ಡ್ಯಾಂಡ್ರಫ್ ಹೋಗಲು 7 ಸುಲಭ ನೈಸರ್ಗಿಕ ವಿಧಾನಗಳು ಯಾವುವು?

ಡ್ಯಾಂಡ್ರಫ್ ಹೋಗಲು 7 ಸುಲಭ ನೈಸರ್ಗಿಕ ವಿಧಾನಗಳು ಯಾವುವು ಎಂದರೆ ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಡ್ಯಾಂಡ್ರಫ್ (ತಲೆಹೊಟ್ಟು) ಒಂದು. ತಲೆಹೊಟ್ಟು ಇದ್ದರೆ ಕೂದಲು ಉದುರುವುದು, ತಲೆ ಕೆರೆತ, ಕೂದಲು ದುರ್ಬಲವಾಗುವುದು, ತಲೆ ಒಣಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ನಿರ್ಲಕ್ಷಿಸಿದರೆ ಕೂದಲಿನ ಆರೋಗ್ಯ ಹಾಳಾಗಬಹುದು. ಆದರೆ ಕೆಲವು ಸರಳ ನೈಸರ್ಗಿಕ ವಿಧಾನಗಳನ್ನು ಅನುಸರಿಸಿದರೆ ಡ್ಯಾಂಡ್ರಫ್ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಹುದು

ಡ್ಯಾಂಡ್ರಫ್ ಹೋಗಲು 7 ಸುಲಭ ನೈಸರ್ಗಿಕ ವಿಧಾನಗಳು ಯಾವುವು? ತಿಳಿದುಕೊಳ್ಳೋಣ.

1. ತೆಂಗಿನ ಎಣ್ಣೆ ಮತ್ತು ನಿಂಬೆ ರಸ : ತೆಂಗಿನ ಎಣ್ಣೆ ಕೂದಲಿಗೆ ಪೋಷಣೆ ನೀಡುತ್ತದೆ ಮತ್ತು ತಲೆ ಚರ್ಮ ಒಣಗಿರುವುದನ್ನು ಕಡಿಮೆ ಮಾಡುತ್ತದೆ. ನಿಂಬೆ ರಸದಲ್ಲಿ ಇರುವ ಆಮ್ಲೀಯ ಗುಣಗಳು ತಲೆಹೊಟ್ಟೆ ನಿವಾರಣೆಗೆ ಸಹಾಯ ಮಾಡುತ್ತವೆ.

ಬಳಸುವ ವಿಧಾನ:

  • 2 ಚಮಚ ತೆಂಗಿನ ಎಣ್ಣೆಗೆ 1 ಚಮಚ ನಿಂಬೆ ರಸ ಸೇರಿಸಿ.
  • ಈ ಮಿಶ್ರಣವನ್ನು ತಲೆಚರ್ಮಕ್ಕೆ ಹಚ್ಚಿ 20 ನಿಮಿಷ ಬಿಡಿ.
  • ನಂತರ ಸೌಮ್ಯ ಶಾಂಪೂ ಬಳಸಿ ತೊಳೆಯಿರಿ.

ಇದನ್ನು ವಾರಕ್ಕೆ 2 ಬಾರಿ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ.

2. ಅಲೋವೆರಾ ಜೆಲ್ :

ಅಲೋವೆರಾ ತಲೆ ಕೆರೆತ ಮತ್ತು ಉರಿಯನ್ನು ಕಡಿಮೆ ಮಾಡುತ್ತದೆ. ಇದು ಬ್ಯಾಕ್ಟೀರಿಯಾ ಮತ್ತು ಫಂಗಲ್ ಸೋಂಕನ್ನು ಕಡಿಮೆ ಮಾಡಲು ಸಹಕಾರಿ.

ಬಳಸುವ ವಿಧಾನ:

  • ತಾಜಾ ಅಲೋವೆರಾ ಜೆಲ್ ತೆಗೆದುಕೊಳ್ಳಿ.
  • ತಲೆಚರ್ಮಕ್ಕೆ ನೇರವಾಗಿ ಹಚ್ಚಿ 30 ನಿಮಿಷ ಬಿಡಿ.
  • ನಂತರ ತಣ್ಣೀರು ಮತ್ತು ಶಾಂಪೂ ಬಳಸಿ ತೊಳೆಯಿರಿ.
  • ನಿಯಮಿತವಾಗಿ ಬಳಸಿದರೆ ತಲೆಚರ್ಮ ಆರೋಗ್ಯಕರವಾಗುತ್ತದೆ.

