ಕಾಯಿ ಹಿಟ್ಟು | ಅಕ್ಕಿ ಸಿಹಿ ಕಡುಬು | ಮಲೆನಾಡು / ಕೊಡಗು ಶೈಲಿಯಲ್ಲಿ ಮಾಡುವ ವಿಧಾನ

ಕಾಯಿ ಹಿಟ್ಟು ಮಲೆನಾಡು ಮತ್ತು ಕೊಡಗಿನಲ್ಲಿ ಗೌರಿ ಗಣೇಶ ಹಬ್ಬಕ್ಕೆ ಮಾಡುವುದು ವಿಶೇಷ ಅಡುಗೆಯಾಗಿದೆ. ಇದನ್ನು ಹಬ್ಬದಲ್ಲಿ ದೇವರ ನೈವಿದ್ಯಕ್ಕೆ ಇಡುತ್ತಾರೆ. ಹಬ್ಬ ಬಂತೇದರೆ ಹಬ್ಬದ ತಯಾರಿಯೊಂದಿಗೆ ವಿಶೇಷ ಅಡುಗೆ ಮಾಡುವುದು ಮನಸ್ಸಿಗೆ ಮುದ ನೀಡುತ್ತದೆ.

ಬೇಕಾಗುವ ಸಾಮಗ್ರಿಗಳು :

• ಅಕ್ಕಿ ಹಿಟ್ಟು 2 cup (ಅಕ್ಕಿಯನ್ನು ಚೆನ್ನಾಗಿ ತೊಳೆದು ಪುಡಿ ಮಾಡಿಸಬೇಕು)

• ಕಾಯಿ ತುರಿದದ್ದು – 1 ಕಪ್

• ಬೆಲ್ಲ ಅಥವಾ ಸಕ್ಕರೆ – 1 ಕಪ್

• ಬಿಳಿ ಅಥವಾ ಕಪ್ಪು ಎಳ್ಳು – 1 ಕಪ್

• ಒಂದು ಚಿಟಿಕೆ ಉಪ್ಪು

• ಬಿಸಿ ನೀರು

ಹಿಟ್ಟನ್ನು ತಯಾರಿಸುವ ವಿಧಾನ :

ಅಕ್ಕಿಯನ್ನು ಪುಡಿ ಮಾಡಿದ ಹಿಟ್ಟುನ್ನು ಚೆನ್ನಾಗಿ ಬಿಸಿ ನೀರಿನೊಂದಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಹದವಾಗಿ ಕಲಸಬೇಕು ಅದನ್ನು ಒಂದು ಪಾತ್ರೆಯಲ್ಲಿ ಇಡಿ

ಹೂರಣ ತಯಾರಿಸುವ ವಿಧಾನ :

ಎಳ್ಳನ್ನು ಹುರಿದುಕೊಂಡು ಅದಕ್ಕೆ ತೆಂಗಿನ ಕಾಯಿ ತುರಿದದ್ದು, ಸಕ್ಕರೆ ಅಥವಾ ಬೆಲ್ಲ ಹಾಕಿ ಮಿಶ್ರಣ ಮಾಡಿಕೊಳ್ಳಿ

ಕಾಯಿ ಹಿಟ್ಟು ಮಾಡುವ ವಿಧಾನ :

ಹಿಟ್ಟನ್ನು ಚಿಕ್ಕದಾಗಿ ತಟ್ಟಿ ಅದರ ಒಳಗೆ ಹೂರಣವನ್ನು ಹಾಕಿ ಚನ್ನಾಗಿ ಮುಚ್ಚಬೇಕು, ನಂತರ ತಯಾರಿಸಿಟ್ಟ ಕಾಯಿ ಹಿಟ್ಟನ್ನು ಕಡುಬಿನ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ, ಮೇಲೆ ಇಡ್ಲಿ ಸ್ಟಾಂಡ್ ಅನ್ನು ಇಟ್ಟು ಅದರ ಮೇಲೆ ಅರಿಶಿನ ಎಲೆ ಅಥವಾ ಬಾಳೆ ಎಲೆ ಹಾಕಿ 20 ನಿಮಿಷ ಸ್ಟೀಮ್ ನಲ್ಲಿ ಬೇಯಿಸಬೇಕು. ನಂತರ ಸವಿಯಲು ಸಿದ್ದ.

ತಿನ್ನುವ ವಿಧಾನ :

• ಕಾಯಿ ಹಿಟ್ಟನ್ನು ತುಪ್ಪದೊಂದಿಗೆ ಬಿಸಿ ಬಿಸಿಯಾಗಿ ತಿನ್ನಬೇಕು

• ತುಪ್ಪ ಇಲ್ಲದಿದ್ದರೆ ಹಾಗೇಯೂ ತಿನ್ನಬಹುದು

ಬೇಯಿಸುವಾಗ ಕೆಲವು ಸೂಚನೆಗಳು :

• ಅರಿಶಿನ ಎಲೆಯಲ್ಲಿ ಬೇಯಿಸಿದರೆ ತುಂಬಾ ಚನ್ನಾಗಿ ಪರಿಮಳ ಬರುತ್ತದೆ.

• ಅರಿಶಿನ ಎಲೆ ಇಲ್ಲ ಅಂದರೆ ಬಾಲೆ ಎಲೆ ಬಳಸಿ

•ನೀರನ್ನು ಜಾಸ್ತಿ ಹಾಕಿ ಬೇಯಿಸಬಾರದು

ಹೆಚ್ಚಿನ ಮಾಹಿತಿಗಾಗಿ https://swayampaaka.com/recipes/desserts/kayi-hurittu/

Leave a Comment

Your email address will not be published. Required fields are marked *

Scroll to Top