಿ ಸಿಗುವುದರಿಂದ ಇದನ್ನು ದಿನನಿತ್ಯ ಉಪಯೋಗಿಸಬಹುದು. ಪ್ರಯೋಜನಗಳು: 9. ಬಾಳೆಹಣ್ಣು : ಬಾಳೆಹಣ್ಣು ಶಕ್ತಿಯ ಉತ್ತಮ ಮೂಲವಾಗಿದೆ. ಇದು ದೇಹಕ್ಕೆ ತಕ್ಷಣ ಶಕ್ತಿ ನೀಡುತ್ತದೆ ಮತ್ತು ದೇಹದ ಆರೋಗ್ಯವನ್ನು ಕಾಪಾಡುತ್ತದೆ. ಬಾಳೆಹಣ್ಣು ತಿಂದ ತಕ್ಷಣ ದೇಹಕ್ಕೆ ತಂಪಾದಂತೆ ಆಗುತ್ತದೆ. ಪ್ರಯೋಜನಗಳು: 10. ಮೊಳಕೆ ಕಾಳುಗಳು : ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಮೊಳಕೆ ಕಾಳುಗಳು ಪೋಷಕಾಂಶಗಳಿಂದ ತುಂಬಿರುವ ಆಹಾರವಾಗಿದೆ. ಇದು ದೇಹಕ್ಕೆ ಪ್ರೋಟೀನ್ ಮತ್ತು ವಿಟಮಿನ್‌ಗಳನ್ನು ನೀಡುತ್ತದೆ. ಬೇಸಿಗೆಯಲ್ಲಿ ಮೊಳಕೆ ಕಾಳುಗಳನ್ನು ತಿನ್ನುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ಪ್ರಯೋಜನಗಳು: ಸೂರ್ಯನ ಧಗೆಯಿಂದ ಬೇಸಿಗೆಯಲ್ಲಿ ದೇಹವನ್ನು ಆರೋಗ್ಯಕರವಾಗಿಡಲು ಸರಿಯಾದ ಆಹಾರ ಸೇವನೆ ಬಹಳ ಮುಖ್ಯ. ಮೇಲಿನ ಆಹಾರಗಳು ದೇಹಕ್ಕೆ ತಂಪು ನೀಡುವುದರ ಜೊತೆಗೆ ಪೋಷಕಾಂಶಗಳನ್ನು ಕೂಡ ನೀಡುತ್ತವೆ. ಈ ಆಹಾರಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಮತ್ತು ಆರೋಗ್ಯ ಉತ್ತಮವಾಗಿರುತ್ತದೆ. ಸಮತೋಲನ ಆಹಾರ, ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವ ಮೂಲಕ ಬೇಸಿಗೆಯಲ್ಲಿಯೂ ಆರೋಗ್ಯವನ್ನು ಕಾಪಾಡಬಹುದು. ಈ ಮೇಲಿನ ಆಹಾರಗಳನ್ನು ಸೇವಿಸುವುದರಿಂದ ದೇಹದ ಒಳಗೆ ಹಾಗೂ ಹೊರಗಿನ ದೇಹಕ್ಕೆ ತುಂಬ ಉಪಯುಕ್ತವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ : https://www.hsph.harvard.edu/nutritionsource/healthy-drinks/

ಬೇಸಿಗೆಯಲ್ಲಿ ದೇಹ ತಂಪಾಗಿಡುವ 10 ಆರೋಗ್ಯಕರ ಆಹಾರಗಳು Read Post »

Health

ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ 5 ಲಿಪ್ ಬಾಮ್ ಸಂಪೂರ್ಣ ಮಾಹಿತಿ

ತುಟಿಗಳು ನಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುವ ಪ್ರಮುಖ ಭಾಗ. ಆದರೆ ಹವಾಮಾನ ಬದಲಾವಣೆ, ಸೂರ್ಯನ ಕಿರಣಗಳು ಮತ್ತು ನೀರಿನ ಕೊರತೆಯಿಂದ ತುಟಿಗಳು ಒಣಗಿ ಬಿರುಕು ಬಿಟ್ಟಂತೆ ಕಾಣಬಹುದು. ಮಾರುಕಟ್ಟೆಯಲ್ಲಿ ಸಿಗುವ ಅನೇಕ ಲಿಪ್ ಬಾಮ್‌ಗಳಲ್ಲಿ ರಾಸಾಯನಿಕ ಪದಾರ್ಥಗಳು ಇರುವುದರಿಂದ ಕೆಲವು ಬಾರಿ ಚರ್ಮಕ್ಕೆ ಹಾನಿ ಆಗಬಹುದು. ಆದ್ದರಿಂದ ನೈಸರ್ಗಿಕ ಪದಾರ್ಥಗಳಿಂದ ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ 5 ಲಿಪ್ ಬಾಮ್ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ. ಇವುಗಳಲ್ಲಿ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಒದಗಿಸಲು ಬೇಕಾದ ಎಲ್ಲಾ ಮಾಹಿತಿಯೊಂದಿಗೆ, ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ 5 ಲಿಪ್ ಬಾಮ್‌ಗಳನ್ನು ಬಳಸಲು ಪ್ರಾರಂಭಿಸುತ್ತಾರೆ. ಲಿಪ್ ಬಾಮ್ ಯಾಕೆ ಅಗತ್ಯ? ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ 5 ಲಿಪ್ ಬಾಮ್ ತುಟಿಗಳ ಚರ್ಮ ಬಹಳ ಸಣ್ಣ ಮತ್ತು ಸಂವೇದನಾಶೀಲ. ಹವಾಮಾನ ಬದಲಾವಣೆ, ನೀರಿನ ಕೊರತೆ, ಸೂರ್ಯಕಿರಣ, ಧೂಳು, ಲಿಪ್‌ಸ್ಟಿಕ್ ಬಳಕೆ ಇವುಗಳಿಂದ ತುಟಿಗಳು ಒಣಗಿ ಬಿರುಕು ಬಿಟ್ಟಂತೆ ಕಾಣಬಹುದು. ಈ ಸಂದರ್ಭಗಳಲ್ಲಿ ಲಿಪ್ ಬಾಮ್: ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ 5 ಲಿಪ್ ಬಾಮ್: 1. ತೆಂಗಿನೆಣ್ಣೆ ಮತ್ತು ಜೇನು ಲಿಪ್ ಬಾಮ್ ಅಗತ್ಯ ಪದಾರ್ಥಗಳು: ತಯಾರಿಸುವ ವಿಧಾನ: ಪ್ರಯೋಜನ: ತುಟಿಗಳಿಗೆ ಆಳವಾದ ತೇವ ನೀಡುತ್ತದೆ ಮತ್ತು ಒಣಗುವುದನ್ನು ತಡೆಯುತ್ತದೆ. ಮನೆಯಲ್ಲಿಯೇ ನೈಸರ್ಗಿಕವಾಗಿ ತಯಾರಿಸುವುದರಿಂದ ಕೆಮಿಕಲ್ ಇರುವುದಿಲ್ಲ. 2. ಬಾದಾಮಿ ಎಣ್ಣೆ ಲಿಪ್ ಬಾಮ್ : ಪದಾರ್ಥಗಳು: ವಿಧಾನ: ಪ್ರಯೋಜನ: ತುಟಿಗಳ ಕಪ್ಪು ಬಣ್ಣ ಕಡಿಮೆ ಮಾಡಲು ಸಹಾಯಕ. 3. ಬೀಟ್‌ರೂಟ್ ಲಿಪ್ ಬಾಮ್ (ಪಿಂಕ್ ಶೇಡ್) ಪದಾರ್ಥಗಳು: ವಿಧಾನ: ಪ್ರಯೋಜನ: ತುಟಿಗಳಿಗೆ ನೈಸರ್ಗಿಕ ಪಿಂಕ್ ಬಣ್ಣ ನೀಡುತ್ತದೆ. 4.ರೋಜ್ ಲಿಪ್ ಬಾಮ್ : ಪದಾರ್ಥಗಳು: ವಿಧಾನ: ಪ್ರಯೋಜನ: ಒಣ ತುಟಿಗಳಿಗೆ ತಕ್ಷಣದ ಆರೈಕೆ ಮತ್ತು ನೈಸರ್ಗಿಕ ಗುಲಾಬಿ ಬಣ್ಣದಂತೆ ತುಟಿಗಳು ಕಂಗೊಳಿಸುತ್ತವೆ. 5. ಅಲೋವೆರಾ ಲಿಪ್ ಬಾಮ್ ಪದಾರ್ಥಗಳು: ವಿಧಾನ: ಪ್ರಯೋಜನ: ಬಿರುಕು ಬಿಟ್ಟ ತುಟಿಗಳಿಗೆ ಚಿಕಿತ್ಸೆ ನೀಡುತ್ತದೆ. ಮನೆಯ ಲಿಪ್ ಬಾಮ್‌ನ ಪ್ರಯೋಜನಗಳು ಲಿಪ್ ಬಾಮ್ ಬಳಸುವ ವಿಧಾನ ಸಂಗ್ರಹಿಸುವ ವಿಧಾನ ಕೆಲವು ಸಲಹೆಗಳು ಇವುಗಳಲ್ಲಿ, ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ 5 ಲಿಪ್ ಬಾಮ್‌ಗಳನ್ನು ಬಳಸುವುದು ನಿಮಗೆ ಉತ್ತಮ ಆರೈಕೆಯನ್ನು ನೀಡುತ್ತದೆ. ಮನೆಯಲ್ಲೇ ತಯಾರಿಸಿದ ಲಿಪ್ ಬಾಮ್ ನಿಮ್ಮ ತುಟಿಗಳಿಗೆ ನೈಸರ್ಗಿಕ ಆರೈಕೆ ನೀಡುತ್ತದೆ. ಯಾವುದೇ ಕೃತಕ ರಾಸಾಯನಿಕಗಳಿಲ್ಲದೆ, ಸುರಕ್ಷಿತವಾಗಿ ತುಟಿಗಳನ್ನು ಮೃದುವಾಗಿಡಬಹುದು. ವಿಶೇಷವಾಗಿ ಚಳಿಗಾಲದಲ್ಲಿ ಅಥವಾ ಒಣ ಹವಾಮಾನದಲ್ಲಿ ಈ ಲಿಪ್ ಬಾಮ್‌ಗಳು ಹೆಚ್ಚು ಸಹಾಯಕವಾಗುತ್ತವೆ. ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ 5 ಲಿಪ್ ಬಾಮ್ ನೀವು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಬೇರೆ ಬೇರೆ ಪದಾರ್ಥಗಳನ್ನು ಸೇರಿಸಿ ಹೊಸ ರೀತಿಯ ಲಿಪ್ ಬಾಮ್ ಕೂಡ ತಯಾರಿಸಬಹುದು. ಇಂದು ಮನೆಯಲ್ಲೇ ಪ್ರಯತ್ನಿಸಿ, ಆರೋಗ್ಯಕರ ಮತ್ತು ಹೊಳೆಯುವ ತುಟಿಗಳನ್ನು ಹೊಂದಿರಿ ಹೆಚ್ಚಿನ ಮಾಹಿತಿಗಾಗಿ https://en.wikipedia.org/wiki/Aloe_vera https://en.wikipedia.org/wiki/Almond_oil

ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ 5 ಲಿಪ್ ಬಾಮ್ ಸಂಪೂರ್ಣ ಮಾಹಿತಿ Read Post »

Health

ಬೇಸಿಗೆಯಲ್ಲಿ ಕುಡಿಯಲು 8 ಅತ್ಯುತ್ತಮ ಪಾನೀಯಗಳು

ಬೇಸಿಗೆಯಲ್ಲಿ ಕುಡಿಯಲು 8 ಅತ್ತ್ಯುತ್ತಮ ಪಾನೀಯಗಳು ಹೆಚ್ಚು ಬೆವರು ಬರುವುದರಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ದೌರ್ಬಲ್ಯ, ತಲೆ ಸುತ್ತುವುದು, ದೇಹದಲ್ಲಿ ಉಷ್ಣತೆ ಹೆಚ್ಚಾಗುವುದು, ಚರ್ಮ ಒಣಗುವುದು ಮುಂತಾದ ಸಮಸ್ಯೆಗಳು ಕಾಣಿಸಬಹುದು. ಈ ಸಮಸ್ಯೆಗಳನ್ನು ತಪ್ಪಿಸಲು ತಂಪು ಪಾನೀಯಗಳನ್ನು ಸೇವಿಸುವುದು ಮುಖ್ಯ. ಆದರೆ ಆರೋಗ್ಯಕರ ಮತ್ತು ನೈಸರ್ಗಿಕ ಪಾನೀಯಗಳನ್ನು ಆಯ್ಕೆ ಮಾಡುವುದು ಉತ್ತಮ. ಕೆಳಗಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಬೇಸಿಗೆಯಲ್ಲಿ ಕುಡಿಯಲು 8 ಅತ್ಯುತ್ತಮ ಪಾನೀಯಗಳು ಸೇವಿಸುವುದರಿಂದ ನಿಮ್ಮ ದೇಹವನ್ನು ತಂಪಾಗಿಡಬಹುದು. ಈ ಕಾರಣದಿಂದಲೇ, ಬೇಸಿಗೆಯಲ್ಲಿ ಕುಡಿಯಲು 8 ಅತ್ಯುತ್ತಮ ಪಾನೀಯಗಳು ಆಯ್ಕೆ ಮಾಡುವುದು ಮುಖ್ಯವಾಗಿದೆ. ಬೇಸಿಗೆಯಲ್ಲಿ ಕುಡಿಯಲು 8 ಅತ್ಯುತ್ತಮ ಪಾನೀಯಗಳು – ತಿಳಿದುಕೊಳ್ಳೋಣ : 1. ತೆಂಗಿನಕಾಯಿ ನೀರು (Tender Coconut Water) : ತೆಂಗಿನಕಾಯಿ ನೀರು ಬೇಸಿಗೆಯ ಅತ್ಯುತ್ತಮ ನೈಸರ್ಗಿಕ ಪಾನೀಯಗಳಲ್ಲಿ ಒಂದಾಗಿದೆ. ಇದು ದೇಹಕ್ಕೆ ತಕ್ಷಣ ಶಕ್ತಿ ನೀಡುತ್ತದೆ ಮತ್ತು ಡಿಹೈಡ್ರೇಷನ್ ಸಮಸ್ಯೆಯನ್ನು ತಡೆಯುತ್ತದೆ. ಲಾಭಗಳು: 2. ನಿಂಬೆ ಹಣ್ಣು ಶರ್ಬತ್ (Lemon Juice) : ನಿಂಬೆ ಹಣ್ಣಿನಲ್ಲಿ ವಿಟಮಿನ್ C ಹೆಚ್ಚು ಇರುತ್ತದೆ. ಇದು ದೇಹವನ್ನು ತಂಪಾಗಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಮ್ಮ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ಕುಡಿಯಲು 8 ಅತ್ಯುತ್ತಮ ಪಾನೀಯಗಳು ಪರಿಹಾರ ನೀಡುತ್ತವೆ. ಲಾಭಗಳು: ನಿಂಬೆ ರಸಕ್ಕೆ ಸ್ವಲ್ಪ ಉಪ್ಪು ಅಥವಾ ಜೇನು ಸೇರಿಸಿ ಕುಡಿಯಬಹುದು. 3. ಮಜ್ಜಿಗೆ (Buttermilk) : ಮಜ್ಜಿಗೆ ಒಂದು ಪರಂಪರೆಯ ಆರೋಗ್ಯಕರ ಪಾನೀಯವಾಗಿದೆ. ಇದು ದೇಹಕ್ಕೆ ತಂಪು ನೀಡುವ ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಲಾಭಗಳು: 4. ಕಲ್ಲಂಗಡಿ ಹಣ್ಣಿನ ಜ್ಯೂಸ್ (Watermelon Juice): ಬೇಸಿಗೆಯಲ್ಲಿ ಕುಡಿಯಲು 8 ಅತ್ಯುತ್ತಮ ಪಾನೀಯಗಳು ಶ್ರೇಷ್ಠ ಆಯ್ಕೆಯಾಗುತ್ತವೆ. ಈ ಪಾನೀಯಗಳು ಬೇಸಿಗೆಯಲ್ಲಿ ಕುಡಿಯಲು 8 ಅತ್ಯುತ್ತಮ ಪಾನೀಯಗಳು ಎಂದು ಪರಿಗಣಿಸುತ್ತವೆ. ಕಲ್ಲಂಗಡಿ ಹಣ್ಣು ಸುಮಾರು 90% ನೀರಿನ ಅಂಶವನ್ನು ಹೊಂದಿರುತ್ತದೆ. ಇದು ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟೆಡ್ ಆಗಿಡಲು ಸಹಾಯ ಮಾಡುತ್ತದೆ. ಈಗ ಸಿಗುವ ಕಲ್ಲಂಗಡಿ ಹಣ್ಣಿಗೆ ಬಣ್ಣ ಸಿಂಪಡಿಸಿರುತ್ತಾರೆ. ಆದ್ದರಿಂದ ಸರಿಯಾಗಿ ನೋಡಿ ಹಣ್ಣು ತೆಗೆದುಕೊಳ್ಳಬೇಕು. ಲಾಭಗಳು: 5. ಮಾವಿನ ಹಣ್ಣಿನ ಪಾನಕ (Aam Panna) : ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣಿನಿಂದ ತಯಾರಿಸುವ ಪಾನಕ ಹಿಟ್ ಸ್ಟ್ರೋಕ್ ತಪ್ಪಿಸಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ ಹೇರಳ ಪ್ರಮಾಣದಲ್ಲಿ ಇರುತ್ತದೆ. ಲಾಭಗಳು: ಇವು ಎಲ್ಲರೂ ಪ್ರವೇಶಿಸಲು ಸಹಾಯ ಮಾಡುವುದರಲ್ಲಿ, ಬೇಸಿಗೆಯಲ್ಲಿ ಕುಡಿಯಲು 8 ಅತ್ಯುತ್ತಮ ಪಾನೀಯಗಳು ನೀವು ಇಷ್ಟಪಡುವುದು ಖಚಿತ. 6. ಸೌತೆಕಾಯಿ ಜ್ಯೂಸ್ (Cucumber Juice) : ಸೌತೆಕಾಯಿ ತಂಪು ಗುಣ ಹೊಂದಿರುವ ತರಕಾರಿ. ಇದರ ಜ್ಯೂಸ್ ದೇಹವನ್ನು ಹೈಡ್ರೇಟೆಡ್ ಆಗಿಡುತ್ತದೆ. ದಿನನಿತ್ಯ ಮನೆಯಲ್ಲಿ ಸುಲಭವಾಗಿ ಸಿಗುವುದರಿಂದ ಬೇಕಾದಾಗ ಇದರ ಜ್ಯೂಸು ಕುಡಿಯಬಹುದು. ಲಾಭಗಳು: 7. ಪುದೀನಾ ಶರ್ಬತ್ (Mint Drink) : ಪುದೀನಾ ದೇಹಕ್ಕೆ ತಂಪು ನೀಡುವ ನೈಸರ್ಗಿಕ ಸಸ್ಯವಾಗಿದೆ. ಇದರಿಂದ ಮಾಡುವ ಜ್ಯೂಸ್ ಅನ್ನು ಬೇಸಿಗೆ ಸಮಯದಲ್ಲಿ ಕುಡಿಯುವುದರಿಂದ ದೇಹ ತಂಪಾಗಿರುತ್ತದೆ. ಲಾಭಗಳು: ಹೀಗಾಗಿ, ಬೇಸಿಗೆಯಲ್ಲಿ ಕುಡಿಯಲು 8 ಅತ್ಯುತ್ತಮ ಪಾನೀಯಗಳು ನಿಮ್ಮ ಬೇಸಿಗೆ ಕಾಲದಲ್ಲಿ ತಣಿಸುತ್ತದೆ. 8. ಹಣ್ಣಿನ ಜ್ಯೂಸ್‌ಗಳು (Fresh Fruit Juices) : ತಾಜಾ ಹಣ್ಣುಗಳಿಂದ ತಯಾರಿಸಿದ ಜ್ಯೂಸ್‌ಗಳು ಬೇಸಿಗೆಯಲ್ಲಿ ಉತ್ತಮ ಪಾನೀಯಗಳು. ಇವು ದೇಹವನ್ನು ತಣಿಸುತ್ತದೆ. ಉತ್ತಮ ಆಯ್ಕೆಗಳು: ಇವು ವಿಟಮಿನ್‌ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಬೇಸಿಗೆಯಲ್ಲಿ ಪಾನೀಯಗಳನ್ನು ಆಯ್ಕೆ ಮಾಡುವಾಗ ಗಮನಿಸಬೇಕಾದ ವಿಷಯಗಳು: ಬೇಸಿಗೆಯಲ್ಲಿ ದೇಹದ ಆರೋಗ್ಯ ಕಾಪಾಡಲು ಸರಿಯಾದ ಪಾನೀಯಗಳ ಸೇವನೆ ಅತ್ಯಂತ ಮುಖ್ಯ. ತೆಂಗಿನಕಾಯಿ ನೀರು, ಮಜ್ಜಿಗೆ, ನಿಂಬೆ ರಸ, ಕಲ್ಲಂಗಡಿ ಜ್ಯೂಸ್, ಪುದೀನಾ ಪಾನೀಯ ಮುಂತಾದ ನೈಸರ್ಗಿಕ ಪಾನೀಯಗಳು ದೇಹವನ್ನು ತಂಪಾಗಿಡುವ ಜೊತೆಗೆ ಶಕ್ತಿ ಮತ್ತು ಆರೋಗ್ಯವನ್ನು ನೀಡುತ್ತವೆ. ದಿನನಿತ್ಯ ಈ ಪಾನೀಯಗಳನ್ನು ಸೇವಿಸುವ ಮೂಲಕ ಡಿಹೈಡ್ರೇಷನ್, ದಣಿವು ಮತ್ತು ಬೇಸಿಗೆ ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ತಪ್ಪಿಸಬಹುದು.ಆದ್ದರಿಂದ ಈ ಬೇಸಿಗೆಯಲ್ಲಿ ಆರೋಗ್ಯಕರ ಪಾನೀಯಗಳನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿ ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ : https://youtu.be/WlxOy62n584?si=P8dQEuIcy1JAEr64

