ಬಿಳಿ ಕೂದಲು ಕಪ್ಪಾಗಿಸಲು ಮನೆಮದ್ದುಗಳು – ಇಂದಿನ ದಿನಗಳಲ್ಲಿ ಕಡಿಮೆ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಜೀವನಶೈಲಿ ಬದಲಾವಣೆ, ಪೌಷ್ಟಿಕಾಂಶ ಕೊರತೆ, ಒತ್ತಡ, ಮಾಲಿನ್ಯ, ರಾಸಾಯನಿಕ ಉತ್ಪನ್ನಗಳ ಬಳಕೆ ಮುಂತಾದ ಕಾರಣಗಳಿಂದ ಕೂದಲು ಬೇಗ ಬಿಳಿಯಾಗಬಹುದು. ಕೂದಲು ಬಿಳಿಯಾಗುವುದು ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು, ಆದ್ದರಿಂದ ಸರಿಯಾದ ಆರೈಕೆ ಅಗತ್ಯ.
ನೈಸರ್ಗಿಕ ವಿಧಾನಗಳನ್ನು ನಿಯಮಿತವಾಗಿ ಅನುಸರಿಸಿದರೆ ಕೂದಲಿನ ಆರೋಗ್ಯ ಸುಧಾರಿಸುತ್ತದೆ ಮತ್ತು ಬಿಳಿ ಕೂದಲು ಸಮಸ್ಯೆಯನ್ನು ನಿಯಂತ್ರಿಸಬಹುದು. ಈ ಲೇಖನದಲ್ಲಿ ಬಿಳಿ ಕೂದಲು ಕಪ್ಪಾಗಿಸಲು ಸಹಾಯ ಮಾಡುವ ಕೆಲವು ಪರಿಣಾಮಕಾರಿ ಮನೆಮದ್ದುಗಳನ್ನು ತಿಳಿದುಕೊಳ್ಳೋಣ.
ಬಿಳಿ ಕೂದಲು ಕಪ್ಪಾಗಿಸಲು ಮನೆಮದ್ದುಗಳು :
1. ತೆಂಗಿನ ಎಣ್ಣೆ ಮತ್ತು ಕರಿಬೇವು ಎಲೆ : ಬಿಳಿ ಕೂದಲು ಕಪ್ಪಾಗಿಸಲು ಮನೆಮದ್ದುಗಳು ಮೊದಲನೆಯದು ಕರಿಬೇವು ಎಲೆಗಳಲ್ಲಿ ಕೂದಲಿಗೆ ಅಗತ್ಯವಾದ ಪೋಷಕಾಂಶಗಳು ಇರುತ್ತವೆ. ಇದು ಕೂದಲಿನ ಬೇರುಗಳನ್ನು ಬಲಪಡಿಸಿ ಕೂದಲಿನ ಬಣ್ಣವನ್ನು ಉಳಿಸಲು ಸಹಾಯ ಮಾಡುತ್ತದೆ. ಕೂದಲು ಸಮೃದ್ಧವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ಬಳಸುವ ವಿಧಾನ:
- ಒಂದು ಕಪ್ ತೆಂಗಿನ ಎಣ್ಣೆಯಲ್ಲಿ ಸ್ವಲ್ಪ ಕರಿಬೇವು ಎಲೆಗಳನ್ನು ಹಾಕಿ ಕುದಿಸಿ.
- ಎಣ್ಣೆ ತಣ್ಣಗಾದ ನಂತರ ತಲೆಗೆ ಮಸಾಜ್ ಮಾಡಿ.
- 30 ನಿಮಿಷಗಳ ನಂತರ ತೊಳೆಯಿರಿ.
- ವಾರಕ್ಕೆ 2 ಬಾರಿ ಬಳಸಿದರೆ ಕೂದಲು ಆರೋಗ್ಯಕರವಾಗುತ್ತದೆ.

