ಪರಿಚಯ :
ಸಕಲೇಶಪುರ ಪ್ರವಾಸಿ ಸ್ಥಳಗಳು ಪಶ್ಚಿಮಘಟ್ಟದ ನಡುವೆ ಕಾಫಿ, ಏಲಕ್ಕಿ ತೋಟಗಳ ಸೊಬಗು, ಮಂಜು ಮುಸುಕಿದ ಬೆಟ್ಟಗಳು, ಜಲಪಾತಗಳು ಮತ್ತು ಪುರಾತನ ಸ್ಮಾರಕಗಳಿಂದ ಇದು ಪ್ರವಾಸಿಗರ ಮೆಚ್ಚಿನ ಸ್ಥಳವಾಗಿದೆ. ಬೆಂಗಳೂರಿನಿಂದ ಸುಮಾರು 220 ಕಿಮೀ ಹಾಗೂ ಮಂಗಳೂರಿನಿಂದ 130 ಕಿಮೀ ದೂರದಲ್ಲಿರುವುದರಿಂದ ವಾರಾಂತ್ಯ ಪ್ರವಾಸಕ್ಕೆ ಅತ್ಯುತ್ತಮ ಸ್ಥಳವಾಗಿದೆ.
ಸಕಲೇಶಪುರ ಪ್ರವಾಸಿ ಸ್ಥಳಗಳು
1. ಮಂಜರಾಬಾದ್ ಕೋಟೆ : ಟಿಪ್ಪು ಸುಲ್ತಾನ್ 1792ರಲ್ಲಿ ನಿರ್ಮಿಸಿದ ಈ ಸ್ಟಾರ್ ಆಕಾರದ ಕೋಟೆ ಸಕಲೇಶಪುರದ ಇತಿಹಾಸದ ಸಾಕ್ಷಿ. ಬೆಟ್ಟದ ಮೇಲಿರುವ ಈ ಕೋಟೆಯಿಂದ ಸುತ್ತಮುತ್ತಲಿನ ಬೆಟ್ಟ-ಮಲೆಗಳ ದೃಶ್ಯಾವಳಿ ಆಕರ್ಷಕ. ಇಲ್ಲಿ ಸೂರ್ಯಾಸ್ತವನ್ನು ನೋಡುವುದು ಮರೆಯಲಾಗದ ಅನುಭವ.

2. ಸಕ್ಲೇಶ್ವರ ದೇವಾಲಯ : ಸಕಲೇಶಪುರದ ಪುರಾತನ ಶಿವಕ್ಷೇತ್ರಸಕ್ಲೇಶ್ವರ ದೇವಾಲಯ (Sakleshwara Temple) ಕರ್ನಾಟಕದ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಮುಖ್ಯ ಆಕರ್ಷಣೆಯಾಗಿದೆ. ಈ ದೇವಾಲಯವು ಪಶ್ಚಿಮಘಟ್ಟದ ಪಾದದಲ್ಲಿ, ಹೇಮಾವತಿ ನದಿಯ ತೀರದಲ್ಲಿದೆ. ಪುರಾತನ ಶೈಲಿಯ ವಾಸ್ತುಶಿಲ್ಪ ಮತ್ತು ಆಧ್ಯಾತ್ಮಿಕ ವಾತಾವರಣದಿಂದ ಇದು ಪ್ರವಾಸಿಗರನ್ನೂ, ಭಕ್ತರನ್ನೂ ಸೆಳೆಯುತದೆ.
ದೇವಾಲಯದ ವೈಶಿಷ್ಟ್ಯಗಳು :
- ದೇವಾಲಯವು ಶಿವನಿಗೆ ಸಮರ್ಪಿತವಾದುದು. ಇಲ್ಲಿರುವ ಶಿವಲಿಂಗವನ್ನು ಸಕ್ಲೇಶ್ವರೇಶ್ವರ ಎಂದು ಕರೆಯುತ್ತಾರೆ.
- ಹೊಯ್ಸಳ ಶೈಲಿಯ ಕಲ್ಲಿನ ಶಿಲ್ಪಗಳು, ಗೋಡೆಯಲ್ಲಿರುವ ದೇವತೆಗಳ ಮೂರ್ತಿಗಳು, ಅಲಂಕಾರಿಕ ಗರ್ಭಗುಡಿ ದೇವಾಲಯದ ಸೌಂದರ್ಯವನ್ನು ಹೆಚ್ಚಿಸುತ್ತವೆ.
- ಹೇಮಾವತಿ ನದಿಯ ತೀರದಲ್ಲಿರುವುದರಿಂದ ಸ್ಥಳದ ಸೌಂದರ್ಯ ಭಕ್ತರಿಗೆ ಆಧ್ಯಾತ್ಮಿಕ ಶಾಂತಿ ನೀಡುತ್ತದೆ.
- ಮಹಾಶಿವರಾತ್ರಿ: ಪ್ರತಿವರ್ಷ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಮಾಡುತ್ತಾರೆ.
- ರಥೋತ್ಸವ: ರಥೋತ್ಸವ ಸಮಯದಲ್ಲಿ ದೇವಾಲಯ ಮತ್ತು ಪಟ್ಟಣವೇ ಹಬ್ಬದ ವಾತಾವರಣದಲ್ಲಿರುತ್ತದೆ.