ಬೇಸಿಗೆಯಲ್ಲಿ ಕುಡಿಯಲು 8 ಅತ್ಯುತ್ತಮ ಪಾನೀಯಗಳು Read Post »

Health

ಉತ್ತಮ ನಿದ್ರೆ ಪಡೆಯಲು 7 ಸಲಹೆಗಳು

ಉತ್ತಮ ನಿದ್ರೆ ಪಡೆಯಲು 7 ಸಲಹೆಗಳು ಮಾನವನ ಆರೋಗ್ಯಕರ ಜೀವನಕ್ಕೆ ಉತ್ತಮ ನಿದ್ರೆ ಅತ್ಯಂತ ಮುಖ್ಯವಾದ ಅಂಶವಾಗಿದೆ. ಸರಿಯಾದ ನಿದ್ರೆ ದೇಹದ ಪುನರುಜ್ಜೀವನಕ್ಕೆ ಸಹಾಯ ಮಾಡುತ್ತದೆ ಮತ್ತು ಮನಸ್ಸಿನ ಶಾಂತಿಯನ್ನು ಕಾಪಾಡುತ್ತದೆ. ಆದರೆ ಇಂದಿನ ವೇಗದ ಜೀವನಶೈಲಿ, ಕೆಲಸದ ಒತ್ತಡ, ಮೊಬೈಲ್ ಬಳಕೆ ಮತ್ತು ಅಸ್ವಸ್ಥ ಆಹಾರ ಪದ್ಧತಿಗಳಿಂದ ಬಹಳ ಮಂದಿ ನಿದ್ರೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಿದ್ರೆ ಸರಿಯಾಗಿ ಆಗದಿದ್ದರೆ ದೇಹದಲ್ಲಿ ದಣಿವು, ತಲೆನೋವು, ಒತ್ತಡ, ಏಕಾಗ್ರತೆ ಕೊರತೆ ಮತ್ತು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಉತ್ತಮ ನಿದ್ರೆ ಪಡೆಯಲು 7 ಸಲಹೆಗಳು ನಿಮ್ಮ ದಿನಚರಿಯಲ್ಲಿ ಅನುಸರಿಸುವುದು ಬಹಳ ಉಪಯುಕ್ತ. 1. ನಿದ್ರೆಗೆ ನಿಯಮಿತ ಸಮಯ ನಿಗದಿ ಮಾಡಿ : ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಮತ್ತು ಎದ್ದುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ ನಿದ್ರೆಗೆ ಅತ್ಯಂತ ಮುಖ್ಯ. ದೇಹದ ಜೈವಿಕ ಗಡಿಯಾರ (body clock) ಸರಿಯಾಗಿ ಕಾರ್ಯನಿರ್ವಹಿಸಲು ನಿಯಮಿತ ಸಮಯ ಸಹಾಯ ಮಾಡುತ್ತದೆ. ವಾರಾಂತ್ಯದಲ್ಲೂ ಈ ಸಮಯವನ್ನು ಬದಲಾಯಿಸದಿರುವುದು ಉತ್ತಮ. ಇದರಿಂದ ದೇಹವು ನಿದ್ರೆಗೆ ತಾನಾಗಿಯೇ ಸಿದ್ಧವಾಗುತ್ತದೆ ಮತ್ತು ನಿದ್ರೆ ಬೇಗ ಬರುತ್ತದೆ. ನಿಯಮಿತ ನಿದ್ರೆ ವೇಳಾಪಟ್ಟಿಯಿಂದ ದೇಹದ ಹಾರ್ಮೋನ್ ಸಮತೋಲನ ಕೂಡ ಉತ್ತಮವಾಗಿರುತ್ತದೆ. 2. ಮಲಗುವ ಮೊದಲು ಮೊಬೈಲ್ ಮತ್ತು ಪರದೆ ಬಳಕೆ ತಪ್ಪಿಸಿ : ಇಂದಿನ ದಿನಗಳಲ್ಲಿ ಹೆಚ್ಚಿನವರು ಮಲಗುವ ಮೊದಲು ಮೊಬೈಲ್ ಬಳಸುವ ಅಭ್ಯಾಸ ಹೊಂದಿದ್ದಾರೆ. ಆದರೆ ಮೊಬೈಲ್, ಟಿವಿ ಮತ್ತು ಲ್ಯಾಪ್‌ಟಾಪ್‌ನಿಂದ ಹೊರಬರುವ ನೀಲಿ ಬೆಳಕು ನಿದ್ರೆಗೆ ಅಗತ್ಯವಾದ ಹಾರ್ಮೋನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ನಿದ್ರೆ ತಡವಾಗುತ್ತದೆ ಮತ್ತು ನಿದ್ರೆಯ ಗುಣಮಟ್ಟ ಕಡಿಮೆಯಾಗುತ್ತದೆ. ಆದ್ದರಿಂದ ಮಲಗುವ ಮೊದಲು ಕನಿಷ್ಠ ಒಂದು ಗಂಟೆ ಡಿಜಿಟಲ್ ಸಾಧನಗಳನ್ನು ಬಳಸುವುದನ್ನು ತಪ್ಪಿಸುವುದು ಉತ್ತಮ. ಈ ಸಮಯದಲ್ಲಿ ಪುಸ್ತಕ ಓದುವುದು, ಪ್ರಾರ್ಥನೆ ಮಾಡುವುದು ಅಥವಾ ಶಾಂತ ಸಂಗೀತ ಕೇಳುವುದು ಉತ್ತಮ ಆಯ್ಕೆಯಾಗಬಹುದು. 3. ಶಾಂತ ಮತ್ತು ಆರಾಮದಾಯಕ ವಾತಾವರಣ ಸೃಷ್ಟಿಸಿ : ಉತ್ತಮ ನಿದ್ರೆಗಾಗಿ ಮಲಗುವ ಕೋಣೆ ಶಾಂತ ಮತ್ತು ಸ್ವಚ್ಛವಾಗಿರಬೇಕು. ಕೋಣೆಯಲ್ಲಿ ಹೆಚ್ಚು ಶಬ್ದ ಅಥವಾ ಬೆಳಕು ಇದ್ದರೆ ನಿದ್ರೆ ವ್ಯತ್ಯಯವಾಗುತ್ತದೆ. ಮೃದುವಾದ ಬೆಳಕು, ಸರಿಯಾದ ಗಾಳಿ ಹರಿವು ಮತ್ತು ಆರಾಮದಾಯಕ ಹಾಸಿಗೆ ಉತ್ತಮ ನಿದ್ರೆಗೆ ಸಹಾಯಕ. ಕೋಣೆಯ ತಾಪಮಾನ ಕೂಡ ತುಂಬಾ ಬಿಸಿ ಅಥವಾ ತುಂಬಾ ಚಳಿ ಇರಬಾರದು. ಸುಗಂಧ ದೀಪಗಳು ಅಥವಾ ಮೃದುವಾದ ಸಂಗೀತವೂ ಮನಸ್ಸನ್ನು ಶಾಂತಗೊಳಿಸಿ ನಿದ್ರೆಗೆ ಸಹಾಯ ಮಾಡಬಹುದು. 