ಕಾಡು ಅಣಬೆ, ಅಧ್ಭುತ ಉಪಯೋಗಗಳು, ಬೆಳೆಯುವ ವಿಧಾನ ಮಲ್ನಾಡು ಮತ್ತು ಕೊಡಗಿನಲ್ಲಿ ಸಿಗುವ ಅಣಬೆಗಳು

ಪರಿಚಯ :

ಕಾಡು ಅಣಬೆ ಮಲ್ನಾಡು ಮತ್ತು ಕೊಡಗು ಪ್ರದೇಶದಲ್ಲಿ ಮಳೆಗಾಲದಲ್ಲಿ ಹಸಿರು ಬೆಟ್ಟಗಳು, ಕಾಡುಗಳು ಮತ್ತು ಶುದ್ಧ ಪ್ರಕೃತಿಯಲ್ಲಿ ಅಣಬೆಗಳು ಪ್ರಸಿದ್ಧ. ಮಳೆಗಾಲದಲ್ಲಿ ಇಲ್ಲಿ ಸಹಜವಾಗಿ ಬೆಳೆಯುವ ಕಾಡು ಅಣಬೆಗಳು (Wild Mushrooms) ಸ್ಥಳೀಯರ ಆಹಾರ ಸಂಸ್ಕೃತಿಯಲ್ಲಿ ಆಗ್ರಸ್ಥಾನ ಪಡೆದಿವೆ. ರುಚಿ, ಪೌಷ್ಟಿಕತೆ ಮತ್ತು ಆರೋಗ್ಯ ಪ್ರಯೋಜನಗಳಿಂದಾಗಿ ಇವು ಪ್ರತಿ ವರ್ಷ ಜೂನ್‌ನಿಂದ ಅಕ್ಟೋಬರ್ ತನಕ ಜನರಲ್ಲಿ ಹೆಚ್ಚು ಬೇಡಿಕೆಯನ್ನು ಪಡೆದಿವೆ.

ಅಣಬೆ ಬೆಳವಣಿಗೆಯ ಪರಿಸರ ಮತ್ತು ಕಾಲ :

  • ಬಿದ್ದ ಎಲೆಗಳು ಮತ್ತು ಕೊಳೆತ ಸಸ್ಯ ಭಾಗಗಳ ಮೇಲಿನ ತೇವಾಂಶದಲ್ಲಿ ಬೆಳೆಯುತ್ತವೆ.
  • ಮಳೆಗಾಲದ ಆರಂಭದಿಂದಲೇ (ಜೂನ್) ಬೆಳೆಯಲು ಶುರುಮಾಡುತ್ತವೆ.
  • ಹಳ್ಳಿಗಳ ಸುತ್ತಮುತ್ತ, ಗದ್ದೆಗಳ ತುದಿಗಳಲ್ಲಿ ಹೆಚ್ಚು ಕಂಡುಬರುತ್ತವೆ.
  • ಕಾಫಿ ತೋಟಗಳು, ಏಲಕ್ಕಿ ತೋಟಗಳು, ಮತ್ತು ಬೆಟ್ಟದ ತುದಿಗಳ ನೆರಳಿನಲ್ಲಿ ಬೆಳೆಯುತ್ತವೆ.
  • ಕೊಳಚೆ ಮರದ ದಿಂಡಿನ ಹತ್ತಿರ ಅಥವಾ ಕಾಫಿ ತೋಟದ ಗಿಡಗಳ ಕೆಳಗೆ ಬೆಳೆಯುವ ಪ್ರಭೇದಗಳು ಪ್ರಸಿದ್ಧ.
  • ಜೂನ್ ಮತ್ತುಅಕ್ಟೋಬರ್ ಅವಧಿಯಲ್ಲಿ ಹೆಚ್ಚು ಅಣಬೆ ಸಿಗುತ್ತವೆ.

