ಕೊಬ್ಬರಿ ಬಿಸ್ಕೆಟ್ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ, ರುಚಿಕರವಾದ ತಿನಿಸು. ಈ ಬಿಸ್ಕಟ್ಗಳಲ್ಲಿ ನುರಿದ ಕೊಬ್ಬರಿ, ತುಪ್ಪ ಅಥವಾ ಬೆಣ್ಣೆ ಮತ್ತು ಹಾಲಿನ ರುಚಿ ತುಂಬಿರುತ್ತದೆ. ಚಹಾ ಅಥವಾ ಕಾಫಿಯ ಜೊತೆಗೆ ತಿಂಡಿಯಾಗಿ ಇದು ಅತೀ ಉತ್ತಮ ಆಯ್ಕೆ.
ಕೊಬ್ಬರಿ ಬಿಸ್ಕೆಟ್ ಮಾಡಲು ಬೇಕಾಗುವ ಪದಾರ್ಥಗಳು (Ingredients):
• ಗೋಧಿಹಿಟ್ಟು – 1 ಕಪ್
• ಹುರಿದ ಕೊಬ್ಬರಿ – 1/2 ಕಪ್
• ಪುಡಿ ಸಕ್ಕರೆ – 1/2 ಕಪ್
• ಬೆಣ್ಣೆ ಅಥವಾ ತುಪ್ಪ – 1/4 ಕಪ್
• ಹಾಲು – 2 ಟೇಬಲ್ ಸ್ಪೂನ್ (ಅಥವಾ ಅಗತ್ಯಕ್ಕೆ ತಕ್ಕಷ್ಟು)
• ಏಲಕ್ಕಿ ಪುಡಿ – 1 ಚಿಟಿಕೆ
• ಬೇಕಿಂಗ್ ಪೌಡರ್ – 1/4 ಟೀ ಸ್ಪೂನ್
• ಉಪ್ಪು – 1 ಚಿಟಿಕೆ

ತಯಾರಿಸುವ ವಿಧಾನ (Preparation Method):
1. ಒಂದು ದೊಡ್ಡ ಬಟ್ಟಲಿನಲ್ಲಿ ಗೋಧಿಹಿಟ್ಟು, ಬೇಕಿಂಗ್ ಪೌಡರ್, ಪುಡಿ ಸಕ್ಕರೆ, ಏಲಕ್ಕಿ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
2. ಹುರಿದ ಕೊಬ್ಬರಿ ಸೇರಿಸಿ ಮಿಕ್ಸ್ ಮಾಡಿ.
3. ಅದಕ್ಕೆ ಬೆಣ್ಣೆ ಹಾಕಿ ಕೈಯಿಂದ ಮಿಕ್ಸ್ ಮಾಡಿ.
4. ಹಾಲು ಹಾಕಿ ಜಾಸ್ತಿಯಾಗದಂತೆ ನಯವಾದ ಹಿಟ್ಟನ್ನು ತಯಾರಿಸಿ.
5. ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ, ಒತ್ತಿ ಬಿಸ್ಕಟ್ ಆಕಾರಕ್ಕೆ ತಯಾರಿಸಿ.
6. ಓವನ್ ಅಥವಾ ಗ್ಯಾಸ್ನಲ್ಲಿನ ಬೇಕಿಂಗ್ ಟಿನ್ನಲ್ಲಿ 180°C ಇಟ್ಟು 15-20 ನಿಮಿಷ ಬೇಯಿಸಿಕೊಳ್ಳಿ (ಗೋಲ್ಡನ್ ಬ್ರೌನ್ ಆಗುವವರೆಗೆ).
7. ತಣ್ಣಗಾದ ನಂತರ ಡಬ್ಬಿಯಲ್ಲಿ ಇಡಬಹುದು.

ಸಲಹೆಗಳು (Tips):
• ಹಾಲು ಜಾಸ್ತಿ ಹಾಕದಂತೆ ಗಮನಿಸಿ.
• ನೀವು ಬಯಸಿದರೆ ತುಪ್ಪದ ಬದಲು ಬೆಣ್ಣೆ ಬಳಸಬಹುದು.
• ಓವನ್ ಇಲ್ಲದಿದ್ದರೆ ಗ್ಯಾಸ್ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದಕ್ಕೆ ಉಪ್ಪನ್ನು ಹಾಕಿ ಒಂದು ಸ್ಟಾಂಡ್ ಇಡಬೇಕು ನಂತರ ಅದರ ಮೇಲೆ ಒಂದು ತಟ್ಟೆಯಲ್ಲಿ ಬಿಸ್ಕತ್ ಅನ್ನು ಇತ್ತು ಪಾತ್ರೆಯಲ್ಲಿ ಮುಚ್ಚಿ 30 ನಿಮಿಷ ಬೇಯಿಸಬೇಕು.
ಹೆಚ್ಚಿನ ಮಾಹಿತಿಗಾಗಿ : https://youtu.be/IaUK8NZf6rk?si=ee7a3LoTYA–RFSI