4. ನಿಯಮಿತ ವ್ಯಾಯಾಮ ಮಾಡಿ : ಪ್ರತಿದಿನ ವ್ಯಾಯಾಮ ಮಾಡುವುದರಿಂದ ದೇಹದ ಆರೋಗ್ಯ ಸುಧಾರಿಸುತ್ತದೆ ಮತ್ತು ನಿದ್ರೆಯ ಗುಣಮಟ್ಟ ಹೆಚ್ಚುತ್ತದೆ. ವ್ಯಾಯಾಮದಿಂದ ದೇಹದಲ್ಲಿ ರಕ್ತ ಸಂಚಾರ ಸುಧಾರಿಸಿ ಒತ್ತಡ ಕಡಿಮೆಯಾಗುತ್ತದೆ. ದಿನದ ವೇಳೆ ದೇಹ ಸಕ್ರಿಯವಾಗಿದ್ದರೆ ರಾತ್ರಿ ಸುಲಭವಾಗಿ ನಿದ್ರೆ ಬರುತ್ತದೆ. ಆದರೆ ಮಲಗುವ ಸಮಯದ ತಕ್ಷಣ ವ್ಯಾಯಾಮ ಮಾಡುವುದು ಸೂಕ್ತವಲ್ಲ, ಏಕೆಂದರೆ ಅದು ದೇಹವನ್ನು ಚುರುಕುಗೊಳಿಸುತ್ತದೆ. ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ವ್ಯಾಯಾಮ ಮಾಡುವುದು ಉತ್ತಮ. 5. ಆರೋಗ್ಯಕರ ಆಹಾರ ಪದ್ಧತಿ ಪಾಲಿಸಿ : ಆಹಾರ ಪದ್ಧತಿ ನಿದ್ರೆಯ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಮಲಗುವ ಮೊದಲು ಭಾರವಾದ ಅಥವಾ ಹೆಚ್ಚು ಎಣ್ಣೆಯುಕ್ತ ಆಹಾರ ಸೇವಿಸಿದರೆ ಜೀರ್ಣಕ್ರಿಯೆ ಸಮಸ್ಯೆಯಿಂದ ನಿದ್ರೆ ಸರಿಯಾಗಿ ಆಗುವುದಿಲ್ಲ. ರಾತ್ರಿ ಲಘು ಮತ್ತು ಪೌಷ್ಟಿಕ ಆಹಾರ ಸೇವಿಸುವುದು ಉತ್ತಮ. ಕಾಫಿ, ಚಹಾ ಅಥವಾ ಕ್ಯಾಫೀನ್ ಇರುವ ಪಾನೀಯಗಳನ್ನು ರಾತ್ರಿ ಸಮಯದಲ್ಲಿ ಕಡಿಮೆ ಮಾಡಬೇಕು. ಮಲಗುವ ಮೊದಲು ಹೆಚ್ಚು ನೀರು ಕುಡಿಯುವುದರಿಂದ ರಾತ್ರಿ ಮಧ್ಯದಲ್ಲಿ ಎಚ್ಚರಗೊಳ್ಳುವ ಸಾಧ್ಯತೆ ಇರುತ್ತದೆ. 6. ಒತ್ತಡ ಮತ್ತು ಚಿಂತೆ ನಿಯಂತ್ರಿಸಿ : ಮಾನಸಿಕ ಒತ್ತಡ ಮತ್ತು ಆತಂಕ ನಿದ್ರೆ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ದಿನಪೂರ್ತಿ ನಡೆದ ಘಟನೆಗಳು ಅಥವಾ ಕೆಲಸದ ಒತ್ತಡದ ಬಗ್ಗೆ ಹೆಚ್ಚು ಯೋಚಿಸುವುದರಿಂದ ಮನಸ್ಸು ಅಶಾಂತವಾಗುತ್ತದೆ. ಇದರಿಂದ ನಿದ್ರೆ ಬರಲು ಸಮಯ ಹಿಡಿಯುತ್ತದೆ. ಧ್ಯಾನ, ಯೋಗ ಅಥವಾ ಆಳವಾದ ಉಸಿರಾಟ ವ್ಯಾಯಾಮ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ. ಮಲಗುವ ಮೊದಲು ನಿಮ್ಮ ಮನಸ್ಸನ್ನು ಶಾಂತಗೊಳಿಸುವ ಚಟುವಟಿಕೆಗಳನ್ನು ಮಾಡುವುದು ಉತ್ತಮ. 7. ಮಲಗುವ ಮೊದಲು ಆರಾಮದಾಯಕ ಅಭ್ಯಾಸ ಬೆಳೆಸಿ : ಪ್ರತಿದಿನ ಮಲಗುವ ಮೊದಲು ಒಂದು ಶಾಂತ ಅಭ್ಯಾಸ ಬೆಳೆಸಿಕೊಳ್ಳುವುದು ನಿದ್ರೆಗೆ ಸಹಾಯಕ. ಉದಾಹರಣೆಗೆ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು, ಪುಸ್ತಕ ಓದುವುದು ಅಥವಾ ಧ್ಯಾನ ಮಾಡುವುದು ದೇಹ ಮತ್ತು ಮನಸ್ಸನ್ನು ವಿಶ್ರಾಂತಿಗೊಳಿಸುತ್ತದೆ. ಇಂತಹ ಅಭ್ಯಾಸಗಳು ದೇಹಕ್ಕೆ ನಿದ್ರೆಗೆ ಸಿದ್ಧವಾಗುವ ಸೂಚನೆ ನೀಡುತ್ತವೆ ಮತ್ತು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತವೆ. ಉತ್ತಮ ನಿದ್ರೆಯ ಆರೋಗ್ಯ ಲಾಭಗಳು : ನಿದ್ರೆ ಸರಿಯಾಗಿ ಆಗದಿದ್ದರೆ ದೇಹದಲ್ಲಿ ದಣಿವು, ತೂಕ ಹೆಚ್ಚಳ, ರಕ್ತದೊತ್ತಡ ಸಮಸ್ಯೆ ಮತ್ತು ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿದಿನ ಗುಣಮಟ್ಟದ ನಿದ್ರೆ ಪಡೆಯುವುದು ಅತ್ಯಂತ ಮುಖ್ಯ. ಹೆಚ್ಚಿನ ಮಾಹಿತಿಗಾಗಿ : http://How Much Sleep Is Enough?�

ಉತ್ತಮ ನಿದ್ರೆ ಪಡೆಯಲು 7 ಸಲಹೆಗಳು Read Post »

