ರುಚಿಕರ ಪ್ರಾನ್ಸ್ ಫ್ರೈ ರೆಸಿಪಿ ಕನ್ನಡದಲ್ಲಿ – ಹೊರಗೆ ಕ್ರಿಸ್ಪಿ, ಒಳಗೆ ಜ್ಯೂಸಿ!

ಪ್ರಾನ್ಸ್ ಫ್ರೈ ರೆಸಿಪಿ : ತಿನ್ನೋವರಿಗಂತೂ ‘ಪ್ರಾನ್ಸ್ ಫ್ರೈ’ ಎಂದರೆ ಮೂಗಿಗೆ ಬರುವ ಸುಗಂಧವೇ ಸಾಕು ಬಾಯಲ್ಲಿ ನೀರು ತರಲು. ಇದು ತಯಾರಿಸಲು ತುಂಬಾ ಸುಲಭ, ಸಮಯ ಕಡಿಮೆ ಬೇಕು, ಆದರೆ ರುಚಿ ಮಾತ್ರ ರೆಸ್ಟೋರೆಂಟ್ ಸ್ಟೈಲ್ ಆಗಿರುತ್ತದೆ. ಮಸಾಲೆ ಚೆನ್ನಾಗಿ ಹಚ್ಚಿಕೊಂಡು ಹೊರಗಡೆ ಕ್ರಿಸ್ಪಿಯಾಗಿ, ಒಳಗಡೆ ಜ್ಯೂಸಿ ಆಗಿರುವ ಪ್ರಾನ್ಸ್ ಫ್ರೈ ಯಾವ ಊಟದಲ್ಲೂ ಸ್ಟಾರ್ ಡಿಶ್ ಆಗುತ್ತದೆ. ವಿಶೇಷವಾಗಿ ವಾರಾಂತ್ಯ ಅಥವಾ ಅತಿಥಿಗಳು ಬಂದಾಗ ತಕ್ಷಣ ಮಾಡಬಹುದಾದ ಸುಲಭವಾದ ಸಮುದ್ರ ಆಹಾರ.

ಪ್ರಾನ್ಸ್ ಫ್ರೈ ರೆಸಿಪಿ ಮಾಡಲು ಬೇಕಾಗುವ ಸಾಮಗ್ರಿಗಳು :

ಪ್ರಾನ್ಸ್ – 500 ಗ್ರಾಂ

ಲಿಂಬೆ ರಸ – 1 ಟೇಬಲ್ ಸ್ಪೂನ್

ಅರಿಶಿನ – ¼ ಟೀ ಸ್ಪೂನ್

ಉಪ್ಪು – ರುಚಿಗೆ ತಕ್ಕಷ್ಟು

ಮೆಣಸಿನ ಪುಡಿ – 1½ ಟೇಬಲ್ ಸ್ಪೂನ್

ಧನಿಯಾ ಪುಡಿ – 1 ಟೇಬಲ್ ಸ್ಪೂನ್

ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಸ್ಪೂನ್

ಶುಂಠಿ ಪೇಸ್ಟ್ – 1 ಟೇಬಲ್ ಸ್ಪೂನ್

ಕರಿ ಬೇವು – ಕೆಲವು

ತೆಂಗಿನ ಎಣ್ಣೆ ಅಥವಾ ಸಾಮಾನ್ಯ ಎಣ್ಣೆ – ಫ್ರೈ ಮಾಡಲು

ಉಪ್ಪು – ಅಗತ್ಯವಿದ್ದಷ್ಟು

ಪ್ರಾನ್ಸ್ ತೊಳೆಯುವ ವಿಧಾನ :

ಪ್ರಾನ್ಸ್ ಅನ್ನು ಚೆನ್ನಾಗಿ ತೊಳೆದು ಅದರ ನರ (vein) ತೆಗೆದುಹಾಕುವುದು ಬಹಳ ಮುಖ್ಯ. ಸ್ವಲ್ಪ ಉಪ್ಪು ಮತ್ತು ಲಿಂಬೆ ರಸದಲ್ಲಿ ತೊಳೆದರೆ ವಾಸನೆ ಹೋಗುತ್ತದೆ. ನಂತರ ಮೇರಿನೇಟ್ ಮಾಡಲು ಸಿದ್ಧಪಡಿಸಬಹುದು.

ಮೆರಿನೇಟ್ ಮಾಡುವ ವಿಧಾನ

1. ಒಂದು ಬಟ್ಟಲಿನಲ್ಲಿ ತೊಳೆದ ಪ್ರಾನ್ಸ್ ಹಾಕಿ.

2. ಲಿಂಬೆ ರಸ, ಅರಿಶಿನ ಮತ್ತು ಉಪ್ಪು ಸೇರಿಸಿ 15 ನಿಮಿಷ ಮೆರಿನೇಟ್ ಮಾಡಿ.

3. ಇದು ಪ್ರಾನ್ಸ್‌ಗೆ ಮೃದುವಾಗುವ ಗುಣ ಕೊಡುತ್ತದೆ ಹಾಗೂ ಫ್ರೈ ಮಾಡಿದಾಗ ಮಸಾಲೆ ಚೆನ್ನಾಗಿ ಒಳಗೆ ಸೇರುತ್ತದೆ.

ಫ್ರೈ ಮಸಾಲೆ ತಯಾರಿಸುವುದು

ಕೆಂಪು ಮೆಣಸಿನ ಪುಡಿ, ಧನಿಯಾ ಪುಡಿ, ಬೆಳ್ಳುಳ್ಳಿ–ಶುಂಠಿ ಪೇಸ್ಟ್ ಸೇರಿಸಿ ಪೇಸ್ಟ್ ತಯಾರಿಸಿ.ಬೇಕಾದಷ್ಟು ಉಪ್ಪು ಸೇರಿಸಿ, ಗಟ್ಟಿ ಪೇಸ್ಟ್ ಮಾಡಿ.

