ಫೆನ್ಸಿಂಗ್ ಅಂದರೆನು?
ಜಮೀನಿನ ಸುತ್ತ, ಫಾರ್ಮ್ ಹೌಸ್ ಅಥವಾ ಕಟ್ಟಡದ ಸುತ್ತಲೂ ಗೇಟ್ ಅಥವಾ ಕಂಬಿಗಳನ್ನು ಹಾಕಿ ಭದ್ರತೆ ನೀಡುವ ಪ್ರಕ್ರಿಯೆ. ಇದು ಅನಧಿಕೃತ ಪ್ರವೇಶವನ್ನು ತಡೆಯಲು, ಸಾಕುಪ್ರಾಣಿಗಳನ್ನು ಒಳಗಿಡಲು, ಹಾಗೂ ಗೃಹ ಭದ್ರತೆಗಾಗಿ ಬಳಸಲಾಗುತ್ತದೆ.
ವಿಧಗಳು :
1.ಚೈನ್ ಲಿಂಕ್ ಫೆನ್ಸಿಂಗ್ (Chain Link Fencing)
- ಚೈನ್ ಲಿಂಕ್ ಫೆನ್ಸಿಂಗ್ ನಲ್ಲಿ 2×2 ಅಥವಾ 3×3 ಗ್ಯಾಪ್ ಇದ್ದು ಕಬ್ಬಿಣದಿಂದ ಮಾಡಾಲ್ಪಟ್ಟಿದೆ
- ಇದರಲ್ಲಿ ಟಾಟಾ, ಮೈಕನ್ ಹಾಗೆ ವಿವಿಧ ಬಗೆಯ ಬ್ರಾಂಡ್ ಗಳಿರುತ್ತವೆ.
- ಚೈನ್ ಲಿಂಕ್ 3 ಅಡಿ ಯಿಂದ 6 ಅಡಿಯ ತನಕ ಹಾಕಬಹುದು.
- ನಿಮಗೆ ಬೇಕಾದ ಕಲ್ಲು ಕಂಬ ಅಥವಾ ಸಿಮೆಂಟ್ ಕಂಬಕ್ಕೆ ಚೈನ್ ಲಿಂಕ್ ಅನ್ನು ಹಾಕಬಹುದು.
- ಚೈನ್ ಲಿಂಕ್ ನಿಂದ ಚಿಕ್ಕ ಚಿಕ್ಕ ಪ್ರಾಣಿಗಳು ಬರುವುದನ್ನು ತಡೆಯಬಹುದು.

2. ಕಂಪೌಂಡ್ ವಾಲ್ ಫೆನ್ಸಿಂಗ್ / ಪ್ರೀಕಾಸ್ಟ್ ಕಾಂಪೌಂಡ್ :
- ಕಾಂಫೌಂಡ್ ವಾಲ್ ಫೆನ್ಸಿಂಗ್ ಅನ್ನು ಇಟ್ಟಿಗೆ ಮತ್ತು ಸಿಮೆಂಟ್ ಬಳಸಿ ತಯಾರಿಸಬಹುದು ಅಥವಾ ರೆಡಿ ಮೆಡ್ ಸಿಮೆಂಟ್ ಸ್ಲಾಬನ್ನು ಬಳಸಬಹುದು.
- ಇದು ಶಾಶ್ವತ ಭದ್ರತೆ ನೀಡುತ್ತದೆ.

3.ಬಾರ್ಬ್ಡ್ ವೈರ್ ಫೆನ್ಸಿಂಗ್ (Barbed Wire) :
- ಮುಳ್ಳುತಂತಿ ಬೇಲಿ ಪ್ರಾಣಿಗಳನ್ನು ತಡೆಯಲು ಹಾಕಬಹುದು.
- ಮುಳ್ಳು ತಂತಿಯಲ್ಲಿ ಟಾಟಾ ಬ್ರಾಂಡ್ ಅನ್ನು ಬಳಸಬಹುದು. ಇದರ ಮೂಲಕ ನಿಮ್ಮ ಜಮೀನಿಗೆ ರಕ್ಷಣೆ ನೀಡಬಹುದು.
- ಕಲ್ಲು ಕಂಬದೊಂದಿಗೆ ನೀವು ಮುಳ್ಳುತಂತಿ ಹಾಕಿದರೆ ಧೀರ್ಘ ಕಾಲದ ಬಾಳಿಕೆ ಬರುತ್ತದೆ.