3. ಶೆಟ್ಟಿಹಳ್ಳಿ ರೋಸರಿ ಚರ್ಚ್ : ನೀರಿನಲ್ಲಿ ಮುಳುಗುವ ಅದ್ಭುತ ಚರ್ಚ್ ಕರ್ನಾಟದ ಹಾಸನ ಜಿಲ್ಲೆಯ ಶೆಟ್ಟಿಹಳ್ಳಿಯಲ್ಲಿ ನೆಲೆಸಿರುವ ರೋಸರಿ ಚರ್ಚ್ ಒಂದು ವಿಸ್ಮಯಕರ ಪ್ರವಾಸಿ ಸ್ಥಳ. ಈ ಚರ್ಚ್‌ನ್ನು “ನೀರಿನಲ್ಲಿ ಮುಳುಗುವ ಚರ್ಚ್” (Floating / Submerged Church) ಎಂದೇ ಪ್ರಸಿದ್ಧಿ ಪಡೆದಿದೆ. ಮಳೆಗಾಲದಲ್ಲಿ ಹೇಮಾವತಿ ನದಿಯ ಪ್ರವಾಹದೊಂದಿಗೆ ಈ ಚರ್ಚ್‌ನ ಭಾಗಶಃ ಅವಶೇಷಗಳು ನೀರಿನಲ್ಲಿ ಮುಳುಗಿ ಕೇವಲ ಗೋಪುರ ಮತ್ತು ಗೋಡೆಗಳೇ ಹೊರಗೆ ಕಾಣುತ್ತವೆ.
ವಿಶೇಷತೆ :
- ಬೇಸಿಗೆ ಕಾಲದಲ್ಲಿ (ಮಾರ್ಚ್ – ಜೂನ್) ನೀರಿನ ಮಟ್ಟ ಕಡಿಮೆ ಇರುವಾಗ, ಪ್ರವಾಸಿಗರು ಚರ್ಚ್‌ನ ಸಂಪೂರ್ಣ ಕಟ್ಟಡವನ್ನು ಸಮೀಪದಿಂದ ನೋಡಬಹುದು.
- ಮಳೆಗಾಲದಲ್ಲಿ (ಜೂನ್ – ಅಕ್ಟೋಬರ್) ನೀರು ಏರಿದಾಗ ಚರ್ಚ್‌ನ ಮೇಲ್ಭಾಗ ಮಾತ್ರ ಕಾಣುತ್ತದೆ – ಅದೊಂದು ಅದ್ಭುತ ದೃಶ್ಯ.
ಪ್ರವಾಸಿಗರಿಗೆ ಇರುವ ಅನುಭವಗಳು :
ನೀರಿನಲ್ಲಿ ತೇಲುತ್ತಿರುವಂತೆ ಕಾಣುವ ಚರ್ಚ್‌ನ ದೃಶ್ಯಸುಂದರ ಸೂರ್ಯಾಸ್ತ ಸಮಯದ ಛಾಯಾಗ್ರಹಣ
ಹಸಿರು ಹೊದಿಕೆಯ ನದಿ ತೀರದಲ್ಲಿ ಶಾಂತಿ ಅನುಭವಸ್ಥಳೀಯ ಗ್ರಾಮೀಣ ಸಂಸ್ಕೃತಿಯ ನೋಟ

4. ಬಿಸ್ಲೆ ಘಾಟ್ : ಪ್ರಕೃತಿಯ ಸೊಬಗಿನ ಖಜಾನೆ. ಇಲ್ಲಿನ ಬಿಸ್ಲೆ ವ್ಯೂ ಪಾಯಿಂಟ್ ನಿಂದ ಕುಕ್ಕೆ ಸುಬ್ರಮಣ್ಯ, ಪುಷ್ಪಗಿರಿ ಶ್ರೇಣಿ ಹಾಗೂ ಪಶ್ಚಿಮಘಟ್ಟದ ಗಾಢ ಹಸಿರನ್ನು ನೋಡುವ ಅವಕಾಶ. ಟ್ರೆಕ್ಕಿಂಗ್ ಹಾಗೂ ಛಾಯಾಗ್ರಹಣಕ್ಕೆ ಸೂಕ್ತವಾದ ಸ್ಥಳ.

5. ಮಂಕನಹಳ್ಳಿ ಸರೋವರ : ಬಿಸ್ಲೆ ಘಾಟ್ ಗೆ ಹೋಗುವ ದಾರಿಯಲ್ಲಿ ಮಂಕನಹಳ್ಳಿ ಸರೋವರ ನೋಡಬಹುದು. ಹಸಿರು ತೋಟಗಳ ಮಧ್ಯೆ ಹರಿಯುವ ಈ ನದಿ ಶಾಂತಿಯ ಸ್ಥಳ.