2. ಮೆಂತ್ಯೆ ಬೀಜದ ಪೇಸ್ಟ್ : ಅಡುಗೆ ಮನೆಯಲ್ಲಿ ಸಿಗುವ ಮೆಂತ್ಯೆ ಬೀಜದಲ್ಲಿ ಇರುವ ಪ್ರೋಟೀನ್ ಮತ್ತು ವಿಟಮಿನ್‌ಗಳು ಕೂದಲು ಬಲವಾಗಿಸಲು ಸಹಾಯ ಮಾಡುತ್ತವೆ. ಇದು ಕೂದಲು ಉದುರುವುದನ್ನು ಕಡಿಮೆ ಮಾಡಿ ಬಿಳಿ ಕೂದಲು ಸಮಸ್ಯೆಯನ್ನು ನಿಯಂತ್ರಿಸುತ್ತದೆ. ಕೂದಲು ಬೆಳೆಯಲು ಸಹಾಯ ಮಾಡುತ್ತದೆ.
ಬಳಸುವ ವಿಧಾನ:
- 2 ಚಮಚ ಮೆಂತ್ಯೆ ಬೀಜವನ್ನು ರಾತ್ರಿ ನೀರಲ್ಲಿ ನೆನೆಸಿಡಿ.
- ಬೆಳಿಗ್ಗೆ ಅದನ್ನು ಪೇಸ್ಟ್ ಮಾಡಿ ತಲೆಚರ್ಮಕ್ಕೆ ಹಚ್ಚಿ.
- 30 ನಿಮಿಷಗಳ ನಂತರ ತೊಳೆಯಿರಿ.
- ನಿಯಮಿತ ಬಳಕೆಯಿಂದ ಉತ್ತಮ ಫಲಿತಾಂಶ ಸಿಗುತ್ತದೆ.

3. ಆಮ್ಲಾ (ನೆಲ್ಲಿಕಾಯಿ) : ನೆಲ್ಲಿಕಾಯಿ ಕೂದಲಿನ ಆರೋಗ್ಯಕ್ಕೆ ಅತ್ಯುತ್ತಮ ನೈಸರ್ಗಿಕ ಪದಾರ್ಥವಾಗಿದೆ. ಇದರಲ್ಲಿ ವಿಟಮಿನ್ C ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಇರುವುದರಿಂದ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಬೇಲಿ ಕೂದಲು ಆಗದಂತೆ ಸಹಾಯ ಮಾಡುತ್ತದೆ. ನೆಲ್ಲಿಕಾಯಿ ಪೌಡರ್ ಕೂಡ ಕೂದಲಿಗೆ ಹಾಕಬಹುದು ಅಥವಾ ಜ್ಯೂಸು ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು.
ಬಳಸುವ ವಿಧಾನ:
- ನೆಲ್ಲಿಕಾಯಿ ಪುಡಿ ಮತ್ತು ನೀರನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ.
- ತಲೆಚರ್ಮಕ್ಕೆ ಹಚ್ಚಿ 20–30 ನಿಮಿಷ ಬಿಡಿ. ನಂತರ ತೊಳೆಯಿರಿ.
- ಇದು ಕೂದಲಿನ ನೈಸರ್ಗಿಕ ಬಣ್ಣವನ್ನು ಕಾಪಾಡುತ್ತದೆ.
- ನೆಲ್ಲಿಕಾಯಿ ಮತ್ತು ಸ್ವಲ್ಪ ಕರಿಬೇವು ಸೊಪ್ಪು ಸೇರಿಸಿ ಜ್ಯೂಸ್ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು ಇದರಿಂದ ಬಿಳಿ ಕೂದಲು ಕ್ರಮೇಣ ಕಡಿಮೆ ಆಗುತ್ತದೆ.

4.ಈರುಳ್ಳಿ ರಸ : ಈರುಳ್ಳಿ ರಸದಲ್ಲಿ ಸಲ್ಫರ್ ಅಂಶ ಹೆಚ್ಚಿದ್ದು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ಇದು ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಬಿಳಿ ಕೂದಲು ಆಗುವುದನ್ನು ತಡೆಯುತ್ತದೆ. ವಾರಕ್ಕೆ ಒಮ್ಮೆ ಹಾಕಿದರೆ ಕ್ರಮೇಣ ಬಿಳಿ ಕೂದಲು ಆಗುವುದನ್ನು ತಡೆಯಬಹುದು.
ಬಳಸುವ ವಿಧಾನ:
- ಈರುಳ್ಳಿಯನ್ನು ಪೇಸ್ಟ್ ಮಾಡಿ ರಸ ತೆಗೆದುಕೊಳ್ಳಿ.
- ತಲೆಚರ್ಮಕ್ಕೆ ಹಚ್ಚಿ 20 ನಿಮಿಷ ಬಿಡಿ.
- ನಂತರ ಶಾಂಪೂ ಬಳಸಿ ತೊಳೆಯಿರಿ.
- ವಾರಕ್ಕೆ ಒಂದು ಬಾರಿ ಬಳಸಬಹುದು.

