ಪರಿಚಯ :
ಏಲಕ್ಕಿ ಬೆಳೆ (Cardamom) ಮಸಾಲೆಗಳ ಜಗತ್ತಿನಲ್ಲಿ ಅತ್ಯಂತ ಬೆಲೆಯುಳ್ಳ ಒಂದು ಮಸಾಲೆ. ಇದರ ವಿಶಿಷ್ಟ ಸುವಾಸನೆ, ರುಚಿ ಮತ್ತು ಔಷಧೀಯ ಗುಣಗಳಿಂದ ಇದು ಪ್ರಾಚೀನ ಕಾಲದಿಂದಲೂ ಅಡುಗೆ, ಆಯುರ್ವೇದ ಮತ್ತು ಹೋಮ-ಹವನಗಳಲ್ಲಿ ಬಳಸಲ್ಪಡುತ್ತಿದೆ. ಕರ್ನಾಟಕದ ಹಾಸನ, ಕೊಡಗು, ಚಿಕ್ಕಮಗಳೂರು ಹಾಗೂ ಕೇರಳದ ಕೆಲವು ಜಿಲ್ಲೆಗಳಲ್ಲಿ ಉತ್ತಮ ಗುಣಮಟ್ಟದ ಏಲಕ್ಕಿಯನ್ನು ಬೆಳೆಯಲಾಗುತ್ತದೆ.

ಎಲಕ್ಕಿಯ ಪ್ರಕಾರಗಳು :
ಹಸಿರು ಏಲಕ್ಕಿ (Green Cardamom): ಸಾಮಾನ್ಯವಾಗಿ ಅಡುಗೆ ಮತ್ತು ಸಿಹಿ ತಿನಿಸುಗಳಲ್ಲಿ ಬಳಸಲಾಗುವುದು.
ಕಪ್ಪು ಏಲಕ್ಕಿ (Black Cardamom):
ಬಿರಿಯಾನಿ, ಗ್ರೇವಿ, ಹಾಗೂ ಮಸಾಲೆ ದ್ರವ್ಯಗಳಲ್ಲಿ ಬಳಸುವದು; ಸುವಾಸನೆ ಹೆಚ್ಚು ಗಾಢ.
ಬಿಳಿ ಏಲಕ್ಕಿ (White Cardamom):
ಸಂಸ್ಕರಿಸಿದ ಹಸಿರು ಏಲಕ್ಕಿ, ಮುಖ್ಯವಾಗಿ ಪಾನೀಯ ಮತ್ತು ಸಿಹಿ ಪದಾರ್ಥಗಳಲ್ಲಿ ಬಳಸಲಾಗುತ್ತದೆ.

ಏಲಕ್ಕಿ ಬೆಳೆ ಹಂತಗಳು :
ನೆಡುವ ವಿಧಾನ: ಏಲಕ್ಕಿಯನ್ನು ಸಾಮಾನ್ಯವಾಗಿ ಮಳೆಗಾಲದ ಆರಂಭದಲ್ಲಿ ತೋಟದಲ್ಲಿ ನೆಡುವುದು ಉತ್ತಮ.
ಮಣ್ಣು : ಮಣ್ಣು ತೇವಾಂಶದಿಂದ ಕೂಡಿರಬೇಕು; ನೀರು ನಿಂತುಕೊಳ್ಳಬಾರದು.
ನೀರು : ಬರಗಾಲದಲ್ಲಿ ನಿಯಮಿತ ನೀರಾವರಿ ಅಗತ್ಯ.
ರಸಗೊಬ್ಬರ: ಆರ್ಗಾನಿಕ್ ಅಥವಾ ಯೂರಿಯ ಗೊಬ್ಬರ ಹಾಕಬಹುದು.
ರೋಗನಿರೋಧಕ ಔಷದಿ: ಎಲೆ ಬಣ್ಣ ಬದಲಾವಣೆ ಮುಂತಾದ ರೋಗಗಳ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಬಹುದು.

ಆರೋಗ್ಯ ಲಾಭಗಳ ವಿವರ :
ಜೀರ್ಣಕ್ರಿಯೆಗೆ ಉತ್ತಮ: ಏಲಕ್ಕಿಯ ಬೀಜಗಳನ್ನು ತಿಂದರೆ ಅಜೀರ್ಣ ನಿವಾರಣೆ ಮಾಡುತ್ತದೆ.
ರಕ್ತ ಶುದ್ಧೀಕರಣ: ದೇಹದ ವಿಷಕಾರಕಗಳನ್ನು ಹೊರಹಾಕಿ ಚರ್ಮದ ಹೊಳಪು ಹೆಚ್ಚಿಸುತ್ತದೆ.
ಮಾನಸಿಕ ಶಾಂತಿ: ಎಲಕ್ಕಿಯ ವಾಸನೆ ಒತ್ತಡ ಕಡಿಮೆ ಮಾಡುತ್ತದೆ ಮತ್ತು ಮನಸ್ಸಿಗೆ ಶಾಂತಿ ನೀಡುತ್ತದೆ.
ಹಲ್ಲು ನೋವಿಗೆ ಪರಿಹಾರ : ಬಾಯಿಗೆ ತಾಜಾತನ ನೀಡುವುದರ ಜೊತೆಗೆ ಹಲ್ಲು ನೋವು ಸಮಸ್ಯೆಗಳನ್ನು ತಡೆಯುತ್ತದೆ.
ಉಸಿರಾಟದ ತೊಂದರೆ: ಶೀತ, ಕೆಮ್ಮು, ಆಸ್ತಮಾ ಮುಂತಾದ ತೊಂದರೆಗಳಲ್ಲಿ ಶ್ವಾಸಕೋಶವನ್ನು ಶುದ್ಧಗೊಳಿಸುತ್ತದೆ.