Health

ಬಿಳಿ ಕೂದಲು ಕಪ್ಪಾಗಿಸಲು 7 ಪರಿಣಾಮಕಾರಿ ಮನೆಮದ್ದುಗಳು

ಬಿಳಿ ಕೂದಲು ಕಪ್ಪಾಗಿಸಲು ಮನೆಮದ್ದುಗಳು – ಇಂದಿನ ದಿನಗಳಲ್ಲಿ ಕಡಿಮೆ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಜೀವನಶೈಲಿ ಬದಲಾವಣೆ, ಪೌಷ್ಟಿಕಾಂಶ ಕೊರತೆ, ಒತ್ತಡ, ಮಾಲಿನ್ಯ, ರಾಸಾಯನಿಕ ಉತ್ಪನ್ನಗಳ ಬಳಕೆ ಮುಂತಾದ ಕಾರಣಗಳಿಂದ ಕೂದಲು ಬೇಗ ಬಿಳಿಯಾಗಬಹುದು. ಕೂದಲು ಬಿಳಿಯಾಗುವುದು ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು, ಆದ್ದರಿಂದ ಸರಿಯಾದ ಆರೈಕೆ ಅಗತ್ಯ. ನೈಸರ್ಗಿಕ ವಿಧಾನಗಳನ್ನು ನಿಯಮಿತವಾಗಿ ಅನುಸರಿಸಿದರೆ ಕೂದಲಿನ ಆರೋಗ್ಯ ಸುಧಾರಿಸುತ್ತದೆ ಮತ್ತು ಬಿಳಿ ಕೂದಲು ಸಮಸ್ಯೆಯನ್ನು ನಿಯಂತ್ರಿಸಬಹುದು. ಈ ಲೇಖನದಲ್ಲಿ ಬಿಳಿ ಕೂದಲು ಕಪ್ಪಾಗಿಸಲು ಸಹಾಯ ಮಾಡುವ ಕೆಲವು ಪರಿಣಾಮಕಾರಿ ಮನೆಮದ್ದುಗಳನ್ನು ತಿಳಿದುಕೊಳ್ಳೋಣ. ಬಿಳಿ ಕೂದಲು ಕಪ್ಪಾಗಿಸಲು ಮನೆಮದ್ದುಗಳು : 1. ತೆಂಗಿನ ಎಣ್ಣೆ ಮತ್ತು ಕರಿಬೇವು ಎಲೆ : ಬಿಳಿ ಕೂದಲು ಕಪ್ಪಾಗಿಸಲು ಮನೆಮದ್ದುಗಳು ಮೊದಲನೆಯದು ಕರಿಬೇವು ಎಲೆಗಳಲ್ಲಿ ಕೂದಲಿಗೆ ಅಗತ್ಯವಾದ ಪೋಷಕಾಂಶಗಳು ಇರುತ್ತವೆ. ಇದು ಕೂದಲಿನ ಬೇರುಗಳನ್ನು ಬಲಪಡಿಸಿ ಕೂದಲಿನ ಬಣ್ಣವನ್ನು ಉಳಿಸಲು ಸಹಾಯ ಮಾಡುತ್ತದೆ. ಕೂದಲು ಸಮೃದ್ಧವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಬಳಸುವ ವಿಧಾನ: 2. ಮೆಂತ್ಯೆ ಬೀಜದ ಪೇಸ್ಟ್ : ಅಡುಗೆ ಮನೆಯಲ್ಲಿ ಸಿಗುವ ಮೆಂತ್ಯೆ ಬೀಜದಲ್ಲಿ ಇರುವ ಪ್ರೋಟೀನ್ ಮತ್ತು ವಿಟಮಿನ್‌ಗಳು ಕೂದಲು ಬಲವಾಗಿಸಲು ಸಹಾಯ ಮಾಡುತ್ತವೆ. ಇದು ಕೂದಲು ಉದುರುವುದನ್ನು ಕಡಿಮೆ ಮಾಡಿ ಬಿಳಿ ಕೂದಲು ಸಮಸ್ಯೆಯನ್ನು ನಿಯಂತ್ರಿಸುತ್ತದೆ. ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಬಳಸುವ ವಿಧಾನ: 3. ಆಮ್ಲಾ (ನೆಲ್ಲಿಕಾಯಿ) : ನೆಲ್ಲಿಕಾಯಿ ಕೂದಲಿನ ಆರೋಗ್ಯಕ್ಕೆ ಅತ್ಯುತ್ತಮ ನೈಸರ್ಗಿಕ ಪದಾರ್ಥವಾಗಿದೆ. ಇದರಲ್ಲಿ ವಿಟಮಿನ್ C ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಇರುವುದರಿಂದ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಬೇಲಿ ಕೂದಲು ಆಗದಂತೆ ಸಹಾಯ ಮಾಡುತ್ತದೆ. ನೆಲ್ಲಿಕಾಯಿ ಪೌಡರ್ ಕೂಡ ಕೂದಲಿಗೆ ಹಾಕಬಹುದು ಅಥವಾ ಜ್ಯೂಸು ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು. ಬಳಸುವ ವಿಧಾನ: 4.ಈರುಳ್ಳಿ ರಸ : ಈರುಳ್ಳಿ ರಸದಲ್ಲಿ ಸಲ್ಫರ್ ಅಂಶ ಹೆಚ್ಚಿದ್ದು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ಇದು ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಬಿಳಿ ಕೂದಲು ಆಗುವುದನ್ನು ತಡೆಯುತ್ತದೆ. ವಾರಕ್ಕೆ ಒಮ್ಮೆ ಹಾಕಿದರೆ ಕ್ರಮೇಣ ಬಿಳಿ ಕೂದಲು ಆಗುವುದನ್ನು ತಡೆಯಬಹುದು. ಬಳಸುವ ವಿಧಾನ: 5. ಅಲೋವೆರಾ ಜೆಲ್ : ಬಿಳಿ ಕೂದಲು ಕಪ್ಪಾಗಿಸಲು ಮನೆಮದ್ದುಗಳು ಒಂದಾದ ಅಲೋವೆರಾ ತಲೆಚರ್ಮವನ್ನು ಆರೋಗ್ಯಕರವಾಗಿಡುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಕೂದಲಿನ ಒಣತನ ಮತ್ತು ಹಾನಿಯನ್ನು ಕಡಿಮೆ ಮಾಡುತ್ತದೆ. ಕೂದಲು ಆರೋಗ್ಯವಾಗಿರಲು ಸಹಾಯ ಮಾಡಿ ಬಿಳಿಯಾಗುವುದನ್ನು ಕಡಿಮೆ ಮಾಡುತ್ತದೆ. ಬಳಸುವ ವಿಧಾನ: 6. ಕಪ್ಪು ಚಹಾ (Black Tea) : ಬಿಳಿ ಕೂದಲು ಕಪ್ಪಾಗಿಸಲು ಮನೆಮದ್ದುಗಳು ಒಂದಾದ ಕಪ್ಪು ಚಹಾ ಕೂದಲಿನ ನೈಸರ್ಗಿಕ ಬಣ್ಣವನ್ನು ಗಾಢಗೊಳಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಮೆಹಂದಿ ಪೌಡರ್ ನೊಂದಿಗೆ ಮಿಶ್ರಣ ಮಾಡಿ ಹಾಕಬಹುದು ಅಥವಾ ಹಾಗೆಯೆ ಹಾಕಬಹುದು. ಬಳಸುವ ವಿಧಾನ: 7. ಸಮತೋಲನ ಆಹಾರ ಮತ್ತು ಜೀವನಶೈಲಿ : ಕೂದಲು ಆರೋಗ್ಯಕರವಾಗಿರಲು ಪೌಷ್ಟಿಕ ಆಹಾರ ಅತ್ಯಗತ್ಯ. ಕೂದಲಿನ ಆರೋಗ್ಯಕ್ಕೆ ಕೇವಲ ಕೂದಲಿನ ಆರೈಕೆಯಲ್ಲದೆ ದೇಹದ ಒಳಗೆ ಕೂಡ ಪೌಷ್ಟಿಕ ಆಹಾರ ಅವಶ್ಯಕವಾಗಿರುತ್ತದೆ. ಪೌಷ್ಟಿಕ ಅಥವಾ ಸಮತೋಲಿನ ಆಹಾರ ಕೂಡ ಕೂದಲು ಬೆಳೆಯಲು ಮತ್ತು ಕೂದಲು ಬಿಳಿಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಅನುಸರಿಸಬೇಕಾದ ಅಭ್ಯಾಸಗಳು: ಸರಿಯಾದ ಆಹಾರ ಕ್ರಮ ಕೂದಲು ಆರೋಗ್ಯಕ್ಕೆಮತ್ತು ಬಿಳಿ ಕೂದಲು ತಡೆಯಲು ಮುಖ್ಯ ಪಾತ್ರ ವಹಿಸುತ್ತದೆ. ಬಿಳಿ ಕೂದಲು ಬರಲು ಕಾರಣಗಳು : ಬಿಳಿ ಕೂದಲು ಸಮಸ್ಯೆಗೆ ಹಲವು ಕಾರಣಗಳಿವೆ: ಬಿಳಿ ಕೂದಲು ಕಪ್ಪಾಗಿಸಲು ಮನೆಮದ್ದುಗಳು ಮಾಡಿದರೆ ಈ ಕಾರಣಗಳನ್ನು ನಿಯಂತ್ರಿಸಿದರೆ ಕೂದಲು ಆರೋಗ್ಯಕರವಾಗಿರುತ್ತದೆ. ಬಿಳಿ ಕೂದಲು ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸುವುದು ಕಷ್ಟವಾದರೂ ಸರಿಯಾದ ಆರೈಕೆ ಮತ್ತು ನೈಸರ್ಗಿಕ ಮನೆಮದ್ದುಗಳಿಂದ ಕೂದಲಿನ ಆರೋಗ್ಯವನ್ನು ಸುಧಾರಿಸಬಹುದು. ತೆಂಗಿನ ಎಣ್ಣೆ, ಕರಿಬೇವು, ನೆಲ್ಲಿಕಾಯಿ, ಮೆಂತ್ಯೆ, ಅಲೋವೆರಾ ಮುಂತಾದ ನೈಸರ್ಗಿಕ ಪದಾರ್ಥಗಳನ್ನು ನಿಯಮಿತವಾಗಿ ಬಳಸಿದರೆ ಕೂದಲು ಬಲವಾಗುತ್ತದೆ ಮತ್ತು ಬಿಳಿ ಕೂದಲು ಸಮಸ್ಯೆ ನಿಯಂತ್ರಣದಲ್ಲಿರುತ್ತದೆ. ನಿಯಮಿತ ಆರೈಕೆ, ಸಮತೋಲನ ಆಹಾರ ಮತ್ತು ಆರೋಗ್ಯಕರ ಜೀವನಶೈಲಿ ಕೂದಲಿನ ಆರೋಗ್ಯ ಕಾಪಾಡಲು ಅತ್ಯಂತ ಮುಖ್ಯ. ಸೂಚನೆ : ಈ ಲೇಖನದಲ್ಲಿ ನೀಡಿರುವ ಮಾಹಿತಿ ಸಾಮಾನ್ಯ ಆರೋಗ್ಯ ಮಾಹಿತಿ ಮಾತ್ರವಾಗಿದೆ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ಆರೋಗ್ಯ ಸಮಸ್ಯೆಗೆ ವೈದ್ಯರ ಸಲಹೆ ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : https://youtu.be/PQ5wnNnKkt8?si=bwQZc9lOQ6FDifaU