3. ಮೆಂತ್ಯೆ ಬೀಜದ ಪೇಸ್ಟ್ :

ಮೆಂತ್ಯೆ ಬೀಜದಲ್ಲಿ ಪ್ರೋಟೀನ್ ಮತ್ತು ನಿಕೋಟಿನಿಕ್ ಆಮ್ಲ ಇದ್ದು ಕೂದಲು ಬಲವಾಗಿಸಲು ಸಹಾಯ ಮಾಡುತ್ತದೆ ಮತ್ತು ಡ್ಯಾಂಡ್ರಫ್ ಕಡಿಮೆ ಮಾಡುತ್ತದೆ.

ಬಳಸುವ ವಿಧಾನ:

  • 2 ಚಮಚ ಮೆಂತ್ಯೆ ಬೀಜವನ್ನು ರಾತ್ರಿ ನೀರಲ್ಲಿ ನೆನೆಸಿಡಿ.
  • ಬೆಳಿಗ್ಗೆ ಅದನ್ನು ಪೇಸ್ಟ್ ಮಾಡಿ ತಲೆಚರ್ಮಕ್ಕೆ ಹಚ್ಚಿ.
  • 30 ನಿಮಿಷ ನಂತರ ತೊಳೆಯಿರಿ.
  • ಇದನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಬಳಸಬಹುದು.

4. ಮೊಸರು (Curd) :

ಮೊಸರು ತಲೆಚರ್ಮಕ್ಕೆ ತಂಪು ನೀಡುತ್ತದೆ ಮತ್ತು ಡ್ಯಾಂಡ್ರಫ್ ಕಡಿಮೆ ಮಾಡುತ್ತದೆ. ಇದು ತಲೆಚರ್ಮದ ಒಣತನವನ್ನು ಕಡಿಮೆ ಮಾಡುತ್ತದೆ.

ಬಳಸುವ ವಿಧಾನ:

  • ತಾಜಾ ಮೊಸರನ್ನು ತಲೆಚರ್ಮಕ್ಕೆ ಹಚ್ಚಿ.
  • 20–30 ನಿಮಿಷ ಬಿಡಿ.
  • ನಂತರ ತಣ್ಣೀರು ಬಳಸಿ ತೊಳೆಯಿರಿ.
  • ಇದರಿಂದ ಕೂದಲು ಮೃದುವಾಗುತ್ತದೆ ಮತ್ತು ತಲೆಹೊಟ್ಟೆ ಕಡಿಮೆಯಾಗುತ್ತದೆ.

5.ಬೇವಿನ(ನೀಮ್) ಎಲೆಗಳು :

ಬೆವು ಎಲೆಗಳಲ್ಲಿ ಬ್ಯಾಕ್ಟೀರಿಯಾ ತಡೆಗಟ್ಟುತ್ತವೆ ಮತ್ತು ಫಂಗಸ್ ವಿರೋಧಿ ಗುಣಗಳಿವೆ. ಇದು ತಲೆಚರ್ಮದ ಸೋಂಕನ್ನು ಕಡಿಮೆ ಮಾಡುತ್ತದೆ.

ಬಳಸುವ ವಿಧಾನ:

  • ಬೇವು ಎಲೆಗಳನ್ನು ನೀರಲ್ಲಿ ಕುದಿಸಿ ತಣ್ಣಗಾಗಲು ಬಿಡಿ.
  • ಆ ನೀರನ್ನು ತಲೆ ತೊಳೆಯಲು ಬಳಸಬಹುದು.
  • ವಾರಕ್ಕೆ 2 ಬಾರಿ ಬಳಸಿದರೆ ಉತ್ತಮ.

6. ಆಪಲ್ ಸೈಡರ್ ವಿನಿಗರ್ :

ಆಪಲ್ ಸೈಡರ್ ವಿನಿಗರ್ ತಲೆಚರ್ಮದ ಫಂಗಸ್ ಬೆಳವಣಿಗೆಯನ್ನು ತಡೆಯುತ್ತದೆ.