5. ಅಲೋವೆರಾ ಜೆಲ್ : ಬಿಳಿ ಕೂದಲು ಕಪ್ಪಾಗಿಸಲು ಮನೆಮದ್ದುಗಳು ಒಂದಾದ ಅಲೋವೆರಾ ತಲೆಚರ್ಮವನ್ನು ಆರೋಗ್ಯಕರವಾಗಿಡುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಕೂದಲಿನ ಒಣತನ ಮತ್ತು ಹಾನಿಯನ್ನು ಕಡಿಮೆ ಮಾಡುತ್ತದೆ. ಕೂದಲು ಆರೋಗ್ಯವಾಗಿರಲು ಸಹಾಯ ಮಾಡಿ ಬಿಳಿಯಾಗುವುದನ್ನು ಕಡಿಮೆ ಮಾಡುತ್ತದೆ.
ಬಳಸುವ ವಿಧಾನ:
- ತಾಜಾ ಅಲೋವೆರಾ ಜೆಲ್ ತಲೆಚರ್ಮಕ್ಕೆ ಹಚ್ಚಿ.
- 30 ನಿಮಿಷಗಳ ನಂತರ ತೊಳೆಯಿರಿ.
- ನಿಯಮಿತ ಬಳಕೆಯಿಂದ ಕೂದಲು ಮೃದುವಾಗುತ್ತದೆ.

6. ಕಪ್ಪು ಚಹಾ (Black Tea) : ಬಿಳಿ ಕೂದಲು ಕಪ್ಪಾಗಿಸಲು ಮನೆಮದ್ದುಗಳು ಒಂದಾದ ಕಪ್ಪು ಚಹಾ ಕೂದಲಿನ ನೈಸರ್ಗಿಕ ಬಣ್ಣವನ್ನು ಗಾಢಗೊಳಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಮೆಹಂದಿ ಪೌಡರ್ ನೊಂದಿಗೆ ಮಿಶ್ರಣ ಮಾಡಿ ಹಾಕಬಹುದು ಅಥವಾ ಹಾಗೆಯೆ ಹಾಕಬಹುದು.
ಬಳಸುವ ವಿಧಾನ:
- ಕಪ್ಪು ಚಹಾವನ್ನು ಕುದಿಸಿ ತಣ್ಣಗಾಗಲು ಬಿಡಿ.
- ತಲೆ ತೊಳೆಯುವ ನಂತರ ಕೂದಲಿಗೆ ಹಾಕಿ.
- 15 ನಿಮಿಷ ಬಿಡಿ ನಂತರ ತೊಳೆಯಿರಿ.
- ಇದು ಕೂದಲಿಗೆ ಹೊಳಪು ನೀಡುತ್ತದೆ.

7. ಸಮತೋಲನ ಆಹಾರ ಮತ್ತು ಜೀವನಶೈಲಿ :
ಕೂದಲು ಆರೋಗ್ಯಕರವಾಗಿರಲು ಪೌಷ್ಟಿಕ ಆಹಾರ ಅತ್ಯಗತ್ಯ. ಕೂದಲಿನ ಆರೋಗ್ಯಕ್ಕೆ ಕೇವಲ ಕೂದಲಿನ ಆರೈಕೆಯಲ್ಲದೆ ದೇಹದ ಒಳಗೆ ಕೂಡ ಪೌಷ್ಟಿಕ ಆಹಾರ ಅವಶ್ಯಕವಾಗಿರುತ್ತದೆ. ಪೌಷ್ಟಿಕ ಅಥವಾ ಸಮತೋಲಿನ ಆಹಾರ ಕೂಡ ಕೂದಲು ಬೆಳೆಯಲು ಮತ್ತು ಕೂದಲು ಬಿಳಿಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಅನುಸರಿಸಬೇಕಾದ ಅಭ್ಯಾಸಗಳು:
- ಪ್ರೋಟೀನ್ ಮತ್ತು ವಿಟಮಿನ್ ಇರುವ ಆಹಾರ ಸೇವಿಸಿ.
- ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಹೆಚ್ಚು ಸೇವಿಸಿ.
- ಒತ್ತಡ ಕಡಿಮೆ ಮಾಡಿಕೊಳ್ಳಿ.
- ದಿನಕ್ಕೆ ನಿಮ್ಮ ದೇಹಕ್ಕೆ ಅನುಸಾರವಾಗಿ 2 ರಿಂದ 3 ಲೀಟರ್ ನೀರು ಕುಡಿಯಿರಿ.
- ಹೆಚ್ಚು ರಾಸಾಯನಿಕ ಇರುವ ಉತ್ಪನ್ನಗಳನ್ನು ತಪ್ಪಿಸಿ. ಇದರಿಂದಲೇ ಬಿಳಿ ಕೂದಲು ಜಾಸ್ತಿ ಆಗುತ್ತವೆ.
ಸರಿಯಾದ ಆಹಾರ ಕ್ರಮ ಕೂದಲು ಆರೋಗ್ಯಕ್ಕೆಮತ್ತು ಬಿಳಿ ಕೂದಲು ತಡೆಯಲು ಮುಖ್ಯ ಪಾತ್ರ ವಹಿಸುತ್ತದೆ.