ಸಾಮಾನ್ಯವಾಗಿ ಸಿಗುವ ಅಣಬೆಗಳ ಪ್ರಕಾರಗಳು:

  • ಹುಲ್ಲು ಅಣಬೆ
  • ತರಗು ಅಣಬೆ
  • ಬೇರು ಅಣಬೆ
  • ಬರ್ಕಟಿ ಅಣಬೆ

ಅಣಬೆಯಿಂದ ಪೌಷ್ಟಿಕ ಅಂಶಗಳು :

  • ಮಾಲ್ನಾಡು ಮತ್ತು ಕೊಡಗಿನ ಅಣಬೆಗಳು ಸೂಪರ್‌ಫುಡ್ ಎಂದು ಪರಿಗಣಿಸಲಾಗುತ್ತದೆ.
  • ಪ್ರೋಟೀನ್: ಸಸ್ಯಾಹಾರಿಗಳಿಗೆ ಪ್ರೋಟೀನ್‌ ಒದಗಿಸುವ ಉತ್ತಮ ಮೂಲ.
  • ವಿಟಮಿನ್ B ಸಮೂಹ: ಶಕ್ತಿನೀಡಲು ಸಹಕಾರಿ.
  • ಖನಿಜಗಳು: ಪೊಟ್ಯಾಸಿಯಂ, ಫಾಸ್ಫರಸ್, ಜಿಂಕ್, ಸೆಲೆನಿಯಮ್.
  • ಕಡಿಮೆ ಕೊಬ್ಬು: ತೂಕ ನಿಯಂತ್ರಣಕ್ಕೆ ಸೂಕ್ತ.
  • ನಾರಿನಾಂಶ: ಜೀರ್ಣಕ್ರಿಯೆ ಸುಧಾರಿಸಲು ಸಹಾಯಕ.
  • ಕಡಿಮೆ ಕೊಬ್ಬಿನ ಪ್ರಮಾಣದಿಂದ, ಇದು ಹೃದಯ ಹಾಗೂ ಒಟ್ಟಾರೆ ಆರೋಗ್ಯಕ್ಕೆ ಉತ್ತಮ.

ಆರೋಗ್ಯ ಪ್ರಯೋಜನಗಳು :

  • ರೋಗ ನಿರೋಧಕ ಶಕ್ತಿ: ಅಣಬೆಗಳಲ್ಲಿ ಇರುವ ಆಂಟಿ-ಆಕ್ಸಿಡೆಂಟ್ಸ್ ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ.
  • ಹೃದಯ ಆರೋಗ್ಯ: ಕೊಬ್ಬು ಕಡಿಮೆ ಮತ್ತು ಪೊಟ್ಯಾಸಿಯಂ ಹೆಚ್ಚು ಇರುವುದರಿಂದ ರಕ್ತದೊತ್ತಡ ನಿಯಂತ್ರಣ.
  • ಎಲುಬುಗಳ ಶಕ್ತಿ: ಫಾಸ್ಫರಸ್ ಮತ್ತು ವಿಟಮಿನ್ D ಹೇರಳ.
  • ಶಕ್ತಿ ಮತ್ತು ಸಹನೆ: ವಿಟಮಿನ್ B ಶರೀರಕ್ಕೆ ದಿನಪೂರ್ತಿ ಶಕ್ತಿ ನೀಡುತ್ತದೆ.ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಸಹಾಯ.

ಅಣಬೆ ಅಡುಗೆ ವಿಧಾನಗಳು :

ಅಣಬೆ ಸಾರು – ಹಸಿ ಮಸಾಲೆ, ತೆಂಗಿನಕಾಯಿ ಪೇಸ್ಟ್ ಬಳಸಿ ಅಣಬೆ ಸಾರು ಮಾಡಬಹುದು.

ಅಣಬೆ ಪಲ್ಯ – ಈರುಳ್ಳಿ, ಹಸಿಮೆಣಸು, ಬೆಳ್ಳುಳ್ಳಿ ಸೇರಿಸಿ ಮಾಡಬಹುದು.

ಅಣಬೆ ಬಿರಿಯಾನಿ / ಪಲಾವ್ – ವಿಶೇಷ ಸಂದರ್ಭಗಳಿಗೆ ಅಣಬೆ ಬಿರಿಯಾನಿ ಮಾಡಬಹುದು.

ಸೂಚನೆ : ಎಲ್ಲಾ ಕಾಡು ಅಣಬೆಗಳು ತಿನ್ನಲು ಯೋಗ್ಯವಲ್ಲ. ವಿಷಕಾರಿ ಪ್ರಭೇದಗಳನ್ನು ತಪ್ಪಿಸಲು, ಅನುಭವಿಗಳ ಮಾರ್ಗದರ್ಶನದಲ್ಲಿ ಮಾತ್ರ ಸಂಗ್ರಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

https://icar.org.in

Leave a Comment

Your email address will not be published. Required fields are marked *

Scroll to Top