ಬಳಸುವ ವಿಧಾನ:

  • ಆಪಲ್ ಸೈಡರ್ ವಿನಿಗರ್ ಮತ್ತು ನೀರನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ.
  • ತಲೆಚರ್ಮಕ್ಕೆ ಹಚ್ಚಿ 15 ನಿಮಿಷ ಬಿಡಿ. ನಂತರ ತೊಳೆಯಿರಿ.
  • ಇದನ್ನು ವಾರಕ್ಕೆ ಒಂದು ಬಾರಿ ಬಳಸಬಹುದು.

7. ಸರಿಯಾದ ಕೂದಲು ಆರೈಕೆ :

ಡ್ಯಾಂಡ್ರಫ್ ತಡೆಯಲು ದಿನನಿತ್ಯದ ಕೆಲವು ಅಭ್ಯಾಸಗಳು ಮುಖ್ಯ

  • ವಾರಕ್ಕೆ 2–3 ಬಾರಿ ತಲೆ ತೊಳೆಯಿರಿ.
  • ಹೆಚ್ಚು ರಾಸಾಯನಿಕ ಇರುವ ಉತ್ಪನ್ನಗಳನ್ನು ತಪ್ಪಿಸಿ.
  • ತಲೆಚರ್ಮ ಸ್ವಚ್ಛವಾಗಿರಲು ಗಮನ ಕೊಡಿ.
  • ಒತ್ತಡ ಕಡಿಮೆ ಮಾಡಿಕೊಳ್ಳಿ.
  • ಪೌಷ್ಟಿಕ ಆಹಾರ ಸೇವಿಸಿ.

ಸರಿಯಾದ ಆರೈಕೆ ಮಾಡಿದರೆ ಡ್ಯಾಂಡ್ರಫ್ ಸಮಸ್ಯೆ ಕಡಿಮೆಯಾಗುತ್ತದೆ.

ಡ್ಯಾಂಡ್ರಫ್ ಸಾಮಾನ್ಯ ಸಮಸ್ಯೆಯಾಗಿದ್ದರೂ ಸರಿಯಾದ ನೈಸರ್ಗಿಕ ವಿಧಾನಗಳಿಂದ ಇದನ್ನು ನಿಯಂತ್ರಿಸಬಹುದು. ತೆಂಗಿನ ಎಣ್ಣೆ, ಅಲೋವೆರಾ, ಮೆಂತ್ಯೆ, ಮೊಸರು, ಬೆವು ಮುಂತಾದ ನೈಸರ್ಗಿಕ ಪದಾರ್ಥಗಳು ತಲೆಚರ್ಮ ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ. ನಿಯಮಿತವಾಗಿ ಈ ವಿಧಾನಗಳನ್ನು ಅನುಸರಿಸಿದರೆ ತಲೆಹೊಟ್ಟೆ ಕಡಿಮೆಯಾಗುತ್ತದೆ ಮತ್ತು ಕೂದಲು ಆರೋಗ್ಯಕರವಾಗಿರುತ್ತದೆ.ತಲೆಚರ್ಮದ ಆರೋಗ್ಯಕ್ಕಾಗಿ ಸ್ವಚ್ಛತೆ, ಪೌಷ್ಟಿಕ ಆಹಾರ ಮತ್ತು ಸರಿಯಾದ ಆರೈಕೆ ಅತ್ಯಂತ ಮುಖ್ಯ.

ಹೆಚ್ಚಿನ ಮಾಹಿತಿಗಾಗಿ : https://www.healthline.com/health/dandruff

ಸೂಚನೆ : ಈ ಲೇಖನದಲ್ಲಿ ನೀಡಿರುವ ಮಾಹಿತಿ ಸಾಮಾನ್ಯ ಆರೋಗ್ಯ ಮಾಹಿತಿ ಯಾವುದೇ ಆರೋಗ್ಯ ಸಮಸ್ಯೆ ಅಥವಾ ತಲೆಚರ್ಮ ಸಂಬಂಧಿತ ತೊಂದರೆ ಗಂಭೀರವಾಗಿದ್ದರೆ ದಯವಿಟ್ಟು ಆರೋಗ್ಯ ತಜ್ಞರ ಸಲಹೆ ಪಡೆಯಿರಿ. ಈ ಲೇಖನದಲ್ಲಿ ತಿಳಿಸಿದ ನೈಸರ್ಗಿಕ ವಿಧಾನಗಳನ್ನು ಬಳಸುವ ಮೊದಲು ನಿಮ್ಮ ತಲೆಚರ್ಮಕ್ಕೆ ಸೂಕ್ತವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.

Leave a Comment

Your email address will not be published. Required fields are marked *

Scroll to Top