ಬಿಳಿ ಕೂದಲು ಕಪ್ಪಾಗಿಸಲು 7 ಪರಿಣಾಮಕಾರಿ ಮನೆಮದ್ದುಗಳು Read Post »

Health

ಡ್ಯಾಂಡ್ರಫ್ ಹೋಗಲು 7 ಸುಲಭ ನೈಸರ್ಗಿಕ ವಿಧಾನಗಳು ಯಾವುವು?

ಡ್ಯಾಂಡ್ರಫ್ ಹೋಗಲು ನೈಸರ್ಗಿಕ ವಿಧಾನಗಳು ಯಾವುವು ಎಂದರೆ ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಡ್ಯಾಂಡ್ರಫ್ (ತಲೆಹೊಟ್ಟು) ಒಂದು. ತಲೆಹೊಟ್ಟು ಇದ್ದರೆ ಕೂದಲು ಉದುರುವುದು, ತಲೆ ಕೆರೆತ, ಕೂದಲು ದುರ್ಬಲವಾಗುವುದು, ತಲೆ ಒಣಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ನಿರ್ಲಕ್ಷಿಸಿದರೆ ಕೂದಲಿನ ಆರೋಗ್ಯ ಹಾಳಾಗಬಹುದು. ಆದರೆ ಕೆಲವು ಸರಳ ನೈಸರ್ಗಿಕ ವಿಧಾನಗಳನ್ನು ಅನುಸರಿಸಿದರೆ ಡ್ಯಾಂಡ್ರಫ್ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಹುದು ಇದನ್ನು ನಿಯಂತ್ರಿಸಲು market ನಲ್ಲಿ ಹಲವು products ಸಿಗುತ್ತವೆ. ಆದರೆ, ಅವುಗಳಲ್ಲಿ chemicals ಇರುವುದರಿಂದ side effects ಆಗುವ ಸಾಧ್ಯತೆ ಇದೆ. ಆದ್ದರಿಂದ, ನಾವು ಈಗ ಸುರಕ್ಷಿತ ಮತ್ತು ಪರಿಣಾಮಕಾರಿ 7 ನೈಸರ್ಗಿಕ ವಿಧಾನಗಳು ಬಗ್ಗೆ ತಿಳಿದುಕೊಳ್ಳೋಣ. ಡ್ಯಾಂಡ್ರಫ್ ಹೋಗಲು ನೈಸರ್ಗಿಕ ವಿಧಾನಗಳು ಯಾವುವು? ತಿಳಿದುಕೊಳ್ಳೋಣ. 1. ತೆಂಗಿನ ಎಣ್ಣೆ ಮತ್ತು ನಿಂಬೆ ರಸ : ಡ್ಯಾಂಡ್ರಫ್ ಹೋಗಲು ನೈಸರ್ಗಿಕ ವಿಧಾನಗಳು ಮೊದಲನೆಯದು ತೆಂಗಿನ ಎಣ್ಣೆ ಕೂದಲಿಗೆ ಪೋಷಣೆ ನೀಡುತ್ತದೆ ಮತ್ತು ತಲೆ ಚರ್ಮ ಒಣಗಿರುವುದನ್ನು ಕಡಿಮೆ ಮಾಡುತ್ತದೆ. ನಿಂಬೆ ರಸದಲ್ಲಿ ಇರುವ ಆಮ್ಲೀಯ ಗುಣಗಳು ತಲೆಹೊಟ್ಟೆ ನಿವಾರಣೆಗೆ ಸಹಾಯ ಮಾಡುತ್ತವೆ. ಬಳಸುವ ವಿಧಾನ: ಲಾಭ: ಇದನ್ನು ವಾರಕ್ಕೆ 2 ಬಾರಿ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. 2. ಅಲೋವೆರಾ ಜೆಲ್ : ಡ್ಯಾಂಡ್ರಫ್ ಹೋಗಲು ನೈಸರ್ಗಿಕ ವಿಧಾನಗಳು ಇದರಲ್ಲಿ ಮುಖ್ಯವಾಗಿ ಅಲೋವೆರಾ ತಲೆ ಕೆರೆತ ಮತ್ತು ಉರಿಯನ್ನು ಕಡಿಮೆ ಮಾಡುತ್ತದೆ. ಇದು ಬ್ಯಾಕ್ಟೀರಿಯಾ ಮತ್ತು ಫಂಗಲ್ ಸೋಂಕನ್ನು ಕಡಿಮೆ ಮಾಡಲು ಸಹಕಾರಿ. ಬಳಸುವ ವಿಧಾನ: ಲಾಭ: 3. ಮೆಂತ್ಯೆ ಬೀಜದ ಪೇಸ್ಟ್ : ಡ್ಯಾಂಡ್ರಫ್ ಹೋಗಲು ನೈಸರ್ಗಿಕ ವಿಧಾನಗಳು ಪ್ರಮುಖವಾಗಿ ಮೆಂತ್ಯೆ ಬೀಜದಲ್ಲಿ ಪ್ರೋಟೀನ್ ಮತ್ತು ನಿಕೋಟಿನಿಕ್ ಆಮ್ಲ ಇದ್ದು ಕೂದಲು ಬಲವಾಗಿಸಲು ಸಹಾಯ ಮಾಡುತ್ತದೆ ಮತ್ತು ಡ್ಯಾಂಡ್ರಫ್ ಕಡಿಮೆ ಮಾಡುತ್ತದೆ. ಬಳಸುವ ವಿಧಾನ: 4. ಮೊಸರು (Curd) : ಡ್ಯಾಂಡ್ರಫ್ ಹೋಗಲು ನೈಸರ್ಗಿಕ ವಿಧಾನಗಳು ಇದರಲ್ಲಿ ಸುಲಭವಾಗಿ ಮಾಡಬಹುದಾದದ್ದು ಮೊಸರು ತಲೆಚರ್ಮಕ್ಕೆ ತಂಪು ನೀಡುತ್ತದೆ ಮತ್ತು ಡ್ಯಾಂಡ್ರಫ್ ಕಡಿಮೆ ಮಾಡುತ್ತದೆ. ಇದು ತಲೆಚರ್ಮದ ಒಣತನವನ್ನು ಕಡಿಮೆ ಮಾಡುತ್ತದೆ. ಬಳಸುವ ವಿಧಾನ: 5.ಬೇವಿನ(ನೀಮ್) ಎಲೆಗಳು : ಬೆವು ಎಲೆಗಳಲ್ಲಿ ಬ್ಯಾಕ್ಟೀರಿಯಾ ತಡೆಗಟ್ಟುತ್ತವೆ ಮತ್ತು ಫಂಗಸ್ ವಿರೋಧಿ ಗುಣಗಳಿವೆ. ಇದು ತಲೆಚರ್ಮದ ಸೋಂಕನ್ನು ಕಡಿಮೆ ಮಾಡುತ್ತದೆ. ಬಳಸುವ ವಿಧಾನ: ಲಾಭ: 6. ಆಪಲ್ ಸೈಡರ್ ವಿನಿಗರ್ : ಆಪಲ್ ಸೈಡರ್ ವಿನಿಗರ್ ತಲೆಚರ್ಮದ ಫಂಗಸ್ ಬೆಳವಣಿಗೆಯನ್ನು ತಡೆಯುತ್ತದೆ. ಬಳಸುವ ವಿಧಾನ: 7. ಸರಿಯಾದ ಕೂದಲು ಆರೈಕೆ : ಡ್ಯಾಂಡ್ರಫ್ ತಡೆಯಲು ದಿನನಿತ್ಯದ ಕೆಲವು ಅಭ್ಯಾಸಗಳು ಮುಖ್ಯ ಸರಿಯಾದ ಆರೈಕೆ ಮಾಡಿದರೆ ಡ್ಯಾಂಡ್ರಫ್ ಸಮಸ್ಯೆ ಕಡಿಮೆಯಾಗುತ್ತದೆ. ಡ್ಯಾಂಡ್ರಫ್ ಬರಲು ಮುಖ್ಯ ಕಾರಣಗಳು ಡ್ಯಾಂಡ್ರಫ್ ತಪ್ಪಿಸಲು ಸಲಹೆಗಳು ಆಹಾರವೂ ಮುಖ್ಯ! ಆರೋಗ್ಯಕರ ಡಯಟ್ ಡ್ಯಾಂಡ್ರಫ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. Include: ಯಾವಾಗ ಡಾಕ್ಟರ್‌ನ್ನು ಸಂಪರ್ಕಿಸಬೇಕು? ಡ್ಯಾಂಡ್ರಫ್ ಹೋಗಲು ನೈಸರ್ಗಿಕ ವಿಧಾನಗಳು ಮಾಡಿದರೆ ಡ್ಯಾಂಡ್ರಫ್ ಸಾಮಾನ್ಯ ಸಮಸ್ಯೆಯಾಗಿದ್ದರೂ ಇದನ್ನು ನಿಯಂತ್ರಿಸಬಹುದು. ತೆಂಗಿನ ಎಣ್ಣೆ, ಅಲೋವೆರಾ, ಮೆಂತ್ಯೆ, ಮೊಸರು, ಬೆವು ಮುಂತಾದ ನೈಸರ್ಗಿಕ ಪದಾರ್ಥಗಳು ತಲೆಚರ್ಮ ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ. ನಿಯಮಿತವಾಗಿ ಈ ವಿಧಾನಗಳನ್ನು ಅನುಸರಿಸಿದರೆ ತಲೆಹೊಟ್ಟೆ ಕಡಿಮೆಯಾಗುತ್ತದೆ ಮತ್ತು ಕೂದಲು ಆರೋಗ್ಯಕರವಾಗಿರುತ್ತದೆ.ತಲೆಚರ್ಮದ ಆರೋಗ್ಯಕ್ಕಾಗಿ ಸ್ವಚ್ಛತೆ, ಪೌಷ್ಟಿಕ ಆಹಾರ ಮತ್ತು ಸರಿಯಾದ ಆರೈಕೆ ಅತ್ಯಂತ ಮುಖ್ಯ. ಹೆಚ್ಚಿನ ಮಾಹಿತಿಗಾಗಿ: https://youtu.be/BrMaizgAcq4?si=UimA6EiGHCFdyYT7 ಸೂಚನೆ : ಈ ಲೇಖನದಲ್ಲಿ ನೀಡಿರುವ ಮಾಹಿತಿ ಸಾಮಾನ್ಯ ಆರೋಗ್ಯ ಮಾಹಿತಿ ಯಾವುದೇ ಆರೋಗ್ಯ ಸಮಸ್ಯೆ ಅಥವಾ ತಲೆಚರ್ಮ ಸಂಬಂಧಿತ ತೊಂದರೆ ಗಂಭೀರವಾಗಿದ್ದರೆ ದಯವಿಟ್ಟು ಆರೋಗ್ಯ ತಜ್ಞರ ಸಲಹೆ ಪಡೆಯಿರಿ. ಈ ಲೇಖನದಲ್ಲಿ ತಿಳಿಸಿದ ನೈಸರ್ಗಿಕ ವಿಧಾನಗಳನ್ನು ಬಳಸುವ ಮೊದಲು ನಿಮ್ಮ ತಲೆಚರ್ಮಕ್ಕೆ ಸೂಕ್ತವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.