ಬಿಳಿ ಕೂದಲು ಬರಲು ಕಾರಣಗಳು :
ಬಿಳಿ ಕೂದಲು ಸಮಸ್ಯೆಗೆ ಹಲವು ಕಾರಣಗಳಿವೆ:
- ಪೌಷ್ಟಿಕಾಂಶ ಆಹಾರದ ಕೊರತೆ
- ಮಾನಸಿಕ ಒತ್ತಡದಿಂದ ಬಿಳಿ ಕೂದಲು ಬೇಗ ಆಗುತ್ತವೆ.
- ಮಾಲಿನ್ಯ , ಧೂಳು ಇದರಿಂದ ಬಿಳಿ ಕೂದಲು ಬೇಗ ಆಗುತ್ತವೆ.
- ಕೂದಲು ಬಿಳಿಯಾದಾಗ ಕೂದಲಿಗೆ ರಾಸಾಯನಿಕ ಉತ್ಪನ್ನಗಳ ಬಳಕೆ ಮಾಡುತ್ತಾರೆ. ಇದು ಆ ಸಮಯಕ್ಕೆ ಕೂದಲಿಗೆ ಬಣ್ಣ ನೀಡಬಹುದು ಆದರೆ ಭವಿಷ್ಯದಲ್ಲಿ ಕೂದಲಿಗೆ ತೊಂದರೆಗಳಾಗುತ್ತವೆ.
- ಅಧಿಕ ಒತ್ತಡದಿಂದ ಹಾರ್ಮೋನ್ ಬದಲಾವಣೆ ಆಗಿ ಮಹಿಳೆಯರಲ್ಲಿ ಬಿಳಿ ಕೂದಲು ಬೇಗ ಬರುತ್ತವೆ.
ಬಿಳಿ ಕೂದಲು ಕಪ್ಪಾಗಿಸಲು ಮನೆಮದ್ದುಗಳು ಮಾಡಿದರೆ ಈ ಕಾರಣಗಳನ್ನು ನಿಯಂತ್ರಿಸಿದರೆ ಕೂದಲು ಆರೋಗ್ಯಕರವಾಗಿರುತ್ತದೆ.
ಬಿಳಿ ಕೂದಲು ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸುವುದು ಕಷ್ಟವಾದರೂ ಸರಿಯಾದ ಆರೈಕೆ ಮತ್ತು ನೈಸರ್ಗಿಕ ಮನೆಮದ್ದುಗಳಿಂದ ಕೂದಲಿನ ಆರೋಗ್ಯವನ್ನು ಸುಧಾರಿಸಬಹುದು. ತೆಂಗಿನ ಎಣ್ಣೆ, ಕರಿಬೇವು, ನೆಲ್ಲಿಕಾಯಿ, ಮೆಂತ್ಯೆ, ಅಲೋವೆರಾ ಮುಂತಾದ ನೈಸರ್ಗಿಕ ಪದಾರ್ಥಗಳನ್ನು ನಿಯಮಿತವಾಗಿ ಬಳಸಿದರೆ ಕೂದಲು ಬಲವಾಗುತ್ತದೆ ಮತ್ತು ಬಿಳಿ ಕೂದಲು ಸಮಸ್ಯೆ ನಿಯಂತ್ರಣದಲ್ಲಿರುತ್ತದೆ.
ನಿಯಮಿತ ಆರೈಕೆ, ಸಮತೋಲನ ಆಹಾರ ಮತ್ತು ಆರೋಗ್ಯಕರ ಜೀವನಶೈಲಿ ಕೂದಲಿನ ಆರೋಗ್ಯ ಕಾಪಾಡಲು ಅತ್ಯಂತ ಮುಖ್ಯ.
ಸೂಚನೆ : ಈ ಲೇಖನದಲ್ಲಿ ನೀಡಿರುವ ಮಾಹಿತಿ ಸಾಮಾನ್ಯ ಆರೋಗ್ಯ ಮಾಹಿತಿ ಮಾತ್ರವಾಗಿದೆ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ಆರೋಗ್ಯ ಸಮಸ್ಯೆಗೆ ವೈದ್ಯರ ಸಲಹೆ ಪಡೆಯಿರಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : https://www.healthline.com/health/beauty-skin-care/white-hair
Pingback: ಉತ್ತಮ ನಿದ್ರೆ ಪಡೆಯಲು 7 ಸಲಹೆಗಳು
Pingback: ಹೆಣ್ಣುಮಕ್ಕಳಲ್ಲಿ ಕೂದಲು ಉದುರಲು ಪ್ರಮುಖ ಕಾರಣಗಳು