ಬೇಳೆ ಒಬ್ಬಟ್ಟು ಯುಗಾದಿ ವಿಶೇಷ ಕರ್ನಾಟಕದ ಪ್ರಸಿದ್ದ ಸಿಹಿ ತಿನಿಸು (Bele obbattu) ಹಬ್ಬಕ್ಕೆ ತಯಾರಿಸಬಹುದಾದ ಬೆಲ್ಲ – ಬೇಳೆಯ ಸಿಹಿಯಾದ ತಿನಿಸು.ಯುಗಾದಿ ಹಬ್ಬದ ಜೊತೆಗೆ ನವರಾತ್ರಿ, ಮದುವೆ ಮೊದಲಾದ ಶುಭ ಕಾರ್ಯಗಳಿಗೆ ತಯಾರಿಸಲಾಗುತ್ತದೆ. ತಯಾರಿಸುವ ವಿಧಾನ, ಸಲಹೆಗಳು ಸೇವನೆಯ ವಿವರಗಳು ಇಲ್ಲಿವೆ. ಯುಗಾದಿ ಹಬ್ಬ ವರ್ಷದ ಮೊದಲ ದಿನ. ಹೊಸ ಆರಂಭವನ್ನು ಸಿಹಿಯೊಂದಿಗೆ ಮಾಡುವುದು ಹಳೆ ಪದ್ದತಿ. ಹಾಗಾಗಿ ಸಿಹಿ ತಿನಿಸುಗಳಲ್ಲಿ ಒಬ್ಬಟ್ಟು ಪ್ರಮುಖವಾದದು. ಬೆಲ್ಲವು ಸಿಹಿಯನ್ನು ಸೂಚಿಸುತ್ತದೆ. ಕಡಲೆಬೇಳೆ ಪ್ರೊಟೀನ್ ನಿಂದ ಕೂಡಿದೆ.

ಬೇಳೆ ಒಬ್ಬಟ್ಟು ಮಾಡಲು ಬೇಕಾಗುವ ಸಾಮಾಗ್ರಿಗಳು :
ಮೈದಾ – 1 ಕಪ್ (Maida)
ಉಪ್ಪು – ಚಿಟಿಕೆ (Salt)
ಹಾಲು ಅಥವಾ ನೀರು – ಅಗತ್ಯವಿದ್ದಷ್ಟು (Milk or Water)
ಎಣ್ಣೆ ಅಥವಾ ತುಪ್ಪ – 2 ಟೇಬಲ್ ಸ್ಪೂನ್ (ಮೃದುವಾಗಿಸಲು) (Oil or Ghee)
ಹೂರಣಕ್ಕೆ ಬೇಕಾಗುವ ಸಾಮಗ್ರಿಗಳು :
ಕಡಲೆ ಬೇಳೆ (chana dal) – 1 ಕಪ್
ಬೆಲ್ಲ – ¾ ರಿಂದ 1 ಕಪ್ ( Jaggery)
ಏಲಕ್ಕಿ ಪುಡಿ – ½ ಟೀ ಸ್ಪೂನ್( Cardamom powder)/ಕೇಸರಿ – (ಬೇಕಿದ್ದರೆ ಉಪಯೋಗಿಸಬಹುದು ) (Saffron)

ತಯಾರಿಸುವ ವಿಧಾನ:
1. ಮೈದಾ, ಉಪ್ಪು, ಹಾಲು/ನೀರು ಹಾಕಿ ನಯವಾದ ಹಿಟ್ಟಾಗಿ ಕಲಸಿ ನಂತರ
2. ಮೃದುವಾಗಿಸಲು ತುಪ್ಪ ಅಥವಾ ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿ .
3. ಈ ಹಿಟ್ಟನ್ನು 2 ಗಂಟೆ ಪಾತ್ರೆಯ ಒಳಗೆ ಬಿಡಿ.
ಹೂರಣ ತಯಾರಿಸುವ ವಿಧಾನ :
1. ಕಡಲೆಬೇಳೆಯನ್ನು 3–4 ನಿಮಿಷ ಹುರಿಯಿರಿ, ನಂತರ ತಣ್ಣಗಾದ ಮೇಲೆ 20 ನಿಮಿಷ ನೆನೆಸಿ
2. ನಂತರ ಬಾಣಲಿಯಲ್ಲಿ ಬಿಸಿ ಮಾಡಿ, ಬೇಳೆಯನ್ನು ಚೆನ್ನಾಗಿ ಬೇಯಿಸಿ (100% ಸಾಫ್ಟ್ ಆಗಬೇಕು).
3. ಬೆಲ್ಲ ಹಾಕಿ ಕರಗಿಸಿ, ಒಣಗಿದಂತೆ ಆಗುವವರೆಗೆ ಕುದಿಸಿ.
4. ನಂತರ ಏಲಕ್ಕಿ ಪುಡಿ, ಕೇಸರಿ ಹಾಕಿ, ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ರುಬ್ಬಿ ಉಂಡೆ ಮಾಡಿಕೊಳ್ಳಬೇಕು. (smooth filling).