6. ಪಟ್ಲ ಬೆಟ್ಟ : ಟ್ರೆಕ್ಕಿಂಗ್ ಪ್ರಿಯರಿಗೆ ಪಟ್ಲ ಬೆಟ್ಟ ಸ್ವರ್ಗಸಮಾನ. ಬೆಳಗಿನ ಜಾವ ಸೂರ್ಯೋದಯದ ದೃಶ್ಯ ಇಲ್ಲಿನ ಪ್ರಮುಖ ಆಕರ್ಷಣೆ. ಪ್ರಕೃತಿ ಪ್ರಿಯರು ತಪ್ಪದೇ ಭೇಟಿ ನೀಡಬೇಕಾದ ಸ್ಥಳ.

7. ಮೂಕನಮನೆ ಜಲಪಾತ : ಕಾಗಿನಹರೆ ವ್ಯೂ ಪಾಯಿಂಟ್ ನಿಂದ 20 ನಿಮಿಷ ಬೇಕಾಗುತ್ತದೆ. ಮಳೆಗಾಲದಲ್ಲಿ ಮಂಜು-ಮಳೆ ಸೇರಿ ಇದರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ಜಲಪಾತವು ತುಂಬ ಎತ್ತರದಿಂದ ಬೀಳುವುದಿಲ್ಲ. ಇದು ಪ್ರವಾಸಿಗರಿಗೆ ಗೊತ್ತಿರದ ಹಿಡನ್ ಜಲಪಾತವಾಗಿದೆ.

8. ಕಾಗಿನಹರೆ ವ್ಯೂ ಪಾಯಿಂಟ್: ಇದು ಕೂಡಾ ಜನಪ್ರಿಯ ಟ್ರೆಕ್ಕಿಂಗ್ ಸ್ಥಳ. ಹಕ್ಕಿಗಳ ಕಲರವ ಹಾಗೂ ತಂಪಾದ ಗಾಳಿ ಪ್ರವಾಸಿಗರನ್ನು ಸೆಳೆಯುತ್ತದೆ. ಟ್ರಕಿಂಗ್ ಮಾಡಲು ಒಳ್ಳೆಯ ಸ್ಥಳ.

9. ಹೇಮಾವತಿ ಜಲಾಶಯ : ಸಕಲೇಶಪುರದ ಹತ್ತಿರ ಇರುವ ಈ ಅಣೆಕಟ್ಟು ಶಾಂತ ವಾತಾವರಣ ಹಾಗೂ ಸುಂದರ ಸೂರ್ಯಾಸ್ತಕ್ಕಾಗಿ ಪ್ರಸಿದ್ಧ. ಮೀನುಗಾರಿಕೆ ಹಾಗೂ ಬೋಟ್ ಸವಾರಿ ಇಲ್ಲಿ ಅನುಭವಿಸಬಹುದು.

10. ಕಾಡುಮನೆ ಟೀ ಎಸ್ಟೇಟ್ : ಕಾಡುಮನೆ ಟೀ ಎಸ್ಟೇಟ್ ಸಕಲೇಶಪುರದ ಪಶ್ಚಿಮಘಟ್ಟದ ಹೃದಯ ಭಾಗದಲ್ಲಿ ನೆಲೆಸಿರುವ ಸುಂದರ ಚಹಾ ತೋಟ. ಹಸಿರು ಹೊದಿಕೆಯ ಬೆಟ್ಟಗಳು, ತಂಪಾದ ಹವಾಮಾನ ಹಾಗೂ ಚಹಾ ಸುವಾಸನೆಗಳಿಂದ ಕೂಡಿದ ಈ ಸ್ಥಳ ಪ್ರವಾಸಿಗರ ಮನ ಸೆಳೆಯುವ ಪ್ರಮುಖ ಆಕರ್ಷಣೆ. ಸಕಲೇಶಪುರ ಪಟ್ಟಣದಿಂದ ಸುಮಾರು 25 ಕಿಮೀ ದೂರದಲ್ಲಿದೆ. ದಟ್ಟ ಅರಣ್ಯ, ಬೆಟ್ಟಗಳು ಮತ್ತು ಮಲೆನಾಡಿನ ಹಸಿರು ವಾತಾವರಣ ಇದರ ಸೌಂದರ್ಯವನ್ನು ಹೆಚ್ಚಿಸುತ್ತವೆ.
ಕಾಡುಮನೆ ಟೀ ಎಸ್ಟೇಟ್ ವಿಶೇಷತೆ :
- ಟೀ ತೋಟದ ನಡಿಗೆ ಫೋಟೋಶೂಟ್‌ಗಳಿಗೆ ಅದ್ಭುತ ಪ್ರಕೃತಿ.
- ಸ್ಥಳೀಯ ಮಲೆನಾಡು ಆಹಾರ
- ಚಹಾ ಖರೀದಿಸುವ ಅವಕಾಶ (ಫ್ರೆಶ್ ಟೀ ಪ್ಯಾಕೆಟ್‌ಗಳು ಲಭ್ಯ)

Good information