ಅಡುಗೆಯಲ್ಲಿ ಏಲಕ್ಕಿಯ ವಿಭಿನ್ನ ಬಳಕೆಗಳು :
ಚಹಾ & ಕಾಫಿ: ಏಲಕ್ಕಿ ಪುಡಿ ಸೇರಿಸಿದರೆ ಪಾನೀಯಕ್ಕೆ ಸುವಾಸನೆ ಹೆಚ್ಚುತ್ತದೆ.
ಸಿಹಿ ಪದಾರ್ಥಗಳು: ಪಾಯಸ, ಹಲ್ವಾ, ಲಡ್ಡು, ಜಿಲೇಬಿ, ರಸಮಲೈಗಳಲ್ಲಿ ಸೇರಿಸಿರುತ್ತಾರೆ.
ಭಾತ್ & ಬಿರಿಯಾನಿ: ವಿಶೇಷ ರುಚಿ ಮತ್ತು ಸುಗಂಧಕ್ಕಾಗಿ.
ಪಾನೀಯಗಳು: ನಿಂಬೆ ಹಣ್ಣಿನ ಜ್ಯೂಸ್, ಹಿರಲೇ ಕಾಯಿ ಜ್ಯೂಸ್ ನಲ್ಲಿ ಸೇರಿಸಬಹುದು.

ಸಂಗ್ರಹ ಮತ್ತು ಸಂರಕ್ಷಣೆ ವಿಧಾನಗಳು :
ಏಲಕ್ಕಿಯನ್ನು ಸೂರ್ಯನ ಬೆಳಕಿನಿಂದ ದೂರ, ಗಾಳಿ ಬಾರದ ಡಬ್ಬಿಯಲ್ಲಿ ಇಡಬೇಕು. ಏಕೆಂದರೆ ಸಂಗ್ರಹಿಸಿಟ್ಟ ಜಾಗಕ್ಕೆ ಗಾಳಿ ಹೋದರೆ ಸುವಾಸನೆ ಬೇಗ ಕಳೆದುಕೊಳ್ಳುತ್ತದೆ, ಆದ್ದರಿಂದ ಬಳಕೆ ಮಾಡುವಾಗ ಪುಡಿ ಮಾಡುವುದನ್ನುl ಮಾಡುವುದು ಉತ್ತಮ.
ಆರ್ಥಿಕ ಮಹತ್ವ : ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯ ಮಸಾಲೆಯಾಗಿದೆ . ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೇಡಿಕೆ ಹೆಚ್ಚು. ಕರ್ನಾಟಕದ ಹಾಸನ, ಕೊಡಗು ಹಾಗೂ ಕೇರಳದಲ್ಲಿ ಏಲಕ್ಕಿ ಪ್ರಸಿದ್ಧವಾಗಿದೆ. ಕೆಜಿಗೆ 1000 ದಿಂದ 2000 ತನಕ ಪಡೆಯಬಹುದು.
ಆಯುರ್ವೇದದಲ್ಲಿ ಏಲಕ್ಕಿ :
ಆಯುರ್ವೇದ ಪ್ರಕಾರ, ಏಲಕ್ಕಿ ದೋಷಗಳನ್ನು ಸಮತೋಲನಗೊಳಿಸುತ್ತದೆ (ವಾತ, ಪಿತ್ತ, ಕಫ). ಜೀರ್ಣಕ್ರಿಯೆ, ಶ್ವಾಸಕೋಶ ಹಾಗೂ ರಕ್ತಸಂಚಾರ ವ್ಯವಸ್ಥೆಗೆ ಉತ್ತಮ.

ಸಾರಾಂಶ : ಏಲಕ್ಕಿ ಕೇವಲ ಅಡುಗೆಯ ರುಚಿ ಹೆಚ್ಚಿಸುವ ಮಸಾಲೆ ಮಾತ್ರವಲ್ಲ, ಅದು ಆರೋಗ್ಯ, ಆರಾಮ ಮತ್ತು ಆರ್ಥಿಕ ಲಾಭಗಳ ಖಜಾನೆ. ದಿನನಿತ್ಯದ ಜೀವನದಲ್ಲಿ ಎಲಕ್ಕಿಯ ಬಳಕೆ, ಸಮತೋಲನ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಗೆ ಸಹಾಯಕ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :