ಕಾಫಿಯ ಪರಿಚಯ:
ಕಾಫಿ ತೋಟಗಳು ನಮ್ಮ ಕರ್ನಾಟಕದ ಹೃದಯ ಭಾಗವಾಗಿರುವ ಮಲೆನಾಡಿನಲ್ಲಿ, ವಿಶೇಷವಾಗಿ ಚಿಕ್ಕಮಗಳೂರು, ಕೊಡಗು, ಸಕಲೇಶಪುರ ಮತ್ತು ಹಾಸನ ಭಾಗಗಳಲ್ಲಿ ಕಾಣಬಹುದು. ತಂಪಾದ ಹವಾಮಾನ, ಉತ್ತಮ ಮಣ್ಣು ಮತ್ತು ನಿರಂತರವಾಗಿ ಬೀಳುವ ಮಳೆಯು ಬೆಳೆ ಬೆಳೆಸಲು ಸೂಕ್ತವಾದ ಪರಿಸರವಾಗಿದೆ.
ಕಾಫಿ ಬೆಳೆಯುವ ವಿಧಾನ:
ನರ್ಸರಿ ಉತ್ತಮ ಬೆಳೆಯ ಸಂಕೇತ, ಕಾಫಿ ನರ್ಸರಿ ಎಂದರೆ ಗಿಡವನ್ನು ಚಿಕ್ಕ ಚಿಕ್ಕ ಪ್ಲಾಸ್ಟಿಕ್ ನಲ್ಲಿ ಗಿಡಗಳನ್ನು ಬೆಳೆಸಿ, ನಂತರ ತೋಟದಲ್ಲಿ ನೆಡುವುದು. ಉತ್ತಮ ಗುಣಮಟ್ಟದ ಬೆಳೆಗೆ ಉತ್ತಮ ನರ್ಸರಿ ಪ್ರಾರಂಭಿಸುವುದು ಅವಶ್ಯಕ.

ಕಾಫಿ ನರ್ಸರಿ ಮಾಡುವ ವಿಧಾನ:
- ಬೀಜ ತಯಾರಿ (Pre-sowing): ಬೀಜಗಳನ್ನು ದಿನದವರೆಗೆ ನೀರಿನಲ್ಲಿ ನೆನೆಸಿಡಬೇಕು (24 ರಿಂದ 36 ಗಂಟೆಗಳವರೆಗೆ).ನಂತರ ಬಿಸಿಯ ನೀರಿನಲ್ಲಿ ಸ್ವಲ್ಪ ಸಮಯ ನೆನೆಸಿದರೆ ಉತ್ತಮ ಅಂಕುರಣವಾಗುತ್ತದೆ.
- ಅಂಕುರಣ ಬೆಡ್ (Germination bed): ಬೇಕಾದಷ್ಟು ಉದ್ದದ ಮಣ್ಣು ಬೆಡ್ ತಯಾರಿಸಬೇಕು.ಮಣ್ಣಿನಲ್ಲಿ ಗೊಬ್ಬರ, ಹಳೆ ಹಸಿರು ಎಲೆ ಮುಂತಾದವುಗಳನ್ನು ಹಾಕಿ ಬೆಡ್ ಸಿದ್ಧಪಡಿಸಬೇಕು.
- ನರ್ಸರಿ ಬೆಡ್ಸ್ (Nursery Beds): ಮೊಳಕೆ ಬೀಜಗಳನ್ನು ಮಣ್ಣು ಇರುವ ಜಾಗದಲ್ಲಿ ನೆಡಬೇಕು ಹಾಗೆಯೇ ಪ್ರತಿದಿನ ನೀರು ಸಿಂಪಡಿಸಬೇಕು.
- ಕಾಫಿ ಗಿಡ ಪ್ಲಾಸ್ಟಿಕ್ ಗೆ ತುಂಬಿಸುವ ವಿಧಾನ : 3 ತಿಂಗಳ ನಂತರ ಮಣ್ಣಿನಲ್ಲಿ ಗಿಡ ಹುಟ್ಟಿದ ಮೇಲೆ ಚನ್ನಾಗಿ ಹುಟ್ಟಿದ ಗಿಡಗಳನ್ನು ಚಿಕ್ಕ ಚಿಕ್ಕ ಪ್ಲಾಸ್ಟಿಕ್ ನಲ್ಲಿ ತುಂಬಬೇಕು. ಕಾಫಿ ನರ್ಸರಿಯಿಂದ ತೋಟಕ್ಕೆ 7 ತಿಂಗಳಾದ ನಂತರ ಈ ಚಿಕ್ಕ ಗಿಡಗಳು ತೋಟದಲ್ಲಿ ನೆಡುವಷ್ಟು ಬಲಿಷ್ಠವಾಗುತ್ತವೆ.ನಂತರ ಇವನ್ನು ತೋಟದಲ್ಲಿ 6 x 6 ಅಡಿ ಅಂತರದಲ್ಲಿ ನೆಡಲಾಗುತ್ತದೆ.
- ನರ್ಸರಿ ಉಪಯೋಗಗಳು: ಗುಣಮಟ್ಟದ ಗಿಡಗಳ ಬೆಳವಣಿಗೆ.ಸಮರ್ಪಕ ಕಾಳಜಿಯಿಂದ ಉತ್ತಮ ಬೆಳೆಯ ನಿರೀಕ್ಷೆ. ಕೃಷಿಕನಿಗೆ ಹೆಚ್ಚು ಲಾಭ.

ಕಾಫಿಯನ್ನು ಶ್ರಾವಣ ಮಾಸದಲ್ಲಿ ನೆಡಲಾಗುತ್ತದೆ. ನೆಟ್ಟ ಬಳಿಕ ಸುಮಾರು 5-6 ವರ್ಷಗಳಲ್ಲಿ ಫಲ ನೀಡುತ್ತದೆ. ಕಾಫಿಯ ಹೂವು ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಸ್ವಲ್ಪ ಮಳೆಯು ಬಿದ್ದ ನಂತರ ಹೂವು ಬಿಡುತ್ತವೆ. ಜಾಸ್ತಿ ಮಳೆ ಬಿದ್ದರೆ ಹೂವು ಉದುರಿ ಹೋಗುತ್ತವೆ. ಅನಂತರ ಡಿಸೆಂಬರ್ ನಲ್ಲಿ ಕಾಫಿ ಹಣ್ಣನ್ನು ಕುಯ್ಯಬಹುದು. ಕುಯ್ದ ನಂತರ ಸಿಪ್ಪೆ ತೆಗೆದು, ಒಣಗಿಸಿ, ನಂತರ ಹುರಿದು ಕಾಫಿ ಪುಡಿಯನ್ನು ತಯಾರಿಸಲಾಗುತ್ತದೆ.

ಪ್ರಮುಖ ಕಾಫಿ ಬಗೆಗಳು:
1. ಅರಬಿಕಾ (Arabica): ಉತ್ತಮ ಗುಣಮಟ್ಟ, ಹೆಚ್ಚು ಸುಗಂಧದ ಗುಣ, ಕಡಿಮೆ ಕ್ಯಾಫಿನ್ ಅಂಶ.
2. ರೊಬಸ್ಟಾ (Robusta): ಹೆಚ್ಚು ಶಕ್ತಿವಂತ, ಕಡಿಮೆ ಬೆಲೆಯುಳ್ಳದು, ಹೆಚ್ಚು ಕ್ಯಾಫಿನ್ ಅಂಶ.
ಕಾಫಿ ತೋಟಗಳ ಪ್ರವಾಸೋದ್ಯಮ (Coffee Tourism): ಇತ್ತೀಚಿನ ದಿನಗಳಲ್ಲಿ ಕಾಫಿ ತೋಟಗಳಲ್ಲಿ ಹೋಮ್ಸ್ಟೇಗಳು, ಎಡ್ವೆಂಚರ್ ಪ್ರವಾಸ ಹಾಗೂ ಹೆರಿಟೇಜ್ ಟೂರಿಸಂ ಕೂಡ ಜಾಸ್ತಿಯಾಗುತ್ತಿದೆ. ಪ್ರವಾಸಿಗರು ಇಲ್ಲಿ ಕಾಫಿ ತಯಾರಿಕೆ ಪ್ರಕ್ರಿಯೆ ನೋಡಬಹುದು, ಪ್ರಕೃತಿಯ ಸೌಂದರ್ಯ ಅನುಭವಿಸಬಹುದು.
ಆರ್ಥಿಕ ಮಹತ್ವ:
ಕಾಫಿ ತೋಟಗಳು ಸಾವಿರಾರು ಜನರಿಗೆ ಉದ್ಯೋಗವನ್ನು ನೀಡುತ್ತವೆ. ಇದರ ಮೂಲಕ ದೇಶದ ಆರ್ಥಿಕತೆಯಲ್ಲೂ ಮಹತ್ವಪೂರ್ಣ ಪಾತ್ರವಿದೆ. ಭಾರತೀಯ ಕಾಫಿಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ.ಕಾಫಿ ಬೆಳೆ ಲಕ್ಷಾಂತರ ಜನರಿಗೆ ಉದ್ಯೋಗ ಮತ್ತು ಆದಾಯವನ್ನು ಒದಗಿಸುತ್ತಿದೆ.

ಕಾಫಿಯ ಲಾಭಗಳು (Advantages of Coffee)
- ಮನಸ್ಸಿಗೆ ಚೈತನ್ಯ ನೀಡುತ್ತದೆ:ಕಾಫಿಯಲ್ಲಿರುವ ಕ್ಯಾಫಿನ್ ಸಮರ್ಪಕ ತಕ್ಷಣ ಶಕ್ತಿ, ಒತ್ತಡ ನಿವಾರಣೆಗೆ ಸಹಾಯಕವಾಗುತ್ತದೆ.
- ಒತ್ತಡ ನಿವಾರಣೆ: ಸಮಯಕ್ಕೆ ಕುಡಿಯುವ ಕಾಫಿ ದೇಹದ ತಣಿವಿಗೆ ಸಹಾಯಮಾಡುತ್ತದೆ ಮತ್ತು ಮನಸ್ಸನ್ನು ವಿಶ್ರಾಂತಗೊಳಿಸುತ್ತದೆ.
- ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ:ಬಿಸಿ ಕಾಫಿ ಕುಡಿಯುವುದು ಆಹಾರ ಜೀರ್ಣತೆಗೆ ಸಹಾಯ ಮಾಡುತ್ತದೆ.
- ಹೃದಯ ಆರೋಗ್ಯಕ್ಕೆ ಉತ್ತಮ: ಮಿತ ಪ್ರಮಾಣದಲ್ಲಿ ಕಾಫಿ ಕುಡಿಯುವುದು ರಕ್ತದೊತ್ತಡ ನಿಯಂತ್ರಣ ಹಾಗೂ ಹೃದಯ ಆರೋಗ್ಯಕ್ಕೆ ಸಹಾಯಕ.
- ಮೆದುಳಿನ ಚಟುವಟಿಕೆ ಹೆಚ್ಚಿಸುತ್ತದೆ: ಕಾಫಿಯ ಕ್ಯಾಫಿನ್ ಮೆದುಳಿನ ಕ್ರಿಯಾಶೀಲತೆಯನ್ನು ಹೆಚ್ಚಿಸಿ, ನೆನಪಿನ ಶಕ್ತಿ ಮತ್ತು ಕೇಂದ್ರೀಕರಣವನ್ನು ಉತ್ತಮಗೊಳಿಸುತ್ತದೆ.
- ಶರೀರದ ಕೊಬ್ಬು ಕರಗಿಸಲು ಸಹಾಯಕ: ಕಾಫಿ ದೇಹದ ಮೆಟಾಬೊಲಿಸಂ ಹೆಚ್ಚಿಸಿ ಕೊಬ್ಬು ಕರಗಿಸುವಲ್ಲಿ ಸಹಾಯ ಮಾಡುತ್ತದೆ.
- ಮೈಗ್ರೆನ್ ತಲೆ ನೋವಿಗೆ ಉಪಶಮನ: ಕೆಲವೊಮ್ಮೆ ತೀವ್ರ ತಲೆ ನೋವಿಗೆ ಕಾಫಿಯಲ್ಲಿನ ಕ್ಯಾಫಿನ್ ಶಮನ ನೀಡಬಹುದು.
- ಆಂಟಿ-ಆಕ್ಸಿಡೆಂಟ್ ಗುಣಗಳು: ಕಾಫಿಯಲ್ಲಿ ಬಲವಾದ ಆಂಟಿ-ಆಕ್ಸಿಡೆಂಟ್ಗಳು ಇರುತ್ತದೆ. ಇದು ದೇಹವನ್ನು ವಿಷಕಾರಿಯ ಕಣಗಳಿಂದ ರಕ್ಷಿಸುತ್ತದೆ.
- ಕಾಫಿ ಕೇವಲ ಪಾನೀಯವಲ್ಲ, ಕೃಷಿ ಉದ್ಯೋಗವು ಹೌದು

https://agritech.tnau.ac.in/horticulture/horti_plantation%20crops_coffee.html