4.ಸೋಲಾರ್ ಫೆನ್ಸಿಂಗ್ / ಎಲೆಕ್ಟ್ರಿಕ್ ಫೆನ್ಸಿಂಗ್ :
- ಸಾಕುಪ್ರಾಣಿ ಅಥವಾ ಸುರಕ್ಷತೆಗಾಗಿ ಸೋಲಾರ್ ಫೆನ್ಸಿಂಗ್ ಅನ್ನು ಹಾಕಬಹುದು.
- ಕೆಲವೊಮ್ಮೆ ಪ್ರಾಣಿಗಳು ವ್ಯವಸಾಯವನ್ನು ಹಾಳು ಮಾಡಲು ಬಂದಾಗ ಸೋಲಾರ್ ಶಾಖಕ್ಕೆ ಪ್ರಾಣಿಗಳು ಬರುವುದಿಲ್ಲ.

ಫೆನ್ಸಿಂಗ್ ಕೆಲಸದ ಪ್ರಯೋಜನಗಳು:
- ಜಮೀನಿಗೆ ಸ್ಪಷ್ಟ ಗಡಿಯನ್ನು ನೀಡುತ್ತದೆ
- ಪ್ರಾಣಿ ಮತ್ತು ಕಳ್ಳತನದಿಂದ ರಕ್ಷಣೆ
- ಆಸ್ಥಿಯು ಕಾನೂನುಬದ್ಧವಾಗಿರಲು ಸಹಾಯ
- ನವೀಕರಿಸಿದ ಸೌಂದರ್ಯ
ಫೆನ್ಸಿಂಗ್ ಕೆಲಸದ ದರಗಳು :
- ಚೈನ್ ಲಿಂಕ್ ಫೆನ್ಸಿಂಗ್ (Chain link mesh fencing) ಎಕರೆಗೆ 2.5 ಲಕ್ಷದಿಂದ ಆರಂಭವಾಗುತ್ತವೆ.
- ಕಾಂಪೌಂಡ್ ವಾಲ್ ಫೆನ್ಸಿಂಗ್ (Compound wall fencing/ precast Compound ) Rs. 85/- per sqft ನಿಂದ ಆರಂಭವಾಗುತ್ತದೆ.
- ಬಾರ್ಬೇಡ್ ವೈರ್ ಫೆನ್ಸಿಂಗ್ (Barbed wire fencing) ಎಕರೆಗೆ 1.5 ಲಕ್ಷದಿಂದ ಆರಂಭವಾಗುತ್ತದೆ.
- ಸೋಲಾರ್ ಫೆನ್ಸಿಂಗ್ (solar fencing) ಎಕರೆಗೆ 1.25 ಲಕ್ಷದಿಂದ ಆರಂಭವಾಗುತ್ತದೆ.
ಸೂಚನೆ : ಜಾಗದ ಗಾತ್ರ, ಸ್ಥಳ ಮತ್ತು ವಸ್ತುಗಳ ಪ್ರಕಾರ ದರ ಬದಲಾಗಬಹುದು.
📍 ಎಲ್ಲಿ ಫೆನ್ಸಿಂಗ್ ಕೆಲಸ ಪಡೆಯಬಹುದು?
ನಿಮ್ಮ ಜಿಲ್ಲೆಯಲ್ಲಿಯೇ ಹಲವಾರು ಫೆನ್ಸಿಂಗ್ ಕೆಲಸದ ಗುತ್ತಿಗೆದಾರರು ಮತ್ತು ಕೆಲಸಗಾರರು ಲಭ್ಯರಿದ್ದಾರೆ. ಅವರ ಫೋನ್ ನಂಬರು ಅಥವಾ ವಿಳಾಸಗಳನ್ನು ಜನಪ್ರಿಯ ಜಾಲತಾಣಗಳಲ್ಲಿ ಹುಡುಕಬಹುದು.
ಸಂಪರ್ಕಕ್ಕಾಗಿ: ನೀವು ಫೆನ್ಸಿಂಗ್ ಕೆಲಸದ ಗುತ್ತಿಗೆದಾರರು ಅಥವಾ ಕೆಲಸಗಾರರಾಗಿದ್ದರೆ, ಈ ಪುಟದಲ್ಲಿ ನಿಮ್ಮ ವಿಜಿಟಿಂಗ್ ಕಾರ್ಡ್, ಫೋನ್ ನಂಬರ್ ಅಥವಾ ಸೇವೆಗಳ ವಿವರಗಳನ್ನು ಹಾಕಬಹುದು.