ಮಲ್ಲಳ್ಳಿ ಜಲಪಾತ – ಕೊಡಗಿನಲ್ಲಿ ಕಣ್ಮನ ಸೆಳೆಯುವ, ಮನಮೋಹಕ ಜಲಪಾತ

ಪರಿಚಯ :

ಮಲ್ಲಳ್ಳಿ ಜಲಪಾತ ಅರಣ್ಯ, ಹೊಳೆ, ಕಾಫಿ ತೋಟಗಳ ನಡುವೆ ಪ್ರಕೃತಿಯ ಅದ್ಭುತ ಸೃಷ್ಟಿ. ಮಳೆಗಾಲದಲ್ಲಿ ನೀರಿನ ಧಾರೆ ಗರ್ಜಿಸುವ ಶಬ್ದ, ಮಂಜು ಹನಿ, ಹಸಿರಿನ ಹೊದಿಕೆಯ ನೋಟ — ಇವೆಲ್ಲವೂ ಪ್ರವಾಸಿಗರನ್ನು ಸೆಳೆಯುತ್ತಿದೆ.ಮಲ್ಲಳ್ಳಿ ಜಲಪಾತವು ಕುಮಾರಧಾರಾ ನದಿಯ ಮೇಲ್ಭಾಗದಲ್ಲಿ ಇದ್ದು, ಮಳೆಗಾಲದಲ್ಲಿ ಅದರ ಶಕ್ತಿ ಅಪಾರ.

ಮಲ್ಲಳ್ಳಿ ಜಲಪಾತ ಇರುವ ಸ್ಥಳ :

ಮಲ್ಲಳ್ಳಿ ಜಲಪಾತ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಪುಷ್ಪಗಿರಿ ಬೆಟ್ಟದ ಪಾದಭಾಗದಲ್ಲಿ ಇದೆ. ಮಲ್ಲಳ್ಳಿ ಎಂಬ ಗ್ರಾಮದಲ್ಲಿ ಇದೆ. ಸುತ್ತಮುತ್ತ ಹಲವು ಬೆಟ್ಟಗಳಿದ್ದು, ಮಂಜು ಮುಸುಕಿದ ಬೆಳಗ್ಗಿನ ನೋಟ ಫೋಟೋ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಅತ್ಯುತ್ತಮ.

ಇತಿಹಾಸ ಮತ್ತು ಪುರಾಣಸ್ಥಳೀಯರ ಪ್ರಕಾರ, ಕುಮಾರಧಾರಾ ನದಿ ಪಕ್ಕದಲ್ಲಿರುವುದರಿಂದ, ಪವಿತ್ರ ಜಲದ ಸ್ಥಳ ಎಂದು ಕೆಲವರು ನಂಬುತ್ತಾರೆ. ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಅನೇಕರು ಇಲ್ಲಿಗೆ ಭೇಟಿ ನೀಡುತ್ತಾರೆ.

ಹೇಗೆ ಹೋಗಬಹುದು?

  • ಬೆಂಗಳೂರು → ಹಾಸನ → ಸಕ್ಕಲೇಶಪುರ → ಸೋಮವಾರಪೇಟೆ → ಕುಂದಳ್ಳಿ → ಮಲ್ಲಳ್ಳಿ
  • ಮಂಗಳೂರು → ಸುಳ್ಯ → ಕುಕ್ಕೇ ಸುಬ್ರಹ್ಮಣ್ಯ → ಬಿಸ್ಲೆ ಗಾಟ್ → ಕುಂದಳ್ಳಿ → ಮಲ್ಲಳ್ಳಿ
  • ಕುಂದಳ್ಳಿ ಇಂದ ಸುಮಾರು 5 ಕಿಮೀ ವಾಹನದಲ್ಲಿ ಹೋಗಿ, ನಂತರ 500-600 ಮೀಟರ್ ನಡೆದು ಜಲಪಾತ ತಲುಪಬೇಕು.

ಪ್ರವಾಸಿಗರಿಗೆ ಆಗುವ ಅನುಭವ :

  • ಮಳೆಗಾಲದಲ್ಲಿ ಜಾರಿ ಬೀಳುವ ಸಾಧ್ಯತೆ ಇದ್ದರೂ, ನೀರಿನ ಶಕ್ತಿ ಹಾಗೂ ದೃಶ್ಯ ಮನಮೋಹಕ.
  • ಮೆಟ್ಟಿಲುಗಳಿಂದ ಕೆಳಗೆ ಇಳಿಯುವಾಗ ನೀರಿನ ಮಂಜು ಮುಖಕ್ಕೆ ತಾಕಿ ತಂಪಾದ ಅನುಭವ ನೀಡುತ್ತದೆ.
  • ಮಂಜು ಹಾಗೂ ಬೆಟ್ಟಗಳ ನಡುವೆ ಜಲಪಾತದ ಧ್ವನಿ ದೂರದಿಂದಲೇ ಕೇಳಿಬರುತ್ತದೆ.

ವಾಸ್ತವ್ಯ ಮತ್ತು ಆಹಾರ :

ಮಲ್ಲಳ್ಳಿ ಫಾಲ್ಸ್ ಹೋಗುವ ದಾರಿಯಲ್ಲಿ 1 ಕಿಲೋಮೀಟರು ದೂರದಲೊಯ್ ಕೆಲವು ಹೋಂ ಸ್ಟೇಗಳಿವೆ ಅಲ್ಲಿ ವಾಸ್ತವ್ಯ ಹೂಡಬಹುದು.

ಸ್ಥಳೀಯ ಊಟಗಳಲ್ಲಿ ಅಕ್ಕಿ ರೊಟ್ಟಿ, ಕೊಡಗಿನಲ್ಲಿ ಪ್ರಸಿದ್ಧ ಪಂದಿ ಕರೀ, ಅಕ್ಕಿ ಕಡುಬು, ಚಿಕನ್, ಫಿಶ್ ಹಾಗೆಯೇ ಕಾಫಿ ತಪ್ಪದೆ ಸವಿಯಬಹುದು.

ಭೇಟಿ ಮಾಡಲು ಸೂಕ್ತ ಸಮಯ :

  • ಜೂನ್ – ಸೆಪ್ಟೆಂಬರ್: ಮಳೆಗಾಲ – ಜಲಪಾತದಲ್ಲಿ ಮನೋಹರ ದೃಶ್ಯಗಳನ್ನು ನೋಡಬಹುದು.
  • ಅಕ್ಟೋಬರ್ – ಜನವರಿ: ತಂಪಾದ ಹವಾಮಾನ, ಟ್ರೆಕ್ಕಿಂಗ್‌ ಮಾಡುವವರಿಗೆ ಸೂಕ್ತ.
  • ಬೇಸಿಗೆಯಲ್ಲಿ ನೀರಿನ ಹರಿವು ಕಡಿಮೆ ಇರುತ್ತದೆ.

ಮಲಲ್ಲಿ ಜಲಪಾತದಿಂದ ಹತ್ತಿರವಿರುವ ಆಕರ್ಷಣೆಯ ಸ್ಥಳಗಳು :

  • ಪುಷ್ಪಗಿರಿ ಅಭಯಾರಣ್ಯ – ಮಳೆ ಕಡಿಮೆ ಇದ್ದರೆ ಟ್ರೆಂಕಿಂಗ್ ಮಾಡಬಹುದು.
  • ಬಿಸ್ಲೆ ಘಾಟ್ – ನೈಸರ್ಗಿಕ ವೀಕ್ಷಣಾ ಸ್ಥಳ
  • ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನ – ಧಾರ್ಮಿಕ ತಾಣ
  • ಪುಷ್ಪಗಿರಿಯ ಶಾಂತ ಮಲ್ಲಿಕಾರ್ಜುನ ದೇವಸ್ಥಾನ : ಧಾರ್ಮಿಕ ತಾಣ

ಪ್ರವಾಸಿಗರಿಗೆ ಕೆಲವು ಸಲಹೆಗಳು :

  • ಮಳೆಗಾಲದಲ್ಲಿ ಜಾರಿ ಬೀಳುವ ಸಾಧ್ಯತೆ ಹೆಚ್ಚು, ನಡೆದುಕೊಂಡು ಹೋಗಲು ಕೋಲು ತೆಗೆದುಕೊಂಡು ಹೋಗುವುದು ಉತ್ತಮ.
  • ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಬಾಟಲಿ, ಕಸದ ವಸ್ತುಗಳನ್ನು ಬಿಟ್ಟುಹೋಗಬೇಡಿ
  • ಜಲಪಾತದಲ್ಲಿ ಈಜಲು ಹೋಗಬೇಡಿ – ಪ್ರಬಲ ಹರಿವು ಅಪಾಯಕಾರಿಯಾಗಿದೆ, ಹಾಗಾಗಿ ಈಜಲು ತೆರಳಬೇಡಿ.

ಸಾರಾಂಶ : ಮಲ್ಲಳ್ಳಿ ಜಲಪಾತವು ಕೊಡಗಿನಲ್ಲಿ ಅಡಗಿದ ಮುತ್ತು. ಪ್ರಕೃತಿಯ ಶಾಂತಿ, ನೀರಿನ ಗರ್ಜನೆ, ಹಸಿರಿನ ಹೊದಿಕೆ – ಇವೆಲ್ಲವೂ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತವೆ. ಒಂದು ಬಾರಿ ಇಲ್ಲಿ ಭೇಟಿ ನೀಡಿದವರು ಮತ್ತೆ ಮತ್ತೆ ಬರದೇ ಇರಲು ಸಾಧ್ಯವಿಲ್ಲ.

ವಾಸ್ತವ್ಯ ಹೂಡಲು ಕೆಲವು ಹೋಂ ಸ್ಟೇಗಳನ್ನು ಸಂಪರ್ಕಿಸಿಬಹುದು :

https://mallallifallshomestay.com/gallery.html

https://chiguruhomestay.in/

https://www.ayatanacoorg.com/

Leave a Comment

Your email address will not be published. Required fields are marked *

Scroll to Top