ಡ್ಯಾಂಡ್ರಫ್ ಹೋಗಲು 7 ಸುಲಭ ನೈಸರ್ಗಿಕ ವಿಧಾನಗಳು ಯಾವುವು? Read Post »

Health

ಕೂದಲು ಉದುರುವುದನ್ನು ಶಾಶ್ವತವಾಗಿ ಕಡಿಮೆ ಮಾಡುವ 7 ಸರಳ ಮನೆಮದ್ದುಗಳು

ಕೂದಲು ಉದುರುವುದನ್ನು ಕಡಿಮೆ ಮಾಡುವ ಮನೆಮದ್ದುಗಳು ಮೂಲಕ ಇಂದಿನ ಜೀವನಶೈಲಿ, ಒತ್ತಡ, ಪೌಷ್ಟಿಕಾಂಶಗಳ ಕೊರತೆ, ಹಾರ್ಮೋನ್ ಸಮಸ್ಯೆಗಳನ್ನು ನಿಯಂತ್ರಿಸಬಹುದು ಹಾಗೂ ರಾಸಾಯನಿಕ ಉತ್ಪನ್ನಗಳ ಬಳಕೆಯಿಂದ ಕೂದಲು ಉದುರುವುದು ಸಾಮಾನ್ಯ ಸಮಸ್ಯೆಯಾಗಿದೆ. ಕೆಲವರಿಗೆ ದಿನಕ್ಕೆ 20–30 ಕೂದಲು ಉದುರಿದರೆ, ಕೆಲವರಿಗೆ ಮುಟ್ಟಲು ಕೂಡ ಭಯವಾಗುವಷ್ಟು ಕೂದಲು ಬೀಳುತ್ತದೆ. ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಕೂದಲು ತೆಳುವಾಗುವುದು, ಬೋಳ ಕಾಣಿಸಿಕೊಳ್ಳುವುದು ಕೂಡ ಸಾಧ್ಯ. ಆದರೆ ಒಳ್ಳೆಯ ಸುದ್ದಿ ಎಂದರೆ – ಕೂದಲು ಉದುರುವುದನ್ನು ಶಾಶ್ವತವಾಗಿ ಕಡಿಮೆ ಮಾಡಲು ಮನೆಯಲ್ಲೇ ಇರುವ ನೈಸರ್ಗಿಕ ಮನೆಮದ್ದುಗಳು ಸಾಕು. ಈ ಲೇಖನದಲ್ಲಿ ನಾವು ಅಂತಹ 7 ಪರಿಣಾಮಕಾರಿ ಮನೆಮದ್ದುಗಳನ್ನು ತಿಳಿದುಕೊಳ್ಳೋಣ. ಕೂದಲು ಉದುರುವುದನ್ನು ಕಡಿಮೆ ಮಾಡುವ ಮನೆಮದ್ದುಗಳು ಕೆಳಗಿನಂತಿವೆ : 1.ತಲೆ ತ್ವಚೆಗೆ ನಿಯಮಿತ ಎಣ್ಣೆ ಮಸಾಜ್ : ಕೂದಲು ಉದುರುವುದನ್ನು ಕಡಿಮೆ ಮಾಡುವ ಮನೆಮದ್ದುಗಳು ಮುಖ್ಯವಾಗಿ ಕೂದಲು ಆರೋಗ್ಯಕ್ಕೆ ತಲೆ ತ್ವಚೆ (scalp) ಮುಖ್ಯ ಪಾತ್ರ ವಹಿಸುತ್ತದೆ. ವಾರಕ್ಕೆ ಕನಿಷ್ಠ 2–3 ಬಾರಿ ತಲೆಗೆ ಎಣ್ಣೆ ಮಸಾಜ್ ಮಾಡುವುದು ಬಹಳ ಉಪಯುಕ್ತ. ಲಾಭಗಳು: 2.ಕರಿಬೇವು ಸೊಪ್ಪು (curry leaves) ಎಣ್ಣೆ : ಕೂದಲು ಉದುರುವುದನ್ನು ಕಡಿಮೆ ಮಾಡುವ ಮನೆಮದ್ದುಗಳು ಇದರಲ್ಲಿ ಮುಖ್ಯವಾಗಿ ಕರಿಬೇವು ಸೊಪ್ಪು ಕೂದಲು ಆರೋಗ್ಯಕ್ಕೆ ಅತ್ಯಂತ ಶಕ್ತಿಶಾಲಿ ಮನೆಮದ್ದು. 3.ಆಮ್ಲ (ನೆಲ್ಲಿಕಾಯಿ) ಬಳಕೆ : ಆಮ್ಲದಲ್ಲಿ ವಿಟಮಿನ್ C, ಐರನ್ ಮತ್ತು ಆಂಟಿ ಆಕ್ಸಿಡೆಂಟ್‌ಗಳು ತುಂಬಿರುತ್ತವೆ. ಲಾಭಗಳು: 4.ಈರುಳ್ಳಿ ರಸ (Onion Juice) : ಕೂದಲು ಉದುರುವುದನ್ನು ಕಡಿಮೆ ಮಾಡುವ ಮನೆಮದ್ದುಗಳು ಪ್ರಮುಖವಾಗಿ ಈರುಳ್ಳಿ ರಸದಲ್ಲಿ sulfur ಹೆಚ್ಚಾಗಿ ಇರುತ್ತದೆ. ಇದು collagen production ಹೆಚ್ಚಿಸಿ ಹೊಸ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಲಾಭಗಳು: 5.ಸರಿಯಾದ ಆಹಾರ ಪದ್ಧತಿ : ಕೂದಲು ಆರೋಗ್ಯವು ಒಳಗಿನಿಂದ ಆರಂಭವಾಗುತ್ತದೆ. 6.ಒತ್ತಡ ನಿಯಂತ್ರಣ ಮತ್ತು ಉತ್ತಮ ನಿದ್ರೆ : ಒತ್ತಡ (Stress) ಕೂದಲು ಉದುರುವಿಕೆಯ ಪ್ರಮುಖ ಕಾರಣ. ಒತ್ತಡ ಕಡಿಮೆಯಾದಂತೆ ಕೂದಲು ಉದುರುವಿಕೆಯೂ ಕಡಿಮೆಯಾಗುತ್ತದೆ. 7.ಮೃದುವಾದ ಶಾಂಪೂ ಮತ್ತು ರಾಸಾಯನಿಕ ತಪ್ಪಿಸುವುದು: ಇವು ಸಣ್ಣ ವಿಷಯಗಳಾದರೂ ಕೂದಲು ಉದುರುವಿಕೆಯಲ್ಲಿ ದೊಡ್ಡ ಬದಲಾವಣೆ ತರುತ್ತವೆ. ಕೂದಲು ಉದುರುವಿಕೆ ಒಂದು ದಿನದಲ್ಲಿ ಬಂದ ಸಮಸ್ಯೆಯಲ್ಲ, ಅದೇ ರೀತಿ ಒಂದು ದಿನದಲ್ಲಿ ಹೋಗುವುದೂ ಇಲ್ಲ. ಆದರೆ ನಿಯಮಿತವಾಗಿ ಈ 7 ಮನೆಮದ್ದುಗಳನ್ನು ಪಾಲಿಸಿದರೆ ಕೂದಲು ಉದುರುವಿಕೆ ಶಾಶ್ವತವಾಗಿ ಕಡಿಮೆಯಾಗುತ್ತದೆ. ಸರಿಯಾದ ಆಹಾರ ಮತ್ತು ನಿದ್ರೆ ಇವೆಲ್ಲವನ್ನು ಅನುಸರಿಸಿದರೆ, ನಿಮ್ಮ ಕೂದಲು ಮತ್ತೆ ದಪ್ಪವಾಗುತ್ತದೆ, ಬಲವಾಗುತ್ತದೆ ಮತ್ತು ಆರೋಗ್ಯಕರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ : https://youtu.be/vvaDuQhjAYs?si=NeIN3CGq_j6NmocB

