ಕಾಗಿನಹರೆ ವ್ಯೂ-ಪಾಯಿಂಟ್ ಸಕಲೇಶಪುರದಲ್ಲಿ ಇರುವ ಮನಮೋಹಕ ಸ್ಥಳ

ಪರಿಚಯ :

ಕಾಗಿನಹರೆ ವ್ಯೂ-ಪಾಯಿಂಟ್ ಕರ್ನಾಟಕದ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿರುವ ಪ್ರಕೃತಿಯ ಅದ್ಭುತ ಸೌಂದರ್ಯದ ಹಿರಿಮೆಯನ್ನು ಹೊತ್ತುಕೊಂಡಿದೆ. ಇಲ್ಲಿನ ಬೆಟ್ಟ-ಗಾಡು, ಕಾಫಿ ತೋಟಗಳು, ನದಿ, ಜಲಪಾತ ಈ ಪ್ರದೇಶದ ಹೃದಯದಲ್ಲಿ ನೆಲೆಸಿರುವ ಕಾಗಿನಹರೆ ಒಂದು ಅಪರೂಪದ ಮಲೆನಾಡು ಪ್ರವಾಸಿ ತಾಣ.

ಐತಿಹಾಸಿಕ ಮತ್ತು ಭೌಗೋಳಿಕ ಹಿನ್ನೆಲೆ :

ಕಾಗಿನಹರೆ ಸಕಲೇಶಪುರ ನಡುವೆ ಇರುವ ಒಂದು ಸುಂದರ ಬೆಟ್ಟ. “ಹರೆ” ಅಂದರೆ ಬೆಟ್ಟಗಳ ಸರಮಾಲೆ. ಈ ಸ್ಥಳವು ಮಳೆಗಾಲದಲ್ಲಿ ದಟ್ಟ ಮಂಜಿನಿಂದ ಆವರಿಸಲ್ಪಟ್ಟಿರುವುದರಿಂದ “ಮಂಜಿನ ಬೆಟ್ಟ” ಎಂದೂ ಕರೆಯಲಾಗುತ್ತದೆ.

ಪ್ರಕೃತಿ ಸೌಂದರ್ಯ :

ಹಸಿರು ಹೊದಿಕೆಯ ಬೆಟ್ಟಗಳು ಕಾಫಿ, ಮೆಣಸು, ಏಲಕ್ಕಿ ತೋಟಗಳಿಂದ ಆವರಿಸಲ್ಪಟ್ಟಿವೆ.

ಮಂಜಿನ ದೃಶ್ಯ – ಬೆಳಿಗ್ಗೆ 6–8 ಗಂಟೆ ಮತ್ತು ಸಂಜೆ 4–6 ಗಂಟೆ ನಡುವೆ ಮಂಜಿನ ಮೋಡಗಳು ಬೆಟ್ಟಗಳನ್ನು ಮುತ್ತಿಕ್ಕುವಂತಗಿರುತ್ತದೆ.

ಪಕ್ಷಿಗಳ ಕಲರವ – ಹಕ್ಕಿಗಳ ವಿವಿಧ ಶಬ್ದಗಳು ಪ್ರಕೃತಿಯ ಸಂಗೀತದಂತೆ ಅನಿಸುತ್ತದೆ.

ಕಾಗಿನಹರೆ ಸುತ್ತಮುತ್ತ ನೋಡಲೇಬೇಕಾದ ಸ್ಥಳಗಳು :

ಕಾಗಿನಹರೆ ವ್ಯೂ ಪಾಯಿಂಟ್ : ರಸ್ತೆ ಬದಿಯಲ್ಲೇ ಇರುವ ಈ ಸ್ಥಳದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಸಿಗುತ್ತದೆ. ಬೆಟ್ಟಗಳ ಸಾಲುಗಳ ದೃಶ್ಯ, ಸೆಲ್ಫಿ ಪಾಯಿಂಟ್‌ಗಳು.

ಕಾಗಿನಹರೆ ದೇವಸ್ಥಾನ : ಶ್ರೀ ಚಾಮುಂಡೇಶ್ವರಿ ತಾಯಿ ದೇವಸ್ಥಾನ ನೋಡಬಹುದು.

ಮೂಕನಮನೆ ಫಾಲ್ಸ್ : ಮಳೆಗಾಲದಲ್ಲಿ ನೀರಿನಿಂದ ತುಂಬಿ ಹರಿಯುತ್ತದೆ.

ಮಂಜರಾಬಾದ್ ಕೋಟೆ : 18ನೇ ಶತಮಾನದ ಟಿಪ್ಪು ಸುಲ್ತಾನ್ ನಿರ್ಮಿಸಿದ ನಕ್ಷತ್ರಾಕಾರದ ಕೋಟೆ.