ಪ್ರಾನ್ಸ್‌ಗೆ ಮಸಾಲೆ ಹಚ್ಚುವುದು :

  • ಮೆರಿನೇಟ್ ಮಾಡಿರುವ ಪ್ರಾನ್ಸ್‌ಗೆ ಈ ಮಸಾಲೆ ಪೇಸ್ಟ್ ಚೆನ್ನಾಗಿ ಹಚ್ಚಿ.
  • ಪ್ರತಿ ಪ್ರಾನ್ಸ್‌ಗೆ ಮಸಾಲೆ ಸಮವಾಗಿ ಹಚ್ಚಿಕೊಂಡಂತಾಗಬೇಕು.
  • 30 ನಿಮಿಷ ಬಿಟ್ಟರೆ ಮಸಾಲೆ ರುಚಿ ಸಂಪೂರ್ಣ ಸೇರಿಕೊಳ್ಳುತ್ತದೆ.

ಫ್ರೈ ಮಾಡುವ ವಿಧಾನ

1. ಒಂದು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ. ತೆಂಗಿನ ಎಣ್ಣೆಯಲ್ಲಿ ಫ್ರೈ ಮಾಡಿದರೆ ಮಂಗಳೂರು ಸ್ಟೈಲ್ ರುಚಿ ಬರುತ್ತದೆ.

2. ಎಣ್ಣೆ ಬಿಸಿಯಾದ ನಂತರ ಬೆಂಕಿಯನ್ನು ಮಧ್ಯಮಕ್ಕೆ ಕಡಿಮೆ ಮಾಡಿ.

3. ಪ್ರಾನ್ಸ್‌ಗಳನ್ನು ಒಂದೊಂದು ಹಾಕಿ ಫ್ರೈ ಮಾಡಬೇಕು; ತುಂಬ ಫ್ರೈ ಮಾಡಬಾರದು.

4. ಪ್ರತಿ ಬದಿಯನ್ನೂ 4-5 ನಿಮಿಷ ಮಾತ್ರ ಫ್ರೈ ಮಾಡಿ.

5. ಪ್ರಾನ್ಸ್ ಹೆಚ್ಚು ಬೇಯಿಸಿದರೆ ಕಠಿಣವಾಗುತ್ತದೆ, ಆದ್ದರಿಂದ ಸ್ವಲ್ಪ ಹೊತ್ತು ಮಾತ್ರ ಫ್ರೈ ಮಾಡುವುದು ಸೂಕ್ತ.

6. ಫ್ರೈ ಆದ ನಂತರ ಹೆಚ್ಚುವರಿ ಎಣ್ಣೆ ತೆಗೆಸಲು ಪೇಪರ್ ಟವಲ್ ಮೇಲೆ ಇಡಿ.

7. ಕೊನೆಯಲ್ಲಿ ಕರಿ ಎಲೆಗಳನ್ನು ಎಣ್ಣೆಗೆ ಹಾಕಿ ಫ್ರೈ ಮಾಡಿ ಮೇಲೆ ಅಲಂಕರಿಸಿ.

ಸರ್ವಿಂಗ್ ಸಲಹೆಗಳು :

  • ಈ ಪ್ರಾನ್ಸ್ ಫ್ರೈನ್ನು ಹಸಿರು ನಿಂಬೆ ತುಂಡು, ಸಲಾಡ್, ಕೊತ್ತಂಬರಿ ಜೊತೆ ಸರ್ವ್ ಮಾಡಿದರೆ ರುಚಿ ಹೆಚ್ಚಾಗುತದೆ.
  • ರೊಟ್ಟಿ, ಚಪಾತಿ, ನೀರ್ ದೋಸೆ ಮಾಡಿದರೂ ಚೆನ್ನಾಗಿ ಹೊಂದುತ್ತದೆ.
  • ಪಾರ್ಟಿಗಳು ಅಥವಾ ಮನೆ ಅತಿಥಿಗಳಿಗೆ ಸ್ಟಾರ್ಟರ್‌ಗಾಗಿ ಸೂಪರ್ ಆಯ್ಕೆ.

ಟಿಪ್ಸ್ & ಟ್ರಿಕ್‌ಗಳು

  • ಪ್ರಾನ್ಸ್ ಬೇಗ ಬೇಯುತ್ತದೆ; ಹೆಚ್ಚು ಬೇಯಿಸಬೇಡಿ.
  • ಮಸಾಲೆ ಹೆಚ್ಚು ಬೇಕಾದರೆ ಬ್ಯಾಡಗಿ ಮೆಣಸಿನಕಾಯಿ ಪೇಸ್ಟ್ ಸೇರಿಸಿ.
  • ಓವೆನ್ ಇದ್ದರೆ ಫ್ರಾನ್ಸ್ ಅನ್ನು 15 ನಿಮಿಷ ಓವೆನ್ ನಲ್ಲಿ ಬೇಯಿಸಿ ನಂತರ ತವದಲ್ಲಿ ಫ್ರೈ ಮಾಡಬಹುದು. ಇದು ರುಚಿಯನ್ನು ಕೊಡುತ್ತದೆ ಹಾಗೆಯೇ ಮಸಾಲೆ ಬಿಟ್ಟು ಹೋಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ : https://youtu.be/QetBfg0ppyo?si=MMXyJXxhAKSa4HlE

Leave a Comment

Your email address will not be published. Required fields are marked *

Scroll to Top