ಒಬ್ಬಟ್ಟು ತಯಾರಿ:
1. ಹಿಟ್ಟಿನಿಂದ ಚಿಕ್ಕ ಉಂಡೆ ಮಾಡಿ , ಅದರೊಳಗೆ ಹೂರಣ ಹಾಕಿ ಮುಚ್ಚಿ.
2. ತುಪ್ಪ ಹಚ್ಚಿ ರೊಟ್ಟಿಯ ಆಕಾರಕ್ಕೆ ತಟ್ಟಿ.
3. ತವದಲ್ಲಿ golden brown ಆಗುವವರೆಗೆ ಎರಡು ಕಡೆ ಸಹಾ ಬೇಯಿಸಿ.
4. ಇದಾದ ನಂತರ ತುಪ್ಪ ಒಬ್ಬಟ್ಟು serve ಮಾಡಿ!

😋ಸೇವಿಸುವ ಸಲಹೆಗಳು :
1. ಒಬ್ಬಟ್ಟನ್ನು ಪಾಯದೊಂದಿಗೆ ಸವಿಯಬಹುದು. 2. ಒಬ್ಬಟ್ಟನು ತುಪ್ಪದೊಂದಿಗೆ ಸವಿಯುತ್ತಾರೆ.
3. ಹೂರಣವನ್ನು 2 ರಿಂದ 3 ದಿನ ಫ್ರಿಡ್ಜ್ ನಲ್ಲಿ ಇಟ್ಟು ಬಳಸಬಹುದು.
ಒಬ್ಬಟ್ಟನು ಮಾಡುವಾಗ ಕೆಲವು ಸಲಹೆಗಳು :
1. ಒಬ್ಬಟ್ಟನ್ನು ಒತ್ತುವಾಗ ಬಾಳೆ ಎಲೆಯಲ್ಲಿ ಒತ್ತಿದರೆ ಹಿಟ್ಟು ಅಂಟುವುದಿಲ್ಲ.
2. ಮೈದಾ ಹಿಟ್ಟು ಬದಲು ಗೋಧಿ ಹಿಟ್ಟು ಬಳಸಬಹುದು ಇದು ಆರೋಗ್ಯಕ್ಕೆ ಒಳ್ಳೆಯದಿರುತ್ತದೆ.
3. ತುಪ್ಪದಿಂದ ಬೇಯಿಸಿದರೆ ರುಚಿ ಹೆಚ್ಚಿರುತ್ತದೆ.
4. ಹೂರಣದ ಹದ ಸರಿಯಾಗಿದ್ದಾರೆ. ಒತ್ತುವಾಗ ಹರಿದು ಹೋಗುವುದಿಲ್ಲ.

ಬೇಳೆ ಒಬ್ಬಟ್ಟು ನಮ್ಮ ಸಂಸ್ಕೃತಿ, ನೆನಪುಗಳು ಮತ್ತು ಹಬ್ಬಗಳ ಭಾಗವಾಗಿದೆ. ಯುಗಾದಿಯಂತಹ ಶುಭದಿನಗಳಲ್ಲಿ ಸಿಹಿಯಾಗಿ ಈ ತಿನಿಸು ಮನೆಯನ್ನು ಮುಟ್ಟಿಸುವ ಸಂತೋಷವನ್ನು ನೀಡುತ್ತದೆ. ಮನೆಮನೆಗೆ ಒಬ್ಬಟ್ಟಿಗೆ ಬೇರೆಯಾದ ರುಚಿಯ ನೆನಪು ಇರುತ್ತದೆ. ಈ ಸರಳ ಮತ್ತು ಸವಿಯಾದ ರೆಸಿಪಿ ಬಳಸಿ ನೀವು ಕೂಡ ಒಮ್ಮೆ ಪ್ರಯತ್ನಿಸಿ. ಪಾರಂಪರಿಕ ರುಚಿಯನ್ನು ಮರೆಮಾಡದಂತೆ ಮುಂದಿನ ಪೀಳಿಗೆಗೂ ಈ ರುಚಿಯನ್ನು ಹಂಚಿ.
ಹೆಚ್ಚಿನ ಮಾಹಿತಿಗಾಗಿ https://hebbarskitchen.com/bele-obattu-recipe-puran-poli/