ಬಿಸ್ಲೆ ಘಾಟ್ ವ್ಯೂ ಪಾಯಿಂಟ್ : ಪಶ್ಚಿಮ ಘಟ್ಟದ ಅತ್ಯಂತ ಸುಂದರ ಕಣಿವೆ ದೃಶ್ಯ.

ಮಲ್ಲಳ್ಳಿ ಜಲಪಾತ : ಮಳೆಗಾಲದಲ್ಲಿ ಭಾರೀ ಮನಮೋಹಕವಾಗಿದ್ದು ರಾಮಣೀಯವಾಗಿರುತ್ತದೆ.

ಹವಾಮಾನ :

  • ಚಳಿ ಕಾಲ (ನವೆಂಬರ್–ಫೆಬ್ರವರಿ): ಟ್ರೆಕ್ಕಿಂಗ್ ಮತ್ತು ಸೈಟ್ ಸೀಯಿಂಗ್‌ಗೆ ಸೂಕ್ತ.
  • ಮಳೆಗಾಲ (ಜೂನ್–ಸೆಪ್ಟೆಂಬರ್): ಮಂಜು, ಹಸಿರು, ಆದರೆ ರಸ್ತೆ ಜಾರಿ ಬೀಳುವ ಸಾಧ್ಯತೆ.
  • ಬೇಸಿಗೆ (ಮಾರ್ಚ್–ಮೇ): ತಂಪಾದ ಗಾಳಿ.

ಸ್ಥಳೀಯ ಆಹಾರ :

ಮಲೆನಾಡು ಊಟ – ಅಕ್ಕಿ ರೊಟ್ಟಿ, ಕೋಳಿ ಸಾರು, ಅಕ್ಕಿ ಪಾಯಸ, ಕಡುಬು ಸವಿಯಬಹುದು.ಕಾಫಿ – ಸ್ಥಳೀಯ ಕಾಫಿ ತೋಟದ ಫಿಲ್ಟರ್ ಕಾಫಿ.

ಹೋಟೆಲ್/ಹೋಂಸ್ಟೇ :

ಸ್ವರ್ಗಶಿಖರ ಹೋಂಸ್ಟೇ – ಪರಿಸರದ ಮಧ್ಯದಲ್ಲಿರುವ ಹೋಂಸ್ಟೇ.

https://www.google.com/travel/hotels/s/7WyXJxTi7R7H1ASA6

ಹೇಗೆ ತಲುಪುವುದು?

  • ರೈಲು: ಸಕಲೇಶಪುರ ರೈಲು ನಿಲ್ದಾಣದಿಂದ ಬಸ್ ಮೂಲಕ – 42 ಕಿಮೀ.
  • ಕಾರ್/ಬೈಕ್: ಬೆಂಗಳೂರು-ಹಾಸನ -ಸಕಲೇಶಪುರ- ಕಾಗಿನಹರೆ ಅಥವಾ ಬೆಂಗಳೂರು – ಚನ್ನರಾಯಪಟ್ಟಣ- ಶನಿವಾರಸಂತೆ-ಕಾಗಿನಹರೆ.

ಪ್ರವಾಸಿಗರಿಗೆ ಸಲಹೆಗಳು :

  • ಚಳಿಗಾಲದಲ್ಲಿ ಸ್ವೆಟರ, ಮಳೆಗಾಲದಲ್ಲಿ ರೇನ್‌ಕೋಟ್ ಕಡ್ಡಾಯ ತೆಗೆದುಕೊಂಡು ಹೋಗಿ.
  • ಟ್ರೆಕ್ಕಿಂಗ್‌ಗೆ ಉತ್ತಮ ಶೂ.
  • ಪ್ಲಾಸ್ಟಿಕ್ ತ್ಯಾಜ್ಯ ಬಳಸಬೇಡಿ.
  • ಸ್ಥಳೀಯರ ಅನುಮತಿ ಇಲ್ಲದೆ ಖಾಸಗಿ ತೋಟಗಳಿಗೆ ಹೋಗಬೇಡಿ.

ವಿಶೇಷ ಆಕರ್ಷಣೆ : ಕಾಗಿನಹರೆ ಒಂದು ಫೋಟೋಗ್ರಫಿ ಹಾಟ್‌ಸ್ಪಾಟ್ – ಮಂಜು, ಹಸಿರು ಬೆಟ್ಟ, ಸೂರ್ಯಾಸ್ತ ಇಲ್ಲಿ ಭೇಟಿ ನೀಡಿದವರು “ಮತ್ತೆ ಬರಲೇಬೇಕು” ಎನ್ನುವಷ್ಟು ಆಕರ್ಷಕವಾಗಿದೆ.

Leave a Comment

Your email address will not be published. Required fields are marked *

Scroll to Top