ಕೂದಲು ಉದುರುವುದನ್ನು ಶಾಶ್ವತವಾಗಿ ಕಡಿಮೆ ಮಾಡುವ 7 ಸರಳ ಮನೆಮದ್ದುಗಳು Read Post »

Health

ಮುಖದ ಚರ್ಮ ಕಾಂತಿ ಹೆಚ್ಚಿಸಲು 8 ಆರೋಗ್ಯಕರ ಮನೆಮದ್ದುಗಳು

ಮುಖದ ಚರ್ಮ ಕಾಂತಿ ಹೆಚ್ಚಿಸಲು 8 ಆರೋಗ್ಯಕರ ಮನೆಮದ್ದುಗಳು ಪ್ರಕಾಶಮಾನವಾಗಿರಬೇಕು ಎಂಬುದು ಪ್ರತಿಯೊಬ್ಬರ ಬಯಕೆ. ದಿನನಿತ್ಯದ ಒತ್ತಡ, ದುರ್ಬಲ ಆಹಾರ, ಸೂರ್ಯನ ಕಟು ತಾಪಮಾನ ಮತ್ತು ಕೊಳಕು ಪರಿಸರದಿಂದ ಮುಖದ ಚರ್ಮಕ್ಕೆ ಹಾನಿ ಆಗುತ್ತದೆ. ಈ ಎಲ್ಲ ಕಾರಣಗಳಿಂದ ಚರ್ಮ ಉರಿಯುತ್ತದೆ, ಬಿಳಿಯಾಗುತ್ತದೆ, ಅಥವಾ ಬಣ್ಣ ಮೃದುವಾಗದೆ ಹೊಳೆಯುವುದು ಕಡಿಮೆಯಾಗುತ್ತದೆ. ಆದರೆ ಕೆಲವು ಸರಳ, ನೈಸರ್ಗಿಕ ಮನೆಮದ್ದುಗಳನ್ನು ಪಾಲಿಸುವುದರಿಂದ, ಮುಖದ ಚರ್ಮ ಪ್ರಾಕೃತಿಕವಾಗಿ ಹೊಳೆಯುವಂತಾಗುತ್ತದೆ. ಮುಖದ ಚರ್ಮ ಕಾಂತಿ ಹೆಚ್ಚಿಸುವ ಮನೆಮದ್ದುಗಳು ತಿಳಿದುಕೊಳ್ಳೋಣ : 1. ಹಣ್ಣು ಮತ್ತು ತರಕಾರಿ ಹೆಚ್ಚು ಸೇವನೆ : ಮುಖದ ಚರ್ಮ ಆರೋಗ್ಯಕರವಾಗಿರಲು ಹಣ್ಣು-ತರಕಾರಿ ಸೇವನೆ ಅತ್ಯಂತ ಮುಖ್ಯ. ಹಣ್ಣು-ತರಕಾರಿಗಳಲ್ಲಿ ವಿಟಮಿನ್‌ಗಳು, ಆಂಟಿ ಆಕ್ಸಿಡೆಂಟ್‌ಗಳು ಮತ್ತು ನಾರು (fiber) ಲಭ್ಯವಿರುತ್ತವೆ. 2.ನೆಲ್ಲಿಕಾಯಿ – ಆಮ್ಲ (Amla) : ಆಮ್ಲ (Indian Gooseberry) ವಿಟಮಿನ್ C ಯಲ್ಲಿ ತುಂಬಾ ಶ್ರೀಮಂತವಾಗಿದೆ. 3.ಜಾಸ್ತಿ ನೀರು ಕುಡಿಯುವುದು – Hydration : ನೀರನ್ನು ಜಾಸ್ತಿ ಕುಡಿಯುವುದು (Hydration) ಮುಖದ ಚರ್ಮ ಹೊಳೆಯಲು ಅತ್ಯಂತ ಮುಖ್ಯ. 4.ಅಕ್ಕಿಹಿಟ್ಟು + ಮೊಸರು ಮಾಸ್ಕ್ : ಮುಖದ ಚರ್ಮ ಕಾಂತಿ ಹೆಚ್ಚಿಸುವ ಮನೆಮದ್ದುಗಳು ಪ್ರಮುಖವಾಗಿ ಅಕ್ಕಿ ಪುಡಿ ಮತ್ತು ಮೊಸರು ಮಾಸ್ಕ್ ಚರ್ಮಕ್ಕೆ ನೈಸರ್ಗಿಕ ಹೊಳೆಯುವಿಕೆಯನ್ನು ನೀಡುತ್ತದೆ. 5.ಕಿತ್ತಳೆ ಅಥವಾ ಲೆಮನ್ ಹಣ್ಣು : ಮುಖದ ಚರ್ಮ ಕಾಂತಿ ಹೆಚ್ಚಿಸುವ ಮನೆಮದ್ದುಗಳು ನೈಸರ್ಗಿಕವಾಗಿ ಕಿತ್ತಳೆ ಅಥವಾ ಲೆಮನ್ ರಸ ಚರ್ಮದ ಡಾರ್ಕ್ ಸ್ಪಾಟ್‌ಗಳು ಕಡಿಮೆ ಮಾಡಿ ಚರ್ಮ ಹೊಳೆಯುವಂತೆ ಮಾಡುತ್ತದೆ. 6.ಒತ್ತಡ ಕಡಿಮೆ ಮಾಡುವುದು : ಒತ್ತಡ (Stress) ಚರ್ಮದ ಆರೋಗ್ಯಕ್ಕೆ ನೇರ ಪರಿಣಾಮ ಬೀರುತ್ತದೆ. ದಿನಕ್ಕೆ ಯೋಗ, ಧ್ಯಾನ, ಅಥವಾ 20–30 ನಿಮಿಷ ವಾಕಿಂಗ್ ಮಾಡಿ. ಒತ್ತಡ ಕಡಿಮೆಯಾಗುವುದರಿಂದ ಮುಖದ ಚರ್ಮ ಹೊಳೆಯುವಂತಾಗುತ್ತದೆ ಮತ್ತು ಆರೋಗ್ಯಕರವಾಗಿರುತ್ತದೆ. 7.ಹೈಡ್‌ರೇಷನ್ ಫೇಸ್ ಮಾಸ್ಕ್ : ಮುಖದ ಚರ್ಮ ಕಾಂತಿ ಹೆಚ್ಚಿಸುವ ಮನೆಮದ್ದುಗಳು ನೈಸರ್ಗಿಕವಾಗಿ ಚರ್ಮ ತಾಜಾತನಕ್ಕೆ ತಣ್ಣನೆಯ ಹಣ್ಣು ಅಥವಾ ಹಸಿರು ತರಕಾರಿ ಮಿಶ್ರಣದಿಂದ ಫೇಸ್ ಮಾಸ್ಕ್ ಮಾಡಬಹುದು. 8.ಉತ್ತಮ ನಿದ್ರೆ ಮತ್ತು ಪೌಷ್ಟಿಕ ಆಹಾರ : ಮುಖದ ಚರ್ಮ ಕಾಂತಿ ಹೆಚ್ಚಿಸಲು ದೊಡ್ಡ ಡರ್ಮಟಾಲಜಿಸ್ಟ್ ಅಥವಾ ದುಬಾರಿ ಉತ್ಪನ್ನಗಳು ಅಗತ್ಯವಿಲ್ಲ. ನಿತ್ಯದ ಸರಳ ಮನೆಮದ್ದುಗಳು ಹೆಚ್ಚು ಪರಿಣಾಮಕಾರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : https://www.healthline.com/health/beauty-skin-care

ಮುಖದ ಚರ್ಮ ಕಾಂತಿ ಹೆಚ್ಚಿಸಲು 8 ಆರೋಗ್ಯಕರ ಮನೆಮದ್ದುಗಳು Read Post »

Scroll to Top