ಕೋಸಂಬರಿಯ ಪರಿಚಯ:
ಕೋಸಂಬರಿ ಕರ್ನಾಟಕದ ಬಹುಪಾಲು ಹಬ್ಬಗಳಲ್ಲಿ ತಯಾರಿಸಲಾಗುವ ತಂಪು ಮತ್ತು ಆರೋಗ್ಯಕರ ಸೈಡ್ ಡಿಶ್ ಆಗಿದೆ. ವಿವಿಧ ಬೇಳೆಗಳಿಂದ ಇದನ್ನು ತಯಾರಿಸಬಹುದು. ಮದುವೆ ಕಾರ್ಯಕ್ರಮದಲ್ಲಿ ಒಂದು ಬಗೆಯ ಕೊಸುಂಬರಿ ಇದ್ದೆ ಇರುತ್ತದೆ. ಹಾಗೆಯೇ ಬೇಸಿಗೆ ಸಮಯದಲ್ಲಿ ಮನೆಯಲ್ಲಿ ಕೊಸುಂಬರಿ ಮಾಡಿಕೊಂಡು ತಿಂದರೆ ನಿಮ್ಮ ದೇಹ ತಂಪಾಗಿರುತ್ತದೆ.
ಕೋಸಂಬರಿ ತಯಾರಿಸಲು ಬೇಕಾಗುವ ಪದಾರ್ಥಗಳು:
- ಹೆಸರು ಬೇಳೆ ಅಥವಾ ಕಡಲೆ ಬೇಳೆ – 1/2 ಕಪ್
- ಕ್ಯಾರಟ್ ತುರಿದದ್ದು -2
- ಸೌತೆಕಾಯಿ ತುರಿದದ್ದು – 1
- ಹಸಿಮೆಣಸಿನಕಾಯಿ(ಚಿಕ್ಕದಾಗಿ ಕತ್ತರಿಸಿದ) – 1
- ಕೊತ್ತಂಬರಿ ಸೊಪ್ಪು (ಸಣ್ಣದಾಗಿ ಕತ್ತರಿಸಿದ) 1 ಟೇಬಲ್ ಸ್ಪೂನ್
- ಉಪ್ಪು ರುಚಿಗೆ ತಕ್ಕಷ್ಟು
- ನಿಂಬೆರಸ – 1 ಟೀ ಸ್ಪೂನ್
- ತೆಂಗಿನ ಕಾಯಿ ತುರಿದದ್ದು – 2 ಟೀ ಸ್ಪೂನ್
ತಯಾರಿಸುವ ವಿಧಾನ :
- ಮೊದಲು ಹೆಸರು ಬೆಳೆಯನ್ನು 30 ನಿಮಿಷ ನೀರಿನಲ್ಲಿ ನೆನೆಸಿಡಿ. ಕಡ್ಲೆಬೇಳೆ ಆದರೆ 2 ಗಂಟೆ ನೆನಸಿಡಿ.
- ನಂತರ ಅದನ್ನು ಚೆನ್ನಾಗಿ ತೊಳೆಯಿರಿ ನೀರನ್ನುತೆಗೆದು ಒಂದು ಪಾತ್ರೆಯಲ್ಲಿ ಹಾಕಿ ಇಡಿ.
- ಬಟ್ಟಲಿನಲ್ಲಿ ತುರಿದ ಕ್ಯಾರೆಟ್, ಸೌತೆಕಾಯಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ತೆಂಗಿನ ಕಾಯಿ ತುರಿ ಸೇರಿಸಿ.
- ಉಪ್ಪು ಮತ್ತು ನಿಂಬೆರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
- ನಂತರ ತಿನ್ನಲು ಕೊಡಿ.
ಕೋಸಂಬರಿ ತಿನ್ನುವುದರಿಂದ ನಿಮ್ಮ ದೇಹಕ್ಕೆ ಆಗುವ ಉಪಯೋಗಗಳು :
- ನಿಮ್ಮ ದೇಹಕ್ಕೆ ತಂಪು ನೀಡುತ್ತದೆ.
- ನೀವು ತೂಕ ಕಡಿಮೆ ಮಾಡಿಕೊಳ್ಳಲು ಬಯಸಿದ್ದಾರೆ ನಿಮ್ ಡಯಟ್ ನಲ್ಲಿ ಇದನ್ನ ಸೇರಿಸಬಹುದು.
- ಸೌತೆಕಾಯಿ ಮತ್ತು ಕ್ಯಾರಟ್ ಸೇರಿಸಿರುವುದರಿಂದ ನಿಮ್ಮ ತ್ವಚೆಯ ಕಾಂತಿ ಕಾಪಾಡಬಹುದು.
- ನಿಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
- ಇದರಲ್ಲಿ ಪೋಷಕಾಂಶ ಮತ್ತು ಪ್ರೊಟೀನ್ ಇರುತ್ತದೆ.
- ಕೊತ್ತಂಬರಿ ಸೊಪ್ಪು ಮತ್ತು ನಿಂಬೆರಸ ಬೇರೆಸುವುದರಿಂದ ಇದರಲ್ಲಿ ಆಂಟಿ ಆಕ್ಸಿಡೆಂಟ್ ಗುಣವಿದೆ.

ಸಲಹೆ (Tips) :
- ಹಬ್ಬಗಳಲ್ಲಿ ಈ ಕೋಸಂಬರಿಯನ್ನು ಪಾಯಸದ ಜೊತೆಗೆ ನೀಡಲಾಗುತ್ತದೆ.
- ಮೊಸರು ಹಾಕಿದರೆ ಹೆಚ್ಚು ತಂಪು ರುಚಿಯಾಗಿರುತ್ತದೆ.
- ಕೋಸಂಬರಿ ಅನ್ನು ಮಾಡಿ ತುಂಬಾ ಸಮಯ ಇಟ್ಟು ತಿನ್ನಬಾರದು (ತೆಂಗಿನ ಕಾಯಿ ಹಾಕಿರುವುದರಿಂದ ಕೆಡಬಹುದು)
ಹೆಚ್ಚಿನ ಮಾಹಿತಿಗಾಗಿ : https://youtu.be/cvIbGm6_T38?si=bOuBZCvEZMZud8aF